ತುಂಡಾಗಿ ನಿಂತ ವಿದ್ಯುತ್ ಕಂಬದಿಂದ ಅಪಾಯಭೀತಿ: ದೂರು ನೀಡಿದರೂ ಅಧಿಕಾರಿಗಳು ಮೌನ

ಕುಂಬಳೆ: ವಿದ್ಯುತ್ ಕಂಬವೊಂದು ತುಂಡಾಗಿ ನಿಂತಿದ್ದು, ಯಾವುದೇ ಕ್ಷಣ ದಲ್ಲಿ ಧರೆಗೆ ಅಪ್ಪಳಿಸುವ ಸ್ಥಿತಿಯಲ್ಲಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕಂಬ ತೆರವುಗೊಳಿಸಿ ಹೊಸ ಕಂಬ ಸ್ಥಾಪಿಸಲು ಕ್ರಮ ಉಂಟಾಗಿಲ್ಲ ವೆಂಬ ಆರೋಪ ಕೇಳಿಬಂದಿದೆ. ಕಟ್ಟತ್ತಡ್ಕ ಜಂಕ್ಷನ್‌ನಲ್ಲಿ ಅಪಾಯ ಭೀತಿ ಸೃಷ್ಟಿಸುವ ವಿದ್ಯುತ್ ಕಂಬವಿದೆ. ಇದು ಅರ್ಧದಿಂದ ತುಂಡಾದ ಈ ಕಂಬ ಮರವೊಂದನ್ನು ಆಧಾರಿಸಿ  ನಿಂತಿದೆ, ಜೋರು ಗಾಳಿ, ಮಳೆಗೆ ಈ ಕಂಬ ನೆಲಕ್ಕುರುಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಈ ಕಂಬವನ್ನು ಶೀಘ್ರ ತೆರವುಗೊಳಿಸಬೇಕೆಂದು ಆಗ್ರಹಿಸಿ …

ಶಾಲೆಗಳಲ್ಲಿ ಮಲೆಯಾಳ ಕಡ್ಡಾಯಗೊಳಿಸುವ ಮಸೂದೆಗೆ ರಾಷ್ಟ್ರಪತಿಯಿಂದ ಅನುಮತಿ ನಿರಾಕರಣೆ

ತಿರುವನಂತಪುರ: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಲೆಯಾಳಂನ್ನು ಪ್ರಥಮ ಭಾಷೆಯನ್ನಾಗಿಸಿ ಅದನ್ನು ಕಡ್ಡಾಯಗೊಳಿಸಲು ಹಾಗೂ ಮಲೆಯಾಳಂ ಭಾಷಾ ಕಲಿಕೆ  ಹೇರುವ ಉದ್ದೇಶದಿಂದ ಈ ಹಿಂದಿನ ಉಮ್ಮನ್‌ಚಾಂಡಿ ನೇತೃತ್ವದ ಯುಡಿಎಫ್ ಸರಕಾರದ ಆಡಳಿತ ವೇಳೆ ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಲೆಯಾಳಂ ಭಾಷಾ ವಿಧೇಯಕಕ್ಕೆ ರಾಷ್ಟ್ರಪತಿ ಅನುಮತಿ ನಿರಾಕರಿಸಿದ್ದಾರೆ. ಶಾಲೆಗಳಲ್ಲಿ ಮಲೆಯಾಳಂನ್ನು ಪ್ರಥಮ ಭಾಷೆಯನ್ನಾಗಿಸಿ ಆ ಮೂಲಕ ಕಡ್ಡಾಯವಾಗಿ ಮಲೆಯಾಳಂ ಹೇರುವುದು ರಾಜ್ಯದ ಕನ್ನಡ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ನಿಷೇಧಿಸುವಂತಾಗಲಿದೆ ಎಂದು ತಿಳಿಸಿ ಅದರ ವಿರುದ್ಧ ಕೇರಳದ …

ಪುದುಕೋಳಿ ರಸ್ತೆ ದುರವಸ್ಥೆ: ಸಂಪರ್ಕ ನೀಡದ ಪೈಪ್‌ನಲ್ಲಿ ಚಿಮ್ಮಿದ ನೀರು…!

ಬದಿಯಡ್ಕ: ನಿರಂತರ ಸುರಿಯುತ್ತಿರುವ ವರ್ಷಧಾರೆಯಿಂದ ಗ್ರಾಮೀಣ ಪ್ರದೇಶದ ಜನಜೀವನ ಅತಂತ್ರವಾಗಿದೆ. ರಸ್ತೆಗಳಲ್ಲಿ ಹರಿಯುತ್ತಿರುವ ನೀರು, ಮರಗಳ ನೆಲಕಚ್ಚುವಿಕೆ, ವಿದ್ಯುತ್ ಮೊಟಕುಗಳಿಂದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.ನೀರ್ಚಾಲು-ಪುದುಕೋಳಿ-ಮಾನ್ಯ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ವಾಹನ ಸಂಚಾರ ಮೊಟಕುಗೊಂಡಿದೆ. ಮಳೆ ನೀರು ಹರಿಯುತ್ತಿರುವುದರಿಂದ ವಾಹನ ನಿಲ್ಲಿಸಿ ರಸ್ತೆ ಹುಡುಕಿ ತೆರಳಬೇಕಾದ ದುರವಸ್ಥೆ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮೊಟಕುಗೊಂಡಿದ್ದ ವಿದ್ಯುತ್ ಸಂಪರ್ಕ ಪುನಃಸ್ಥಾಪಿಸ ಲ್ಪಟ್ಟರೂ ಕಣ್ಣಾಮುಚ್ಚಾಲೆಗೆ ಕೊನೆ ಇಲ್ಲವಾಗಿದೆ. ಮಳೆಯ ಮಧ್ಯೆ ನಿನ್ನೆ ಬೆಳಿಗ್ಗೆ ಪುದುಕೋಳಿ ಕೊರುಂಗು …

ಪೆರ್ಲ-ಕಾಟುಕುಕ್ಕೆ ರಸ್ತೆ ಶೋಚನೀಯ ಸ್ಥಿತಿಗೆ ಕಾರಣ ಸರಕಾರ: ಪಿಡಬ್ಲ್ಯುಡಿ ರಸ್ತೆಯನ್ನು ಪಂಚಾಯತ್‌ಗೆ ಮರಳಿ ನೀಡಬೇಕು-ಸೋಮಶೇಖರ್ ಜೆ.ಎಸ್

ಪೆರ್ಲ: ಪಂಚಾಯತ್‌ನ ಅಧೀನತೆಯಿಂದ ಸರಕಾರ ವಹಿಸಿಕೊಂಡ ಪೆರ್ಲ-ಕಾಟುಕುಕ್ಕೆ ರಸ್ತೆ  ಹೊಂಡಗಳಿಂದ ತುಂಬಿಕೊಂಡು ಶೋಚನೀಯಾವಸ್ಥೆಗೆ ತಲುಪಿದುದರ ಹೊಣೆಗಾರಿಕೆ ಸರಕಾರಕ್ಕಾಗಿದೆ ಯೆಂದು ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್ ಆರೋಪಿಸಿದ್ದಾರೆ. ರಸ್ತೆಯನ್ನು  ಪಿಡಬ್ಲ್ಯುಡಿ ಶೀಘ್ರ ದುರಸ್ತಿಗೊಳಿಸದಿದ್ದಲ್ಲಿ ಪಂಚಾಯತ್‌ಗೆ ಮರಳಿ ನೀಡಬೇಕೆಂದೂ ಅವರು ಆಗ್ರಹಪಟ್ಟಿದ್ದಾರೆ. ಹಲವು ವಾಹನಗಳು, ಜನರು ಸಂಚರಿಸುವ ರಸ್ತೆಯನ್ನು ಪಿಡಬ್ಲ್ಯುಡಿ ವಹಿಸಿಕೊಂಡ ಬಳಿಕ ಯಾವುದೇ ದುರಸ್ತಿ ಕಾರ್ಯ ನಡೆಸದುದರಿಂದ ರಸ್ತೆ ಪೂರ್ಣವಾಗಿ ಹೊಂಡಗಳಿಂದ ತುಂಬಿಕೊಂಡಿದೆ. ರಸ್ತೆಯನ್ನು ಅಭಿವೃದ್ಧಿಪಡಿಸಿ ಸಂಚಾರ ಯೋಗ್ಯಗೊಳಿಸಬೇಕೆಂದು ಹಲವು ಬಾರಿ ಒತ್ತಾಯಿಸಿದರೂ ಪಿಡಬ್ಲ್ಯುಡಿ ಮೌನ ವಹಿಸುತ್ತಿದೆ. …

ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಜಿಲ್ಲೆಗಳಿಗೆ ತಲಾ ಒಂದು ಕೋಟಿ ರೂ.  ಬಿಡುಗಡೆ

ತಿರುವನಂತಪುರ: ಜಡಿ ಮಳೆಯಿಂದ ಪ್ರಾಕೃತಿಕ ವಿಕೋಪ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳಿಗಾಗಿ ರಾಜ್ಯ ಸರಕಾರ ತಲಾ ಒಂದು ಕೋಟಿ ರೂ. ಬಿಡುಗಡೆಗೊಳಿಸಿದೆ. ಇದರಂತೆ ವಿಪತ್ತು ನಿರ್ವಹಣಾ ನಿಧಿಯಿಂದ ಈ ಹಣ ವಿನಿಯೋಗಿ ಸಲು ಸರಕಾರ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿದೆ. ಅನಿವಾರ್ಯ ಸಂದರ್ಭದಲ್ಲಿ  25ಲಕ್ಷರೂ. ವಿನಿಯೋಗಿಸುವ ಅನುಮತಿ ನೀಡಲಾಗಿದೆ. ಇದರ ಹೊರತಾಗಿ ಸ್ಥಳೀಯಾಡಳಿತ ಸಂಸ್ಥೆಗಳಿಗೂ ಸರಕಾರ ಹಣ ಬಿಡುಗಡೆಗೊಳಿಸಿದೆ. ಇದರಂತೆ ಕಾರ್ಪೋರೇಶನ್‌ಗಳು ಗರಿಷ್ಠ ಐದು ಲಕ್ಷ ರೂ. , ನಗರಸಭೆಗಳು ಮೂರು ಲಕ್ಷ ಹಾಗೂ ಗ್ರಾಮ ಪಂಚಾಯತ್ ಗಳು …

ನಾಪತ್ತೆ : ಮಾಹಿತಿ ನೀಡಲು ಪೊಲೀಸ್ ಕರೆ

ಕಾಸರಗೋಡು:  ಎರಿಯಾಲ್ ಕುಳಂಗರೆ ನಿವಾಸಿಯಾದ ಅಶ್ರಫ್ (35) ಮೇ 4ರಿಂದ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಲಾಗಿದೆ. ಕಾಞಂಗಾ ಡ್‌ಗೆ ತೆರಳಿದ ಬಳಿಕ ನಾಪತ್ತೆಯಾಗಿ ರುವುದಾಗಿ ಪೊಲೀಸರು ತಿಳಿಸಿದ್ದು, ಇವರು ಅಲ್ಪ ಅಸ್ವಸ್ಥತೆ ಹೊಂದಿದ್ದಾರೆನ್ನ ಲಾಗಿದೆ. ಅಶ್ರಫ್ ಬಗ್ಗೆ ಮಾಹಿತಿ ಲಭಿಸಿ ದರೆ ಕಾಸರಗೋಡು ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಪೊಲೀಸರು ತಿಳಿಸಿದ್ದಾರೆ.

ಶಾಲಾ ವಾಹನಗಳ ಸುರಕ್ಷತೆ ತಪಾಸಣೆ: ವಿದ್ಯಾರ್ಥಿಗಳ ಪ್ರಯಾಣ ಸಮಸ್ಯೆ ಪರಿಹಾರಕ್ಕೆ ವಾಟ್ಸಪ್ ಗ್ರೂಪ್ ರೂಪೀಕರಣ

ಕಾಸರಗೋಡು: ಆಪರೇಷನ್ ಸುರಕ್ಷಾ ವಿದ್ಯಾರಂಭ ಯೋಜನೆ ಯಂತೆ ಜಿಲ್ಲೆಯ 537 ಶಾಲೆಗಳ ವಾಹನಗಳನ್ನು ಸುರಕ್ಷಾ ತಪಾಸಣೆ ನಡೆಸಲಾಯಿತು. 300 ವಾಹನಗಳಿಗೆ ಸ್ಟಿಕ್ಕರ್ ಲಗತ್ತಿಸಿ ಬಿಡಲಾಯಿತು. ಉಳಿದ ವಾಹನಗಳಿಗೆ ಇನ್ನಷ್ಟು ಸುರಕ್ಷಿತತೆ ಮಾಡಲು ನಿರ್ದೇಶ ನೀಡಲಾಯಿತು. ಕಾಸರಗೋಡು, ಮಂಜೇಶ್ವರ ತಾಲೂಕುಗಳ 500ಕ್ಕೂ ಅಧಿಕ ಶಾಲಾ ವಾಹನ ಚಾಲಕರಿಗೂ ಆಯಾರಿಗೂ ರಸ್ತೆ ಸುರಕ್ಷಿತತೆ ಬಗ್ಗೆ ತರಗತಿ ನಡೆಸಲಾಯಿತು. ಹೊಸದುರ್ಗ, ವೆಳ್ಳರಿಕುಂಡ್ ತಾಲೂಕು ವ್ಯಾಪ್ತಿಯ ಬಸ್ ಚಾಲಕರಿಗೆ, ಆಯಾರಿಗೆ ಇಂದು ತರಗತಿ ನೀಡಲಾಗುವುದು. ವಿದ್ಯಾರ್ಥಿಗಳ ಪ್ರಯಾಣ ಸಮಸ್ಯೆ ಸುಲಭದಲ್ಲಿ ಪರಿಹರಿಸುವುದಕ್ಕೆ ವಿವಿಧ …

ಎಬಿವಿಪಿಯ ಅಕ್ಷರ ವಂಡಿಗೆ ಚಾಲನೆ

ಕಾಸರಗೋಡು: ಎಬಿವಿಪಿ ಹಾಗೂ ಸ್ಟೂಡೆಂಟ್ಸ್ ಫಾರ್ ಸೇವ್ (ಎಸ್‌ಎಫ್‌ಎಸ್) ಸಂಯುಕ್ತವಾಗಿ ನಡೆಸುವ  ಅಕ್ಷರ ವಂಡಿ)ಯ ಜಿಲ್ಲಾ ಮಟ್ಟದ ಉದ್ಘಾಟನೆ ಕಾಸರಗೋಡು ನಗರದಲ್ಲಿ ನಡೆಯಿತು. ಎಬಿವಿಪಿ ಜಿಲ್ಲಾ ಕಾರ್ಯದರ್ಶಿ ಶಿವದಾಸ್ ಮಿಯಂಗಾನ ಉದ್ಘಾಟನೆ ನಿರ್ವಹಿ ಸಿದರು. ಜಿಲ್ಲಾಧ್ಯಕ್ಷ ಧೀರಜ್ ಅಣಂಗೂರು, ಕಾಸರಗೋಡು ವಿಭಾಗ ಕನ್ವೀನರ್ ಮನೋಜ್ ಪಾಡಿ ಮೊದಲಾದವರು ಭಾಗವಹಿಸಿದರು. ಅಕ್ಷರ ವಂಡಿ ಎಂಬುವುದು ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವುಳ್ಳ ಕಲಿಕೋಪಕರಣಗಳನ್ನು ವಿತರಿಸುವ ಎಸ್‌ಎಫ್‌ಎಸ್‌ನ ಕಾರ್ಯಕ್ರಮ ವಾಗಿದೆ.  ಈ ಹಂದಿನ ವರ್ಷಗಳಲ್ಲೂ ಬಡವರಾದ ಹಲವು ವಿದ್ಯಾರ್ಥಿಗಳಿಗೆ ಸಹಾಯಕವಾಗುವ …

ರಸ್ತೆಗೆ ಗುಡ್ಡೆ ಕುಸಿದು ಅಪಾಯಭೀತಿ: ಅಂಗಡಿಮೊಗರಿನಲ್ಲಿ ನಾಗರಿಕರಿಂದ ಪ್ರತಿಭಟನೆ

ಪುತ್ತಿಗೆ: ರಸ್ತೆಗೆ ಗುಡ್ಡೆ ಕುಸಿದು ಅಪಾಯಭೀತಿ ಸೃಷ್ಟಿಸುತ್ತಿದ್ದರೂ ಅದಕ್ಕೆ ಪರಿಹಾರ ಕಾಣದ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ನಾಗರಿಕರು ರಸ್ತೆ ತಡೆ ಚಳವಳಿ ನಡೆಸಿದರು. ಅಂಗಡಿಮೊಗರಿನಲ್ಲಿ ನಿನ್ನೆ ನಾಗರಿಕರು ಅರ್ಧ ಗಂಟೆ ಕಾಲ ಪ್ರತಿಭಟನೆ ನಡೆಸಿದ್ದು, ಬಳಿಕ ಪೊಲೀಸರು ತಲುಪಿ ಚರ್ಚೆ ನಡೆಸಿದ ಬಳಿಕ ಪ್ರತಿಭಟನೆ ಕೊನೆ ಗೊಳಿಸಲಾಯಿತು. ಪೆರ್ಲ- ಅಂಗಡಿಮೊಗರು ರಸ್ತೆಯಲ್ಲಿ ಅಂಗಡಿಮೊಗರು ಶಾಲೆ ಸಮೀಪ ರಸ್ತೆಗೆ ಗುಡ್ಡೆ ಕುಸಿದು ಅಪಾಯಭೀತಿ ಎದುರಾಗುತ್ತಿದೆ. ಕಳೆದ ವರ್ಷವೂ ಇಲ್ಲಿ ರಸ್ತೆಗೆ ಗುಡ್ಡೆ ಜರಿದು ಬಿದ್ದಿತ್ತು. ಈ ಬಗ್ಗೆ ಅಂದು …

ಹೊಗೆಸೊಪ್ಪು ಉತ್ಪನ್ನ: ವ್ಯಾಪಾರ ಸಂಸ್ಥೆಗಳಲ್ಲಿ ಆರೋಗ್ಯ ಇಲಾಖೆಯಿಂದ ತಪಾಸಣೆ

ಕಾಸರಗೋಡು: ಹೊಗೆಸೊಪ್ಪು ಉತ್ಪನ್ನಗಳ ನಿಯಂತ್ರಣದಂಗವಾಗಿ ಜಿಲ್ಲೆಯ ವ್ಯಾಪಾರ ಸಂಸ್ಥೆಗಳಲ್ಲಿ ಆರೋಗ್ಯ ಇಲಾಖೆ ತಪಾಸಣೆ ನಡೆಸಿತು. ಅನಧಿಕೃತ ಹೊಗೆಸೊಪ್ಪು ಉತ್ಪನ್ನಗಳನ್ನು ನಾಶಪಡಿಸಲಾಯಿತು. ಏಳು ಅಂಗಡಿಗಳಿಗೆ ನೋಟೀಸ್ ನೀಡಲಾಯಿತು. ಕಾಞಂಗಾಡ್‌ನ ಒಂದು ಚಿತ್ರಮಂದಿರ ಸಹಿತ ೧೦೦ರಷ್ಟು ಸಂಸ್ಥೆಗಳಿಗೆ ದಂಡ ವಿಧಿಸಲಾಯಿತು. ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಕೈಗೊಂಡ ತೀರ್ಮಾನದನುಸಾರ ತಪಾಸಣೆಗಳನ್ನು ಇನ್ನೂ ತೀವ್ರಗೊಳಿಸಲಾಗುವುದೆಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ. ಡಾ| ಪಿ. ರಂಜಿತ್‌ರ ನೇತೃತ್ವದಲ್ಲಿ 600ರಷ್ಟು ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಯಿತು.