ವಾಹನ ಅಪಘಾತದಲ್ಲಿ ನಟ ಶೈನ್ ಟೋಂ ಚಾಕೊರ ತಂದೆ ಮೃತ್ಯು

ಸೇಲಂ: ವಾಹನ ಅಪಘಾತದಲ್ಲಿ ನಟ ಶೈನ್ ಟೋಂ ಚಾಕೊರವರ ತಂದೆ ಸಿ.ಪಿ. ಚಾಕೊ ನಿಧನ ಹೊಂದಿದರು. ಇಂದು ಮುಂಜಾನೆ ೬ ಗಂಟೆ ವೇಳೆ ಸೇಲಂ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಸಿ.ಪಿ. ಚಾಕೊ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇದೇ ವೇಳೆ ಶೈನ್‌ನ ಬಲಕೈಗೆ ಗಾಯ ಉಂಟಾಗಿದೆ. ತಾಯಿ ಹಾಗೂ ಸಹೋದರ, ಚಾಲಕನಿಗೆ ಸಣ್ಣ ಪುಟ್ಟ ಗಾಯ ಉಂಟಾಗಿದೆ. ಇವರನ್ನು ಧರ್ಮಪುರಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶೈನ್‌ರ ಕೈಗೆ ಆಪರೇಷನ್ ಮಾಡಬೇಕಾಗಿ ಬರಲಿದೆ ಎಂದು ಪ್ರಾಥಮಿಕ ವರದಿ ಲಭಿಸಿದೆ. ಎರ್ನಾಕುಳಂನಿಂದ …

ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ನೂತನ ಕಟ್ಟಡ ಉದ್ಘಾಟನೆ 10ರಂದು

ವರ್ಕಾಡಿ: ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಓಪರೇಟಿವ್ ಸೊಸೈಟಿ ಮಜೀರ್ಪಳ್ಳ ಕೇಂದ್ರೀಕರಿಸಿ   ಕಾರ್ಯಾ ಚರಿಸುತ್ತಿದ್ದು, ಸೊಸೈಟಿಯ ಸ್ವಂತ ಸ್ಥಳದಲ್ಲಿ ನೂತನವಾಗಿ ನಿರ್ಮಿಸಿದ ಕಟ್ಟಡ ಉದ್ಘಾಟನೆ 10ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥ ಕುದುರು ಧ್ವಜಾರೋಹಣ ನಡೆಸುವರು. ಬಳಿಕ ನಡೆಯುವ ಸಭೆಯಲ್ಲಿ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ರವೀಂದ್ರ ಮಡ್ವ ವರದಿ ವಾಚಿಸುವರು. ಸಚಿವ ವಿ.ಎನ್. ವಾಸವನ್ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸುವರು. ಭದ್ರತಾ ಕೊಠಡಿಯನ್ನು ಶಾಸಕ ಸಿ.ಎಚ್. ಕುಂಞಂಬು ಉದ್ಘಾಟಿಸು ವರು. …

ಎಕೆಪಿಎ ಜಿಲ್ಲಾ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಷನ್ (ಎ.ಕೆ.ಪಿ.ಎ) ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಇರಿಯಾ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಎ.ಕೆ.ಪಿ.ಎ ರಾಜ್ಯ ಉಪಾಧ್ಯಕ್ಷ ಸಜೀಶ್ ಮಣಿ ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿದರು. ಪಿ.ಟಿ.ಎ. ಅಧ್ಯಕ್ಷ ಗಂಗಾಧರನ್ ಪಿ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಸುಗುಣನ್ ಇರಿಯಾ ಮತ್ತು ಜಿಲ್ಲಾ ಅರಣ್ಯಾಧಿಕಾರಿಗಳು ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟರು. ಜಿಲ್ಲಾ ಕಾರ್ಯದರ್ಶಿ ರಾಜೇಂದ್ರನ್ ವಿ.ಎನ್., ಖಜಾಂಚಿ ಪ್ರಜಿತ್ …

ಮಹಿಳೆ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ವರ್ಕಾಡಿ ಕೆದುಂಬಾಡಿ ಬಾವಲಿಗುಳಿಯ ಅಸ್ತಾಬ್ ಎಂಬವರ ಪತ್ನಿ ಅಪ್ಸಾಬಿ (58) ಮನೆ ಬಳಿಯ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಂದು ಮುಂಜಾನೆ 5.30ಕ್ಕೆ ಇವರು ಮನೆಯಿಂದ ನಾಪತ್ತೆ ಯಾಗಿದ್ದರು. ಇದರಿಂದ ಅವರಿಗಾಗಿ ಮನೆಯವರು ಹುಡುಕಾಟ ನಡೆಸುತ್ತಿ ದ್ದಾಗ ಅಪ್ಸಾಬಿ ಬಾವಿಯಲ್ಲಿ ಬಿದ್ದಿರು ವುದು ಕಂಡುಬಂದಿದೆ. ಅಗ್ನಿಶಾಮಕದಳ ತಲುಪಿ ಅವರನ್ನು ಮೇಲಕ್ಕೆತ್ತಿದ್ದು ಅಷ್ಟರೊಳಗೆ ಸಾವು ಸಂಭವಿಸಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯ ಲಾಗಿದೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  …

ಬಸ್ ಪ್ರಯಾಣಿಕೆಯನ್ನು ಬಿಗಿದಪ್ಪಿಕೊಳ್ಳಲು ಯತ್ನಿಸಿದ ವ್ಯಕ್ತಿಯ ಸೆರೆ

ಕಾಸರಗೋಡು: ಬಸ್ ಪ್ರಯಾಣಿಕೆಯನ್ನು ಬಿಗಿದಪ್ಪಲು ಪ್ರಯತ್ನಿಸಿದ ವ್ಯಕ್ತಿಯನ್ನು ಇತರ ಪ್ರಯಾಣಿಕರು ಹಾಗೂ ನೌಕರರು ಸೇರಿ ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪ್ರಯಾಣಿಕೆಯ ಹೇಳಿಕೆ ದಾಖಲಿಸಿಕೊಂಡ ಬಳಿಕ ವ್ಯಕ್ತಿಯನ್ನು ಕಾಸರಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಲಪ್ಪುಳ ನಿವಾಸಿಯಾದ ನಾಸರ್ (53) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ. ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಬಸ್‌ನಲ್ಲಿ ಕುಳಿತಿದ್ದ ಮಹಿಳೆಯನ್ನು ನಾಸರ್ ಬಿಗಿದಪ್ಪಲು ಪ್ರಯತ್ನಿಸಿದ್ದನೆನ್ನ …

ಡಿವೈಡರ್‌ಗೆ ಢಿಕ್ಕಿ ಹೊಡೆದು ಲಾರಿ ಪಲ್ಟಿ

ಕಾಸರಗೋಡು: ಪೇಟೆಯನ್ನು ಸುಂದರಗೊಳಿಸುವ ಅಂಗವಾಗಿ ಪಾಲಕುನ್ನು ಪೇಟೆಯಲ್ಲಿ ಸ್ಥಾಪಿಸಿದ್ದ ಡಿವೈಡರ್‌ಗೆ ಢಿಕ್ಕಿ ಹೊಡೆದು ಸರಕು ಲಾರಿ ಮಗುಚಿ ಬಿದ್ದಿದೆ. ಇಂದು ಮುಂಜಾನೆ ಅಪಘಾತ ಉಂಟಾಗಿದೆ. ಮಹಾರಾಷ್ಟ್ರದ ಕೋಲಾಪುರದಿಂದ ಕಣ್ಣೂರಿಗೆ ಸಕ್ಕರೆ ಸಾಗಿಸುತ್ತಿದ್ದ ಲಾರಿ ಅಪಘಾತಕ್ಕೀಡಾಗಿದೆ. ಚಾಲಕನ ಅಶ್ರದ್ಧೆಯೇ ಅಪಘಾತಕ್ಕೆ ಕಾರಣವೆಂದು ಸಂಶಯಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಡಿವೈಡರ್‌ಗೆ ಢಿಕ್ಕಿ ಹೊಡೆದು ಲಾರಿ ಮಗುಚಿ ಬಿದ್ದಿದ್ದು, ಈ ವೇಳೆ ಅಲ್ಲಿದ್ದ ನಾಲ್ಕು ಸೋಲಾರ್ ಬೀದಿದೀಪಗಳು ಹಾನಿಗೀಡಾಗಿವೆ.  ವಿಷಯ ತಿಳಿದು ಸ್ಥಳಕ್ಕೆ ತಲುಪಿದ ಬೇಕಲ ಪೊಲೀಸರು ಲಾರಿಯ ಚಾಲಕ ಇಜಾಸ್ ಎಂಬಾತನನ್ನು …

ನೇಣುಬಿಗಿದು ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಮೃತ್ಯು

ಕಾಸರಗೋಡು: ಕ್ಷುಲ್ಲಕ ಕಾರಣಕ್ಕೆ  ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತ ಪಟ್ಟಳು. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಅರಮಂಗಾನ ಉಲೂಜಿಯ ಸುಮಲತಾ ಎಂಬ ವರ ಪುತ್ರಿ ರಂಜಿನಿ ಮೃತಪಟ್ಟ ಯುವತಿ.  ಎಪ್ರಿಲ್ ೨೮ರಂದು ರಾತ್ರಿ ರಂಜಿನಿ ಶೌಚಾಲಯದೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿ ದ್ದಳು. ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೂ ನಂತರ ಅಲ್ಲಿಂದ ಕಣ್ಣೂರಿನ ಆಸ್ಪತ್ರೆಗೂ ಸ್ಥಳಾಂತರಿಸಲಾಗಿತ್ತು.

ವಿವಾಹ ಭರವಸೆಯೊಡ್ಡಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕ ಸೆರೆ

ಕಾಸರಗೋಡು: ಮದುವೆಯಾ ಗುವುದಾಗಿ ಭರವಸೆಯೊಡ್ಡಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿ ಯುವಕ ಕೊನೆ ಗೂ ಪೊಲೀಸರ ಕೈಗೆ ಸಿಲುಕಿದ್ದಾನೆ. ತೃಶೂರು ಕೈಪಮಂಗಲ ಕುರಿಕ್ಕುಳಿ ನಿವಾಸಿ ಶೋಭಿ ಅಲಿಯಾಸ್ ಪಿ.ಎಸ್. ಪ್ರಶೋಬ್ (30) ಬಂಧಿತ ಆರೋಪಿ.  ಕಾಸರಗೋಡು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್‌ರ ಮೇಲ್ನೋಟದಲ್ಲಿ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ. ಅಜಿತ, ಪೊಲೀಸ್ ಸ್ಕ್ವಾಡ್ ಸದಸ್ಯರುಗಳಾದ ಎಸ್‌ಐ ನಾರಾಯಣನ್, ಎಎಸ್‌ಐ ಸಾಜು ಎಂಬವರನ್ನೊಳಗೊಂಡ ಪೊಲೀಸರ ತಂಡ ಈತನನ್ನು ಬಂಧಿಸಿದೆ. ಮೋಡೆಲಿಂಗ್ ಇತ್ಯಾದಿಗಳಲ್ಲಿ ಅವಕಾಶ ಕೊಡಿಸುವುದೆಂದು …

ಶಾಲೆಯಲ್ಲಿ ಕಲಿಯುತ್ತಿದ್ದ ವೇಳೆ ನಡೆದ ಜಗಳದ ಹೆಸರಲ್ಲಿ 60ನೇ ವರ್ಷದಲ್ಲಿ ಮತ್ತೆ ಪರಸ್ಪರ ಹೊಡೆದಾಡಿಕೊಂಡ ಸಹಪಾಠಿಗಳು

ಕಾಸರಗೋಡು: ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ವೇಳೆ ನಡೆದ ಜಗಳದ ಹಳೇ ದ್ವೇಷದಿಂದ ಈಗ 60 ವರ್ಷ ದಾಟಿದ ಸಹಪಾಠಿಗಳಿಬ್ಬರೂ ಮತ್ತೆ ಪರಸ್ಪರ ಹೊಡೆದಾಡಿಕೊಂಡ ಸ್ವಾರಸ್ಯಕರ ಘಟನೆ ನಡೆದಿದೆ. ವೆಳ್ಳರಿಕುಂಡ್‌ಗೆ ಸಮೀಪದ ಮಾಲೋಂ ವೆಟ್ಟಕೊಂಬಿಲ್ ಬಾಬು (62) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಅವರು ನಾಲ್ಕನೇ ಕ್ಲಾಸಿನಲ್ಲಿ ಸಹಪಾಠಿಯಾಗಿದ್ದ ಮಾಲೋಂ ನಿವಾಸಿ ಆಗಿರುವ ಬಾಲಕೃಷ್ಣನ್ (62) ಹಾಗೂ ಅವರ ಸ್ನೇಹಿತ ವಲಿಯ ಪ್ಲಾಕಲ್ ಮ್ಯಾಥ್ಯು (61) ಎಂಬವರ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. …

ಮನೆಯ ಹೆಂಚು ತೆಗೆದು ಒಳನುಗ್ಗಿ ಚಿನ್ನ, ಸೀರೆಗಳನ್ನು ಕಳವುಗೈದ ಆರೋಪಿ ಸೆರೆ

ಕಾಸರಗೋಡು: ಬೇಡಗಂ ಕೊಳತ್ತೂರಿನಲ್ಲಿ ಮನೆಯ ಹೆಂಚು ತೆಗೆದು ಒಳಗೆ ನುಗ್ಗಿ  ಅರ್ಧ ಪವನ್ ಚಿನ್ನಾಭರಣ ಹಾಗೂ ಸೀರೆಗಳನ್ನು ಕಳವುಗೈದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಕೊಳತ್ತೂರು ಮನಿಯಾರಂ ಕೊಚ್ಚಿಯ ಭಾಸ್ಕರನ್ (45) ಎಂಬಾತನನ್ನು ಬೇಡಗಂ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಸೋಮವಾರ ರಾತ್ರಿ  ಕೊಳತ್ತೂರು ನಾರಕ್ಕೋಟ್‌ನ ಸರೋಜಿನಿ (62) ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಯಲ್ಲಿ ಬೇರೆ ಯಾರೂ ಇಲ್ಲದುದರಿಂದ ಸರೋಜಿನಿ ಸಮೀಪದಲ್ಲಿ ವಾಸಿಸುವ ಮಗಳ ಮನೆಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ ಅವರು …