ವ್ಯಕ್ತಿ ಮನೆಯೊಳಗೆ ನೇಣುಬಿಗಿದು ಸಾವು

ಕಾಸರಗೋಡು: ವ್ಯಕ್ತಿ ಮನೆಯೊ ಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದಾರೆ. ಚೆಂಗಳ ಬಾರಿ ಕ್ಕಾಡ್ ನಾಲ್ತಡ್ಕದ ಗೋಪಾಲನ್ (72) ಮೃತಪಟ್ಟ ವ್ಯಕ್ತಿ. ನಿನ್ನೆ ಮನೆಯಲ್ಲಿ ಬೇರೆ ಯಾರೂ ಇಲ್ಲದ ವೇಳೆ ಇವರು ನೇಣುಬಿಗಿದು ಸಾವಿಗೀಡಾಗಿದ್ದಾರೆನ್ನ ಲಾಗಿದೆ.  ಮೃತದೇಹವನ್ನು ಮರಣೋ ತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ. ಘಟನೆ ಬಗ್ಗೆ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತರು ಪತ್ನಿ ಮಾಧವಿ, ಮಕ್ಕಳಾದ ವಿನೋದ್, ಬಿಂದು, ಅಳಿಯ ರವಿ, ಸಹೋದರ-ಸಹೋದ ರಿಯರಾದ ನಾರಾಯಣನ್, ಸುಂದರಿ, ಗಿರಿಜ, …

ಹಾಸ್ಟೆಲ್‌ನೊಳಗೆ ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿ ಹಾಸ್ಟೆಲ್‌ನೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಾಣತ್ತೂರು ಕನೀತ್ತೋಡು ನಿವಾಸಿ ದಿನೇಶನ್  ಎಂಬವರ ಪುತ್ರ ಕಾಸರಗೋಡು ಸರಕಾರಿ ಕಾಲೇಜಿನ ಪ್ರಥಮ ವರ್ಷ ಬಿಎಸ್ಸಿ (ಪ್ರಾಣಿಶಾಸ್ತ್ರ) ವಿದ್ಯಾರ್ಥಿ ಅಭಿಷೇಕ್ ಪಿ.ಡಿ (20) ಸಾವನ್ನಪ್ಪಿದ ವಿದ್ಯಾರ್ಥಿ. ಈತ ವಿದ್ಯಾನಗರದಲ್ಲಿರುವ ಸರಕಾರಿ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ನಲ್ಲಿ ವಾಸಿಸಿ ಕಾಲೇಜಿಗೆ ಹೋಗುತ್ತಿದ್ದನು. ಇದೇ ಹಾಸ್ಟೆಲ್‌ನಲ್ಲಿ ಈತ ನಿನ್ನೆ ರಾತ್ರಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವಿಷಯ ತಿಳಿದ ಕಾಸರಗೋಡು ಪೊಲೀಸರು ಹಾಸ್ಟೆಲ್‌ಗೆ ಆಗಮಿಸಿ …

ಪರೀಕ್ಷೆಯಲ್ಲಿ ಅಂಕ ಕಡಿಮೆ: ಮನೆ ಬಿಟ್ಟ ವಿದ್ಯಾರ್ಥಿನಿ ಸಹಿತ ಇಬ್ಬರು ಬಾಲಕಿಯರು ರೈಲಿನಲ್ಲಿ ಪತ್ತೆ

ಕಾಸರಗೋಡು: ಪರೀಕ್ಷೆಯಲ್ಲಿ ನಿರೀಕ್ಷಿಸಿದ ಅಂಕ ಲಭಿಸದ ಬೇಸರದಿಂದ ವಿದ್ಯಾರ್ಥಿನಿ ತನ್ನ ಸಂಬಂಧಿಕಳಾದ ಬಾಲಕಿ ಜೊತೆ ಮನೆ ಬಿಟ್ಟು ಬಳಿಕ ಅವರಿಬ್ಬರನ್ನು ರೈಲಿನಿಂದ ಪೊಲೀಸರು ಪತ್ತೆಹಚ್ಚಿದ ಘಟನೆ ಇಂದು ಮುಂಜಾನೆ ನಡೆದಿದೆ. ಕಣ್ಣೂರು ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ 18ರ ಹರೆಯದ ವಿದ್ಯಾರ್ಥಿನಿಗೆ ಪ್ಲಸ್‌ಟು ಪರೀಕ್ಷೆಯಲ್ಲಿ  ನಿರೀಕ್ಷಿಸಿದಷ್ಟು  ಅಂಕ ಲಭಿಸಿರಲಿಲ್ಲ. ಅದರಿಂದ ಬೇಸರಗೊಂಡ ಆಕೆ  ಸಂಬಂಧಿಕಳಾದ 14ರ ಹರೆಯದ ಬಾಲಕಿಯೊಂದಿಗೆ ನಿನ್ನೆ ಬೆಳಿಗ್ಗೆ ಮನೆ ಬಿಟ್ಟಿದ್ದಳು. ಆ ಬಗ್ಗೆ ನೀಡಲಾದ ದೂರಿ ನಂತೆ ಕಣ್ಣೂರು ಸಿಟಿ ಪೊಲೀಸರು ಮಿಸ್ಸಿಂಗ್ …

ಮುಂದುವರಿಯುತ್ತಿರುವ ಧಾರಾಕಾರ ಮಳೆ: ವಿವಿಧೆಡೆಗಳಲ್ಲಿ ನಾಶ ನಷ್ಟ

ಪೈವಳಿಕೆ: ಸುರಿಯುತ್ತಿರುವ ಧಾರಕಾರ ಮಳೆಗೆ ವಿವಿಧ ಕಡೆಗಳಲ್ಲಿ ಹಾನಿ ಸಂಭವಿಸುತ್ತಿದೆ. ಪೈವಳಿಕೆ ವಿಲ್ಲೇಜ್‌ಗೆ ಒಳಪಟ್ಟ ಬಾಯಿಕಟ್ಟೆ ಕಳಾಯಿ ಮಲೆನಾಡು ಹೆದ್ದಾರಿಯಲ್ಲಿ ಬಾಳೆ ಹಿತ್ಲು ಎಂಬಲ್ಲಿ ಮೊನ್ನೆ ರಾತ್ರಿ ಗುಡ್ಡೆಯಿಂದ ಮಣ್ಣು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಈ ಭಾಗದಲ್ಲಿ ಇನ್ನೂ ಮಣ್ಣು ಕುಸಿತ ಉಂಟಾದರೆ ಸಂಚಾರ ಮೊಟಕು ಗೊಳ್ಳುವ ಭೀತಿಯಿದೆ. ಈ ಗುಡ್ಡೆ ಪರಿಸರದಲ್ಲಿ ರುವ ಅನಿತಾ ಬಾಬು, ಸುಜಾತಾ ರಮೇಶ, ರೋಹಿಣಿ ನಾರಾಯಣ ಎಂಬೀ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳ ಮನೆಗಳು …

ಮಾಜಿ ಪಂ.ಸದಸ್ಯನ ಮನೆ ಮೇಲೆ ಗುಡ್ಡೆ ಕುಸಿತ

ಪೈವಳಿಕೆ: ನಿನ್ನೆ ಸುರಿದ  ಗಾಳಿ ಮಳೆಗೆ ಮನೆಯೊಂದರ ಮೇಲೆ ಸಮೀಪದ ಗುಡ್ಡೆ ಕುಸಿದು ಹಾನಿ ಉಂಟಾದ ಘಟನೆ ಬಾಯಾರು ಸಜಂಕಿಲದಲ್ಲಿ ನಡೆದಿದೆ. ಮಾಜಿ ಪಂಚಾಯತ್ ಸದಸ್ಯ ಸಜಂಕಿಲದ ಐತ್ತಪ್ಪರ ಮನೆ ಮೇಲೆ ಗುಡ್ಡೆ ಕುಸಿದಿದೆ. ಇದರಿಂದ ಹೆಂಚಿನ ಮನೆಯ ಅಡುಗೆ ಕೋಣೆ ಭಾಗ ಹಾನಿಗೀಡಾಗಿದೆ. ಗುಡ್ಡೆ ಕುಸಿಯುವ ಶಬ್ದ ಕೇಳಿ ಮನೆಯವರು ಹೊರಗೆ ಓಡಿದುದರಿಂದ ಅಪಾಯ ತಪ್ಪಿದೆ. ಘಟನೆ ಸ್ಥಳಕ್ಕೆ ಬಾಯಾರು ಗ್ರಾಮಾಧಿಕಾರಿ ಭೇಟಿ ನೀಡಿದರು.

ಕನ್ಯಪ್ಪಾಡಿಯ ಯುವಕ ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಮೃತ್ಯು

ಬದಿಯಡ್ಕ: ಉದ್ಯೋಗ ಅರಸಿ ಬೆಂಗಳೂರಿಗೆ ತೆರಳಿದ ಯುವಕ ಅಲ್ಲಿ ಕಟ್ಟಡದಿಂದ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.  ಕನ್ಯಪ್ಪಾಡಿ ನಿವಾಸಿ ಬಿ.ಎಂ. ಶುಕೂರ್ ಎಂಬವರ  ಪುತ್ರ ಮುಹಮ್ಮದ್ ಉನೈಸ್ (19) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಬೆಂಗಳೂರಿನ ವೈಟ್ ಫೀಲ್ಡ್ ಆಡುಗೋಡಿಯಲ್ಲಿರುವ ಲಾಡ್ಜ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಮೃತರು ತಂದೆ, ತಾಯ ಸಫಿಯ, ಸಹೋದರಿಯ ರಾದ ಶಮ್ನ, ಶಾಹಿನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕರುವನ್ನೂರು ಸಹಕಾರಿ ಬ್ಯಾಂಕ್‌ನಲ್ಲಿ ಸಾಲ ವಂಚನೆ ಪ್ರಕರಣ: ಇ.ಡಿಯಿಂದ ನ್ಯಾಯಾಲಯಕ್ಕೆ ಅಂತಿಮ ಚಾರ್ಜ್ ಶೀಟ್ ಸಲ್ಲಿಕೆ; ಸಿಪಿಎಂನ ಮಾಜಿ ಜಿಲ್ಲಾ ಕಾರ್ಯದರ್ಶಿ, ಸಂಸದ ಆರೋಪಿಗಳು

ಕೊಚ್ಚಿ: ಕೇರಳದಲ್ಲಿ ಭಾರೀ ವಿವಾದ ಸೃಷ್ಟಿಸಿದ ಸಿಪಿಎಂ ನಿಯಂತ್ರಣದಲ್ಲಿರುವ ಕರುವನ್ನೂರು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ಸಾಲ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ಇಲಾಖೆ (ಇಡಿ) ನ್ಯಾಯಾಲಯದ ಅಂತಿಮ  ಚಾರ್ಜ್ ಶೀಟ್  ಸಲ್ಲಿಸಿದೆ. ಸಿಪಿಎಂನ ಕೇರಳದ ಏಕೈಕ ಸಂಸದ, ಪಕ್ಷದ ಮಾಜಿ ಜಿಲ್ಲಾ ಕಾರ್ಯದರ್ಶಿಯೂ ಆಗಿದ್ದ ಕೆ. ರಾಧಾಕೃಷ್ಣನ್, ಮಾಜಿ ಸಚಿವ,  ಪಳ್ಳದ ಮಾಜಿ ಜಿಲ್ಲಾ ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿ ಸದಸ್ಯರೂ ಆಗಿರುವ  ಎ.ಸಿ.ಮೊಯ್ದೀನ್, ಇನ್ನೋರ್ವ ಮಾಜಿ ಜಿಲ್ಲಾ ಕಾರ್ಯದರ್ಶಿ ಎಂ.ಎಂ. ವರ್ಗೀಸ್ ಎಂಬವರ …

ಸೆಕ್ಯೂರಿಟಿ ನೌಕರ ಕುಸಿದುಬಿದ್ದು ಮೃತ್ಯು

ಕಾಸರಗೋಡು: ಕಾಸರಗೋಡು ನಗರದ ಪ್ರಮುಖ ಜ್ಯುವೆಲ್ಲರಿಯೊಂ ದರ ತಾತ್ಕಾಲಿಕ ಸೆಕ್ಯುರಿಟಿ  ನೌಕರ ಕರ್ತವ್ಯ ವೇಳೆ ಕುಸಿದು ಬಿದ್ದು ಮೃತಪಟ್ಟರು. ಕುಂಬಳೆ ಕುಂಟಂಗೇರಡ್ಕದ ಕೆ. ಹಮ್ದಾನ್ (60) ಮೃತಪಟ್ಟ ವ್ಯಕ್ತಿ. ಮೊನ್ನೆ ರಾತ್ರಿ ಘಟನೆ ನಡೆದಿದೆ. ಹಮ್ದಾನ್ ಬಿದ್ದ  ಸ್ಥಿತಿಯಲ್ಲಿ ಕಂಡುಬಂದಿದ್ದು, ಈಬಗ್ಗೆ ಬೇರೊಬ್ಬ ಸೆಕ್ಯುರಿಟಿ ನೌಕರ ಸೆಕ್ಯೂರಿಟಿ ಏಜೆನ್ಸಿ ಅಧಿಕಾರಗಳಿಗೆ ತಿಳಿಸಿದ್ದರು. ಬಳಿಕ ಏಜೆನ್ಸಿ ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳ ತಲುಪಿ ಹಮ್ದಾನ್‌ರನ್ನು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ಸುಹರಾ, ಮಕ್ಕಳಾದ ಮುಹಮ್ಮದ್ …

ಅಂಗಡಿಗೆ ತಲುಪಿದ ಬಾಲಕಿ, ಅಸ್ವಸ್ಥ ಯುವತಿ ಮಾನಭಂಗಕ್ಕೆತ್ನ: ಇಬ್ಬರು ಆರೋಪಿಗಳ ವಿರುದ್ಧ ಕೇಸು

ಕಾಸರಗೋಡು: ಅಂಗಡಿ ಯಿಂದ ಸಾಮಗ್ರಿ ಖರೀದಿಸಲೆಂದು ತಲುಪಿದ 13ರ ಹರೆಯದ ಬಾಲಕಿಯನ್ನು ಮಾನಭಂಗಪಡಿಸಿ ರುವುದಾಗಿ ನೀಡಿದ ದೂರಿನಲ್ಲಿ ವ್ಯಾಪಾರಿ ವಿರುದ್ಧ ಪೋಕ್ಸೋ ಕೇಸು ದಾಖಲಿಸಲಾಗಿದೆ. ಬಳಾಲ್ ನಿವಾಸಿ ಬಶೀರ್ (54) ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿದ್ದಾರೆ. ಈತನನ್ನು ಬಂಧಿ ಸಲಾಗಿದೆ. ನಿನ್ನೆ ಬೆಳಿಗ್ಗೆ 9 ಗಂಟೆಗೆ ಘಟನೆ ನಡೆದಿದೆ. ಬಳಾಲ್ ಶಾಲೆಗೆ ಸಮೀಪ ಕಾರ್ಯಾಚರಿಸುತ್ತಿರುವ ಆರೋಪಿಯ ಅಂಗಡಿಗೆ ಬಾಲಕಿ ತಲುಪಿದ್ದಳು. ಮಾಸ್ಕ್ ಖರೀದಿಸಿದ ಬಳಿಕ ಅಂಗಡಿಯಲ್ಲಿ ಮಾರಾಟಕ್ಕಿದ್ದ ಕಿವಿಯೋಲೆ ನೋಡಿ ನಿಂತಿದ್ದ ವೇಳೆ ಹಿಂದಿನಿಂದ ತಲುಪಿದ …

ಮೀಯಪದವು ನಿವಾಸಿ ಯುವತಿ ದುಬಾಯಿಯಲ್ಲಿ ನಿಧನ

ಕುಂಬಳೆ: ಹೃದಯ ಸಂಬಂಧ ಅಸೌಖ್ಯ ಬಾ ಧಿಸಿ ಯುವತಿ ಯೋರ್ವೆ ದುಬಾ ಯಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೀಂಜ ಮೀಯಪದವಿನ ಮುಹ ಮ್ಮದ್ ಇರ್ಶಾದ್‌ರ ಪತ್ನಿ ಮುಹ್‌ಸೀನ (24) ಮೃತಪಟ್ಟ ದುರ್ದೈವಿ. ಇವರು ದುಬಾಯಿ ಖರಾಮದಲ್ಲಿ  ವಾಸಿಸು ತ್ತಿದ್ದರು. ಅಸೌಖ್ಯ ಬಾಧಿಸಿದ್ದ ಇವರನ್ನು ದುಬಾಯಿಯ ಆಸ್ಟರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಮೃತದೇಹವನ್ನು ಊರಿಗೆ ತರಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ. ಬದಿಯಡ್ಕ ಪಾಡ್ಲಡ್ಕದ ಮುಹಮ್ಮದ್ ಕುಂಞಿ-ಮೈಮೂನ ದಂಪತಿಯ ಪುತ್ರಿಯಾದ ಮುಹ್‌ಸೀನ ಮಕ್ಕಳಾದ ಐಸಾನ್ (4), ಇಮಾದ್ (2) ಹಾಗೂ ಅಪಾರ ಬಂಧು-ಮಿತ್ರರನ್ನು …