ಗಾಳಿ, ಮಳೆ: ಕಳತ್ತೂರಿನಲ್ಲಿ ಮನೆ ಕುಸಿತ

ಕುಂಬಳೆ: ಕಳತ್ತೂರು ಚೆಕ್‌ಪೋಸ್ಟ್ ಶ್ರೀನಗರದ ಜಗನ್ನಾಥ ಎಂಬವರ ಮನೆ ಮೊನ್ನೆ ರಾತ್ರಿ ಬೀಸಿದ ಗಾಳಿ ಮಳೆಗೆ ಕುಸಿದು ಬಿದ್ದಿದೆ. ಮನೆಯ ಹೆಂಚು ಹಾಗೂ ಶೀಟ್ ಹಾಸಿದ ಛಾವಣಿ ಕುಸಿದಿದೆ. ರಾತ್ರಿ ವೇಳೆ ಜಗನ್ನಾಥ, ಪತ್ನಿ ಹಾಗೂ ಇಬ್ಬರು ಮಕ್ಕಳು ಮನೆಯಲ್ಲಿ ನಿದ್ರಿಸುತ್ತಿದ್ದರು. ಈ ವೇಳೆ ಮನೆ ಕುಸಿದಿದ್ದು, ಕುಟುಂಬ ಅದೃಷ್ಟವಶಾತ್  ಅಪಾಯದಿಂದ ಪಾರಾಗಿದೆ. ವಿಷಯ  ತಿಳಿದು ತಲುಪಿದ ನಾಗರಿಕರು ಕುಟುಂಬದವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಿದರು.

ರಾಜ್ಯದ ಯುವ ಸಮೂಹದ ಪಲಾಯನ ಪಿಣರಾಯಿ ಸರಕಾರದ 9 ವರ್ಷದ ಸಾಧನೆ- ಎಂ.ಎಲ್. ಅಶ್ವಿನಿ

ಮುಳ್ಳೇರಿಯ: ಶಿಕ್ಷಣ, ಉದ್ಯೋಗ, ಉತ್ತಮ ಜೀವನ ಸನ್ನಿವೇಶಗಳನ್ನು ಹುಡುಕುತ್ತಾ ರಾಜ್ಯದಿಂದ ಇತರ ದೇಶಗಳಿಗೆ ಯುವಜನಾಂಗ ಪಲಾಯನಗೈಯ್ಯುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಅಪಾಯಕರವಾದ ಈ ಸನ್ನಿವೇಶ ಪಿಣರಾಯಿ ವಿಜಯನ್ ಸರಕಾರದ ೯ ವರ್ಷದ ಆಡಳಿತ ಸಾಧನೆ ಎಂದು ಅವರು ಅಪಹಾಸ್ಯ ವ್ಯಕ್ತಪಡಿಸಿದರು. ಬಿಜೆಪಿ ಕಾರಡ್ಕ ಪಂಚಾಯತ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯಾಡಳಿತ ಸಂಸ್ಥೆಗಿರುವ ಯೋಜನೆ ವಿನಿಯೋಗ ಮೊತ್ತವನ್ನು ಪಿಣರಾಯಿ ಸರಕಾರ ಕಡಿತಗೊಳಿಸಿದೆ. ದುಂದುವೆಚ್ಚ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಹಲವಾರು ಜನಕ್ಷೇಮ ಯೋಜನೆಗಳು, ಅಭಿವೃದ್ಧಿ ಯೋಜನೆಗಳ …

ರಾಷ್ಟ್ರೀಯ ತಂಡಕ್ಕೆ ಆಯ್ಕೆ: ಕಾಂಗ್ರೆಸ್ ಅಭಿನಂದನೆ

ಬಾಯಾರು: ಪೈವಳಿಕೆ ಪಂಚಾಯತ್‌ನ ಕನಿಯಾಲ ನಿವಾಸಿ ಸುಂದರ- ಕಮಲ ದಂಪತಿ ಪುತ್ರಿ ಪದವಿ ವಿದ್ಯಾರ್ಥಿನಿ ಶ್ರಾವ್ಯ ಸಿ.ಎಚ್. ಭಾರತೀಯ ಸಾಫ್ಟ್‌ಬೇಸ್ ಬಾಲ್ ತಂಡಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಸಮಿತಿ, ಮಂಡಲ ಸಮಿತಿ, ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಈಕೆಯನ್ನು ಅಭಿನಂದಿಸಲಾಯಿತು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ಕುಮಾರ್, ನವಾಜ್ ಕನಿಯಾಲ ಇವರು ಮನೆಗೆ ಭೇಟಿ ನೀಡಿ ಶ್ರಾವ್ಯರನ್ನು ಗೌರವಿಸಿದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರದೀಪ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾ …

ಕೋವಿಡ್ ಮತ್ತೆ ತಲೆ ಎತ್ತುವಾಗ ಜನರಲ್ ಆಸ್ಪತ್ರೆಯಲ್ಲಿ ಶ್ವಾಸಕೋಶ ತಜ್ಞರಿಲ್ಲ: ಸಮಸ್ಯೆ ಪರಿಹರಿಸಲು ಆಗ್ರಹ

ಕಾಸರಗೋಡು: ಕೋವಿಡ್ ಮಹಾಮಾರಿ ಮತ್ತೆ ತಲೆ ಎತ್ತತೊಡ ಗಿದೆಯೆಂದು ಮುನ್ನೆಚ್ಚರಿಕೆಗಳನ್ನು ಆಗಾಗ ನೀಡಲಾಗುತ್ತಿರುವ ಮಧ್ಯೆ ಕೋವಿಡ್ ಪ್ರತಿರೋಧಕ್ಕೆ ರಾಜ್ಯ ದಲ್ಲಿಯೇ ಮಾದರಿಯಾಗಿದ್ದ ಕಾಸ ರಗೋಡು ಜನರಲ್ ಆಸ್ಪತ್ರೆಯಲ್ಲಿ ಶ್ವಾಸಕೋಶ ರೋಗ ತಜ್ಞನ ಹುದ್ದೆ ತೆರವಾಗಿದೆ. ಜನರಲ್ ಆಸ್ಪತ್ರೆಯ ಪಲ್ಮೋನರಿ ತಜ್ಞರಾಗಿದ್ದ ಡಾ| ಅಬ್ದುಲ್ ಸತ್ತಾರ್ ನಿವೃತ್ತರಾಗಿ ಹಲವಾರು ತಿಂಗಳು ಕಳೆದರೂ ಈ ಹುದ್ದೆ ಈಗಲೂ ತೆರ ವಾಗಿದೆ. ಮಳೆ ಗಾಲ ಆರಂಭದೊಂದಿಗೆ ಹೆಚ್ಚಿನವರು ಈಗ ಉಸಿರಾಟ ಸಂಬಂಧ ಸಮಸ್ಯೆ ಎದುರಿಸುತ್ತಿದ್ದಾರೆ. ಶ್ವಾಸಕೋಶ ರೋಗಕ್ಕೆ ಔಷಧಿಗಾಗಿ ತಲುಪುವ ರೋಗಿಗಳಿಗೆ …

ವಯನಾಡಿನಲ್ಲಿ ಯುವತಿಯ ಇರಿದು ಕೊಂದ ಪ್ರಕರಣ: ಆರೋಪಿ ವಿರುದ್ಧ ಪೋಕ್ಸೋ ಕೇಸು ದಾಖಲು

ವಯನಾಡು: ತಿರುನೆಲ್ಲಿ ಎಂಬಲ್ಲಿ  ಜೊತೆಯಲ್ಲಿ ವಾಸಿಸುತ್ತಿದ್ದ ಯುವತಿ ಯನ್ನು ಕಡಿದು ಕೊಂದ ಪ್ರಕರಣದಲ್ಲಿ ಆರೋಪಿ ವಿರುದ್ಧ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದರು. ಯುವತಿಯ ಸಂಬಂಧಿಕೆಯಾದ ಪ್ರಾಯಪೂರ್ತಿ ಯಾಗದ ಬಾಲಕಿಯನ್ನು ದೌರ್ಜನ್ಯಗೈದಿರು ವುದಾಗಿ ಲಭಿಸಿದ ದೂರಿನಲ್ಲಿ ಈ ಕೇಸು ದಾಖಲಿಸಲಾಗಿದೆ. ಮಾನಂತವಾಡಿ ಪಿಲಕ್ಕಾವ್‌ತರ ನಿವಾಸಿ ದಿಲೀಶ್ (35) ವಿರುದ್ಧ ಈ ಕೇಸು ದಾಖಲಿಸಲಾಗಿದೆ. ಕಾಟಿಕುಳಂ ಎಡಯೂರ್‌ಕುನ್ನ್ ನಿವಾಸಿ ಪ್ರವೀಣ (34)ಳನ್ನು ಆದಿತ್ಯವಾರ ಈತ ಕೊಲೆಗೈದಿದ್ದನು. ಪ್ರವೀಣಳ ಹಿರಿಯ ಮಗಳು ಅನರ್ಘಳನ್ನು ಕೂಡಾ ಈತ ಇರಿದಿ ದ್ದನು. ಕೊಲೆಕೃತ್ಯದ ಬಳಿಕ …

ಕಾಞಂಗಾಡ್ ನಗರಸಭೆಯ ಹಳೆಯ ಬಸ್ ನಿಲ್ದಾಣ ಕಟ್ಟಡದಲ್ಲಿ ಬಿರುಕು: ಪ್ರವೇಶ ನಿಷೇಧ

ಹೊಸದುರ್ಗ: ಕಾಞಂಗಾಡ್ ನಗರಸಭೆಯ ಹಳೆ ಬಸ್ ನಿಲ್ದಾಣ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಬಿರುಕು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ  ಬಸ್ ನಿಲ್ದಾಣಕ್ಕಿರುವ ಪ್ರವೇಶ ಕವಾಟವನ್ನು ಪೊಲೀಸರು ಮುಚ್ಚಿದರು. ಬಸ್ ನಿಲ್ದಾಣದ, ಶಾಪಿಂಗ್ ಕಾಂಪ್ಲೆಕ್ಸ್ ಪರಿಸರದಲ್ಲಿ ಜನರು ನಿಲ್ಲಬಾರದೆಂದು ಸೂಚನೆ ನೀಡಿದ್ದಾರೆ. ಇಂದು ಬೆಳಿಗ್ಗೆ ಬಸ್ ನಿಲ್ದಾಣದ ಪ್ರವೇಶ ಕವಾಟದ ಬಳಿ ಬಿರುಕು ಮೂಡಿರುವುದು ಕಂಡು ಬಂದಿದೆ. ಇದನ್ನು ಕೂಡಲೇ ಪೊಲೀಸರಿಗೆ ತಿಳಿಸಲಾಗಿದ್ದು, ಅವರು ಬಂದು ಪ್ರವೇಶದ್ವಾರದಲ್ಲಿ ಸಂಚಾರ ನಿಷೇಧಿಸಿದ್ದಾರೆ.

ಪಾಂಡಿ ಶಾಲೆಯಲ್ಲಿ ಭೋಜನಶಾಲೆ, ಕುಡಿಯುವ ನೀರು ಘಟಕ ಉದ್ಘಾಟನೆ

ಪಾಂಡಿ: ಸರಕಾರಿ ಪ್ರೌಢಶಾಲೆ ಯಲ್ಲಿ ಜಿಲ್ಲಾ ಪಂ.ನ ಸಹಾಯ ದೊಂದಿಗೆ ಹಳೆಯ ಕಟ್ಟಡವನ್ನು ನವೀಕರಿಸಿದ ಭೋಜನ ಶಾಲೆ ಮತ್ತು ಶುದ್ಧವಾದ ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಿತಾ ಎಸ್.ಎನ್ ಉದ್ಘಾಟಿಸಿದರು. ದೇಲಂಪಾಡಿ ಪಂಚಾಯತ್ ಅಧ್ಯಕ್ಷೆ ಎ.ಪಿ ಉಷಾ ಅಧ್ಯಕ್ಷತೆ ವಹಿಸಿದರು.ದೇಲಂಪಾಡಿ ಪಂಚಾಯತ್ ಸದಸ್ಯ ಟಿ.ಕೆ ದಾಮೋದರನ್ ಶುಭ ಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ, ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ಯಾಮಲ ಬಿ, ಎಸ್‌ಎಂಸಿ ಅಧ್ಯಕ್ಷ ದಿವಾಕರನ್, ಸ್ಟಾಫ್ …

ವಿವಿಧೆಡೆಗಳಲ್ಲಿ ಅಧ್ಯಾಪಕ ಹುದ್ದೆ ಭರ್ತಿಗೆ ಸಂದರ್ಶನ

ದೇಲಂಪಾಡಿ: ಇಲ್ಲಿನ ಜಿವಿಎಚ್ಎಸ್ಎಸ್ನಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳನ್ನು ಭರ್ತಿಗೊಳಿಸಲು ಈ ತಿಂಗಳ 29ರಂದು ಬೆಳಿಗ್ಗೆ 11 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಜ್ಯೂನಿಯರ್ ಅರೆಬಿಕ್-1, ಎಚ್ಎಸ್ಟಿ ಸಮಾಜ ವಿಜ್ಞಾನ ಕನ್ನಡ-1, ಮಲೆಯಾಳ-1, ಹಿಂದಿ-1, ಯುಪಿಎಸ್ಟಿ ಮಲೆಯಾಳ-1 ಎಂಬೀ ಹುದ್ದೆಗಳು ಖಾಲಿ ಇದ್ದು, ಅರ್ಹರು ಸಂದರ್ಶನದಲ್ಲಿ ಭಾಗವಹಿಸಬಹುದೆಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.ಕಾಸರಗೋಡು: ಇಲ್ಲಿನ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಚ್ಎಸ್ಟಿ ಗಣಿತ (ಕನ್ನಡ), ಸೋಷಲ್ (ಕನ್ನಡ), ಕನ್ನಡ (ಪಾರ್ಟ್ಟೈಮ್), ಇಂಗ್ಲಿಷ್ ಹುದ್ದೆ ಭರ್ತಿಗೆ ಈ ತಿಂಗಳ 29 …

ಮುಂಗಾರು ಮಳೆಯ ಅಬ್ಬರಕ್ಕೆ 9 ಮಂದಿ ಬಲಿ: ಬಿರುಗಾಳಿಯಿಂದ ವ್ಯಾಪಕ ನಾಶನಷ್ಟ

ಕಾಸರಗೋಡು: ವಾಡಿಕೆಗಿಂತಲೂ 10ದಿನಗಳ ಮೊದಲೇ ಕೇರಳಕ್ಕೆ  ಪ್ರವೇಶಿಸಿರುವ ನೈಋತ್ಯ ಮುಂಗಾರು ಮಳೆ ಆರಂಭದಲ್ಲೇ ರಾಜ್ಯದಲ್ಲಿ ವ್ಯಾಪಕ ಸಾವುನೋವು ಹಾಗೂ  ನಾಶನಷ್ಟಗಳನ್ನು ಸೃಷ್ಟಿಸಿದೆ. ಧಾರಾಕಾರ ಮಳೆಯ ಸಹಿತ ಎಡೆಬಿಡದೆ  ಬೀಸುತ್ತಿರುವ  ಬಿರುಗಾಳಿಯೇ ವ್ಯಾಪಕ ನಾಶನಷ್ಟಕ್ಕೆ ಪ್ರಧಾನ ಕಾರಣವಾಗಿದೆ. ಇದರಿಂದಾಗಿ ಕಾಸರಗೋಡು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಮರಗಳು ಧರೆಗುರುಳಿ ಬಿದ್ದಿದ್ದು ಇದು ನೂರಾರು ಮನೆಗಳನ್ನು ಹಾನಿಗೊಳಿಸಿದೆ ಮಾತ್ರವಲ್ಲ  ವಿದ್ಯುತ್ ಸಂಪರ್ಕವನ್ನು ಪೂರ್ಣವಾಗಿ ಅಸ್ತವ್ಯಸ್ಥಗೊಳಿಸಿದೆ. ಕಾಸರಗೋಡಿನಲ್ಲೂ  ವಿದ್ಯುತ್ ಸಂಪರ್ಕ ಪೂರ್ಣವಾಗಿ ನಿಲುಗಡೆಗೊಂಡಿದೆ. ಮಳೆ ಅಬ್ಬರ ಇನ್ನೂ   ಮುಂದುವರಿಯುತ್ತಿದ್ದು ಇದರಿಂದಾಗಿ ಕಾಸರಗೋಡು ಸೇರಿದಂತೆ …

ರೈಲ್ವೇ ಹಳಿ ಮೇಲೆ ತೆಂಗಿನ ಮರ ಬಿದ್ದು ಹೈ ಟೆನ್ಶನ್ ವಿದ್ಯುತ್ ತಂತಿ ಹಾನಿ : ಕಾಸರಗೋಡು-ಮಂಗಳೂರು ರೈಲು ಸಂಚಾರ ಮೊಟಕು

ಕಾಸರಗೋಡು: ರೈಲ್ವೇ ಹಳಿ ಸಮೀಪ ಸ್ಥಾಪಿಸಿದ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ತೆಂಗಿನ ಮರ ಬುಡಸಮೇತ ಮಗುಚಿ ಬಿದ್ದ ಪರಿಣಾಮ ಕಾಸರಗೋಡು – ಮಂಗಳೂರು ಮಧ್ಯೆ ರೈಲು ಸಂಚಾರ ಮೊಟಕುಗೊಂಡಿದೆ. ಇಂದು ಬೆಳಿಗ್ಗೆ ಪಳ್ಳಿಕುನ್ನು ಎಂಬಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ತೆಂಗಿನ ಮರ ಬಿದ್ದಿದೆ. ಇದರಿಂದಾಗಿ ಹೈ ಟೆನ್ಶನ್ ಲೈನ್ ರೈಲ್ವೇ ಹಳಿಯ ಮೇಲೆ ಬಾಗಿ ನಿಂತಿದ್ದು, ಅಪಾಯ ಭೀತಿ ಎದುರಾಗಿದೆ. ವಿಷಯ ತಿಳಿದು ಮಂಗಳೂರಿಗೆ ತೆರಳುತ್ತಿದ್ದ ಮಲಬಾರ್ ಎಕ್ಸ್‌ಪ್ರೆಸ್ ರೈಲು ಗಾಡಿಯನ್ನು ಕಾಸರಗೋಡು ರೈಲ್ವೇ …