ಪೆರಿಯ ಬಳಿ ತ್ಯಾಜ್ಯ ಹೊಂಡದಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ: ಸ್ಥಳದಿಂದ ನಾಪತ್ತೆಯಾದ ಯುವಕರು ಹೈದರಾಬಾದ್‌ನಲ್ಲಿ
ಕಾಸರಗೋಡು: ಪೆರಿಯ ನವೋದಯ ನಗರದಲ್ಲಿ ನಿರ್ಮಾಣ ಹಂತದ ಸರ್ವೀಸ್ ಸ್ಟೇಷನ್‌ನ ತ್ಯಾಜ್ಯ ಹೊಂಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಒಡಿಶ್ಶಾ ನಿವಾಸಿ ಡೆಂಬು (37) ಎಂಬವರೆಂದು ಗುರುತು ಹಚ್ಚಲಾಗಿದೆ. ಬೇಕಲ ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಬಗ್ಗೆ ತಿಳಿದು ಬಂದಿದೆ. ಮೃತದೇಹ ಡೆಂಬುರದ್ದೇ ಆಗಿದೆ ಎಂದು ವೈಜ್ಞಾನಿಕವಾಗಿ ಖಚಿತಪಡಿ ಸಲು ಡಿಎನ್‌ಎ ತಪಾಸಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಇದಕ್ಕಾಗಿ ಮೃತವ್ಯಕ್ತಿಯ ಮಗನನ್ನು ಬೇಕಲಕ್ಕೆ ಬರುವಂತೆ ತಿಳಿಸಲಾಗಿದೆ. ಮೇ 16ರಂದು ನವೋದಯ ನಗರದಲ್ಲಿ ನಿರ್ಮಾಣ ಹಂತದ ಸರ್ವೀಸ್ ಸ್ಟೇಷನ್‌ನ …