ರಾ. ಹೆದ್ದಾರಿ ಹಾನಿ: ಕೇಂದ್ರ ಸಚಿವ ಗಡ್ಕರಿಯೊಂದಿಗೆ ಚರ್ಚೆ-ಸಿ.ಎಂ

ತಿರುವನಂತಪುರ: ಷಟ್ಪಥ ರಾಷ್ಟ್ರೀಯ ಹೆದ್ದಾರಿ ಕೆಲವೆಡೆ ಹಾನಿಗೀಡಾದ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಮುಂದಿನ ವಾರ ನೇರವಾಗಿ ಭೇಟಿಯಾಗಿ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಹಾನಿ ಸಂಭವಿಸಿರುವುದು ಕೆಲವು ತಾಂತ್ರಿಕ ಕಾರಣಗಳಿಂದಾಗಿದೆ.  ಹೆದ್ದಾರಿ ಕಾಮಗಾರಿ ನಿಗದಿತ ಸಮಯದಲ್ಲೇ ಪೂರ್ತಿಗೊಳಿಸಲಾ ಗುವುದು. ರಾಷ್ಟ್ರೀಯ ಹೆದ್ದಾರಿ ಪೂರ್ಣವಾಗಿ ನಾಶಗೊಳ್ಳಲಿದೆ ಯೆಂದು ಯಾರೂ ಭಾವಿಸಬೇಡಿ ಎಂದೂ ಮುಖ್ಯಮಂತ್ರಿ ತಿಳಿಸಿದ್ದಾರೆ.

ಧಾರಾಕಾರ ಮಳೆ: ರಾಜ್ಯದ ಹಲವೆಡೆಗಳಲ್ಲಿ ಪ್ರವಾಹ ಭೀತಿ ; ನಾಲ್ಕು ಅಣೆಕಟ್ಟುಗಳ ಶಟರ್ ಓಪನ್, ಜಿಲ್ಲೆ ಸೇರಿ ರಾಜ್ಯದಲ್ಲಿ ಮತ್ತೆ ಆರು ಮಂದಿ ಬಲಿ

ಕಾಸರಗೋಡು: ಮುಂಗಾರು ಮಳೆ ಇನ್ನಷ್ಟು ಬಿರುಸುಕೊಳ್ಳುತ್ತಿರು ವಂತೆಯೇ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಧಾರಾಕಾರ ಮಳೆ ಸೃಷ್ಟಿಸಿದ ಪ್ರಾಕೃತಿಕ ದುರಂತಕ್ಕೆ ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆರು ಮಂದಿ ಬಲಿಯಾಗಿದ್ದಾರೆ. ಆ ಮೂಲಕ ಈತನಕ ಪ್ರಾಕೃತಿಕ ದುರಂತಕ್ಕೆ ಬಲಿಯಾದವರ ಸಂಖ್ಯೆ ೨೨ಕ್ಕೇರಿದೆ. ಕಾಸರಗೋಡು ಜಿಲ್ಲೆಯ ಮಲ್ಲ ಕ್ಷೇತ್ರ ಸಮೀಪದ ಮಧುವಾಹಿನಿ ಹೊಳೆಗೆ ನಿನ್ನೆ ಬಟ್ಟೆ ಒಗೆಯಲು ಹೋದ ಮಹಿಳೆ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಮಲ್ಲ ಸೇತುವೆ ಬಳಿಯ ದುರ್ಗಾಂಬಾ ನಿಲಯದ ಎಂ. ಗೋಪಿ …

ನೀರಿನಲ್ಲಿ ಕೊಚ್ಚಿಹೋದ ಕಾರು, ಸ್ಕೂಟರ್, ಬೈಕ್

ಮಂಜೇಶ್ವರ: ಬಿರುಸಿನ ಮಳೆಗೆ ಕಾರು, ಸ್ಕೂಟರ್, ಬೈಕ್ ನೀರುಪಾಲಾಗಿದೆ. ಮಂಜೇಶ್ವರ, ಮಜಿಬೈಲು ಪಟ್ಟತ್ತೂರ್‌ನಲ್ಲಿ ಈ ಘಟನೆ ನಡೆದಿದೆ. ಮನೆಗಳಿಗೆ ವಾಹನಗಳಲ್ಲಿ ತೆರಳಲು ರಸ್ತೆ ಇಲ್ಲದ ಕಾರಣ ಬಯಲಿನ ಬದಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿತ್ತು. ನಿನ್ನೆ ರಾತ್ರಿ ಇಲ್ಲಿ ನಿಲ್ಲಿಸಿದ ವಾಹನಗಳು ನೀರುಪಾಲಾದ ಬಗ್ಗೆ ಇಂದು ಬೆಳಿಗ್ಗೆ ತಿಳಿದು ಬಂದಿದೆ. ಬಳಿಕ ನಡೆಸಿದ ಹುಡುಕಾಟದಿಂದ ಕಾರು ಬಯಲಿನಲ್ಲಿ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅರ್ಪಿತ್ ಎಂಬವರ ಕಾರು ಈ ರೀತಿ ನೀರಿಗೆ ಕೊಚ್ಚಿಕೊಂಡು ಹೋಗಿರುವುದು. ಇದೇ ವೇಳೆ ವಿಕಿತ್ ಎಂಬವರ …

ಮಳೆಯಿಂದ ವಿವಿಧೆಡೆ ವ್ಯಾಪಕ ನಾಶನಷ್ಟ: ಮಧೂರು ಕ್ಷೇತ್ರ ಜಲಾವೃತ: ಪೆರುವಾಡ್‌ನಲ್ಲಿ ಮನೆ, ಕ್ವಾರ್ಟರ್ಸ್‌ಗೆ ನುಗ್ಗಿದ ನೀರು: ಆಹಾರವಸ್ತುಗಳು, ಗೃಹೋಪಕರಣಗಳು, ದಾಖಲೆಪತ್ರಗಳು ನಾಶ; ಬಾಲಕನಿಗೆ ವಿದ್ಯುತ್ ಶಾಕ್

ಕಾಸರಗೋಡು: ಧಾರಾಕಾರ ಸುರಿ ಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ವ್ಯಾಪಕ ನಾಶನಷ್ಟ ಉಂಟಾದ ಬಗ್ಗೆ ವರದಿಯಾಗಿದೆ. ಹೊಳೆಗಳು ಉಕ್ಕಿ ಹರಿಯುತ್ತಿದ್ದು, ಇದರಿಂದ ತಗ್ಗು  ಪ್ರದೇಶಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದ್ದು, ಇದು ಭಾರೀ ನಾಶನಷ್ಟಕ್ಕೆ ಕಾರಣವಾಗಿದೆ. ಮಧುವಾಹಿನಿ ಹೊಳೆಯಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರಕ್ಕೆ ನೀರು ನುಗ್ಗಿದೆ. ಮಧೂರು ಪೇಟೆಯಲ್ಲೂ ನೀರು ಆವೃತಗೊಂಡಿದ್ದು ವಾಹನ ಸಂಚಾರಕ್ಕೆ ಕಷ್ಟಪಡಬೇಕಾದ ಸ್ಥಿತಿ ಇಂದು ಬೆಳಿಗ್ಗೆ ಉಂಟಾಯಿತು. ಮೊಗ್ರಾಲ್ ಪೆರುವಾಡ್ ರಾಷ್ಟ್ರೀಯ ಹೆದ್ದಾರಿ ಬಳಿ   …

ಸಾಮಾಜಿಕ ಮಾಧ್ಯಮದಲ್ಲಿ ಮತೀಯ ಸಾಮರಸ್ಯಕ್ಕೆ ಭಂಗ ಉಂಟುಮಾಡುವ ರೀತಿಯ ಸಂದೇಶ ರವಾನಿಸಿದ ಆರೋಪಿ ಸೆರೆ

ಕಾಸರಗೋಡು: ವಾಟ್ಸಪ್ ಗ್ರೂಪ್‌ನಲ್ಲಿ ಮತೀಯ ಸಾಮರಸ್ಯಕ್ಕೆ ಭಂಗ ಉಂಟುಮಾಡುವ ರೀತಿಯಲ್ಲಿ ಸಂದೇಶ ರವಾನಿಸಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ಸೈಬರ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಮಂಜೇಶ್ವರ ಕುಂಜತ್ತೂರು ನಿವಾಸಿ ಹಾಗೂ ಈಗ ಚೌಕಿ ಕಾರೋಟ್ ಶಾಲೆ ಬಳಿ ವಾಸಿಸುತ್ತಿರುವ ಅಬ್ದುಲ್ ಲತೀಫ್ (47) ಎಂಬಾತ ಬಂಧಿತ ಆರೋಪಿ.  ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ  ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕಾಸರಗೋಡು ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಉಸ್ತುವಾರಿ ಹೊಣೆಗಾರಿಕೆ ಹೊಂದಿರುವ ಇನ್ಸ್‌ಪೆಕ್ಟರ್ ನಳಿನಾಕ್ಷನ್ …

ಮೊಗ್ರಾಲ್ ಪುತ್ತೂರು: ಬಾಲಕ ನಾಪತ್ತೆ

ಕಾಸರಗೋಡು: ಮೊಗ್ರಾಲ್ ಪುತ್ತೂರು ಕಲ್ಲಂಗೈಯಲ್ಲಿ ೧೫ರ ಹರೆಯದ ಬಾಲಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ.  ಬೆಂಗಳೂರು ಮಚ್ಚೆಹಳ್ಳಿ ನಿವಾಸಿ  ಗಂಗಹನುಮ ಯ್ಯರ ಪುತ್ರ ಜಿ. ನಂದ (15) ನಾಪತ್ತೆಯಾದ ಬಾಲಕ. ತಾಯಿ ರೇಣುಕ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಲ್ಲಂಗೈಯ ಕ್ವಾರ್ಟರ್ಸ್‌ನಲ್ಲಿ ಗಂಗ ಹನುಮಯ್ಯರ ಕುಟುಂಬ ವಾಸವಾಗಿದೆ. ೨೮ರಂದು ಬೆಳಿಗ್ಗೆ 6 ಗಂಟೆಗೆ ಮನೆಯಿಂದ ತೆರಳಿದ ಈತ ಬಳಿಕ ಮರಳಲಿಲ್ಲವೆಂದು ತಾಯಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಮೊದಲ ಪತಿ ಮೃತಪಟ್ಟ ಬಳಿಕ ದ್ವಿತೀಯ ವಿವಾಹಕ್ಕೂ ವಿಚ್ಛೇದನ: ಜಾಹೀರಾತು ನೀಡಿ 3ನೇ ವಿವಾಹ ಸಿದ್ಧತೆ ಮಧ್ಯೆ ಯುವಕನಿಂದ ದೌರ್ಜನ್ಯ ದೂರು

ಪೆರ್ಲ: ಮೂರನೇ ವಿವಾಹಕ್ಕಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದ ಯುವತಿಯನ್ನು ವಿವಿಧ ಕಡೆಗಳಿಗೆ ಕೊಂಡೊಯ್ದು ಮಾನಭಂಗಗೈದಿರು ವುದಾಗಿ ದೂರಲಾಗಿದೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 34ರ ಹರೆಯದ ಯುವತಿ ನೀಡಿದ ದೂರಿನಂತೆ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ನೋಂದಾವಣೆಯಾಗಿದೆ. ತೃಶೂರು, ಕೈಪಮಂಗಲ ನಿವಾಸಿಯಾದ ಪ್ರಶಾಂತ್ ಯಾನೆ ಶೋಭಿ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಈತನ ವಿರುದ್ಧ ಇದೇ ರೀತಿಯ ಇನ್ನೂ ಹಲವು ಕೇಸುಗಳು ಇರುವುದಾಗಿ ಶಂಕಿಸಲಾಗಿದೆ. 2023 ಜೂನ್‌ನಿಂದ ಸೆಪ್ಟಂಬರ್ ವರೆಗೆ ವಿವಿಧ ದಿನಗಳಲ್ಲಾಗಿ ದೌರ್ಜನ್ಯಗೈದಿರು …

ಬದಿಯಡ್ಕದಿಂದ ನಾಪತ್ತೆಯಾಗಿ ಮರಳಿ ಬಂದುಪ್ರಿಯತಮ ಆಶಿಕ್‌ಅಲಿಯೊಂದಿಗೆ ತೆರಳಿದ ಪ್ರತೀಕ್ಷ

ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಪ್ರತೀಕ್ಷ (19) ಎಂಬಾಕೆ ಮರಳಿ ಬಂದಿದ್ದು, ಆಕೆಯನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಆಕೆ ಪ್ರಿಯತಮನಾದ ಕಾಞಂಗಾಡ್ ನಿವಾಸಿ ಆಶಿಕ್ ಅಲಿಯೊಂದಿಗೆ ತೆರಳಿದಳು.  ಕಳೆದ ಮಂಗಳವಾರದಿಂದ ಪ್ರತೀಕ್ಷ ನಾಪತ್ತೆಯಾಗಿದ್ದಳು. ಅಂದು ಬೆಳಿಗ್ಗೆ 10 ಗಂಟೆಗೆ ಸ್ನೇಹಿತೆಯ ಮನೆಗೆ ತೆರಳುವುದಾಗಿ ತಿಳಿಸಿ ಆಕೆ ಮನೆಯಿಂದ ಹೊರಟಿದ್ದಳು. ಸಂಜೆಯಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ ತಾಯಿಯ ಸಹೋದರ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ …

ಹಿರಿಯ ಹೊಲಿಗೆ ಕಾರ್ಮಿಕ, ಧಾರ್ಮಿಕ ಮುಖಂಡ ಸುಂದರ ಕೊಹಿನೂರು ನಿಧನ

ಕಾಸರಗೋಡು: ನಗರದಲ್ಲಿ ಹಲವು ವರ್ಷಗಳ ಕಾಲ ಹೊಲಿಗೆ ವೃತ್ತಿಯಲ್ಲಿದ್ದ, ವಿವಿಧ ಧಾರ್ಮಿಕ ರಂಗಗಳಲ್ಲಿ ಸಕ್ರಿಯರಾಗಿದ್ದ ಸುಂದರ ಕೊಹಿನೂರು (80) ನಿಧನ ಹೊಂದಿದರು. ಕಾಳ್ಯಂಗಾಡು ನಿವಾಸಿಯಾಗಿರುವ ಇವರು ಖ್ಯಾತ ಯಕ್ಷಗಾನ ವೇಷಧಾರಿ ದಿ| ಬಣ್ಣದ ಕುಟ್ಯಪ್ಪುರವರ ಪುತ್ರನಾಗಿದ್ದು,   ಯಕ್ಷಗಾನದಲ್ಲೂ ವೇಷ ಹಾಕುತ್ತಿದ್ದರು. ತಾಳಮದ್ದಳೆಯಲ್ಲಿ ಅರ್ಥಧಾರಿಯಾಗಿಯೂ ಭಾಗ ವಹಿಸುತ್ತಿದ್ದರು. ಹೊಲಿಗೆದಾರರ ಸಂಘಟನೆಯ ರೂಪೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಸಂಘಟನೆಯ ಮಾಜಿ ರಾಜ್ಯ ಉಪಾಧ್ಯಕ್ಷರಾಗಿದ್ದರು. ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ಚಿತ್ರಾ, ರೂಪ, ಸಂಜಯ್, ಶ್ರೀಕಾಂತ್, ಸೊಸೆ ಯಂದಿರಾದ ಪ್ರಸನ್ನ, …

ಪೋಕ್ಸೋ ಪ್ರಕರಣ: ಆರೋಪಿಗೆ 5 ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ  ಪೋಕ್ಸೋ ಪ್ರಕರಣದ  ಆರೋಪಿಗೆ ಹೊಸದುರ್ಗ ಫಾಸ್ಟ್‌ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ನ ನ್ಯಾಯಾ ಧೀಶರಾದ ಸುರೇಶ್ ಪಿ.ಎಂ.   ೫೦ ವರ್ಷ ಸಜೆ ಹಾಗೂ 15,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.  ಹೊಸದುರ್ಗ ಕಂಡಕಡವು ಆವಿಯಿಲ್ ಬಿಸ್ಮಿಲ್ಲಾ ಮಂಜಿಲ್‌ನ ಹೈದರ್ ಅಲಿ ಎಂ.ಆರ್.(58) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 9 ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ …