ಜಿಲ್ಲೆಯ 71 ಪರಿಶಿಷ್ಟ ವರ್ಗ ಕುಟುಂಬಗಳಿಗೆ ಪಟ್ಟಾ ಶೀಘ್ರ ವಿತರಣೆ

ಕಾಸರಗೋಡು: ಜಿಲ್ಲೆಯ 71 ಪರಿಶಿಷ್ಟ ವರ್ಗ ಕುಟುಂಬಗಳಿಗೆ ಶೀಘ್ರದಲ್ಲೇ ಭೂಮಿಯ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಪರಿಶಿಷ್ಟ ಗೋತ್ರ ವಿಭಾಗವಾದ ಕೊರಗ ಕುಟುಂಬಗಳ ಭೂಮಿಗೆ ಹಕ್ಕುಪತ್ರ ದೊರಕಿಸುವ ನೂತನ ಯೋಜನೆಯಾದ ಆಪರೇಶನ್ ಸ್ಮೈಲ್ ಚಟುವಟಿಕೆ ಕುರಿತು ಅವಲೋಕನ ನಡೆಸಲು ಜಿಲ್ಲಾಧಿಕಾರಿಯ ಚೇಂಬರ್‌ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರಿಸಲಾಯಿತು. ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂದಾಯ, ಸರ್ವೇ, ಪರಿಶಿಷ್ಟ ವರ್ಗ  ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು. ಪ್ರಸ್ತುತ ಜಿಲ್ಲೆಯ ಎಲ್ಲಾ ಕೊರಗ …

ಮಂಜೇಶ್ವರ: ಜಿಲ್ಲಾ ಕುಲಾಲ ಸಂಘ ಪದಾಧಿಕಾರಿಗಳ ಆಯ್ಕೆ

ಮಂಜೇಶ್ವರ:- ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ತೂಮಿನಾಡು ಇದರ 2025-27 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಉಪಾಧ್ಯಕ್ಷರಾಗಿ ರಾಮ ಉಜಿರೆ, ಪ್ರಧಾನ ಕಾರ್ಯದರ್ಶಿ ಯಾಗಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು, ಜತೆ ಕಾರ್ಯದರ್ಶಿಯಾಗಿ ಭೋಜ ಮಾಸ್ತರ್, ಪಾವೂರು, ಕೋಶಾಧಿಕಾರಿಯಾಗಿ ಈಶ್ವರ್ ಕುಲಾಲ್ ಕಣ್ವತೀರ್ಥ, ಕ್ರೀಡಾ ಕಾರ್ಯದರ್ಶಿಯಾಗಿ ತಾರನಾಥ ಕಣ್ವತೀರ್ಥ, ಸಂಘಟನಾ ಸಂಚಾಲಕರಾಗಿ ಸುಧೀರ್ ರಂಜನ್ ದೈಗೋಳಿ, ಜಯಂತ ಚಿಪ್ಪಾರು, ಸೇವಾದಳಪತಿಗಳಾಗಿ ಪ್ರಸಾದ್ ತೂಮಿನಾಡು, ಸುರೇಶ್ ಕಣ್ವತೀರ್ಥ, ನ್ಯಾಯ ಸಲಹಾ …

ಪ್ಲಸ್‌ವನ್ ಪರೀಕ್ಷೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪ್ಲಸ್‌ಟು ವಿದ್ಯಾರ್ಥಿನಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಪ್ಲಸ್‌ವನ್ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಅಲ್ಪಹೊತ್ತಿನಲ್ಲೇ ಪ್ಲಸ್‌ಟು ವಿದ್ಯಾರ್ಥಿನಿಯೋರ್ವೆ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಗಾಡಿಗುಡ್ಡೆ ಬಳಿಯ ಮೊಟ್ಟ ಕುಂಜ ನಿವಾಸಿ ಶಾಂತಪ್ಪ ಪೂಜಾರಿ ಎಂಬವರ ಪುತ್ರಿಯೂ, ಮುಳ್ಳೇರಿಯ ಶಾಲೆಯ ಪ್ಲಸ್‌ಟು ವಿದ್ಯಾರ್ಥಿನಿಯಾದ ಮನ್ಮಿತ (17) ಎಂಬಾಕೆ ಮೃತಪಟ್ಟಿದ್ದಾಳೆ. ನಿನ್ನೆ ಶಾಲೆಗೆ ತೆರಳಿದ್ದ ಸಹೋದರ ಧನುಷ್ ಸಂಜೆ ಮನೆಗೆ ಮರಳಿ ಬಂದಾಗ ಮನ್ಮಿತ ಅಡುಗೆ ಕೋಣೆಯೊಳಗೆ ಶಾಲು ಬಳಸಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳ. ಕೂಡಲೇ ಸ್ಥಳೀಯರು ತಲುಪಿ ಬಾಲಕಿಯನ್ನು …

ಕೋಳಿ ಅಂಕ: 5 ಮಂದಿ ಸೆರೆ; 4 ಕೋಳಿ, ಹಣ ವಶ

ಕುಂಬಳೆ: ಹೇರೂರು ಚೋಕೆಕುನ್ನು ಎಂಬಲ್ಲಿ ಕೋಳಿ ಅಂಕದಲ್ಲಿ ನಿರತರಾದ ೫ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಾಲ್ಕು ಕೋಳಿಗಳು ಹಾಗೂ 6400 ರೂಪಾಯಿ ವಶಪಡಿಸಲಾಗಿದೆ. ಹೇರೂರು ನಿವಾಸಿಗಳಾದ ರವಿ ಶೆಟ್ಟಿ (48), ಐತ್ತಪ್ಪ ಪೂಜಾರಿ (62), ಬಾಲಕೃಷ್ಣ ಶೆಟ್ಟಿ (58), ಮಧೂರು ಮುಟ್ಟತ್ತೋಡಿಯ ಕರುಣಾಕರ (42), ಕಯ್ಯಾರಿನ ರೇಮಂಡ್ ಡಿ’ಸೋಜಾ (60) ಎಂಬಿವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ 4 ಗಂಟೆಗೆ ಚೋಕೆಕುನ್ನುನಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕುಂಬಳೆ ಎಸ್‌ಐ ಕೆ. …

ರೈಲು ಢಿಕ್ಕಿ ಹೊಡೆದು ನಿರ್ಮಾಣ ಕಾರ್ಮಿಕ ಸಾವು

ಉಪ್ಪಳ: ರೈಲು ಢಿಕ್ಕಿ ಹೊಡೆದು ನಿರ್ಮಾಣ ಕಾರ್ಮಿಕ ಮೃತಪಟ್ಟ ಸ್ಥಿತಿ ಯಲ್ಲಿ ಪತ್ತೆಯಾದ ಘಟನೆ ಉಪ್ಪಳ ರೈಲು ನಿಲ್ದಾಣ ಬಳಿ ಸಂಭವಿಸಿದೆ. ಉಪ್ಪಳ ಕೋಡಿಬೈಲು ನಿವಾಸಿಯೂ, ಉಪ್ಪಳ ರೈಲು ನಿಲ್ದಾಣ ಬಳಿಯ ಹನುಮಾನ್ ನಗರದ ಬಾಡಿಗೆ ಮನೆಯಲ್ಲಿ ವಾಸಿಸುವ ಸತೀಶ ಯಾನೆ ಶಶಿ (48) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಕಲ್ಲು ಕಟ್ಟುವ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದರು ಇಂದು ಬೆಳಿಗ್ಗೆ 7 ಗಂಟೆಗೆ ಕೈಕಂಬ ಪೇಟೆಗೆಂದು ತಿಳಿಸಿ ಮನೆಯಿಂದ ತೆರಳಿದ್ದಾರೆನ್ನಲಾಗಿದೆ.  ಅಲ್ಪಹೊತ್ತಿನಲ್ಲೇ ಇವರು ಮನೆಯಿಂದ ಸ್ವಲ್ಪವೇ ದೂರದಲ್ಲಿ …

ಪತಿ ಮರಣ ಹೊಂದಿದರೆ ಪತ್ನಿಗೆ ಆ ಮನೆಯಲ್ಲೇ ವಾಸಿಸಲು ಹಕ್ಕಿದೆ- ಹೈಕೋರ್ಟ್

ಕೊಚ್ಚಿ: ಪತಿಯ ಮರಣದ ಬಳಿಕವೂ ಮಕ್ಕಳೊಂದಿಗೆ ಅದೇ ಮನೆಯಲ್ಲಿ ವಾಸಿಸಲು ಪತ್ನಿಗೆ ಕಾನೂನು ಪರವಾದ ಹಕ್ಕು ಇದೆ ಎಂದು ಹೈಕೋರ್ಟ್ ತಿಳಿಸಿದೆ. ಗೃಹ ದೌರ್ಜನ್ಯ ನಿಷೇಧ ಕಾನೂನು ಅನುಸಾರವಾಗಿ ಮಹಿಳೆ ಸಮಾಧಾನದಿಂದ ಆ ಮನೆ ಯಲ್ಲೇ ವಾಸಿಸುವುದನ್ನು ತಡೆಯಲು ಅಥವಾ ಅಲ್ಲಿಂದ ಹೊರ ಹಾಕಲು ಸಾಧ್ಯವಾಗದು ಎಂದು ಜಸ್ಟೀಸ್ ಎಂ.ಬಿ. ಸ್ನೇಹಲತ ಸ್ಪಷ್ಟಪಡಿಸಿದ್ದಾರೆ. ಪತಿಯ ಸಹೋದರರು, ಪತ್ನಿಯರು, ಪತಿಯ ತಾಯಿ ದ್ರೋಹಿಸುವುದು ಹಾಗೂ ಮನೆಯಿಂದ ಹೊರಗೆ ಹಾಕಿರುವುದಾಗಿ ಆರೋಪಿಸಿ ಪಾಲಕ್ಕಾಡ್ ನಿವಾಸಿಯಾದ ಯುವತಿ ನೀಡಿದ ಅರ್ಜಿಯಲ್ಲಿ ಹೈಕೋರ್ಟ್ …

ಗಂಟಲಲ್ಲಿ ಪೊರೋಟಾ ಸಿಲುಕಿ ಯುವಕ ಸಾವು

ಕಾಸರಗೋಡು: ಪೊರೋಟಾ ಗಂಟಲಲ್ಲಿ ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ಪೆರಿಯ ಪೆರಿಯೋಕಿಯ ದಿ| ಕುಂಞಿರಾಮನ್‌ರ ಪುತ್ರ ಶಿನೋಜ್ (41) ಸಾವನ್ನಪ್ಪಿದ ಯುವಕ. ಕಣ್ಣೂರಿನ ಎಳೆಯಾವೂರ್ ವೈದ್ಯರ್ ಪೀಡಿಗೆಯಿಲ್‌ನಲ್ಲಿರುವ ಎಂಪರರ್ ಎಂಬ ಹೆಸರಿನ ಹೋಟೆಲ್‌ನಲ್ಲಿ ಕಾರ್ಮಿಕನಾಗಿರುವ ಶಿನೋಜ್ ನಿನ್ನೆ ಬೆಳಿಗ್ಗೆ  ಆ ಹೋಟೆಲ್‌ನ ವಾಸಸ್ಥಳದ ಶೌಚಾಲಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರೂ ಅದು ಫಲಕಾರಿ ಯಾಗದೆ ಅವರು ಸಾವನ್ನಪ್ಪಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದಾಗ ಗಂಟಲಲ್ಲಿ ಪರೋಟಾ ಸಿಲುಕಿ ಅದರಿಂದ ಉಸಿರುಗಟ್ಟಿ …

ವಕ್ಫ್ ಆಸ್ತಿಗಳ ನೋಂದಣಿಗೆ ಕೇಂದ್ರ ಸರಕಾರದಿಂದ ‘ಉಮೀದ್’ ಪೋರ್ಟಲ್

ನವದೆಹಲಿ: ವಕ್ಫ್ ಆಸ್ತಿಗಳ ನೋಂ ದಾವಣೆಗೆ ಕೇಂದ್ರ ಸರಕಾರ ಉಮೀದ್ ಎಂಬ ಹೆಸರಲ್ಲಿ ಪೋರ್ಟಲ್ ಆರಂಭಿಸಿದೆ. ಜೂನ್ ೬ರಿಂದ ಇದು ವಿದ್ಯುಕ್ತವಾಗಿ ಕಾರ್ಯಾರಂಭಗೊಳ್ಳಲಿದೆ. ವಕ್ಪ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಉದ್ದೇಶದಿಂದ  ಕೇಂದ್ರಸರಕಾರ ಈ ಪೋರ್ಟಲ್‌ಗೆ ರೂಪು ನೀಡಿದ್ದು, ಆ ಮೂಲಕ ವಕ್ಫ್ ಕಾಯ್ದೆಯನ್ನು ಮುನ್ನಡೆಸಲು ಸಜ್ಜಾಗಿದೆ. ವಕ್ಪ್ ಆಸ್ತಿಗಳ ನೋಂದಾವಣೆ ಯನ್ನು ಸುಗಮಗೊಳಿಸುವ ಗುರಿಯನ್ನು ಈ ಪೋರ್ಟಲ್ ಹೊಂದಿದೆ. ಇದನ್ನು ಆರು ತಿಂಗಳೊ ಳಗಾಗಿ ಪೂರ್ಣಗೊಳಿಸಬೇಕೆಂಬ ನಿರ್ದೇಶವನ್ನು ಕೇಂದ್ರ ಸರಕಾರ ನೀಡಿದೆ.  ಮಹಿಳೆಯರ ಹೆಸರಲ್ಲಿರುವ …

ಐಪಿಎಲ್ ಫೈನಲ್ ಇಂದು: ಯಾರೇ ಗೆದ್ದರೂ ನೂತನ ಚಾಂಪ್ಯನ್‌ನ ಉದಯ ಖಚಿತ

ಅಹಮದಾಬಾದ್: ಐಪಿಎಲ್ ನಲ್ಲಿ ಇಂದು ಆವೇಷಕರವಾದ ಹೋರಾಟ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮಧ್ಯೆ ಅಹಮದಾ ಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ರಾತ್ರಿ ೭.೩೦ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಯಾವ ತಂಡ ಗೆದ್ದರೂ ಹೊಸ ಚಾಂಪ್ಯನ್‌ನ ಉದಯವಾಗಲಿದೆ ಎಂಬುದು ಈ ಬಾರಿಯ ಪ್ರತ್ಯೇಕತೆಯಾಗಿದೆ. ಬೆಂಗಳೂರು ನಾಲ್ಕನೇ ಬಾರಿ ಹಾಗೂ ಪಂಜಾಬ್ ಎರಡನೇ ಬಾರಿ ಫೈನಲ್‌ನಲ್ಲಿ ಸೆಣಸಾಡುತ್ತಿದೆ. ಟೂರ್ನಮೆಂಟ್‌ನಲ್ಲಿ ಇದುವರೆಗೆ ಚಾಂಪ್ಯನ್ ಪಟ್ಟ ಗಳಿಸುವ ಈ ತಂಡ ಗಳಿಗೆ ಸಾಧ್ಯವಾಗಲಿಲ್ಲ. ಅಭಿಮಾನಿಗಳ 18 ವರ್ಷದ …

ಊಟಮಾಡಿ ಬರುವಷ್ಟರಲ್ಲಿ ಹೋಟೆಲ್ ಬಳಿಯಿಂದ ಸ್ಕೂಟರ್ ಕಳವು

ಉಪ್ಪಳ: ಹೋಟೆಲ್‌ನ ಹೊರಗೆ ಸ್ಕೂಟರ್ ನಿಲ್ಲಿಸಿ ವ್ಯಕ್ತಿ ಊಟಮಾಡಿ ಬರುವಷ್ಟರಲ್ಲಿ ಸ್ಕೂಟರ್ ಕಳವುಗೀ ಡಾದ ಘಟನೆ ನಡೆದಿದೆ. ಆನೆಕಲ್ಲು ನಿವಾಸಿ ಮೊಹಮ್ಮದ್ ಎಂಬವರ ಸ್ಕೂಟರ್  ಕಳವಿಗೀಡಾ ಗಿದ್ದು, ಈ ಬಗ್ಗೆ ಅವರು ನೀಡಿದ ದೂರಿನಂತೆ  ಮಂಜೇಶ್ವರ ಪೊಲೀಸರು ಕೇಸು ದಾಖ ಲಿಸಿ ತನಿಖೆ ನಡೆಸುತ್ತಿದ್ದಾರೆ. ಮೊಹ ಮ್ಮದ್ ಈ ತಿಂಗಳ ೧ರಂದು ಮಧ್ಯಾಹ್ನ 2.30ಕ್ಕೆ  ಹೊಸಂಗಡಿ ಪೇಟೆಯ ಹೋಟೆಲ್‌ವೊಂದರ ಮುಂಭಾಗ ಸ್ಕೂಟರ್ ನಿಲ್ಲಿಸಿ ಊಟ ಮಾಡಲು ತೆರಳಿದ್ದರು. ಊಟ ಮಾಡಿ ಮರಳು ವಷ್ಟರಲ್ಲಿ ಸ್ಕೂಟರ್ ನಾಪತ್ತೆಯಾಗಿದೆ ಯೆಂದು …