ಹೋಟೆಲ್ ನೌಕರ  ಹೃದಯಾಘಾತದಿಂದ ನಿಧನ

ಕುಂಬಳೆ: ಕುಂಬಳೆ ಬದ್ರಿಯಾ ನಗರ ಕೆ.ವಿ. ಹೌಸ್‌ನ ಎಂ.ಕೆ. ಮೊಹಮ್ಮದ್ (50) ಹೃದಯಾಘಾ ತದಿಂದ ನಿಧನಹೊಂದಿ ದರು. ನಿನ್ನೆ ರಾತ್ರಿ ಮನೆಯಲ್ಲಿ ಊಟಮಾಡಿ ಕುಳಿತಿದ್ದ ವೇಳೆ ಹೃದಯಾಘಾತ ವುಂಟಾದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇವರು  ಮೊಗ್ರಾಲ್ ಮೈಮೂನಾ ನಗರದಲ್ಲಿ ಹೋಟೆಲ್ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಸೈನಬ, ಮಕ್ಕಳಾದ ಜಲಾಲ್, ಜಸೀಲ, ಜುಮೈಲ, ಅಳಿಯಂದಿರಾದ ರಶೀದ್ ಅಸ್‌ಹರಿ, ಸಜೀರ್, ಸಹೋದರ ಎಂ.ಕೆ. ಹಂಸ, ಸಹೋದರಿ ಖದೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. …

ಉಕ್ಕಿ ಹರಿದ ಗಂಗಾ, ಯಮುನ: 184ಮಂದಿ ಸಾವು

ದಿಲ್ಲಿ: ಉತ್ತರ ಭಾರತ ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ ವ್ಯಾಪಕ ನಾಶ-ನಷ್ಟ ಸಂಭವಿಸಿದೆ. ಉತ್ತರ ಪ್ರದೇಶದ 13 ಜಿಲ್ಲೆಗಳಲ್ಲಿ ನೆರೆಹಾವಳಿ ಉಂಟಾಗಿದೆ. ಗಂಗಾ, ಯಮುನಾ ನದಿಗಳು ಉಕ್ಕಿ ಹರಿಯುತ್ತಿವೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯದಲ್ಲಿ ಇದುವರೆಗೆಂ 184 ಮಂದಿ ಮಳೆಯಿಂದಾಗಿ ಮೃತಪಟ್ಟಿದ್ದಾರೆ. ನೆರೆ ಹಾಗೂ ಭೂ ಕುಸಿತದಿಂದ 266 ರಸ್ತೆಗಳನ್ನು ಮುಚ್ಚುಗಡೆಗೊಳಿಸಲಾಗಿದೆ. 1700 ಕೋಟಿ ರೂಪಾಯಿಗಳ ನಾಶನಷ್ಟ ಸಂಭವಿಸಿರುವುದಾಗಿ ರಾಜ್ಯ ಸರಕಾರ ತಿಳಿಸಿದೆ. ಉತ್ತರಾಖಂಡ್‌ನಲ್ಲೂ ಮಳೆ ತೀವ್ರಗೊಂಡಿದೆ.

ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಪೂಜೆ: ಛಾಯಾಚಿತ್ರ ಸಮರ್ಪಣೆ

ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಶ್ರೀ ಕೈಲಾಸ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃಮಂಡಳಿಯ ಆಶ್ರಯದಲ್ಲಿ ಈ ತಿಂಗಳ 8ರಂದು ನಡೆಯಲಿರುವ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆ ಪ್ರಯುಕ್ತ ಪೂಜಿಸುವ ಶ್ರೀ ಲಕ್ಷ್ಮೀದೇವಿಯ ನೂತನ ಛಾಯಾಚಿತ್ರವನ್ನು ಸಮಿತಿ ಅಧ್ಯಕ್ಷೆ  ಶಾರದಾ ಎಸ್. ರಾವ್, ನಗರಸಭಾ ಸದಸ್ಯೆ ಸವಿತಾ ಟೀಚರ್, ಕಾರ್ಯ ದರ್ಶಿ ಸೌಮ್ಯಾ ಎಸ್.ಎನ್. ಹೊಳ್ಳ, ಇಂದಿರಾ ಇವರಿಗೆ ಮಹಾಲಸ ಕಾಲೇ ಜಿನ ವಿದ್ಯಾರ್ಥಿ ಸಂದೇಶ್ ಆಚಾರ್ಯ ರಚಿಸಿ ಸಮರ್ಪಿಸಿದರು. ಈ ವೇಳೆ ಸಮಿತಿಯ ಉಪಾಧ್ಯಕ್ಷೆ …

ಲೋಕೋಪಯೋಗಿ ರಸ್ತೆಗಳ ಹೊಂಡಗಳನ್ನು ಶೀಘ್ರ ಮುಚ್ಚಲು ಸಚಿವ ರಿಯಾಸ್ ಸೂಚನೆ

ತಿರುವನಂತಪುರ: ಮಳೆಗಾಲದಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಕೆಲವು ರಸ್ತೆಗಳಲ್ಲಿ ಉಂಟಾಗುತ್ತಿರುವ ಹೊಂಡಗಳನ್ನು ತಾತ್ಕಾಲಿಕವಾಗಿಯಾದರೂ ದುರಸ್ತಿಗೊಳಿಸಲಾಗಿದೆ ಎಂಬುದನ್ನು ಲೋಕೋಪಯೋಗಿ ನೌಕರರು ಖಚಿತಪಡಿಸಬೇಕೆಂದು ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ತಿಳಿಸಿದರು.ಲೋಕೋಪಯೋಗಿ ರಸ್ತೆಗಳ ಪರಿಪಾಲನೆಯ ಅವಲೋಕನ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ವಿಷಯದಲ್ಲಿ ಯಾವುದೇ ವಿಧದ ಲೋಪ ಉಂಟಾಗಬಾರದು. ರಸ್ತೆಗಳನ್ನು ಹೊಣೆ ವಹಿಸಿಕೊಂಡ ಅಧಿಕಾರಿಗಳು ತಪಾಸಣೆ ನಡೆಸಬೇಕು. ಇದರ ವರದಿಯನ್ನು ಕಾರ್ಯದರ್ಶಿ ಮಟ್ಟದವರೆಗೆ ವಿಮರ್ಶೆಗೊಳಪಡಿಸಬೇಕು ಎಂದು ಸಚಿವರು ಸೂಚಿಸಿದರು. ಮಳೆ ಕಡಿಮೆಯಾದರೆ ನಿಶ್ಚಿತ ದಿನದೊಳಗೆ ಶಾಶ್ವತ ದುರಸ್ತಿ ಕೆಲಸಗಳನ್ನು ಪೂರ್ತಿಗೊಳಿಸಬೇಕು, ಇದರಲ್ಲಿ …

ಕ್ರೈಸ್ತ ಭಗಿನಿಯರ ಬಂಧನ: ಮಜೀರ್ಪಳ್ಳದಲ್ಲಿ ಎಡರಂಗದಿಂದ ಪ್ರತಿಭಟನೆ

ವರ್ಕಾಡಿ: ಸುಳ್ಳು ಆರೋಪ ಹೊರಿಸಿ ಕ್ರೈಸ್ತ ಭಗಿನಿಯರನ್ನು ಜೈಲಿ ಗಟ್ಟಿದ ಛತ್ತೀಸ್‌ಘಡ್ ಬಿಜೆಪಿ ಸರಕಾರದ ವಿರುದ್ಧ ಎಡರಂಗದ ವತಿಯಿಂದ ಪ್ರತಿಭಟನಾ ಸಭೆ ಮಜೀರ್ಪಳ್ಳ ಪೇಟೆಯಲ್ಲಿ ನಡೆಸಲಾಯಿತು. ಮಂಡಲ ಅಧ್ಯಕ್ಷ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ. ಬಾಬು ಉದ್ಘಾಟಿಸಿದರು. ಸಿಪಿಐ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್, ಜೆಡಿಎಸ್ ಮುಖಂಡ ಡಾ. ಕೆ.ಎ. ಖಾದರ್, ಮೆಹಮೂದ್ ಕೈಕಂಬ, ಸಿದ್ದಿಕ್ ಕೈಕಂಬ, ಬೇಬಿ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಭಾರತಿ, ಎಸ್. ರಾಮಚಂದ್ರ ಮಾತನಾಡಿದರು. ಎಡರಂಗದ ಮಂಡಲ …

ಹೋಟೆಲ್ ಮಾಲಕ ಆಟೋ ರಿಕ್ಷಾ ಢಿಕ್ಕಿ ಹೊಡೆದು ಮೃತ್ಯು

ಉಪ್ಪಳ: ಹೋಟೆಲ್ ಮಾಲಕ ಆಟೋ ರಿಕ್ಷಾ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಕರ್ನಾಟಕದ ಪುತ್ತೂರು ಬಳಿಯ ಕೌಡಿಚ್ಚಾರು ಪಾಪೆಮಜಲು ನಿವಾಸಿ ಸುಭಾಷ್ ಕುಲಾಲ್ (50) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.    ಈ ಹಿಂದೆ  ಮಂಜೇಶ್ವರ ಬಳಿಯ ಕೋಳ್ಯೂರಿನಲ್ಲಿ ವಾಸಿಸುತ್ತಿದ್ದ ಇವರು ಮಜೀರ್ಪಳ್ಳದಲ್ಲಿ ಹೋಟೆಲ್ ನಡೆಸುತ್ತಿದ್ದರು. ಬಳಿಕ    ಕೌಡಿಚ್ಚಾರ್ ನಲ್ಲಿ ಹೋಟೆಲ್ ಆರಂಭಿಸಿದ್ದರು. ಕಳೆದ ಶುಕ್ರವಾರ ರಾತ್ರಿ ಹೋಟೆಲ್ ಮುಚ್ಚಿ ಆಟೋ ರಿಕ್ಷಾದಲ್ಲಿ ಪಾಪೆ ಮಜಲಿಗೆ ತೆರಳಿದ ಅವರು ರಿಕ್ಷಾದಿಂದಿಳಿದು ರಸ್ತೆ ದಾಟುತ್ತಿದ್ದ ವೇಳೆ ಬೇರೊಂದು ರಿಕ್ಷಾ ಅವರಿಗೆ ಢಿಕ್ಕಿ …

 ಬಾಲಕಿಯ ಮನೆಗೆ ತಲುಪಿದ ಯುವಕನನ್ನು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರ

ಮಂಜೇಶ್ವರ: ನಿಗೂಢ ಸ್ಥಿತಿಯಲ್ಲಿ  16ರ ಹರೆಯದ  ಬಾಲಕಿಯ ಮನೆಗೆ ತಲುಪಿದ ಯುವಕನನ್ನು ಮನೆಯವರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು  ಪೋಕ್ಸೋ ಕೇಸು ದಾಖಲಿಸಿ  ಯುವಕನನ್ನು ಬಂಧಿಸಿದ್ದಾರೆ.  ಮಂಗಳೂರು ಪರಂಗಿಪೇಟೆ ನಿವಾಸಿಯಾದ ಆಸಿಫ್ (29) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ನಿನ್ನೆ ಸಂಜೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ  ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಯುವಕ ಬಾಲಕಿಯ ಮನೆಗೆ ತಲುಪಿದ್ದಾನೆಂದು ತಿಳಿದ ನಾಗರಿಕರು ಮನೆಗೆ ಸುತ್ತುವರಿದಿದ್ದರು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತಲುಪಿ ಯುವಕನನ್ನು …

ಅನ್ಯಮತೀಯ ಯುವತಿಯನ್ನು ಪ್ರೀತಿಸಿದ ಯುವಕನ ಬರ್ಬರ ಕೊಲೆ

ಕೊಪ್ಪಳ: ಅನ್ಯಮತೀಯ ಯುವತಿಯನ್ನು ಪ್ರೀತಿಸಿದ ದ್ವೇಷದಿಂದ   ಯುವಕನೋರ್ವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ಕರ್ನಾಟಕದ ಕೊಪ್ಪಳ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಕೊಪ್ಪಳ ನಿವಾಸಿ ನಿಗಂಜ ಟಣಕನಲ್ ಎಂಬವರ ಪುತ್ರ ಗವಿ ಸಿದ್ಧಪ್ಪ ನಾಯ್ಕ್ 25) ಕೊಲೆಗೀಡಾದ ಯುವಕ. ಈ ಸಂಬಂಧ ಸ್ಥಳೀಯ ನಿವಾಸಿಯಾದ ಸಾದಿಕ್ ಕೋಲ್ಕರ್ ಎಂಬಾತ ಸಹಿತ ನಾಲ್ವರ ವಿರುದ್ಧ  ಕೊಪ್ಪಳ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಪೈಕಿ ಆರೋಪಿ ಸಾದಿಕ್ ಕೊಲೆಗೈದ ಬಳಿಕ ನೇರವಾಗಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. …

ಮಸೀದಿ ಆವರಣದಲ್ಲಿ ಕಾರು ಬೆಂಕಿಗಾಹುತಿಯಾದ ಘಟನೆ: ಮಾಜಿ ಸಿಬ್ಬಂದಿ ಸೆರೆ

ಬದಿಯಡ್ಕ: ಪೈಕ ಜುಮಾ ಮಸೀದಿಯ ಆವರಣದೊಳಗೆ ನಿಲ್ಲಿಸಲಾಗಿದ್ದ ಕಾರು ಬೆಂಕಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಪ್ರಸ್ತುತ ಮಸೀದಿಯಿಂದ ಈ ಹಿಂದೆ ವಜಾಗೈಯ್ಯಲಾಗಿದ್ದ ಸಿಬ್ಬಂದಿಯನ್ನು ಎಸ್‌ಐ ಉಮೇಶ್ ನೇತೃತ್ವದ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ ಮುನ್ನೂರು ನಿವಾಸಿ ಅಬೂಬಕರ್ (52) ಬಂಧಿತ ಆರೋಪಿ. ಆತನ ಮನೆಯಿಂದಲೇ ಪೊಲೀಸರು  ಬಂಧಿಸಿದ್ದಾರೆ.  ಪೈಕ ಜುಮಾ ಮಸೀದಿಯ ಇಮಾಮ್ ಹಾಗೂ ಉಸ್ತಾದ್ ಆಗಿರುವ  ಉಸ್ಮಾನ್ ರಾಸಿ ಬಾಖವಿ ಹೈಮತ್‌ನ ಕಾರನ್ನು ಅದೇ ಮಸೀದಿಯ ಆವರಣದೊಳಗೆ ಜುಲೈ31ರಂದು ಮುಂಜಾನೆ ಕಿಚ್ಚಿಡಲಾಗಿತ್ತು. ಇಮಾಂರ ನಿಕಟ ಸಂಬಂಧಿ  ಅಬ್ದುಲ್ಲ …

ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆಯ ಮೃತದೇಹ ಮನೆಯೊಳಗೆ ಪತ್ತೆ

ನೆಲ್ಲಿಕಟ್ಟೆ: ಪೈಕ ಬಾಲಡ್ಕ ಎಂಬಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದಿ| ಕೊರಗರ ಪುತ್ರಿ ಕೊರಪ್ಪಾಳು 64) ಮೃತಪಟ್ಟವರು. ಕಳೆದ ಮೂರು ದಿನಗಳಿಂದ ಇವರು ಮನೆಯಿಂದ ಹೊರಗೆ ಬಾರದ ಹಿನ್ನೆಲೆಯಲ್ಲಿ ನೆರೆಮನೆಯವರು ಬಂದು ನೋಡಿದಾಗ ಮೃತದೇಹ ಕಂಡುಬಂದಿದೆ. ಇವರ ಪತಿ ವರ್ಷಗಳ ಹಿಂದೆ ಇವರನ್ನು ಬಿಟ್ಟುಹೋಗಿದ್ದರೆನ್ನಲಾಗಿದೆ. ಸಹೋದರ ಚಂದು ಈ ಹಿಂದೆ ಮೃತಪಟ್ಟಿದ್ದಾರೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.