ನಿಧನ

ಕುಂಬಳೆ: ಮೂಲತಃ ಚೇವಾರು ನಿವಾಸಿ ಯೂ ಪ್ರಸ್ತುತ ಪುತ್ತೂರು ಆರ್ಯಾಪು ಗ್ರಾಮದ ಸಂಟ್ಯಾರ್‌ನಲ್ಲಿ ವಾಸಿಸುವ  ದೇವಪ್ಪ ನಾಯಕ್ ಯಾನೆ ಹರಿಯಣ್ಣ ನಾಯಕ್ (74) ನಿಧನ ಹೊಂದಿದರು.  ಪೆರ್ಮುದೆ ಗ್ರಾಮೀಣ ಬ್ಯಾಂಕ್‌ನ ಕೃಷಿ ವಿಚಾರ ವಿನಿಮಯ ಕೇಂದ್ರದಲ್ಲಿ ಕೃಷಿ ಸಂಬಂಧ ಚಟುವಟಿಕೆಯಲ್ಲಿ ಸಕ್ರಿಯರಾಗಿ ದ್ದರು. ಉತ್ತಮ ಕೃಷಿಕನೂ ಆಗಿದ್ದ ಇವರನ್ನು ಪೈವಳಿಕೆ ಕೃಷಿ ಭವನದಲ್ಲಿ ಸನ್ಮಾನಿಸಲಾಗಿತ್ತು. ಮೃತರು ಪತ್ನಿ, ಓರ್ವ ಪುತ್ರ, ಓರ್ವೆ ಪುತ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವ್ಯಾಪಾರಿ ನಿಧನ

ಕುಂಬಳೆ: ಕುಂಬಳೆಯಲ್ಲಿ ಹಿರಿಯ ಜೀನಸು ವ್ಯಾಪಾರಿಯಾಗಿದ್ದ ಎರಿಯಾಲ್ ನಿವಾಸಿ ಮೊಯ್ದೀನ್ ಕುಟ್ಟಿ (75) ನಿಧನ ಹೊಂದಿದರು. ಇ.ಎಂ. ಸ್ಟೋರ್ಸ್ ಎಂಬ ಅಂಗಡಿಯ ಮಾಲಕನಾಗಿದ್ದರು. ಮೃತರು ಪತ್ನಿ ಮರಿಯಂಬಿ, ಮಕ್ಕಳಾದ ಸಫ್ವಾನ್, ರಿಫಾಯಿ, ಫೈಸಲ್, ಹಿಸಾಂ, ರುಕ್ಸಾನ ಬಲ್ಕೀಸ್, ಕುಬ್ರ, ಅಳಿಯ-ಸೊಸೆಯಂದಿರಾದ ಫರ್ಹಾನ, ತಸ್ರೀನ, ಫರ್ಹಾನ, ಸುರುಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿವೃತ್ತ ಮಾರಾಟ ತೆರಿಗೆ ಅಧಿಕಾರಿ ನಿಧನ

ಕಾಸರಗೋಡು: ವಿದ್ಯಾನಗರ ಚಿನ್ಮಯ ಕಾಲನಿಯ ನಿವಾಸಿ ನಿವೃತ್ತ ಮಾರಾಟ ತೆರಿಗೆ ಅಧಿಕಾರಿ ಎಚ್. ಉಮೇಶ್ ಪೈ (84) ನಿಧನ ಹೊಂದಿದರು. ಇವರ ಪತ್ನಿ ಜಯಲಕ್ಷ್ಮಿ ಪೈ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಸುಬ್ರಹ್ಮಣ್ಯ ಪೈ (ಎಲ್‌ಐಸಿ ಅಡ್ವೈಸರ್), ಹರೀಶ್ ಪೈ (ಎಲ್‌ಐಸಿ ಡೆವಲಪ್‌ಮೆಂಟ್ ಆಫೀಸರ್, ಬಂಟ್ವಾಳ), ಪದ್ಮಿನಿ ಕಾಮತ್ (ಹುಬ್ಬಳ್ಳಿ), ಸೊಸೆ ಸುಶ್ಮಾರಾವ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಳಿಯ ವಿನಯ್ ಕಾಮತ್ ಈ ಹಿಂದೆ ನಿಧನರಾಗಿದ್ದಾರೆ.

ಜಿಲ್ಲಾ ಕುಲಾಲ ಸಮುದಾಯ ಭವನದ ಮಿನಿ ಸಭಾಂಗಣ ಉದ್ಘಾಟನೆ: ಉಚಿತ ಪುಸ್ತಕ, ಸಹಾಯ ಹಸ್ತ ವಿತರಣೆ

ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ, ತೂಮಿನಾಡು ಇದರ ಆಶ್ರಯದಲ್ಲಿ ಜಿಲ್ಲಾ ಕುಲಾಲ ಸಮುದಾಯ ಭವನದ ನೆಲ ಅಂತಸ್ತಿ ನಲ್ಲಿ ನಿರ್ಮಾಣಗೊಂಡಿರುವ ಮಿನಿ ಸಭಾಂಗಣದ ಉದ್ಘಾಟನೆ ಜರಗಿತು.  ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಉಚಿತ ಪುಸ್ತಕ ವಿತರಣೆ, 2024-25  ರ ಸಾಲಿನ ಎಸ್. ಎಸ್. ಎಲ್. ಸಿ ಹಾಗೂ ಪ್ಲಸ್ ಟು /ಪಿ. ಯು. ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ, ಸಹಾಯಹಸ್ತ ವಿತರಣೆ ಮತ್ತು ಸಂಘದ ವಾರ್ಷಿಕ ಮಹಾಸಭೆ …

ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ಜೋಡುಕಲ್ಲು: ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ಇದರ ವಾರ್ಷಿಕ ಮಹಾಸಭೆ ಫ್ರೆಂಡ್ಸ್ ಸಭಾಭವನದಲ್ಲಿ ಜರಗಿತು. ಕ್ಲಬ್‌ನ ಗೌರವಾಧ್ಯಕ್ಷ ದಯಾನಂದ ಮಾಡ ಅಧ್ಯಕ್ಷತೆ ವಹಿಸಿದ್ದರು, ಅಧ್ಯಕ್ಷ ರತ್ನಾಕರ ಸೊಂದಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಜೋಡುಕಲ್ಲು ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.ಗೌರವಾಧ್ಯಕ್ಷರಾಗಿ ದಯಾನಂದ ಮಾಡ, ಅಧ್ಯಕ್ಷರಾಗಿ ರತ್ನಾಕರ ಸೊಂದಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ ಜೋಡುಕಲ್ಲು,ಕೋಶಾಧಿಕಾರಿ ಯಾಗಿ ಗೋಕುಲದಾಸ್ ಪಟ್ಲ, ಉಪಾಧ್ಯಕ್ಷರುಗಳಾಗಿ ಪ್ರೇಮ್ ಕಾಂತ್ ಶೆಟ್ಟಿ ದೇರಂಬಳ, ರಾಜ ಅರಿಯಾಳ, ಜೊತೆ ಕಾರ್ಯದರ್ಶಿಗಳಾಗಿ ಪ್ರಜ್ವಲ್ ಕೆ.ಪಿ. ಪಟ್ಲ, ಸುಮಂತ್ ಜೋಡುಕಲ್ಲು,ಕ್ರೀಡಾ …

ಅಧ್ಯಾಪಕ ಹುದ್ದೆ: ಸಂದರ್ಶನ

ಕುAಬಳೆ: ಕಣ್ಣೂರು ಸರಕಾರಿ ಎಲ್ಪಿ ಶಾಲೆಯಲ್ಲಿ ಎಲ್ಪಿಎಸ್ಟಿ (ಮಲೆಯಾಳ) ಹುದ್ದೆಗೆ ತಾತ್ಕಾಲಿಕ ಅಧ್ಯಾಪಕರ ನೇಮಕಾತಿಗೆ ಸಂದರ್ಶನ ಮೇ 30ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ನಡೆಯಲಿದೆ. ಅರ್ಹರು ಅಸಲಿ ಪ್ರಮಾಣಪತ್ರಗಳ ಸಹಿತ ಹಾಜರಾಗಬೇಕೆಂದು ತಿಳಿಸಲಾಗಿದೆ.ಮಂಜೇಶ್ವರ: ಮೂಡಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಎಚ್ಎಸ್ಟಿ -ಇಂಗ್ಲಿಷ್-1, ಹಿಂದಿ-1, ಫಿಸಿಕಲ್ ಸಯನ್ಸ್(ಕನ್ನಡ ಮಾಧ್ಯಮ)-1, ಯುಪಿಎಸ್ಟಿ (ಕನ್ನಡ ಮಾಧ್ಯಮ) -2 ಹುದ್ದೆಗಳಿಗೆ ಅಧ್ಯಾಪಕರ ನೇಮಕಾತಿ ನಡೆಸಲಾಗುವುದು. ನಾಳೆ ಬೆಳಿಗ್ಗೆ 11 ಗಂಟೆಗೆ ಶಾಲೆ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಅರ್ಹರು ಅಸಲಿ ಪ್ರಮಾಣಪತ್ರಗಳ ಸಹಿತ ಹಾಜರಾಗಬೇಕೆಂದು …

ಗೋಳಿತ್ತಡ್ಕದಲ್ಲಿ ರಸ್ತೆ ಬದಿ ಕುಸಿತ: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಮೊಟಕು ಭೀತಿ

ಪೆರ್ಲ: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಕ ನಾಶನಷ್ಟ ಸಂಭವಿಸಿದೆ. ಹಲವೆಡೆಗಳಲ್ಲಿ ಮರಗಳು ಧರಾಶಾಹಿಯಾಗಿವೆ. ವಿದ್ಯುತ್ ತಂತಿಗಳಿಗೆ ಮರ ಬಿದ್ದು ಕಂಬಗಳು ಮುರಿದಿವೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಮೊಟಕುಗೊಂಡಿವೆ. ಚೆರ್ಕಳ- ಕಲ್ಲಡ್ಕ ರಾಜ್ಯ ಹೆದ್ದಾರಿಯ ಅಡ್ಕಸ್ಥಳ-ಪೆರ್ಲ ಮಧ್ಯೆಗಿನ ಗೋಳಿತ್ತಡ್ಕದಲ್ಲಿ ರಸ್ತೆ ಬದಿ ಗುಡ್ಡೆ ಕುಸಿದಿದೆ. ಇಲ್ಲಿನ ಬಿ.ಜಿ. ರಾಮ ಭಟ್ ಎಂಬವರ ಅಡಕೆ ತೋಟಕ್ಕೆ ಗುಡ್ಡೆ ಜರಿದು ಬಿದ್ದು ೫೦ಕ್ಕೂಹೆಚ್ಚು ಅಡಿಕೆ ಸಸಿಗಳು ಮಣ್ಣುಪಾಲಾಗಿವೆ. ಪಂಪ್ ಶೆಡ್ ಮಣ್ಣಿನಡಿಗೆ ಸೇರಿದೆ. ಚರಂಡಿ ವ್ಯವಸ್ಥೆ ಇಲ್ಲದೆ …

ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 430ಕ್ಕೇರಿಕೆ

ಕಾಸರಗೋಡು: ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ ಈಗ 430ಕ್ಕೇರಿದೆ.  ಕಳೆದ ಸೋಮವಾರ ತನಕದ ಲೆಕ್ಕಾಚಾರ ಪ್ರಕಾರ ರಾಜ್ಯ ದಲ್ಲಿ 335 ಕೋವಿಡ್ ಬಾಧಿತರಿ ದ್ದರು. ಅದಾದ ಒಂದು ವಾರದಲ್ಲಿ ಆ ಸಂಖ್ಯೆ ಈಗ 430ಕ್ಕೇರಿದೆ. ಕೋಟ್ಟಯಂ, ತಿರುವನಂತಪುರ, ಎರ್ನಾಕುಳಂ, ಪತ್ತನಂತಿಟ್ಟ ಮತ್ತು ತೃಶೂರು ಜಿಲ್ಲೆಗಳಲ್ಲಿ ಅತೀ ಹೆಚ್ಚು ಸೋಂಕು ಹರಡಿದೆ.   ಕೊಲ್ಲಂ ಮತ್ತು ತಿರುವನಂತಪುರ ಜಿಲ್ಲೆಯಲ್ಲಿ ಕಳೆದ ವಾರ ಇಬ್ಬರು ಕೋವಿಡ್‌ನಿಂದ ಸಾವನ್ನಪ್ಪಿ ದ್ದಾರೆ. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶೀತ, ನೆಗಡಿ, ಗಂಟಲುನೋವು, ಉಸಿರಾಟ …

ಯುವಕ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಯುವಕನೋರ್ವ ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಕುಂಬಳೆ ಮಾವಿನಕಟ್ಟೆಯ ಹರೀಶ್ ಗಟ್ಟಿಯವರ ಪುತ್ರ ನಿತಿನ್ ಕುಮಾರ್ ಗಟ್ಟಿ (25) ಮೃತಪಟ್ಟ ವ್ಯಕ್ತಿ. ಇವರು ಲೈಟಿಂಗ್ಸ್ ನೌಕರನಾಗಿ ದ್ದರು. ನಿನ್ನೆ ರಾತ್ರಿ 11 ಗಂಟೆ ವೇಳೆ ಮನೆಗೆ ತಲುಪಿದ ಇವರು ಊಟಮಾಡಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಏಳದ ಹಿನ್ನೆಲೆಯಲ್ಲಿ ಮನೆಯ ವರು ಕೊಠಡಿಯ ಬಾಗಿಲು ತೆರೆದು ನೋಡಿದಾಗ ನಿತಿನ್ ಕುಮಾರ್ ಫ್ಯಾನ್‌ಗೆ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. …

ಎಂಡಿಎಂಎ ಕೈವಿರಿಸಿಕೊಂಡಾತ ಸೆರೆ

ಉಪ್ಪಳ: ಮಾರಕ ಮಾದಕ ವಸ್ತುವಾದ ಎಂಡಿಎಂಎ ಕೈವಶವಿರಿ ಸಿಕೊಂಡಿದ್ದ ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಉಪ್ಪಳ ಬಳಿಯ ಪತ್ವಾಡಿ ಕಲಂದರ್ ಮಂಜಿಲ್‌ನ ಅಬ್ದುಲ್ ರೌಫ್ ಯಾನೆ ?ಟಪ್ಪು ರೌಫ್ (39) ಬಂಧಿತ ವ್ಯಕ್ತಿ. ಈತನ ಕೈಯಿಂದ 0.26 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ನಿನ್ನೆ ಮಧ್ಯಾಹ್ನ 1.30ರ ವೇಳೆ ಪತ್ವಾಡಿ ರಸ್ತೆಯಲ್ಲಿ ಎಸ್.ಐ. ಉಮೇಶ್ ನೇತೃತ್ವದ ಪೊಲೀಸರು ಗಸ್ತು ನಡೆಸುತ್ತಿದ್ದ ವೇಳೆ ಅಬ್ದುಲ್ ರೌಫ್‌ನ ಮೇಲೆ ಸಂಶಯಗೊಂಡು ಈತನ ದೇಹ ತಪಾಸಣೆ ನಡೆಸಿದಾಗ ಪ್ಯಾಂಟ್‌ನ ಜೇಬಿನಲ್ಲಿ ಎಂಡಿಎಂಎ …