ಮನೆಯಿಂದ 9 ಪವನ್ ಚಿನ್ನಾಭರಣ, 85 ಸಾವಿರ ರೂ. ಕಳವು
ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂಬ್ರಾಣದಲ್ಲಿ ಮನೆಯೊಂದರಿಂದ ಚಿನ್ನಾಭರಣ ಹಾಗೂ ನಗದು ಕಳವಿಗೀಡಾಗಿದೆ. ಬಂಬ್ರಾಣ ದಿನೇಶ್ ಬೀಡಿ ಸಮೀಪದ ಹಮೀದ್ ಅಬ್ದುಲ್ಲರ ಮನೆಯಿಂದ 9 ಪವನ್ ಚಿನ್ನಾಭರಣ ಹಾಗೂ 85,000 ರೂಪಾಯಿ ಕಳವಿಗೀಡಾಗಿದೆ. ಈ ತಿಂಗಳ 25ರಂದು ರಾತ್ರಿ 7.30ರಿಂದ 8.30 ರ ಮಧ್ಯೆ ಕಳವು ನಡೆದಿರುವುದಾಗಿ ದೂರಲಾಗಿದೆ. ಈ ಬಗ್ಗೆ ಹಮೀದ್ ಅಬ್ದುಲ್ಲರ ಮಗಳ ಪತಿ ಮಲಪ್ಪುರಂ ತಾನೂರು ಪಟ್ಟರುಪರಂಬ್ ನೆಡುವಳ್ಳಿ ಹೌಸ್‌ನ ನೌಶಾದ್‌ರ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. …