ಮಳೆ: ವಿವಿಧೆಡೆ ವ್ಯಾಪಕ ಹಾನಿ: ತಗ್ಗು ಪ್ರದೇಶಗಳು ನೀರಿನಿಂದಾವೃತ
ಕುಂಬಳೆ/ಉಪ್ಪಳ: ಧಾರಾಕಾ ರವಾಗಿ ಸುರಿಯುತ್ತಿರುವ ಮಳೆಯಿಂ ದಾಗಿ ಜಿಲ್ಲೆಯ ಹಲವೆಡೆಗಳಲ್ಲಿ ರಸ್ತೆಗಳು ಸಹಿತ ತಗ್ಗುಪ್ರದೇಶಗಳು ನೀರಿನಿಂದಾವೃತವಾಗಿದೆ. ವಾಮಂಜೂರು ಚೆಕ್‌ಪೋಸ್ಟ್ ಬಳಿಯಲ್ಲಾಗಿ ಹರಿಯುವ ಉಪ್ಪಳ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ಸಮೀಪದ ಬಯಲು ಪ್ರದೇಶಗಳು ನೀರಿನಿಂದಾವೃತಗೊಂಡಿದೆ. ಅಲ್ಲದೆ ವಿವಿಧೆಡೆ ಮರಗಳು ಬಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಮಂಗಲ್ಪಾಡಿ ತಿಂಬರದಲ್ಲಿ ತೆಂಗಿನ ಮರವೊಂದು ಬುಡ ಸಮೇತ ಮಗುಚಿಬಿದ್ದು ಬಾವಿಗೆ ಹಾನಿ ಸಂಭವಿಸಿದೆ. ತಿಂಬರ ಪುಷ್ಪಾಕರ ಎಂಬವರ ಮನೆ ಬಳಿಯ ಬಾವಿ ಮೇಲೆ ತೆಂಗಿನ ಮರ ಬಿದ್ದಿದೆ. ಇದರಿಂದ ಆವರಣಗೋಡೆ …
Read more “ಮಳೆ: ವಿವಿಧೆಡೆ ವ್ಯಾಪಕ ಹಾನಿ: ತಗ್ಗು ಪ್ರದೇಶಗಳು ನೀರಿನಿಂದಾವೃತ”