ರಾಜ್ಯದಲ್ಲಿ 182 ಮಂದಿಗೆ ಕೊರೋನಾ ಸೋಂಕು: ಸ್ವ ಪ್ರತಿರೋಧ ಕ್ರಮಕ್ಕೆ ಸಚಿವೆ ನಿರ್ದೇಶ

ತಿರುವಂತಪುರ: ಏಷ್ಯಾ ಖಂಡದ ಕೆಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಅದು ಕೇರಳಕ್ಕೂ ಹರಡತೊಡಗಿದೆ. ಆದ್ದರಿಂದ ಜನರು ಸ್ವಯಂ ಆಗಿ ರೋಗ ಪ್ರತಿರೋಧಕ ಕ್ರಮಗಳನ್ನು ಅನುಸರಿಸಬೇಕೆಂದು ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ. ರೋಗ ಲಕ್ಷಣವಿರುವವರು ಹಾಗೂ ಆಸ್ಪತ್ರೆಗೆ ಹೋಗುವ ಇತರರು ಮಾಸ್ಕ್ ಧರಿಸಬೇಕು. ಒಮಕ್ರಾನ್ ಜೆಎನ್-1ನ ಹೊಸ ರೂಪಾಂತರವಾದ ಎಲ್‌ಎಫ್-7 ಮತ್ತು ಎಲ್‌ಬಿ-1.8 ಇತ್ಯಾದಿ ರೋಗಗಳು ಅತೀ ಶೀಘ್ರದಲ್ಲಿ ಹರಡುತ್ತಿದೆ. ಆದರೆ ಇದು ಕಡಿಮೆ ತೀವ್ರತೆ ಹೊಂದಿದ್ದಾಗಿದೆ. ಹಿರಿಯ ನಾಗರಿಕರು, ಗರ್ಭಿಣಿಯರು, …

ಅಂಗಡಿಯಿಂದ ನಗದು ಕಳವು

ಕಾಸರಗೋಡು: ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಕಾರ್ಯವೆಸಗುತ್ತಿರುವ ಮುಸ್ತಫಾ ಆಜಾದ್ ನಗರ್ ಎಂಬವರ ಎ.ಆರ್. ಮಿನಿ ಮಾರ್ಟ್ ಎಂಬ ಅಂಗಡಿ  ಹೊರಗಡೆಯ ಗ್ರಿಲ್ಸ್ ಒಡೆದು ಒಳನುಗ್ಗಿದ ಕಳ್ಳರು 40 ಸಾವಿರ ರೂ. ನಗದು ಅಪಹರಿಸಿದ್ದಾರೆ. ಈ ಬಗ್ಗೆ ಮುಸ್ತಫಾ ಆಜಾದ್‌ನಗರ್ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಮೂರು ದಿನಗಳೊಳಗಾಗಿ ಮುಂಗಾರು ಮಳೆ ಪ್ರವೇಶ

ತಿರುವನಂತಪುರ: ಮೂರು ದಿನಗಳೊಳಗಾಗಿ ಕೇರಳಕ್ಕೆ ನೈಋತ್ಯ ಮುಂಗಾರು ಮಳೆ ಪ್ರವೇಶಿಸುವ ಸಾಧ್ಯತೆ ಇದೆಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಅರಬೀ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಇನ್ನೊಂದೆಡೆ ಬಂಗಾಳಕೊಲ್ಲಿಯ ಆಳ ಕಡಲಲ್ಲೂ ವಾಯುಭಾರ ಕುಸಿತದ ಸಾಧ್ಯತೆ ಇದೆ. ಇದರ ಪರಿಣಾಮ ಕಾಸರಗೋಡು ಸೇರಿದಂತೆ 13 ಜಿಲ್ಲೆಗಳಲ್ಲಿ ಇಂದು ಹಾಗೂ ನಾಳೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಇದರಂತೆ ಕಾಸ ರಗೋಡು ಸೇರಿದಂತೆ ಹದಿಮೂರು ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಹಾಗೂ ನಾಳೆ ಕಾಸರಗೋಡು ಹಾಗೂ …

ರಬ್ಬರ್ ತೋಟ ಮಾಲಕನಿಗೆ ಕಡಿದು ಗಾಯ: ಗುತ್ತಿಗೆದಾರ ಸೆರೆ

ಉಪ್ಪಳ: ರಬ್ಬರ್ ತೋಟದ ಮಾಲಕನಿಗೆ ತೋಟವನ್ನು ಗುತ್ತಿಗೆ ಪಡೆದ ವ್ಯಕ್ತಿ ಕಡಿದು ಗಾಯಗೊಳಿಸಿದ ಘಟನೆ ನಡೆದಿದೆ. ವರ್ಕಾಡಿ ತೋಕೆ ನಿವಾಸಿ  ಸಜಿ ಮೋನ್ ಜೋಸೆಫ್ (55) ಎಂಬವರು ಇರಿತದಿಂದ ಗಾಯ ಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಕೋಟ್ಟಯಂ ಕಾಞಿರಪಳ್ಳಿ ನಿವಾಸಿ ವರ್ಗೀಸ್ ಜೋಸೆಫ್ ಯಾನೆ ತಂಗಚ್ಚನ್ (65) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿ ದ್ದಾರೆ.  ಸಜಿ ಮೋನ್ ಜೋಸೆಫ್‌ರ ವರ್ಕಾಡಿ ತೋಕೆಯಲ್ಲಿರುವ ರಬ್ಬರ್ ತೋಟವನ್ನು ವರ್ಗೀಸ್ ಜೋಸೆಫ್ ಗೇಣಿಗೆ ಪಡೆದುಕೊಂಡಿ ದ್ದಾನೆನ್ನಲಾ ಗಿದೆ. …

ವಿವಾಹ ಭರವಸೆಯೊಡ್ಡಿ ಯುವತಿಗೆ ಕಿರುಕುಳ: ಮುಟ್ಟತ್ತೋಡಿ ನಿವಾಸಿ ವಿರುದ್ದ ಕೇಸು

ಕಾಸರಗೋಡು: ವಿವಾಹ ಭರವಸೆಯೊಡ್ಡಿ ಕಣ್ಣೂರು ನಿವಾಸಿಯಾದ 24ರ ಹರೆಯದ ಯುವತಿಯನ್ನು ವಿವಿಧೆಡೆಗಳ ಲಾಡ್ಜ್‌ಗಳಿಗೆ ತಲುಪಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಂತೆ ಮುಟ್ಟತ್ತೋಡಿಯ ಅಬ್ದುಲ್ ಅಜ್ಮಲ್ (25) ಎಂಬಾತನ ವಿರುದ್ದ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 2023 ಜೂನ್ 4ರಿಂದ 2025 ಜನವರಿ ವರೆಗೆ ಅಜ್ಮಲ್ ಯುವತಿಗೆ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಮೊದಲಾದೆಡೆಗಳಿಗೆ ಕರೆದೊಯ್ದು ಲಾಡ್ಜ್‌ಗಳಲ್ಲಿ ಯುವತಿಗೆ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಮದುವೆ ಭರವಸೆಯೊಡ್ಡಿ ಕಿರುಕುಳ ನೀಡಿರುವುದಾಗಿಯೂ, ಆದರೆ ಅನಂತರ ಮದುವೆಯಾಗದೆ …

ಯುವತಿಗೆ ಲೈಂಗಿಕ ದೌರ್ಜನ್ಯಗೈದು ದೃಶ್ಯಗಳನ್ನು ಸ್ನೇಹಿತನಿಗೆ ಕಳುಹಿಸಿಕೊಟ್ಟ ಪ್ರಕರಣ: ಗಲ್ಫ್‌ಗೆ ಪರಾರಿಯಾದ ಆರೋಪಿ ಬಂಧನ

ಕಾಸರಗೋಡು: ಪ್ರೀತಿಯ ನಾಟಕವಾಡಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಬಳಿಕ ಗಲ್ಫ್‌ಗೆ ಪರಾರಿಯಾಗಿ, ಕಿರುಕುಳ ದೃಶ್ಯಗಳನ್ನು ಯುವತಿಯ ಸ್ನೇಹಿತನಿಗೆ ಕಳುಹಿ ಸಿಕೊಟ್ಟ ಪ್ರಕರಣದ ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಸೆರೆ ಹಿಡಿಯಲಾಗಿದೆ. ವೆಸ್ಟ್  ಎಳೇರಿ ಬೇರ್ಕಯ ಆಲಕ್ಕೋಡ್‌ನ ಹೌಸ್‌ನ  ಜಯಕೃಷ್ಣನ್ ಎಂಬಾತನನ್ನು ವೆಳ್ಳರಿಕುಂಡ್ ಪೊಲೀಸ್ ಇನ್ಸ್‌ಪೆಕ್ಟರ್ ಟಿ. ಮುಕುಂದನ್ ಹಾಗೂ ತಂಡ ಸೆರೆ ಹಿಡಿದಿದೆ. ೨೦೨೪ ಮಾರ್ಚ್ ತಿಂಗಳಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಬಳಿಕ ಜಯಕೃಷ್ಣನ್ …

27,170ಪ್ಯಾಕೆಟ್ ತಂಬಾಕು ಉತ್ಪನ್ನ ವಶ ಇಬ್ಬರ ವಿರುದ್ಧ ಕೇಸು

ಕಾಸರಗೋಡು: ಕೂಡ್ಲು ಚೌಕಿಯ ಪೆಟ್ರೋಲ್ ಬಂಕ್ನ ಬಳಿ ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆ ಯಲ್ಲಿ ವಾಹನವೊಂದರಲ್ಲಿ ಸಾಗಿಸುತ್ತಿದ್ದ ಕೇರಳದಲ್ಲಿ ನಿಷೇಧ ಹೇರಲಾಗಿರುವ 27,170 ಪ್ಯಾಕೆಟ್ ತಂಬಾಕು ಉತ್ಪನ್ನವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿ ದ್ದಾರೆ. ಇದಕ್ಕೆ ಸಂಬAಧಿಸಿ ಮಧೂರು ಹಿದಾಯತ್ನಗರ ಚೆಟ್ಟುಂಗುಯಿಯ ಅಬ್ದುಲ್ ಹಾರೀಸ್ ಎಂ. (32), ಕಾಸರಗೋಡು ನೆಲ್ಲಿಕುಂಜೆ ಪಡಾರ್ ಹೌಸ್ನ ಉಮರುಲ್ ಫಾರೂಕ್ ಎನ್.ವಿ. (39) ಎಂಬವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಪಾನ್‌ಮಸಾಲೆ ಸಹಿತ ಓರ್ವ ಸೆರೆ

ಉಪ್ಪಳ: ಪಾನ್ ಮಸಾಲೆ ಸಹಿತ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಜೀರ್‌ಪಳ್ಳ ಧರ್ಮನಗರದ ಉಮ್ಮರ್ ಫಾರೂಕ್ ಕಲ್ಲೂರು (39) ಎಂಬಾತನನ್ನು ಬಂಧಿಸಲಾಗಿದೆ.  ನಿನ್ನೆ ರಾತ್ರಿ 7.30ಕ್ಕೆ ಮಂಜೇಶ್ವರ ಎಸ್‌ಐ ರತೀಶ್ ನೇತೃತ್ವದ ಪೊಲೀಸರು ಮಜೀರ್‌ಪಳ್ಳ ಬಸ್ ನಿಲ್ದಾಣ ಬಳಿ ಗಸ್ತು ತಿರುಗುತ್ತಿದ್ದಾಗ ಉಮ್ಮರ್ ಫಾರೂಕ್ ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದಿದ್ದನು. ಆತನ ಕೈಯಲ್ಲಿದ್ದ ಚೀಲವನ್ನು ಪರಿಶೀಲಿಸಿದಾಗ ೪೮ ಪ್ಯಾಕೆಟ್ ಪಾನ್‌ಮಸಾಲೆ ಪತ್ತೆಯಾಗಿದೆ.

ನಿರ್ಮಾಣ ಹಂತದಲ್ಲಿದ್ದ ವೇಳೆಯಲ್ಲೇ ಕುಸಿದ ರಾಷ್ಟ್ರೀಯ ಹೆದ್ದಾರಿ: ಕಟ್ಟುನಿಟ್ಟಿನ ಕ್ರಮ ಕೈಗೊಂಡ ಕೇಂದ್ರ ಸರಕಾರ: ಇಂಜಿನಿಯರ್ ಅಮಾನತು

ತಿರುವನಂತಪುರ: ಮಲಪ್ಪುರಂ ಕುರಿಯೋಟ್‌ನಲ್ಲಿ ಅಂತಿಮ ಹಂತದ ನಿರ್ಮಾಣ ಕೆಲಸ ನಡೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಕುಸಿದು ಬಿದ್ದ ಘಟನೆಗೆ ಸಂಬಂಧಿಸಿ ಕೇಂದ್ರ ಭೂ ಸಾರಿಗೆ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಇದರಂತೆ ಪ್ರಸ್ತುತ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸದ ಗುತ್ತಿಗೆ ವಹಿಸಿಕೊಂಡಿದ್ದ ಕೆ.ಎಸ್.ಆರ್ ಕನ್‌ಸ್ಟ್ರಕ್ಷನ್ ಕಂಪೆನಿ ಲಿಮಿಟೆಡ್ ಹಾಗೂ ಕನ್ಸಲ್ಟೇನ್ಸಿ ಪಡೆದಿದ್ದ ಹೈವೇ ಇಂಜಿನಿಯರ್‌ಗೆ ಕನ್ಸಲ್ಟೆನ್ಸಿಯನ್ನು ಉಚ್ಛಾಟಿಸಲಾಗಿದೆ ಮಾತ್ರವಲ್ಲ ಇದರ ಗುತ್ತಿಗೆ ಸಂಸ್ಥೆಯ ಪ್ರೊಜೆಕ್ಟ್ ಮೆನೇಜರ್ ಎಂ. ಅಮರನಾಥ್ ರೆಡ್ಡಿ ಮತ್ತು ಕನ್ಸಲ್ಟೆಂಟ್ ಟೀಂ ಲೀಡರ್  …

ವ್ಯಕ್ತಿ ನಾಪತ್ತೆ

ಕುಂಬಳೆ: ಇಲ್ಲಿಗೆ ಸಮೀಪದ ಎಡನಾಡು ಸೂರಂಬೈಲು ಜಿ.ಕೆ. ನಗರದ ಪುರುಷೋತ್ತಮನ್ (52) ಎಂಬವರು ನಾಪತ್ತೆಯಾಗಿರುವುದಾಗಿ ಪುತ್ರ ಭರತ್‌ರಾಜ್ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಫೆ. 4ರಂದು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಹೊರಹೋದ ಪುರುಷೋತ್ತಮನ್  ಬಳಿಕ ಹಿಂತಿರುಗದೆ ನಾಪತ್ತೆಯಾ ಗಿರುವುದಾಗಿ ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.