ಜನವಾಸ ಕೇಂದ್ರಗಳಲ್ಲಿ ಉಪಟಳ ನೀಡುವ ವನ್ಯ ಜೀವಿಗಳ ಬೇಟೆಗೆ ಕಾನೂನು ನಿರ್ಮಾಣಕ್ಕೆ ಚಿಂತನೆ

ತಿರುವನಂತಪುರ: ಅರಣ್ಯ ಗಳಿಂದ ಜನವಾಸ ಕೇಂದ್ರಕ್ಕೆ ಬಂದು ಉಪಟಳ ನೀಡುತ್ತಿರುವ ವನ್ಯ ಜೀವಿಗಳನ್ನು ಬೇಟೆಯಾಡಲು ಹೊಸ ಕಾನೂನಿಗೆ ರೂಪು ನೀಡುವ ಬಗ್ಗೆ ರಾಜ್ಯ ಸರಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಕೇಂದ್ರ ಸರಕಾರ ಸಂಬಂಧಪಟ್ಟ ಕಾನೂ ನನ್ನು ಸೂಕ್ತ ತಿದ್ದುಪಡಿ ತರಬೇಕೆಂಬ ಬೇಡಿಕೆಯ್ನು  ಕೇರಳ  ಕೇಂದ್ರ ದೊಡನೆ ಈಗಾಗಲೇ ಆಗ್ರಹ ಪಟ್ಟಿದೆ. ಇದರಂತೆ  ಜನವಾಸ ಕೇಂದ್ರಗಳಿಗೆ ನುಗ್ಗುವ ವನ್ಯ ಜೀವಿಗಳನ್ನು ಗುಂಡಿಕ್ಕಿ ಕೊಲ್ಲಲು ಈ ಕಾನೂನು ಸಹಾಯಕವಾ ಗಲಿದೆ. ಈ ಕುರಿತಾದ ಕಾನೂನಿಗೆ ರೂಪು ನೀಡಲು ರಾಜ್ಯ ಅರಣ್ಯ-ಕಾನೂನು …

ಹಜ್‌ಗೆ ತೆರಳಿದ ನಿವೃತ್ತ  ಅಧ್ಯಾಪಕ ಸೌದಿಯಲ್ಲಿ ನಿಧನ

ಬದಿಯಡ್ಕ: ಹಜ್‌ಗೆ ತೆರಳಿದ ನಿವೃತ್ತ ಅಧ್ಯಾಪಕ ಸೌದಿಯಲ್ಲಿ ಮೃತಪಟ್ಟರು. ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಗುಣಾಜೆ ಮುಂಡ್ಯತ್ತಡ್ಕ ನಿವಾಸಿ ಬಾಪುಂಞಿ (77) ಎಂಬವರು ಮೃತಪಟ್ಟ ವ್ಯಕ್ತಿ. ಗುರುವಾರದಂದು ಹರಂಶರೀಫ್ ಬಳಿ ಘಟನೆ ಸಂಭವಿಸಿದೆ. ಮೃತರ ಅಂತ್ಯ ಸಂಸ್ಕಾರ ಮದೀನದಲ್ಲಿ ನೆರವೇರಿಸಲಾಯಿತು. ಈ ತಿಂಗಳ 6ರಂದು ಪತ್ನಿ ಆಯಿಶಾ, ಸಹೋದರಿ ಮರಿಯಮ್ಮ ಎಂಬಿವರೊಂದಿಗೆ ಬಾಪುಂಞಿ ಹಜ್‌ಗೆ ತೆರಳಿದ್ದರು. ಗುಣಾಜೆ ವಾರ್ಡ್ ಲೀಗ್ ಅಧ್ಯಕ್ಷ, ಪಳ್ಳಂ ಬದರ್ ಜುಮಾ ಮಸೀದಿ ಸಮಿತಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜಿ.ಎಚ್. ಎಸ್.ಎಸ್. ಕುಂಬಳೆ, ಆದೂರು …

ಭಯೋತ್ಪಾದಕ ದಾಳಿಯಲ್ಲಿ 20 ಸಾವಿರ ಭಾರತೀಯರು ಬಲಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ವಿರುದ್ದ ಭಾರತ ವಾಗ್ದಾಳಿ

ದೆಹಲಿ: ಕಳೆದ ನಾಲ್ಕು ದಶಕಗಳಲ್ಲಿ ಪಾಕಿಸ್ತಾನದ ಪ್ರಾಯೋಜಕತ್ವದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 20 ಸಾವಿರಕ್ಕೂ ಹೆಚ್ಚು ಭಾರತೀಯರು ಸಾವನ್ನಪ್ಪಿದ್ದಾರೆಂದು ವಿಶ್ವಸಂಸ್ಥೆಯಲ್ಲಿ ಭಾರತ ಪಾಕಿಸ್ತಾನದ ವಿರುದ್ದ ವಾಗ್ದಾಳಿ ನಡೆಸಿದೆ. ವಿಶ್ವಸಂಸ್ಥೆಯಲ್ಲಿ ಭಾರತ ಖಾಯಂ ಪ್ರತಿನಿಧಿ, ರಾಯಭಾರಿ ಪರ್ವತನೇನಿ ಹರೀಶ್ ಅವರು ಈ ವಿಷಯವನ್ನು ವಿಶ್ವಸಂಸ್ಥೆಯ ಗಮನಕ್ಕೆ ತಂದಿದ್ದಾರೆ. ಭಾರತದಲ್ಲಿ ಪಾಕಿಸ್ತಾನ ಪ್ರಾಯೋಜಿತ  ಗಡಿಯಾಚೆಗಿನ ಭಯೋತ್ಪಾದನೆಯು ನಾಗರಿಕರ ಜೀವನ, ಧಾರ್ಮಿಕ ಸಾಮರಸ್ಯ ಮತ್ತು ಆರ್ಥಿಕ ಸಮೃದ್ಧಿಯನ್ನು ಒತ್ತೆಯಾಳು ಗಳಾಗಿ ಇರಿಸಲು ಪ್ರಯತ್ನಿಸುತ್ತಿದೆ ಎಂದೂ ಅವರು ಹೇಳಿದರು.

ಕ್ವಾರ್ಟರ್ಸ್‌ನ ಶೌಚಾಲಯದೊಳಗೆ ಕುಸಿದುಬಿದ್ದು ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಸೀತಾಂಗೋಳಿ: ಕ್ವಾರ್ಟರ್ಸ್‌ನ ಶೌಚಾಲಯದೊಳಗೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದ ಅನ್ಯರಾಜ್ಯ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟನು. ಸೀತಾಂಗೋಳಿ ಬಿವರೇಜಸ್ ಮದ್ಯ ದಂಗಡಿ ಸಮೀಪದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಅಸ್ಸಾಂ ಚೋಂಗಾಯ್ ಗೋನ್‌ಸಿಲಾಗಿರಿ ಚಿರಂಗ್ ನಿವಾಸಿ ಸಂಶೀರ್ ಅಲಿ (30) ಮೃತಪಟ್ಟ ವ್ಯಕ್ತಿ. ಇವರು ಸೀತಾಂಗೋಳಿಯ ಲ್ಲಿರುವ ಕೆಂಪು ಕಲ್ಲು ಕೋರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಮಂಗಳವಾರ ಬೆಳಿಗ್ಗೆ ಕ್ವಾರ್ಟರ್ಸ್‌ನ ಶೌಚಾಲಯ ದೊಳಗೆ ಕುಸಿದು ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಕೋರೆ ಮಾಲಕ ಫೈಸಲ್‌ರ ನೇತೃತ್ವದಲ್ಲಿ ಮಂ ಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. …

ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣಕ್ಕೆ ಪುನರ್‌ಯತ್ನ: ಕ್ರಿಯಾ ಸಮಿತಿಯಿಂದ ತಡೆ

ಕುಂಬಳೆ: ಸಾರ್ವಜನಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕುಂಬಳೆಯಲ್ಲಿ ನಿಲುಗಡೆಗೊಳಿಸಿದ್ದ ಟೋಲ್ ಬೂತ್ ನಿರ್ಮಾಣ ಕಾಮಗಾರಿ ಯತ್ನ ಮತ್ತೆ ಆರಂಭಿಸಿದ್ದು, ಕೂಡಲೇ ಅದಕ್ಕೆ ಕ್ರಿಯಾಸಮಿತಿ ತಡೆಯೊಡ್ಡಿದೆ. ನಿನ್ನೆ ಮಧ್ಯಾಹ್ನ ವೇಳೆ ಟೋಲ್ ಬೂತ್ ನಿರ್ಮಿಸಲು ಉದ್ದೇಶಿಸಿದ ಸ್ಥಳಕ್ಕೆ ನೌಕರರು ತಲುಪಿದ್ದರು. ಈ ಬಗ್ಗೆ ತಿಳಿದು ಕ್ರಿಯಾಸಮಿತಿ ಕಾರ್ಯ ಕರ್ತರು ಅಲ್ಲಿಗೆ ತಲುಪಿ ಕೆಲಸ ಸ್ಥಗಿತಗೊಳಿಸುವಂತೆ ತಿಳಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕೇಂದ್ರ ಉನ್ನತ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗುವವರೆಗೆ ನಿರ್ಮಾಣ ಚಟುವಟಿಕೆ ನಿಲ್ಲಿಸಲು ಕಾಸರಗೋಡು ಕಲೆಕ್ಟರೇಟ್‌ನಲ್ಲಿ …

ಮುಖ್ಯಮಂತ್ರಿಗೆ ಇಂದು 80ನೇ ಹುಟ್ಟುಹಬ್ಬ

ತಿರುವನಂತಪುರ: ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಇಂದು ತಮ್ಮ 80ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಸಮಸ್ತ ಸ್ತರಗಳಿಂದ ಹುಟ್ಟು ಹಬ್ಬದ ಶುಭಾ ಶಯಗಳ ಮಹಾಪೂರವೇ ಹರಿದು ಬರತೊಡಗಿದೆ. ಎರಡನೇ ಪಿಣರಾಯಿ ವಿಜಯನ್ ಸರಕಾರದ ನಾಲ್ಕನೇ ವಾರ್ಷಿಕ ಆಚರಣೆ ನಿನ್ನೆ ಕೊನೆಗೊಂಡಿದೆ. ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿ ನಾಳೆಗೆ 9 ವರ್ಷ ಪೂರ್ತಿಗೊಳ್ಳಲಿದೆ.

ಮೆಥಾಫಿಟಮಿನ್ ಪತ್ತೆ: ಓರ್ವನ ವಿರುದ್ಧ ಕೇಸು

ಕಾಸರಗೋಡು: ನೆಕ್ರಾಜೆ ಬದರ್ ನಗರದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆ ಯಲ್ಲಿ ಮಾದಕವಸ್ತುವಾದ 0.914 ಗ್ರಾಂ ಮೆಥಾಫಿಟಮಿನ್ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ನೆಕ್ರಾಜೆ ಚೆನ್ನಡ್ಕ- ಪೊಡಿಪಳ್ಳ ಬಳಿಯ ಮೊಹಮ್ಮದ್ ಹನೀಫ್ ಕೆ. (38) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಈತ ಚಲಾಯಿಸುತ್ತಿದ್ದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ.ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯ ಎಕ್ಸೈಸ್ ಇನ್ಸ್‌ಪೆಕ್ಟರ್ ಸೂರಜ್ ಎನ್.ರ ನೇತೃತ್ವದಲ್ಲಿ ಪ್ರಿವೆಂಟೀವ್ ಆಫೀಸರ್ ರಂಜಿತ್ ಕೆ.ವಿ. ಮತ್ತು ಇತರ ಸಿಬ್ಬಂದಿಗಳಾದ ಪ್ರಶಾಂತ್ ಕುಮಾರ್, ಎ.ವಿ. …

ಕಾಸರಗೋಡಿಗೆ ಇಂದು 41ನೇ ಹುಟ್ಟುಹಬ್ಬದ ಸಂಭ್ರಮ

ಕಾಸರಗೋಡು: ಸಪ್ತ ಭಾಷಾ ಸಂಗಮ ಭೂಮಿ ಯಾದ ಕಾಸರಗೋ ಡು ಜಿಲ್ಲೆ ಇಂದು ತನ್ನ 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದೆ. ವಿಭಿನ್ನ ಭಾಷೆಗಳು, ಆಚಾರಗಳು ಮತ್ತು ತನ್ನದೇ ಆದ ಪ್ರಾಚೀನ ಸಂಸ್ಕೃತಿಯನ್ನು ಮೈಗೂಡಿಸಿಕೊಂ ಡಿರುವ ಪ್ರದೇಶವಾಗಿದೆ ಕಾಸರ ಗೋಡು. ರಾಜ್ಯದಲ್ಲಿ ಅತೀ ಹೆಚ್ಚು ನದಿಗಳಿರುವ ಹಾಗೂ ಪ್ರಕೃತಿ ರಮಣೀಯವಾಗಿ ಪ್ರವಾಸಿಗರನ್ನು  ಕೈಬೀಸಿ ಕರೆಯುತ್ತಿ ರುವ ಜಿಲ್ಲೆಯೂ ಆಗಿದೆ. ಬೇಕಲಕೋಟೆ, ರಾಣಿಪುರ, ಪೊಸಡಿಗುಂಪೆ ಇತ್ಯಾದಿ ಪ್ರವಾಸಿ ತಾಣಗಳಿಂದ ರಾಜ್ಯ ಖಜಾನೆಗೆ  ಭಾರೀ ಆದಾಯ ಉಂಟಾಗುತ್ತಿದೆ. 1984 ಮೇ 24ರಂದು ಕಾಸರ …

ಎಂಟರ ಹರೆಯದ ಬಾಲಕಿಗೆ ಹಲ್ಲೆ: ತಂದೆ ವಿರುದ್ಧ ಕೇಸು

ಹೊಸದುರ್ಗ: ೮ರ ಹರೆಯದ ಬಾಲಕಿಗೆ ಪೈಶಾಚಿಕ ರೀತಿಯಲ್ಲಿ ಹಲ್ಲೆಗೈಯ್ಯುವ ದೃಶ್ಯಗಳು ವೈರಲ್ ಆಗುವುದರೊಂದಿಗೆ  ಘಟನೆ ಬಗ್ಗೆ ಕೇಸು ದಾಖಲಿಸಿ ತನಿಖೆ ನಡೆಸಲು  ಕಣ್ಣೂರು ರೂರಲ್ ಜಿಲ್ಲಾ ಪೊಲೀಸ್ ಅಧಿಕಾರಿ ಚೆರುಪುಳ ಪೊಲೀಸರಿಗೆ  ನಿರ್ದೇಶಿಸಿದ್ದಾರೆ.  ಪಯ್ಯನ್ನೂರು ಡಿವೈಎಸ್ಪಿ ಕೆ. ವಿನೋದ್ ಕುಮಾರ್‌ರಿಗೆ ಈ ನಿರ್ದೇಶ ನೀಡಲಾಗಿದೆ. ಇದರಂತೆ ಬಾಲಕಿಗೆ ಹಲ್ಲೆಗೈದ ತಂದೆ ಚೆರುಪುಳ ಮಲಾಂಕಡವು ನಿವಾಸಿಯಾದ  ಮಾಮಚ್ಚನ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚೆರುಪುಳದಲ್ಲಿ ಬಾಲಕಿ ಮೇಲೆ ಹಲ್ಲೆ ನಡೆದ ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದೆ. ಮಾಮಚ್ಚನ್ ಹಾಗೂ ಪತ್ನಿ …

ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಂತಿಮ ಹಂತದಲ್ಲಿ ನೂರೊಂದು ಸಮಸ್ಯೆ: ಪರಿಹಾರಕ್ಕೆ ಜಿಲ್ಲಾಡಳಿತದಿಂದ ಕ್ರಮ

ಕಾಸರಗೋಡು: ಮಳೆಗಾಲದ ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಕಟ್ಟಿನಿಂತು, ಇದರಂಗವಾಗಿ ಉಂಟಾಗುವ ಅಸೌಕರ್ಯಗಳನ್ನು ಪರಿಹರಿಸಲು ಜಿಲ್ಲಾಧಿಕಾರಿ ಕೆ. ಇಂಬಶೇಖರ್‌ರ ನೇತೃತ್ವದಲ್ಲಿ ತೀವ್ರ ಯತ್ನ ನಡೆಸಲಾಗುತ್ತಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಿ ಸಮಸ್ಯೆಯನ್ನು ಮನಗಂಡು ಪರಿಹಾರಕ್ಕೆ ನಿರ್ದೇಶ ನೀಡಿ ಜಿಲ್ಲಾ ಮಟ್ಟದಲ್ಲಿ ಕಂಡೀಜನ್ಸಿ ಪ್ಲಾನ್ ಮಂಡಿಸಿದ್ದಾರೆ. ಜನಪ್ರತಿನಿಧಿಗಳು ಮುಂದಿಟ್ಟ ಸಮಸ್ಯೆಗಳನ್ನು ಸೇರಿಸಿ ಅಧಿಕಾರಿಗಳು ಮತ್ತೆ ಸ್ಥಳ ಪರಿಶೀಲಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿವಿಧ ಕಡೆಗಳಲ್ಲಾಗಿ 101 ಸಮಸ್ಯೆಗಳನ್ನು ಪತ್ತೆ ಮಾಡಿದ್ದಾರೆ. ಈ ಸಮಸ್ಯೆಗಳನ್ನು ಗೂಗಲ್ …