ಎಂಡಿಎಂಎ ಸಹಿತ ಕಾರಿನಲ್ಲಿ ಸಂಚಾರ ಇಬ್ಬರು ಯುವಕರ ಸೆರೆ

ಕಾಸರಗೋಡು: ಹೊಸ ಕಾರಿನಲ್ಲಿ ಮಾದಕವಸ್ತು ಸಹಿತ ತಿರುಗಾಡುತ್ತಿದ್ದ ಇಬ್ಬರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಚೌಕಿ ಅರ್ಜಾಲ್ ರಸ್ತೆಯ ಮಿಯಾದ್ ಅಬ್ದುಲ್ ರಹ್ಮಾನ್ (23), ಚೌಕಿ ಕೆ.ಕೆ.ಪುರದ ಕೆ.ಎ. ಮನ್ಸೂರ್ (28) ಎಂಬಿವರನ್ನು ಕಾಸರಗೋಡು ನಗರ ಠಾಣೆ ಎಸ್‌ಐ ಅನ್ಸಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ಸಂಜೆ ಕೂಡ್ಲು ಅರ್ಜಾಲ್ ರಸ್ತೆಯಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಸಂಶಯ ರೀತಿಯಲ್ಲಿ ಕಂಡುಬಂದ ಈ ಇಬ್ಬರನ್ನು ಪ್ರಶ್ನಿಸಿದಾಗ ವ್ಯತ್ಯಸ್ಥ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರು ತಪಾಸಣೆ ನಡೆಸಿದಾಗ ೪೪೨೦ ರೂ. …

ಹೊಸಂಗಡಿ ರೈಲ್ವೇ ಗೇಟ್ ಪರಿಸರದಲ್ಲಿ ತುಂಬಿಕೊಂಡ ಮಳೆ ನೀರು: ಪಾದಚಾರಿಗಳಿಗೆ ನೀರಿನ ಅಭಿಷೇಕ

ಮಂಜೇಶ್ವರ: ಹೊಸಂಗಡಿ ರೈಲ್ವೇ  ಗೇಟ್ ಬಳಿಯಲ್ಲಿ ಮಳೆ ನೀರು ತುಂಬಿಕೊಂಡಿದ್ದು, ಈ ದಾರಿಯಾಗಿ ತೆರಳುವ ಪಾದಚಾರಿಗಳ ಸಹಿತ ದ್ವಿಚಕ್ರ ವಾಹನ ಸವಾರರಿಗೆ ಕೆಸರು ನೀರಿನ ಅಭಿಷೇಕ ಉಂಟಾಗುತ್ತಿದೆ. ಗೇಟ್ ಪರಿಸರದಲ್ಲಿ ಕಳೆದ ವರ್ಷ ಇಂಟರ್ ಲಾಕ್‌ಅಳವಡಿಸಿ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಆದರೆ ಈ ಕಾಮಗಾರಿಯ ಅವ್ಯವಸ್ಥೆಯೇ ಮಳೆ ನೀರು ಕಟ್ಟಿ ನಿಲ್ಲಲು ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮಳೆ ನೀರು ಹರಿಯಲು ವ್ಯವಸ್ಥೆ ಇಲ್ಲದೆ  ಸಂಗ್ರಹಗೊಂಡಿರುವುದರಿಂದ ಸಮಸ್ಯೆಯಾಗಿದೆ. ಹೊಸಂಗಡಿ ಪೇಟೆಯಿಂದ ಗೇಟ್ ದಾಟಿ ಬಂಗ್ರಮಂಜೇಶ್ವರ ರಸ್ತೆಗೆ ಅದೇ ರೀತಿ ವಿರುದ್ಧ …

ಅಸೀಫ್‌ರ ಮರಣದ ತನಿಖೆ ಸಿಬಿಐಗೆ ನೀಡಬೇಕು-ಕಾಂಗ್ರೆಸ್

ಬಾಯಾರು ; ಬಾಯಾರು ಗಾಳಿಯಡ್ಕದ ಮೊಹಮ್ಮದ್ ಆಸೀಫ್ ರÀ ಮರಣದಲ್ಲಿನ ನಿಗೂಢತೆ ಹೊರ ತರುವಲ್ಲಿ ಕೇರಳ ಕ್ರೈಬ್ರಾಂಚ್ ಸಂಪೂರ್ಣ ವಿಫಲವಾಗಿದ್ದು ನಿಷ್ಪಕ್ಷ ತನಿಖೆಯ ನಡೆಸಲು ಸರಕಾರ ಮುಂದಾಗಬೇಕೆAದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಪಿ. ಪ್ರದೀಪ ಕುಮಾರ್ ಒತ್ತಾಯಿಸಿದರು. ಆಸೀಫ್ ನ ಮರಣ ವ್ಯವಸ್ಥಿತ ಕೊಲೆ ಎಂದು ಪೋಸ್ಟ್ ಮಾರ್ಟಂ ವರದಿಯಲ್ಲಿ ವ್ಯಕ್ತವಾಗಿದ್ದರೂ ಅದಕ್ಕೆ ಕಾರಣರಾದ ವ್ಯಕ್ತಿಗಳನ್ನು ಸಂರಕ್ಷಿಸಲು ಕೇರಳ ಪೊಲೀಸರು ಅಥವಾ ಆಡಳಿತ ಪಕ್ಷ ಮುಂದಾಗುತ್ತಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನ್ಯಾಯಾಲದ ಮೂಲಕ ಹಾಗೂ ರಾಜಕೀಯ …

ಜಿಲ್ಲೆಯ ನಾಲ್ಕು ನದಿಗಳಿಂದ ಹೊಯ್ಗೆ ಸಂಗ್ರಹಿಸಲು ಅನುಮತಿ

ಕಾಸರಗೋಡು: ರಾಜ್ಯದಲ್ಲಿ ಹೊಯ್ಗೆ ಸಂಗ್ರಹಿಸಲು ಸರಕಾರ ಅನುಮತಿ ನೀಡಿದ ೧೭ ನದಿಗಳಲ್ಲಿ ನಾಲ್ಕು ನದಿಗಳು ಜಿಲ್ಲೆಯಲ್ಲಿವೆ. ಉಪ್ಪಳ, ಮೊಗ್ರಾಲ್, ಶಿರಿಯ, ಪಯಸ್ವಿನಿ ಹೊಳೆಗಳಿಂದ ಹೊಯ್ಗೆ ಸಂಗ್ರಹಿಸಲು ಸರಕಾರ ಅನುಮತಿ ನೀಡಿದೆ. ಹೊಯ್ಗೆ ಆಡಿಟ್ ವರದಿಯಲ್ಲಿ ಈ ಹೊಳೆಗಳಿಂದ ಹೊಯ್ಗೆ ಲಭ್ಯತೆ ಪತ್ತೆಹಚ್ಚಲಾಗಿತ್ತು. ಇದರ ಆಧಾರದಲ್ಲಿ ಹೊಯ್ಗೆ ತೆಗೆಯಲು ಒಪ್ಪಿಗೆ ನೀಡಲಾಗಿದೆ. ಹೊಯ್ಗೆಯ ಪ್ರಮಾಣತೆಗೆಯಲು ಸಾಧ್ಯವಿರುವ ಹೊಯ್ಗೆಯ ಪ್ರಮಾಣ ಎಂಬಿವು ಸೇರಿಸಿ ಜಿಲ್ಲಾ ಸರ್ವೆ ವರದಿ ಸಿದ್ಧಪಡಿಸಿ ನೈಸರ್ಗಿಕ ಇಲಾಖೆಯ ಅನುಮತಿ ಲಭಿಸಿದ ಬಳಿಕವೇ ಹೊಯ್ಗೆ ಸಂಗ್ರಹ ಆರಂಭಿಸಲಾಗುವುದು. …

ರಾಷ್ಟ್ರೀಯ ಹೆದ್ದಾರಿ ಹಾನಿ: ವಿವಿಧ ಪಕ್ಷಗಳಿಂದ ಖಂಡನೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಹಾನಿಗೊಂಡ ಹಿನ್ನೆಲೆಯಲ್ಲಿ ನಿರ್ಮಾಣ ಗುತ್ತಿಗೆ ವಹಿಸಿಕೊಂಡ ಮೇಘ ಇನ್ಫ್ರಾಸ್ಟ್ರೆಕ್ಚರ್‌ನ ಕೆಲಸಗಳನ್ನು ಪುನರ್ ಪರಿಶೀಲಿಸಬೇಕು, ಯೂತ್ ಫ್ರಂಟ್ (ಬಿ) ಜಿಲ್ಲಾ ಸಮಿತಿ ಆಗ್ರಹಿಸಿದೆ. ಜಿಲ್ಲಾಧ್ಯಕ್ಷ ಸಂತೋಷ್ ಮಾವುಂಗಲ್ ಅಧ್ಯಕ್ಷತೆ ವಹಿಸಿದರು. ಹಲವರು ಮಾತನಾಡಿದರು. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆ ಬೇಸಿಗೆ ಮಳೆಯಲ್ಲಿಯೇ ನಾಶಗೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ವೆಲ್ಫೇರ್ ಪಾರ್ಟಿ ಜಿಲ್ಲಾ ಸೆಕ್ರೆಟರಿಯೇಟ್ ಅಭಿಪ್ರಾಯಪಟ್ಟಿದೆ.  ಹೆದ್ದಾರಿ ನಿರ್ಮಾಣದಲ್ಲಿ ಕೇರಳದ ಹವಾಮಾನ ಹಾಗೂ ಪರಿಸರವನ್ನು ಪರಿಗಣಿಸದಿರುವುದು ಈ ದುರಂತಕ್ಕೆ ಕಾರಣವೆಂದು ತಜ್ಞರು …

ಕೊಲ್ಲಂನಲ್ಲೊಂದು ಪಾಕಿಸ್ತಾನ್ ಮುಕ್ಕ್ ಹೆಸರು ಬದಲಿಸಿದ ಪಂಚಾಯತ್

ಕೊಲ್ಲಂ: ಪಹಲ್ಗಾಮ್ ಉಗ್ರವಾದಿ ಆಕ್ರಮಣದ ಬೆನ್ನಲ್ಲೇ ಸ್ಥಳೀಯರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ  ಕೊಲ್ಲಂ ಕುನ್ನತ್ತೂರು ಪಂಚಾಯತ್‌ನ ಪಾಕಿಸ್ತಾನ್ ಮುಕ್ಕ್ ಎಂಬ ಸ್ಥಳದ ಹೆಸರನ್ನು ಬದಲಿಸಲಾಗಿದೆ. ಈ ಪ್ರದೇಶಕ್ಕೆ ಐವರ್‌ಕಾಲ ಎಂಬ ಹೆಸರು  ನೀಡಲು ಪಂಚಾಯತ್ ಆಡಳಿತ ಸಮಿತಿ ಒಮ್ಮತದಿಂದ ತೀರ್ಮಾನಿಸಿದೆ. ಇತಿಹಾಸಕ್ಕೆ ಸಂಬಂಧಿಸಿ ಈ ಸ್ಥಳಕ್ಕೆ ಸೂಕ್ತವಾದ ಹೆಸರಾಗಿದೆ ಐವರ್ ಕಾಲ. ಆದರೆ ಪಾಕಿಸ್ತಾನ್ ಮುಕ್ಕ್ ಹೆಸರು ಬಂದ ಬಗ್ಗೆ ಯಾವುದೇ ದಾಖಲೆಗಳು ಇಲ್ಲವೆಂದು ಪಂಚಾಯತ್ ಆಡಳಿತ ಸಮಿತಿ ತಿಳಿಸಿದೆ. ಈ  ಪಂಚಾಯತ್‌ನ ನಿಲಕ್ಕಲ್ ವಾರ್ಡ್‌ನಲ್ಲಿ ಪಾಕಿಸ್ತಾನ್ …

ಗ್ರಾಮ ಪಂಚಾಯತ್ ವಾರ್ಡ್ ವಿಭಜನೆ: ಭೂಪಟಗಳು ವೆಬ್‌ಸೈಟ್‌ನಲ್ಲಿ

ತಿರುವನಂತಪುರ: ಗ್ರಾಮ ಪಂಚಾಯತ್‌ಗಳ ವಾರ್ಡ್ ವಿಭಜನೆ ಪೂರ್ತಿಯಾದ ಅಂತಿಮ ವಿಜ್ಞಾಪನೆ ಅನುಸರಿಸಿರುವ ಭೂಪಟಗಳನ್ನು ರಾಜ್ಯ ಡಿ ಲಿಮಿಟೇಶನ್ ಕಮಿಶನ್‌ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದು ಅಧಿಕಾರಿಗಳ ಹೊರತು ಜನಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ ಪರಿಶೀಲಿಸಲು ಲಭ್ಯವಿದೆ. ಸ್ಥಳೀಯಾಡಳಿತ ಚುನಾವಣೆಗಿರುವ ಕರಡು ಮತದಾರ ಯಾದಿ ಸಿದ್ಧಪಡಿಸುವುದರಂಗವಾಗಿ ಅಧಿಕಾರಿಗಳು ಪರಿಶೀಲನೆ ಆರಂಭಿಸಲು ರಾಜ್ಯ ಚುನಾವಣಾ ಆಯೋಗ ಅಧಿಕಾರಿಗಳಿಗೆ ನಿರ್ದೇಶ ನೀಡಿದೆ.

ಜಿಲ್ಲಾ ಕುಲಾಲ ಸಮುದಾಯ ಭವನದ ಮಿನಿ ಸಭಾಂಗಣ ಉದ್ಘಾಟನೆ, ಮಹಾಸಭೆ ನಾಳೆ

ಮಂಜೇಶ್ವರ:- ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ, ಇದರ ಆಶ್ರಯದಲ್ಲಿ ಜಿಲ್ಲಾ ಕುಲಾಲ ಸುಮುದಾಯ ಭವನದ ನೆಲ ಅಂತಸ್ತಿ ನಲ್ಲಿ ನಿರ್ಮಾಣಗೊಂಡಿರುವ ಮಿನಿ ಸಭಾಂಗಣದ ಉದ್ಘಾಟನೆ, ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಉಚಿತ ಪುಸ್ತಕ ವಿತರಣೆ, ಎಸ್. ಎಸ್. ಎಲ್. ಸಿ ಹಾಗೂ ಪ್ಲಸ್ ಟು /ಪಿ. ಯು. ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ, ಸಹಾಯಹಸ್ತ ವಿತರಣೆ ಮತ್ತು ಸಂಘದ ವಾರ್ಷಿಕ ಮಹಾಸಭೆಯು ನಾಳೆ ಜರಗಲಿದೆ. ಬೆಳಗ್ಗೆ ಗಂಟೆ …

ಕೆರೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಬಾಲಕರು ಮುಳುಗಿ ದಾರುಣ ಮೃತ್ಯು: ಓರ್ವ ಆಸ್ಪತ್ರೆಗೆ ದಾಖಲು

ಹೊಸದುರ್ಗ: ಸ್ನಾನಕ್ಕೆಂದು ಕೆರೆಗಿಳಿದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾದ ದಾರುಣ ಘಟನೆ ಕಾಞಂಗಾಡ್ ಬಳಿಯ ಮಾಣಿಕೋತ್ ಎಂಬಲ್ಲಿ ಸಂಭವಿಸಿದೆ. ಇದೇ ವೇಳೆ ಅಸ್ವಸ್ಥಗೊಂಡ ಓರ್ವ ಬಾಲಕನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಡಿಯನ್ ಪಾಲಕ್ಕಿ ನಿವಾಸಿ ಎಂ.ಎನ್. ಅಸೀಸ್-ಆಯಿಷ ದಂಪ ತಿಯ ಪುತ್ರ ಅಫಾಸ್ (9), ಕರ್ನಾ ಟಕದ ಕೊಡಗು ನಿವಾಸಿಗಳೂ, ಮಡಿ ಯಾನ್‌ನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಹೈದರ್- ಆಬಿದ ದಂಪತಿ ಯ ಪುತ್ರ ಅನ್ವರ್ (10) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಅನ್ವರ್‌ನ ಸಹೋದರ ಹಾಶಿಂ …

ಸಂಚರಿಸುತ್ತಿದ್ದ ಕಾರಿಗೆ ಬೆಂಕಿ: ದಂಪತಿ, ಮಕ್ಕಳು ಸೇರಿದಂತೆ 5  ಮಂದಿ ಅನಾಹುತದಿಂದ ಪಾರು

ಕಾಸರಗೋಡು: ಪ್ರಯಾಣದ ವೇಳೆ ಕಾರಿನಲ್ಲಿ ಬೆಂಕಿ ಎದ್ದು ಅದರಲ್ಲಿದ್ದ ದಂಪತಿ ಮತ್ತು ಅವರ ಮೂವರು ಮಕ್ಕಳು ಅದೃಷ್ಟವಶಾತ್ ಸಂಭಾವ್ಯ ಭಾರೀ ಅನಾಹುತದಿಂದ ಪಾರಾದ ಘಟನೆ ಚೆರ್ಕಳದ ಬಳಿ ಇಂದು ಮುಂಜಾನೆ ನಡೆದಿದೆ. ನ್ಯೂ ಮುಂಬಯಿಯ ಇಡಿಗ ನಿವಾಸಿ ಹಾಗೂ ಗಲ್ಫ್ ಉದ್ಯೋಗಿ ಆಗಿರುವ ಇಕ್ಬಾಲ್ ಅಹಮ್ಮದ್ ಕುಟ್ಟಿ, ಅವರ ಪತ್ನಿ ರುಬೀನ, ಮಕ್ಕಳಾದ ನೌಫ್ (19), ಅಸೀಸ (17) ಮತ್ತು ಉಮ್ಮರ್ (18) ಈ ಅನಾಹುತದಿಂದ ಪಾರಾದವರು. ಇವರು 50 ದಿನಗಳ ಹಿಂದೆಯಷ್ಟೇ ಮುಂಬಯಿಯಿಂದ 14 ಲಕ್ಷ …