5 ದಿನದ ಹಿಂದೆ ನಾಪತ್ತೆಯಾಗಿದ್ದ ಬಾಲಕ ಪತ್ತೆ

ಮಲಪ್ಪುರಂ: ಕಳೆದ 5 ದಿನದ ಹಿಂದೆ ಕಾರಿನಲ್ಲಿ ಬಂದು ಅಪಹರಿಸಿಕೊಂಡು ಹೋದ ಬಳಿಕ ನಾಪತ್ತೆಯಾಗಿದ್ದ ಬಾಲಕನನ್ನು ಪತ್ತೆಹಚ್ಚಲಾಗಿದೆ. ಮಲಪ್ಪುರಂ ಕೊಂಡೋಟಿಯಿಂದ ಇಂದು ಬೆಳಿಗ್ಗೆ ಅನ್ನೂಸ್ ರೋಶನ್‌ನನ್ನು ಪತ್ತೆಹಚ್ಚಲಾಗಿದೆ.  ಕೊಂಡೋಟಿಯಿಂದ ಈ ಬಾಲಕನನ್ನು ಅಪಹರಿಸಲಾಗಿತ್ತು. ಬಾಲಕ ತಂದೆ ರಶೀದ್‌ರಲ್ಲಿ ಫೋನ್‌ನ ಮೂಲಕ ಮಾತನಾಡಿದ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

ನಿರ್ಗತಿಕ ಕುಟುಂಬಕ್ಕೆ ಬಿಎಂಎಸ್‌ನಿಂದ ಮನೆ ಹಸ್ತಾಂತರ

ಕಾಸರಗೋಡು: ಕುಟುಬದ ಆಧಾರಸ್ತಂಭವಾಗಿದ್ದ ಎರಡು ಮಕ್ಕಳನ್ನು ಕಳೆದುಕೊಂಡು ನಿರ್ಗತಿಕರಾದ ತಾಯಿ ಹಾಗೂ ಪುತ್ರಿಗೆ ‘ಮಾನವ ಸೇವಾ ಮಾಧವ ಸೇವಾ’ ಎಂಬ ಆಪ್ತ ವಾಕ್ಯದಂತೆ ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕೂಡ್ಲು ಪಚ್ಚಕ್ಕಾಡ್‌ನಲ್ಲಿ ನಿರ್ಮಿಸಿದ ಮನೆಯ ಕೀಲಿ ಕೈಯನ್ನು ವೀಣಾ ಕುಮಾರಿ ಹಾಗೂ ಪುತ್ರಿಗೆ ಹಸ್ತಾಂತರಿಸ ಲಾಯಿತು.  ಆರ್‌ಎಸ್‌ಎಸ್ ಜಿಲ್ಲಾ ಸಂಘ್ ಚಾಲಕ್ ಪ್ರಭಾಕರನ್ ಕೀಲಿಕೈ ಹಸ್ತಾಂತರಿಸಿದರು. ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಆರ್.ಪಿ. ಮುರಳೀಧರನ್, ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ, ಕಾರ್ಯದರ್ಶಿ …

ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಭಾರತವನ್ನು ತಲುಪಿಸಿದ ಆಡಳಿತಾಧಿಕಾರಿ ರಾಜೀವ್ ಗಾಂಧಿ- ಉಣ್ಣಿತ್ತಾನ್

ಕಾಸರಗೋಡು: 21ನೇ ಶತಮಾನ ದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಜೊತೆ ವಿಜ್ಞಾನ, ತಾಂತ್ರಿಕ ರಂಗದಲ್ಲಿ ಹಾಗೂ ಶಿಕ್ಷಣ ರಂಗದಲ್ಲಿ ನೂತನ ಹಾಗೂ ವಿಶಾಲವಾದ ದೃಷ್ಟಿಕೋನ ದೊಂದಿಗೆ ಭಾರತವನ್ನು ಮುನ್ನಡೆಸಿದ ಆಡಳಿತಾಧಿಕಾರಿಯಾಗಿದ್ದಾರೆ ಮಾಜಿ ಪ್ರಧಾನಮಂತ್ರಿ ದಿ| ರಾಜೀವ್ ಗಾಂಧಿ ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅಭಿಪ್ರಾಯಪಟ್ಟರು. ಅವರ ತೀಕ್ಷ್ಣವಾದ ದೃಷ್ಟಿಕೋನದ ಪೂರ್ತೀಕರಣದ ಫಲವಾಗಿ  ಭಾರತ ದಲ್ಲಿ ಕೈಗಾರಿಕೆಗಳು ಅಭಿವೃದ್ಧಿ ಹೊಂ ದಿವೆ. ಕ್ರೀಡಾರಂಗದಲ್ಲಿ ವಿಶ್ವದರ್ಜೆಯ ಮೈದಾನಗಳು ಸೃಷ್ಟಿಯಾಯಿತು ಎಂದು ನುಡಿದರು. ಪ್ರಜಾಪ್ರಭುತ್ವವನ್ನು ಬಲಪಡಿಸುವುದರಂಗವಾಗಿ ಅಧಿಕಾರ ವಿಕೇಂದ್ರೀಕರಣಕ್ಕೆ ನಾಂದಿ …

ಕುಂಬಳೆಯ ಟೋಲ್‌ಗೇಟ್: ಸಿಪಿಐ ವಿರೋಧ

ಕುಂಬಳೆ: ಕೇವಲ 18 ಕಿಲೋ ಮೀಟರ್ ಅಂತರದಲ್ಲಿ ಟೋಲ್ ಗೇಟ್ ನಿರ್ಮಿಸುವುದು ಅವೈಜ್ಞಾನಿಕ ಹಾಗೂ ಕೇಂದ್ರ ಸರಕಾರದ ಆದೇಶದ ಸ್ಪಷ್ಟ ಉಲ್ಲಂಘನೆ ಎಂದು ಸಿಪಿಐ ತಿಳಿಸಿದೆ. ಕುಂಬಳೆಯಲ್ಲಿ ಟೋಲ್ ಗೇಟ್ ನಿರ್ಮಾಣ ಯತ್ನವನ್ನು ಸಿಪಿಐ ಮಂಜೇಶ್ವರ ಮಂಡಲ ಸಮ್ಮೇಳನ ಖಂಡಿಸಿದೆ. 60 ಕಿಲೋ ಮೀಟರ್ ಅಂತರದಲ್ಲಿ ಟೋಲ್ ಗೇಟ್ ಇರಬೇಕೆಂಬ ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಆದೇಶವನ್ನು ಉಲ್ಲಂಘಿಸಿ ಕುಂಬಳೆಯಲ್ಲಿ ಟೋಲ್ ಗೇಟ್ ನಿರ್ಮಿಸುತ್ತಿರುವುದು ಜನತೆಯ ಮುಗ್ದತೆಯ ಮೇಲೆ ನಡೆಸುವ ಸವಾರಿ ಎಂದು ಸಿಪಿಐ ದೂರಿದೆ. ಪೈವಳಿಕೆ …

ಆಸಿಫ್ ಅಸಹಜ ಸಾವು: ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಸಭೆ ನಾಳೆ

ಬಾಯಾರು : ಬಾಯಾರು ಗಾಳಿಯಡ್ಕದ ಟಿಪ್ಟರ್ ಚಾಲಕ ಮೊಹಮ್ಮದ್ ಆಸೀಫ್‌ರ ಅಸಹಜ ಸಾವಿನ ಬಗ್ಗೆ ಜಿಲ್ಲಾ ಕ್ರೈಂಬ್ರಾAಚ್  ನಡೆಸುತ್ತಿರುವ ತನಿಖೆಯಲ್ಲಿ ಜನರಿಗಿರುವ ಸಂಶಯ ದೂರೀಕರಿಸಲು ಹಾಗೂ ತನಿಖೆ ತ್ವರಿತಗೊಳಿಸಲು ಆಸೀಫ್‌ರ ಕುಟುಂಬಕ್ಕೆ ಸಹಾಯಧನ ಒದಗಿಸಲು ಸರಕಾರ ತಯಾರಾಗಬೇಕೆಂದು ಒತ್ತಾಯಿಸಿ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಾಳೆ ಸಂಜೆ 4 ಗಂಟೆಗೆ ಬಾಯಾರು ಪದವಿನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರದೀಪ್ ಕುಮಾರ್ ಭಾಗವಹಿಸುವರು ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ತಿಳಿಸಿದೆ.

ಕೇಂದ್ರ -ಕೇರಳ ವಿ.ವಿಯಲ್ಲಿ ಪಿಜಿ ಪ್ರವೇಶಕ್ಕೆ ನೋಂದಾವಣೆ ಆರಂಭ

ಕಾಸರಗೋಡು: ಕೇರಳ- ಕೇಂದ್ರ ವಿವಿಯಲ್ಲಿರುವ ವಿವಿಧ ಸ್ನಾತಕೋತ್ತರ  ಪದವಿ ಕೋರ್ಸ್‌ಗಳ ಪ್ರವೇಶಾತಿಗೆ ನೋಂದಾವಣೆ ಆರಂಭಗೊಂಡಿದೆ. ಜೂನ್ 2ರವರೆಗೆ ವಿವಿಯ ವೆಬ್‌ಸೈಟ್ ಸಂದರ್ಶಿಸಿ ನೋಂದಾಯಿಸಬಹುದು. ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೇಶನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸಿದ ಸಾರ್ವಜನಿಕ ಪ್ರವೇಶ ಪರೀಕ್ಷೆ (ಸಿಯುಇಟಿ- ಪಿಜಿ)ಯಲ್ಲಿ ಭಾಗವಹಿಸಿದವರು ನೋಂದಾಯಿಸಬೇಕಾಗಿದೆ. ನೋಂದಾಯಿಸಬೇಕಾಗಿರುವುದು. ಜೂನ್ 10ರಂದು ರ‍್ಯಾಂಕ್ ಪ್ರಕಟಿಸಲಾಗಿದೆ. ನೋಂದಾಯಿತ ವಿದ್ಯಾರ್ಥಿಗಳಿಗೆ ಅಂದೇ ಇ-ಮೇಲ್ ಮೂಲಕ ಸೂಚನೆ ಲಭಿಸುವುದು. ಆಸಕ್ತರು ಜೂನ್ 12ರ ಒಳಗೆ ಇ-ಮೇಲ್ ಖಚಿತತೆ ನಡೆಸಬೇಕು. ಜೂನ್ …

ರಾಜ್ಯ ಮಟ್ಟದ ಪ್ರಥಮ ಜರ್ನಲಿಸ್ಟ್ ಹಗ್ಗ ಜಗ್ಗಾಟ: ಮಲಪ್ಪುರಂ ಪ್ರೆಸ್‌ಕ್ಲಬ್ ಚಾಂಪಿಯನ್

ಕಾಸರಗೋಡು: ಕೇರಳ  ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಟನೆ (ಕೆಯುಡಬ್ಯುಜೆ) ಇದರ ಆಶ್ರಯದಲ್ಲಿ ಬೋಬಿ ಇಂಟರ್‌ನೇ ಶನಲ್ ಗ್ರೂಪ್‌ನ ಸಹಕಾರದೊಂದಿಗೆ ಕಾಸರಗೋಡು ಪ್ರೆಸ್‌ಕ್ಲಬ್ ಬಳಿ ನಿನ್ನೆ ನಡೆದ ರಾಜ್ಯಮಟ್ಟದ ಪ್ರಥಮ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಲಪ್ಪುರಂ ಪ್ರೆಸ್‌ಕ್ಲಬ್ ಚಾಂಪಿಯನ್ ಶಿಪ್ ಪಡೆದಿದೆ. ಕಣ್ಣೂರು ಪ್ರೆಸ್‌ಕ್ಲಬ್ ರನ್ನರ್ ಆಫ್ ಸ್ಥಾನ ಪಡೆದುಕೊಂಡರೆ ದ್ವಿತೀಯ ರನ್ನರ್ ಆಫ್ ಪ್ರಶಸ್ತಿಯನ್ನು ಕೆಯುಡಬ್ಲ್ಯುಜೆಯ ರಾಜ್ಯ ತಂಡ  ಹಾಗೂ ತೃತೀಯ ರನ್ನರ್ ಆಫ್ ಸ್ಥಾನವನ್ನು  ಪತ್ತನಂತಿಟ್ಟ ಪ್ರೆಸ್ ಕ್ಲಬ್ ಪಡೆದಿದೆ. ನಿನ್ನೆ ಸಂಜೆ 5 ಗಂಟೆಗೆ ಆರಂಭಗೊಂಡ  …

ಪಾಕಿಸ್ತಾನ ಪರ ಬೇಹುಗಾರಿಕೆ: ಜ್ಯೋತಿ ಮಲ್ಹೋತ್ರ ಕಾಸರಗೋಡು ಸಂದರ್ಶನದ ಬಗ್ಗೆ ಶಂಕೆ; ಸಮಗ್ರ ತನಿಖೆ ಆರಂಭ

ಕಾಸರಗೋಡು: ಭಾರತದ ಶತ್ರು ದೇಶವಾದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಂತೆ ಬಂಧಿತಳಾಗಿರುವ ಹರ್ಯಾಣ ಮೂಲದ ಯೂ ಟ್ಯೂಬರ್ ಜ್ಯೋತಿ ಮಲ್ಹೋತ್ರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯ ಉದ್ಘಾಟನೆ ವೇಳೆ ಕಾಸರಗೋಡಿಗೂ ಬಂದಿದ್ದಳೆಂಬ  ಶಂಕೆ ಹರ್ಯಾಣ ಪೊಲೀಸರಿಗೆ ಲಭಿಸಿದೆ. 2023ರಲ್ಲಿ ಜ್ಯೋತಿ ಮಲ್ಹೋತ್ರ ಮೊತ್ತ ಮೊದಲಾಗಿ ಕೇರಳ ಸಂದರ್ಶಿಸಿದ್ದು, ಆ ಬಳಿಕ ಮೂರು ಬಾರಿ ಆಕೆ ಇಲ್ಲಿಗೆ ಸಂದರ್ಶಿಸಿದ್ದಳು. ಕೇರಳ ಸಂದರ್ಶನದ ವೀಡಿಯೋ ದೃಶ್ಯಗಳನ್ನು ಆಕೆ ತನ್ನ ಯೂ ಟ್ಯೂಬ್ ಚ್ಯಾನೆಲ್‌ನಲ್ಲೂ ಹಂಚಿಕೊಂಡಿದ್ದಳು. 2023 ಅಗೋಸ್ತ್‌ನಲ್ಲಿ ಜ್ಯೋತಿ …

ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬೆಳ್ಳೂರು: ಖಾಸಗಿ ವ್ಯಕ್ತಿಯ ರಬ್ಬರ್ ತೋಟದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಯುವಕನ  ಮೃತದೇಹ ಪತ್ತೆಯಾ ಗಿದೆ. ನೆಟ್ಟಣಿಗೆ ನಾಕೂರಿನ ದಿ| ಜಯರಾಮ ಎಂಬವರ ಪುತ್ರ ಚಂದ್ರಶೇಖರ (27) ಮೃತಪಟ್ಟ ವ್ಯಕ್ತಿ. ನಿನ್ನೆ ಅಪರಾಹ್ನ ಮನೆಯಿಂದ ಅರ್ಧ ಕಿಲೋ ಮೀಟರ್ ದೂರ ದಲ್ಲಿರುವ ರಬ್ಬರ್ ಮರವೊಂದರಲ್ಲಿ ಇವರ ಮೃತದೇಹ ಪತ್ತೆಯಾಗಿದೆ.  ವಿಷಯ ತಿಳಿದು ಆದೂರು ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹದ ಮಹಜರು ನಡೆಸಿದರು.  ಮೃತರು ತಾಯಿ ರಾಜೀವಿ, ಸಹೋದರ ಸೂರಜ್ ಹಾಗೂ ಅಪಾರ ಬಂಧ-ಮಿತ್ರರನ್ನು ಅಗಲಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಿಂದ ಕುಂಬಳೆ ಪೇಟೆಗೆ ಸಂಪರ್ಕ ಕಡಿತ: ಸರ್ವೀಸ್ ರಸ್ತೆಯಲ್ಲೇ ಸಂಚರಿಸಲು ಸೂಚನೆ; ಹೆಚ್ಚಿದ ಸಮಸ್ಯೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯಿಂದ ಕುಂಬಳೆ ಪೇಟೆಗೆ ಸಂಪರ್ಕ ಕಡಿತಗೊಳಿಸಲಾಗಿದ್ದು, ಇದರಿಂದ  ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಕುಂಬಳೆ ಪೇಟೆಗೆ ಸಂಪರ್ಕ ಕಡಿತಗೊಳಿಸಿದ ಬಗ್ಗೆ ತಿಳಿಸಿ ಫ್ಲೆಕ್ಸ್ ಸ್ಥಾಪಿಸಲಾಗಿದೆ. ತಲಪ್ಪಾಡಿ ಭಾಗದಿಂದ ಬರುವ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಬಳಿಯಿಂದ  ಕುಂಬಳೆ ಪೇಟೆಗೆ ಪ್ರವೇಶಿಸಬೇಕು. ಅದೇ ರೀತಿ ಕಾಸರಗೋಡಿನಿಂದ ಬರುವ ವಾಹನಗಳು  ದೇವಿನಗರದ ಸರ್ವೀಸ್ ರಸ್ತೆಯಿಂದ ರೈಲು ನಿಲ್ದಾಣ ಬಳಿಯ ಅಂಡರ್ ಪಾಸೇಜ್‌ನ ಮೂಲಕ ತೆರಳುವಂತೆ  ತಿಳಿಸಲಾಗಿದೆ. ಆದರೆ …