ಪ್ರೇಮ್ ನಸೀರ್‌ರ ಪುತ್ರ, ನಟ ಶಾನವಾಸ್ ನಿಧನ

ಕೊಚ್ಚಿ: ಖ್ಯಾತ ಸಿನಿಮಾ ನಟನಾಗಿದ್ದ ಪ್ರೇಮ್ ನಸೀರ್‌ರ ಪುತ್ರ, ನಟ ಶಾನವಾಸ್ (71) ನಿಧನ ಹೊಂದಿದರು.  ಮಲೆಯಾಳ, ತಮಿಳು ಸಿನಿಮಾಗಳಲ್ಲಾಗಿ ಒಟ್ಟು 96ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಬಾಲಚಂದ್ರ ಮೆನೋನ್ ನಿರ್ದೇಶಿಸಿದ ‘ಪ್ರೇಮಗೀತಂಙಳ್’ ಮೂಲಕ ಸಿನಿಮಾರಂಗ ಪ್ರವೇಶಿಸಿದ್ದರು. ‘ಜನಗಣಮನ’ದಲ್ಲಿ ಕೊನೆಯದಾಗಿ ಅಭಿನಯಿಸಿದ್ದರು. ಹಲವಾರು ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಪತ್ನಿ ಆಯಿಷಾ ಬೀವಿ ಹಾಗೂ ಮಕ್ಕಳಾದ ಅಜಿತ್ ಶಾನ್, ಶಮೀರ್ ಖಾನ್, ಸೊಸೆ ಹನ, ಸಹೋದರಿಯರಾದ  ಲೈಲಾ, ರಸಿಯಾ, ರೀತಾ ಹಾಗೂ ಬಂಧು-ಮಿತ್ರರನ್ನು …

ಮಿಲ್ಮಾಕ್ಕೆ 7.5 ಲಕ್ಷ ನೀಡಲು ಬಾಕಿ: ಜನರಲ್ ಆಸ್ಪತ್ರೆಯ ರೋಗಿಗಳಿಗೆ ಹಾಲು ವಿತರಣೆ ಮೊಟಕು

ಕಾಸರಗೋಡು: ಹಾಲು ಪೂರೈಸಿದ ವತಿಯಿಂದ ಮಿಲ್ಮಾಕ್ಕೆ ಸರಕಾರ ಏಳೂವರೆ ಲಕ್ಷ ರೂ. ನೀಡಲು ಬಾಕಿ ಇರುವ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯ ರೋಗಿಗಳಿಗೆ ವಿತರಿಸುವ ಹಾಲಿನ ಪೂರೈಕೆ ಕಳೆದೆರಡು ದಿನಗಳಿಂದ ಮಿಲ್ಮಾ ನಿಲುಗಡೆಗೊಳಿಸಿದೆ. ಜನರಲ್ ಆಸ್ಪತ್ರೆಗೆ ಮಿಲ್ಮಾ ದೈನಂದಿನ ೪೫ ಲೀಟರ್ ತನಕ ಹಾಲು ವಿತರಿಸುತ್ತಿದೆ. ಇದರ ಹಣವನ್ನು ಒಂದು ವರ್ಷದ ಹಿಂದಿನ ತನಕ ಸರಕಾರಿ ಟ್ರಷರಿಯಿಂದ ಮಿಲ್ಮಾಕ್ಕೆ ನೀಡಲಾಗುತ್ತಿತ್ತು. ಆದರೆ ಕಳೆದ ಫೆಬ್ರವರಿಯಿಂದ ಹಣ ವಿತರಣೆ ಮೊಟಕುಗೊಂಡಿದೆ. ಈ ವಿಷಯವನ್ನು ಆಸ್ಪತ್ರೆಯ ಸಂಬಂಧಪಟ್ಟವರು ಅಧಿಕಾರಿಗಳಿಗೆ ತಿಳಿಸಿದ್ದರೂ …

ಯುವತಿಯ ಚಿತ್ರ ಮೋರ್ಫ್‌ಗೊಳಿಸಿ ಫೇಸ್‌ಬುಕ್‌ನಲ್ಲಿ ಪ್ರಚಾರ

ಕಾಸರಗೋಡು: ಯುವ ತಿಯ ಚಿತ್ರವನ್ನು ಮೋರ್ಫ್ ಮಾಡಿ ಫೇಸ್‌ಬುಕ್‌ನಲ್ಲಿ ಪ್ರಚಾg ಗೈದುದಾಗಿ ದೂರಲಾಗಿದೆ. 36ರ ಹರೆಯದ ಯುವತಿ ನೀಡಿದ ದೂರಿನಂತೆ ಚಿತ್ತಾರಿಕಲ್ ಪೊಲೀ ಸರು ಕೇಸು ದಾಖಲಿಸಿಕೊಂಡಿ ದ್ದಾರೆ. 2025 ಜೂನ್ 4ರಿಂದ 20ರವರೆಗಿನ ದಿನಗಳಲ್ಲಿ ಯುವ ತಿಯ ನಕಲಿ ಪ್ರೊಫೈಲ್ ತಯಾ ರಿಸಿರುವುದಾಗಿ ದೂರಲಾಗಿದೆ. ಯುವತಿಯ ಫೊಟೋವನ್ನು ಮೋರ್ಫ್‌ಗೊಳಿಸಿ ಫೇಸ್ ಬುಕ್‌ನ ವಿವಿಧ ಗ್ರೂಪ್‌ಗಳಲ್ಲಿ ಹಂಚಿಕೊಂಡಿರುವುದಾಗಿ ತಿಳಿಸ ಲಾಗಿದೆ. ಯುವತಿಗೆ ಮಾನಹಾನಿ ಉಂಟುಮಾಡಲು ಉದ್ದೇಶ ಪೂರ್ವಕ ಈ ಕೃತ್ಯ ನಡೆಸಿರುವು ದಾಗಿ ದೂರಲಾಗಿದೆ. ಆರೋಪಿ ಯನ್ನು …

ಆರ್‌ಟಿಒ ಡಿಜಿಟಲ್ ಡ್ರೈವಿಂಗ್ ಟೆಸ್ಟ್‌ಗಾಗಿ ನಿರ್ಮಿಸಿದ ಕಟ್ಟಡ ಕಾಡು ಆವರಿಸಿ ನಾಶದತ್ತ

ಕುಂಬಳೆ:  ರಾಜ್ಯ ಸಾರಿಗೆ ಇಲಾಖೆ 4 ಕೋಟಿ 10 ಲಕ್ಷ ರೂಪಾಯಿ ಖರ್ಚುಮಾಡಿ ಬೇಳ ಕುಮಾರಮಂಗಲದಲ್ಲಿ  ಡಿಜಿಟಲ್  ಡ್ರೈವಿಂಗ್ ಟೆಸ್ಟ್ ಗಾಗಿ ನಿರ್ಮಿಸಿದ ಕಟ್ಟಡ ಹಾಗೂ ವಿವಿಧ ಸಾಮಗ್ರಿಗಳು ಕಾಡು ಆವರಿಸಿ ನಾಶಗೊಳ್ಳುತ್ತಿದೆ. 2021ರಲ್ಲಿ ಸಾರಿಗೆ ಇಲಾಖೆ ಸಚಿವ ಈ ಕಟ್ಟಡದ ಉದ್ಘಾಟನೆ ನೆರವೇರಿಸಿದ್ದರು. ಸಂಸ್ಥೆ ಆರಂಭಿಸಲು  ಮಾತ್ರವೇ ಆಸಕ್ತಿ ವಹಿಸುವ ಸರಕಾರ ಅದನ್ನು ಉಳಿಸಿಕೊಂಡು ಉತ್ತಮ ರೀತಿಯ ಚಟುವಟಿಕೆ ನಡೆಸಲು ಕ್ರಮ ಕೈಗೊಳ್ಳದಿರುವುದರ ಫಲವಾಗಿ ಈ ಕಟ್ಟಡ ಇದೀಗ ಕಾಡು ಆವರಿಸಿಕೊಂಡಿದೆ.  ಕೋಟ್ಯಂತರ ರೂಪಾಯಿ ಖರ್ಚು …

ಮೊಗ್ರಾಲ್ ಜಿವಿಎಚ್‌ಎಸ್‌ಎಸ್ ನ ಹೆಂಚಿನ ಕಟ್ಟಡದ ಫಿಟ್ನೆಸ್ ಸರ್ಟಿಫಿಕೇಟ್ ರದ್ದು

ಕಾಸರಗೋಡು:  ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನ 7 ತರಗತಿ ಕೊಠಡಿಗಳು ಕಾರ್ಯಾಚರಿಸುವ  ಹೆಂಚಿನ ಕಟ್ಟಡ   ಫಿಟ್ನೆಸ್ ಸರ್ಟಿಫಿ ಕೇಟ್ ಕುಂಬಳೆ ಪಂಚಾಯತ್ ಇಂಜಿನಿಯರ್ ರದ್ದುಗೊ ಳಿಸಿದ್ದಾರೆ. ಶಾಲಾಧಿಕಾರಿಗಳು ಈ ಕಟ್ಟಡದಿಂದ ವಿದ್ಯಾರ್ಥಿಗಳನ್ನು ತೆರವುಗೊಳಿಸಿದ್ದಾರೆ. ಶಾಲಾ ಕಟ್ಟಡದ ಮೇಲ್ಛಾವಣಿ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿದೆಯೆಂದು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೊಗ್ರಾಲ್ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 25೦೦ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಆದರೆ ಇಲ್ಲಿ ಅಗತ್ಯದ ಕಟ್ಟಡ ಸೌಕರ್ಯಗಳು ಇಲ್ಲ. ಶಾಲಾ ಕಟ್ಟಡಕ್ಕಾಗಿ ಪಿಟಿಎ, ಎಸ್‌ಎಂಸಿ ಕಮಿಟಿಗಳು ನಿರಂತರ ವಾಗಿ …

ಕೊಡ್ಲಮೊಗರುನಲ್ಲಿ ರಸ್ತೆಗೆ ಬಿದ್ದ ಮಣ್ಣು ತೆರವುಗೊಳಿಸದಿರುವುದರಿಂದ ಸಂಚಾರ ಸಮಸ್ಯೆ

ಕೊಡ್ಲಮೊಗರು: ಕುಸಿದು ಬಿದ್ದ ಗುಡ್ಡೆಯ ಮಣ್ಣನ್ನು ಸಂಪೂರ್ಣ ತೆರವುಗೊಳಿಸದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂ ಟಾಗಿದೆ. ವರ್ಕಾಡಿ ಪಂ. ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಗೆ ಸೇರಿದ ದೈಗೋಳಿಯಿಂದ ಆನೆಕಲ್ಲು ತೆರಳುವ ರಸ್ತೆ ಮಧ್ಯೆ ಕೊಡ್ಲಮೊಗರುನಲ್ಲಿ ಅಲ್ಲಲ್ಲಿ ರಸ್ತೆ ಉದ್ದಕ್ಕೂ ಗುಡ್ಡೆ ಕುಸಿದು ಮಣ್ಣು ರಾಶಿ ಬಿದ್ದಿದೆ. ಇದು ವಾಹನ ಸಂಚಾರಕ್ಕೆ ಆತಂಕ ಉಂಟುಮಾಡುತ್ತಿದೆ. ಇತ್ತೀಚೆಗೆ ಗಾಳಿಮಳೆಗೆ ಬೃಹತ್ ಮರಗಳು ಹೊಂದಿರುವ ಎತ್ತರದ ಗುಡ್ಡೆ ಕುಸಿದು ಬಿದ್ದು ವಾಹನ ಸಂಚಾರ ಮೊಟಕುಗೊಂಡಿತ್ತು. ಅಂದು ರಸ್ತೆ ಮಧ್ಯೆ ಬಿದ್ದ ಮಣ್ಣನ್ನು ಮಾತ್ರ …

ಎಸ್‌ಸಿ, ಎಸ್‌ಟಿ ಸಮುದಾಯವನ್ನು ಅವಗಣಿಸಿದ ದೇಲಂಪಾಡಿ ಪಂಚಾಯತ್ ಆಡಳಿತ ಸಮಿತಿ-ವಿ.ಕೆ. ಸಜೀವನ್ ಆರೋಪ

ಅಡೂರು: ದೇಲಂಪಾಡಿ ಪಂಚಾ ಯತ್‌ನ ಎಸ್‌ಸಿ, ಎಸ್‌ಟಿ ಸಮುದಾ ಯವನ್ನು ಆಡಳಿತ ಸಮಿತಿ ಅವಗಣಿಸಿ ದೆಯೆಂದು ಬಿಜೆಪಿ ರಾಜ್ಯ ಸೆಲ್ ಕೋರ್ಡಿನೇಟರ್ ವಿ.ಕೆ. ಸಜೀವನ್ ಆರೋಪಿಸಿದರು. ಸತತವಾಗಿ ಎರಡು ದಶಕಗಳ ಕಾಲ ಆಡಳಿತ ನಡೆಸಿದ ಸಿಪಿಎಂಗೆ ಎಸ್‌ಸಿ, ಎಸ್‌ಟಿ ವಲಯ ದಲ್ಲಿ ಅಭಿವೃದ್ಧಿ ಉಂಟು ಮಾಡಲು ಸಾಧ್ಯವಾಗಲಿಲ್ಲ. ಹಿಂದುಳಿದ ವಿಭಾಗಕ್ಕೆ ನೀಡಬೇಕಾದ ಮೊತ್ತವನ್ನು ಇತರ ಕಾರ್ಯಗಳಿಗೆ ವೆಚ್ಚ ಮಾಡಲಾಗುತ್ತಿದೆ. ಹಾನಿಗೊಂಡ ರಸ್ತೆಗಳನ್ನು ಕೂಡ ದುರಸ್ತಿ ಪಡಿಸಲು ಆಡಳಿತ ನಡೆಸುವವರು ಸಿದ್ಧರಾಗುತ್ತಿಲ್ಲವೆಂದು ಅವರು ಅಪಾದಿಸಿದರು. ಬಿಜೆಪಿ ಅಡೂರು ಏರಿಯಾ …

ಹಿರಿಯ ಗುಮಾಸ್ತ ನಿಧನ

ಉಪ್ಪಳ:  ಮೀಂಜ ಕೋರಿಕ್ಕಾರು ನಿವಾಸಿ ಹಿರಿಯ ಗುಮಾಸ್ತ, ಕೃಷಿಕ ಮಹಾಬಲ (74) ನಿಧನ ಹೊಂದಿದರು. ಇವರು ನಿನ್ನೆ ಸಂಜೆ ಬಾಯಾರಿನಿಂದ ಆಟೋದಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಹೃದಯಾಘಾತ ಉಂಟಾಗಿದ್ದು, ಪೈವಳಿಕೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಉಪ್ಪಳ ಆಸ್ಪತ್ರೆಗೆ ಕೊಂಡೊಯ್ಯುವ ಮಧ್ಯೆ ನಿಧನ ಸಂಭವಿಸಿದೆ. ಕಾಸರಗೋಡಿನಲ್ಲಿ ಗುಮಸ್ತರಾಗಿ ಹಲವು ವರ್ಷ ಕಾಲ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ವಸಂತಿ, ಮಕ್ಕಳಾದ ಚರಣ್ ಕುಮಾರ್ (ಕ್ಯಾಂಪ್ಕೋ ಉದ್ಯೋಗಿ), ಕೀರ್ತನಾ, ಲತಾ, ಅನುಷಾ, ಸೊಸೆ ಪವಿತ್ರ, ಅಳಿಯಂದಿರಾದ ಶ್ರೀಜಿನ್, ವಿನಯ …

ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ರಾಮಾಯಣ ಹರಿಕಥಾ ಸತ್ಸಂಗ ಆರಂಭ

ಕಾಸರಗೋಡು: ವಿಶ್ವಹಿಂದೂ ಪರಿಷತ್ ಕಾಸರಗೋಡು ಪ್ರಖಂಡದ ನೇತೃತ್ವದಲ್ಲಿ ರಾಮಾಯಣ ಕಥೆಯ ಹರಿಕಥಾ ಸತ್ಸಂಗ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಆರಂಭಗೊಂಡಿತು. ನಾಳೆ ಸಮಾಪ್ತಿಗೊಳ್ಳಲಿದೆ. ನಿನ್ನೆ ಸಂಜೆ ಆರಂಭಗೊಂಡ ಕಾರ್ಯಕ್ರಮವನ್ನು ಧಾರ್ಮಿಕ ಮುಂದಾಳು ಡಾ| ಅನಂತ ಕಾಮತ್ ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿದರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಸಹಿತ ಹಲವರು ಮಾತನಾಡಿದರು. ಬಳಿಕ ಲೇಖನ ಆಚಾರ್ಯ ಐಲ ಅವರಿಂದ  ‘ಪತಿತೋದ್ಧಾರಕ’ ಎಂಬ ಹರಿಕಥಾ ಸತ್ಸಂಗ ನಡೆಯಿತು. ಇಂದು ಸಂಜೆ ೫ಕ್ಕೆ ಮೇಧಾ ಭಟ್ ನಾಯರ್ಪಳ್ಳ ಅವರಿಂದ ‘ಸೀತಾ ಕಲ್ಯಾಣ’ …

ಬದಿಯಡ್ಕದಲ್ಲಿ ಬಂಟರ ಸಂಘದ ಆಟಿದ ಕೂಟ, ಸಮ್ಮಿಲನ

ಬದಿಯಡ್ಕ: ಬಂಟರ ಸಂಘದ ನೇತೃತ್ವದಲ್ಲಿ ಆಟಿದ ಕೂಟ, ಬಂಟರ ಸಮ್ಮಿಳನ ಕಾರ್ಯಕ್ರಮ ವಲಮಲೆ ಇರಾ ಸಭಾಭವನದಲ್ಲಿ ಜರಗಿತು. ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ ರೈ ಪೆರಡಾಲ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಬಂಟರ ಭವನದ ಕಟ್ಟಡ ನಿರ್ಮಾಣ ಅಧ್ಯಕ್ಷ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸಿ ಮಾತನಾಡಿ, ಬಂಟರು ಈ ಭೂಮಿಯ ಮೂಲ ನಿವಾಸಿಗಳು. ತುಳುನಾಡಿನ ಪ್ರತಿಯೊಂದು ಆಚರ ಣೆಯ ಕಾರಣೀಭೂತರು ಬಂಟ ಸಮಾಜದವರು. ತುಳುನಾಡಿಗೆ ಬಂಟರು ಕೊಟ್ಟ ಕೊಡುಗೆ ಅಪಾರವಾಗಿದೆ ಎಂದರು.ಮುಖ್ಯ ಅತಿಥಿಯಾಗಿದ ಜಿಲ್ಲಾ …