ಮಕ್ಕಳೊಂದಿಗೆ ಯುವತಿ ನಾಪತ್ತೆ: ಪೊಲೀಸರಿಂದ ತನಿಖೆ ತೀವ್ರ

ಕಾಸರಗೋಡು: ಶೇಣಿ ಪಟ್ಲದಿಂದ ನಾಪತ್ತೆಯಾದ ಯುವತಿ ಹಾಗೂ ಮಕ್ಕಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಚಿತ್ರಕಲಾ (37) ಹಾಗೂ 14, 3 ವರ್ಷ ಪ್ರಾಯದ ಇಬ್ಬರು ಮಕ್ಕಳು ಮೇ 31ರಿಂದ  ನಾಪತ್ತೆಯಾಗಿದ್ದರು.  ಅಂದು ಬೆಳಿಗ್ಗೆ 11.15ಕ್ಕೆ ಪೆರ್ಲಕ್ಕೆ ತೆರಳುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದರು. ಹಿಂತಿರುಗದ ಹಿನ್ನೆಲೆಯಲ್ಲಿ ಪತಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ಹಾಗೂ ಮಕ್ಕಳು ಕರ್ನಾಟಕದಲ್ಲಿರುವುದಾಗಿ ಪೊಲೀಸರಿಗೆ ಸೂಚನೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಕರ್ನಾಟಕಕ್ಕೆ ವಿಸ್ತರಿಸಲಾಗಿದೆ.

ತಂದೆಯಿಂದ ಇರಿತ: ಮಗ ಬಲಿ

ಪಾಲಕ್ಕಾಡ್: ಮದ್ಯ ಸೇವಿಸಿ ಬಂದು ಮನೆಯಲ್ಲಿ ಗಲಾಟೆ ಮಾಡಿದ ಪುತ್ರನನ್ನು ತಂದೆ ಇರಿದು ಕೊಲೆಗೈದ ಘಟನೆ ನಡೆದಿದೆ. ಪಾಲಕ್ಕಾಡ್ ಸಮೀಪ ಕೊಡುಂತರಪಳ್ಳಿ ನಿವಾಸಿ ಸಿಜಿಲ್ ಎಂಬಾತನನ್ನು ತಂದೆ  ಶಿವನ್ ಇರಿದು ಕೊಲೆಗೈದಿರುವುದಾಗಿ ಹೇಳಲಾಗುತ್ತಿದೆ. ಘಟನೆ ಬಳಿಕ ಶಿವನ್ ತಲೆಮರೆಸಿಕೊಂಡಿದ್ದಾನೆ.  ನಿನ್ನೆ ಸಂಜೆ 4 ಗಂಟೆಗೆ ಮದ್ಯ ಸೇವಿಸಿ ಮನೆಗೆ ಬಂದ ಸಿಜಿಲ್ ಜಗಳ ಆರಂಭಿಸಿದ್ದನೆನ್ನಲಾಗಿದೆ. ರಾತ್ರಿ 8.30ರ ವೇಳೆ ಶಿವನ್‌ನೊಂದಿಗೆ ಮತ್ತೆ ವಾಗ್ವಾದ ನಡೆಸಿದ್ದು, ಈ ವೇಳೆ ಶಿವನ್ ಚಾಕುವಿನಿಂದ ಸಿಜಿಲ್‌ಗೆ ಇರಿದಿದ್ದಾನೆ ನ್ನಲಾಗಿದೆ. ಗಾಯಗೊಂಡ ಸಿಜಿಲ್ …

ಕುಂಬಳೆ: 2023ರಿಂದ ಸಾರಿಗೆ ಕಾನೂನು ಉಲ್ಲಂಘನೆ: ಏಕಕಾಲದಲ್ಲಿ 300ರಷ್ಟು ಮಂದಿಗೆ ನೋಟೀಸು ಜಾರಿ; ಕೆಲವರಿಗೆ 1 ಲಕ್ಷ ರೂ.ಗಿಂತಲೂ ಹೆಚ್ಚು ಜುಲ್ಮಾನೆ

ಕುಂಬಳೆ: 2023ರಿಂದ   ಸಾರಿಗೆ ಕಾನೂನು ಉಲ್ಲಂಘನೆ ನಡೆಸಿದ ಹೆಸರಲ್ಲಿ ಕುಂಬಳೆ ಮತ್ತು ಇತರ ಪ್ರದೇಶಗಳ 300ರಷ್ಟು ವಾಹನ ಮಾಲಕರಿಗೆ   ಜುಲ್ಮಾನೆ ಪಾವತಿಸು ವಂತೆ ಏಕ ಕಾಲದಲ್ಲಿ ದಿಢೀರ್ ನಿರ್ದೇಶಿಸಿ ಸಾರಿಗೆ ಇಲಾಖೆ ಅವರಿಗೆ ನೋಟೀಸು ಜ್ಯಾರಿಗೊಳಿಸಿದೆ. ಹೀಗೆ ನೋಟೀಸು ಲಭಿಸಿದ ಹಲವರಿಗೆ  ಒಂದು ಲಕ್ಷ ರೂ.ಗಿಂತಲೂ ಹೆಚ್ಚು ಜುಲ್ಮಾನೆ ಪಾವತಿಸುವಂತೆಯೂ ನಿರ್ದೇಶ ನೀಡಲಾಗಿದೆ. ಸಾರಿಗೆ ಕಾನೂನು ಉಲ್ಲಂಘ ನೆಯನ್ನು ಪತ್ತೆಹಚ್ಚಲು ಕುಂಬಳೆ ಪೇಟೆಯ ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ  2023ರಲ್ಲಿ  ಕ್ಯಾಮರಾ ಸ್ಥಾಪಿಸಿತ್ತು. ಅದು ಸೆರೆಹಿಡಿದ ದೃಶ್ಯಗಳ ಆಧಾರದಲ್ಲಿ ಇಷ್ಟೊಂದು …

ದೇರಂಬಳ ಸೇತುವೆ ಕುಸಿದು ಬಿದ್ದು ವರ್ಷ ಅನೇಕ ಕಳೆದರೂ ನಿರ್ಮಾಣಕ್ಕೆ ಕ್ರಮವಿಲ್ಲ: ಸ್ಥಳೀಯರಿಗೆ ಸಂಕಷ್ಟ

ಉಪ್ಪಳ: ದೇರಂಬಳದಲ್ಲಿ ಸೇತುವೆ ಕುಸಿದು ಬಿದ್ದು ಹಲವು ವರ್ಷಗಳು ಕಳೆದರೂ ಮರು ನಿರ್ಮಾಣಕ್ಕೆ ಅಧಿಕಾರಿಗಳು ಕ್ರಮಕೈಗೊಳ್ಳದೆ ಇರುವುದು ಊರವರಿಗೆ ಸಮಸ್ಯೆ ಸೃಷ್ಟಿಸಿದೆ. ಮಂಗಲ್ಪಾಡಿ, ಮೀಂಜ ಪಂಚಾಯತ್ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು ಈಗ ಸಂಚಾರ ದುಸ್ತರವಾಗಿದೆ. ದೇರಂಬಳ, ಚಿಗುರುಪಾದೆ, ಬುಡ್ರಿಯ, ಕಲ್ಲಗದ್ದೆ, ತೊಟ್ಟೆತ್ತೋಡಿ, ಬೇಕೂರು, ಪೈವಳಿಕೆ, ಜೋಡುಕಲ್ಲು, ಮಡಂದೂರು ಮೊದಲಾದ ಪ್ರದೇಶಗಳ ಜನರಿಗೆ ಅತ್ತಿತ್ತ ಸಂಚರಿಸಲು ಸಂಪರ್ಕ ಸೇತುವೆ ಇದಾಗಿತ್ತು. ಆದರೆ ಈಗ ಈ ಪ್ರದೇಶಗಳಿಗೆ ಕಿಲೋ ಮೀಟರ್ ಸುತ್ತು ವರಿದು ಬಾಯಿಕಟ್ಟೆ, ಕಳಾಯಿ ರಸ್ತೆ …

ನಡು ರಸ್ತೆಯಲ್ಲಿ ಯುವತಿಯ ಕೊಲೆ

ಕೊಚ್ಚಿ: ಎರ್ನಾಕುಳಂ ಮುನಂಬತ್ ಎಂಬಲ್ಲಿ ೪೫ರ ಹರೆಯದ ಯುವಕ ಜೊತೆಗಾತಿ ಯನ್ನು ನಡು ರಸ್ತೆಯಲ್ಲಿ ಇರಿದು ಕೊಲೆಗೈದಿದ್ದಾನೆ. ಪಳ್ಳಿಪುರಂ ನಿವಾಸಿ ತೈಪರಂಬಿಲ್ ಸುರೇಶ್  ತನ್ನ ಜೊತೆಯಲ್ಲಿ ವಾಸಿಸುತ್ತಿದ್ದ ಪನಂಬಳ್ಳಿ ನಗರ ನಿವಾಸಿ ಪ್ರೀತಿ (43)ಳನ್ನು ಕೊಲೆಗೈದಿದ್ದಾನೆ. ಕೊಲೆ ಬಳಿಕ ಈತ ಮುನಂಬಂ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾನೆ.

ಪ್ರೇಮ ವಿನಂತಿ ತಿರಸ್ಕರಿಸಿದ ಕೇರಳೀಯ ಯುವತಿಯ ಕೊಲೆಗೈದ ಯುವಕ ಠಾಣೆಗೆ ಶರಣು

ಕೊಯಂಬತ್ತೂರು: ಪ್ರೇಮ ವಿನಂತಿಯನ್ನು ತಿರಸ್ಕರಿಸಿದ ಕೇರಳೀಯ ವಿದ್ಯಾರ್ಥಿನಿಯನ್ನು ಮನೆಯೊಳಗೆ ನುಗ್ಗಿ ಯುವಕ ಇರಿದು ಕೊಲೆಗೈದ ಘಟನೆ ನಡೆದಿದೆ. ಕೊಲೆಯ ಬಳಿಕ ಪೊಲೀಸರಿಗೆ ಶರಣಾದ ಯುವಕನನ್ನು ಬಂಧಿಸಲಾಗಿದೆ. ಪೊಳ್ಳಾಚಿ ವಡುಗಪಾಳಯದಲ್ಲಿ ಈ ಘಟನೆ ನಡೆದಿದೆ. ಪೊನ್ಮುತ್ತು ನಗರದ ಕೇರಳೀಯ ಕುಟುಂಬದ ಕಣ್ಣನ್‌ರ ಪುತ್ರಿ ಅಶ್ವಿಕ (19)ಳನ್ನು ಕೊಲೆಗೈಯ್ಯ ಲಾಗಿದೆ. ಉದುಮಲ್ ಪೇಟ ರಸ್ತೆ ಅಣ್ಣಾನಗರ್ ನಿವಾಸಿ ಹಾಗೂ  ಖಾಸಗಿ ಹಣಕಾಸು ವ್ಯವಹಾರ ಸಂಸ್ಥೆಯ ನೌಕರನಾದ ಪ್ರವೀಣ್ ಕುಮಾರ್ ಸೆರೆಯಾದ ಯುವಕ. ಕೊಯಂಬತ್ತೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್‌ಸಿ …

ಪೈವಳಿಕೆ ಪಂ. ವ್ಯಾಪ್ತಿಯಲ್ಲಿ ವಿವಿಧ ಕಡೆ ಗುಡ್ಡೆ ಕುಸಿತ: ರಸ್ತೆ ಸಂಚಾರ ಭೀತಿಯಲ್ಲಿ

ಬಾಯಾರು: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ರಸ್ತೆ ಬದಿಯಲ್ಲಿರುವ ಗುಡ್ಡೆ ಕುಸಿದು ಬಿದ್ದು ಸಂಚಾರಕ್ಕೆ ಆತಂಕ ಉಂಟಾಗಿದೆ. ಮುಳಿಗದ್ದೆ ಸಮೀಪದ ಕಲ್ಲಗದ್ದೆ-ಸುದೆಂಬಳ ಸಡಕ್ ರಸ್ತೆಯಲ್ಲಿ ಗುಡ್ಡೆ ಕುಸಿದು ಬಿದ್ದಿದ್ದು, ಮಣ್ಣು ರಸ್ತೆಯಲ್ಲಿ ಉಳಿದುಕೊಂಡಿದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕುಸಿದು ಬಿದ್ದಿದೆ. ಈ ರಸ್ತೆಯ ಇನ್ನಿತರ ಕಡೆಗಳಲ್ಲಿ ಈ ಹಿಂದೆ ಗುಡ್ಡೆ ಕುಸಿದು ಬಿದ್ದು ರಸ್ತೆಯಲ್ಲಿರುವ ಮಣ್ಣನ್ನು ಇನ್ನೂ ತೆರವುಗೊಳಿಸಲಿಲ್ಲವೆಂದು ಸಾರ್ವಜನಿಕರು ದೂರಿದ್ದಾರೆ. ಈ ರಸ್ತೆ ಕನಿಯಾಲ, ಬಾಯಾರು, ಧರ್ಮತ್ತಡ್ಕ, ಮುಳಿಗದ್ದೆ ಸಹಿತ …

ಮಾರಾಟಕ್ಕಾಗಿ ಮಾದಕ ಪದಾರ್ಥ ಸಾಗಾಟ: ದಂಪತಿ ಸೆರೆ

ಆಲಪ್ಪುಳ: ಎಂಡಿಎಂಎ ಸಹಿತ ದಂಪತಿ ಸೆರೆಯಾಗಿದ್ದಾರೆ. ಹಲವಾರು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾದ ಕೆ. ಸಿಯಾ (40), ಪತ್ನಿ ಸಂಜು ಮೋಳ್ (39) ಎಂಬಿವರನ್ನು ಆಲಪ್ಪುಳ ಪೊಲೀಸರು ಬಂಧಿಸಿದ್ದಾರೆ. ಇವರಿಂದ ೧೩ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಆಪರೇಷನ್ ಡಿಹಂಟ್‌ನಂಗವಾಗಿ ರೈಲ್ವೇ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಎಂಬೆಡೆಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಇವರಿಬ್ಬರೂ ಸೆರೆಯಾಗಿದ್ದಾರೆ. ಮಾರಾಟಕ್ಕಾಗಿ ಮಾದಕ ಪದಾರ್ಥಗಳನ್ನು ಸಾಗಿಸುತ್ತಿ ರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಸಿಯಾ ಹಲವು ತಿಂಗಳು ಗಳಿಂದ ಅನ್ಯರಾಜ್ಯಗಳಿಂದ ಮಾದಕ ಪದಾರ್ಥಗಳನ್ನು ಊರಿಗೆ ತಂದು ಮಾರಾಟ …

ಉರ್ಮಿ ಕೃಷ್ಣ ಶೆಟ್ಟಿ ಸಂಸ್ಮರಣೆ

ಪೈವಳಿಕೆ: ಸಿಪಿಎಂ ಮುಖಂಡ ಉರ್ಮಿ ಕೃಷ್ಣ ಶೆಟ್ಟಿಯವರ ಸಂಸ್ಮರಣೆ ಸ್ಮೃತಿಮಂಟಪದಲ್ಲಿ ಜರಗಿತು. ಹಿರಿಯ ಮುಖಂಡ ನಾರಾಯಣ ಶೆಟ್ಟಿ ಕೆ. ಅಧ್ಯಕ್ಷತೆ ವಹಿಸಿದರು. ಏರಿಯಾ ಸಮಿತಿ ಸದಸ್ಯ ಹಾರಿಸ್ ಪೈವಳಿಕೆ ಉದ್ಘಾಟಿಸಿದರು. ಅಬ್ದುಲ್ಲ ಕೆ, ಸದಾನಂದ ಕೋರಿಕ್ಕಾರ್ ಮಾತನಾಡಿದರು. ಶ್ರೀನಿವಾಸ ಭಂಡಾರಿ ಧ್ವಜಾರೋಹಣ ಗೈದರು. ರವಿ ಶೆಟ್ಟಿ ಕಳಾಯಿ, ಸುಧಾಕರ ಶೆಟ್ಟಿ ಕಳಾಯಿ, ಪಂ. ಅಧ್ಯಕ್ಷೆ ಜಯಂತಿ ಕೆ., ಉರ್ಮಿ ಬ್ರಾಂಚ್ ಕಾರ್ಯದರ್ಶಿ ಜಗದೀಶ ಶೆಟ್ಟಿ ಉಪಸ್ಥಿತರಿದ್ದರು. ಲೋಕಲ್ ಕಾರ್ಯದರ್ಶಿ ಚಂದ್ರ ನಾಯ್ಕ್ ಸ್ವಾಗತಿಸಿದರು.

ಏಕದಂತ ಬಳಗ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಪೆರ್ಲ: ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣಗೊಂಡ ಏಕದಂತ ನೃತ್ಯಬಳಗದ ವಿದ್ಯಾರ್ಥಿಗಳಿಗೆ ಏಕದಂತ ಸೇವಾ ಬಳಗ ಪೆರ್ಲ ಇದರ ವತಿಯಿಂದ ಅಭಿನಂದನೆ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮ ಪೆರ್ಲ ಶಾಲೆಯಲ್ಲಿ ನಡೆಯಿತು. ರಘುರಾಮ್ ಕಾಳ್ಯಂಗಾಡು ದೀಪ ಬೆಳಗಿಸಿ ಉದ್ಘಾಟಿಸಿದರು. ಭಜನಾ ಸಂಕೀರ್ತನಗಾರ ಶಿವರಾಮ್ ಪೆಲ್ತಾಜೆ ಮಾತನಾಡಿದರು. ಡಾ. ಕೃಷ್ಣಮೋಹನ ಪೆರ್ಲ, ರಂಗ ಕಲಾವಿದ ಪುರುಷೋತ್ತಮ ಕೊಡಂಗೆ ಉಪಸ್ಥಿತರಿದ್ದರು. ಏಕದಂತ ಬಳಗದ ನಿರ್ದೇಶಕ ರಮೇಶ್ ಕುರಡ್ಕ ಅಧ್ಯಕ್ಷತೆ ವಹಿಸಿದರು. ಪ್ರಶಾಂತ್ ಕುರಡ್ಕ ಸ್ವಾಗತಿಸಿ, ಶರಣ್ಯ ಸೇರಾಜೆ ವಂದಿಸಿದರು.