ಮುಳ್ಳೇರಿಯ: ಹಿರಿಯ ಜವುಳಿ ವ್ಯಾಪಾರಿ ನಿಧನ

ಮುಳ್ಳೇರಿಯ: ಮುಳ್ಳೇರಿಯ ಪೇಟೆಯಲ್ಲಿ ಸುಮಾರು 48 ವರ್ಷಗಳ ಕಾಲ ಜವುಳಿ ವ್ಯಾಪಾರಿಯಾಗಿದ್ದ ಕಜಮುಂಡ ವಿಶ್ವನಾಥ ರೈ (73) ನಿಧನ ಹೊಂದಿದರು. ಬಂಟರ ಸಂಘದ ಆದೂರು ವಲಯ ಘಟಕ ಮಾಜಿ ಅಧ್ಯಕ್ಷರಾಗಿದ್ದರು. ಅಸೌಖ್ಯ ನಿಮಿತ್ತ ಕೆಲವು ವರ್ಷಗಳಿಂದ ಮುಳ್ಳೇರಿಯ ವಿವೇಕಾನಂದ ನಗರದಲ್ಲಿರುವ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಮೃತರು ಪತ್ನಿ ಶಾಂತಾ ವಿ ರೈ, ಮಕ್ಕಳಾದ ಸಂತೋಷ್ ರೈ, (ಮುಳ್ಳೇರಿಯದಲ್ಲಿ ಜವುಳಿ ವ್ಯಾಪಾರಿ), ಸನತ್ (ಬೆಂಗಳೂರಿನಲ್ಲಿ ಇಂಜಿನಿಯರ್), ಸೊಸೆಯಂದಿರಾದ ಅಶ್ವಿನಿ, ಪ್ರತಿಭಾ, ಸಹೋದರ ವಿಠಲ ರೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಗೋವಾ ಮದ್ಯ ಸಹಿತ ಓರ್ವ ಸೆರೆ

ಕಾಸರಗೋಡು: ನಗರದ ಹಳೆ ಬಸ್ ನಿಲ್ದಾಣದ ಪರಿಸರದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ  ಸಾಗಿಸುತ್ತಿದ್ದ 180 ಎಂ.ಎಲ್‌ನ 13 ಬಾಟಲಿ ಗೋವಾ ಮದ್ಯ ವಶಪಡಿ ಸಲಾಗಿದೆ. ಕೂಡ್ಲು ಕೋಟೆವಳಪ್ಪಿನ ಅಪ್ಪುಟ್ಟು ಅಲಿಯಾಸ್ ಸಂಜಯ್ ಕುಮಾರ್ ಎಂಬಾತನನ್ನು ಇದಕ್ಕೆ ಸಂಬಂಧಿಸಿ ಬಂಧಿಸಲಾಗಿದೆ.  ಕಾಸರ ಗೋಡಿನ ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್  ಇನ್‌ಸ್ಪೆಕ್ಟರ್ (ಗ್ರೇಡ್) ಸಿಕೆವಿ ಸುರೇಶ್ ನೇತೃತ್ವದಲ್ಲಿ ಪ್ರಿವೆಂಟೀವ್ ಆಫೀಸರ್ ನೌಶಾದ್ ಕೆ, ಸಿವಿಲ್ ಎಕ್ಸೈಸ್ ಆಫೀಸರ್ ಅತುಲ್ ಟಿ.ವಿ ಎಂಬವರನ್ನೊಳಗೊಂಡ ಅಬಕಾರಿ ತಂಡ …

ಇಬ್ಬರು ಯುವತಿಯರು ನಾಪತ್ತೆ

ಕಾಸರಗೋಡು: ನೀಲೇಶ್ವರ, ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಯುವತಿಯರು ನಾಪತ್ತೆಯಾದ ಬಗ್ಗೆ ದೂರಲಾಗಿದೆ.  ಎರಡು ಘಟನೆಗಳಿಗೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕರಿಂದಳ  ಕೀಳ್‌ಮಾಲ  ಕುರುವಾಟ್ ಹೌಸ್‌ನ ಐಶ್ವರ್ಯ (29) ಎಂಬಾಕೆ ನಿನ್ನೆ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದಾಳೆ. ಬೆಳಿಗ್ಗೆ 10 ಗಂಟೆಗೆ ನೀಲೇಶ್ವರ ತಳಿಯಿಲ್ ಕ್ಷೇತ್ರಕ್ಕೆ ಹೋಗುವುದಾಗಿ ತಿಳಿಸಿ ಐಶ್ವರ್ಯ ತನ್ನ ಸ್ಕೂಟರ್‌ನಲ್ಲಿ ಮನೆಯಿಂದ ತೆರಳಿರುವುದಾಗಿ ತಂದೆ ಕೆ. ಕೃಷ್ಣನ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.  ಈ ಬಗ್ಗೆ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ …

ಸುಪ್ರೀಂಕೋರ್ಟ್‌ನಲ್ಲಿ ವಕ್ಫ್ ಪ್ರಕರಣದ ವಿಚಾರಣೆ ಇಂದಿನಿಂದ

ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆ 2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿ ರುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಇಂದಿನಿಂದ ಆರಂಭ ಗೊಳ್ಳಲಿದೆ.  ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಕ್‌ರನ್ನೊಳಗೊಂಡ ಸುಪ್ರೀಂಕೋರ್ಟ್‌ನ ವಿಭಾಗಿಯ ಪೀಠದಲ್ಲಿ ಇದರ ವಿಚಾರಣೆ ನಡೆಯಲಿದೆ.  ಈ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಂತರ ಆದೇಶಗಳನ್ನು ಹೊರಡಿಸುವ ಸಾಧ್ಯತೆಯೂ ಇದೆ. ಮೇ 15ರಂದು ವಿಚಾರಣೆ ಆರಂಭಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ನಂತರ ಅದನ ಸುಪ್ರೀಂಕೋರ್ಟ್ ಇಂದಿಗೆ ಮುಂದೂಡಿತ್ತು. ನ್ಯಾಯಾಲಯಗಳು ವಕ್ಫ್ ಎಂದು ಘೋಷಿಸಿದ …

ಏಷ್ಯಾದಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ ಸೋಂಕು: ಭಾರತದಲ್ಲ್ಲಿ ಜಾಗ್ರತಾ ನಿರ್ದೇಶ

ನವದೆಹಲಿ: 2019-20 ರಲ್ಲಿ ಇಡೀ ಜಗತ್ತನ್ನೇ ತಲ್ಲಣ ಗೊಳಿಸಿದ್ದ ಕೊರೊನಾ ಮಹಾಮಾರಿ ಸೋಂಕು ಇದೀಗ ಮತ್ತೆ ವಕ್ಕರಿಸಿದೆ. ಈಗಾಗಲೇ ಸಿಂಗಾಪೂರ್, ಹಾಂಕಾಂಗ್, ಚೀನಾದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅಲ್ಲದೆ ಭಾರತಕ್ಕೂ  ಸೋಂಕು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕೇಂದ್ರ ಆರೋಗ್ಯ ಸಚಿವಾಲಯ ಸಂಬಂಧಪಟ್ಟವರೊಂದಿಗೆ ಈಗಾಗಲೇ ಮಹತ್ವದ ಸಭೆ ನಡೆಸಿ ಅಗತ್ಯದ ಮುಂಜಾಗ್ರತಾ ಕ್ರಮಗಳಿಗೆ ನಿರ್ದೇಶ ನೀಡಿದೆ. ರಾಷ್ಟ್ರೀಯ ರೋಗನಿಯಂತ್ರಣ ಕೇಂದ್ರ, ತುರ್ತು ವೈದ್ಯಕೀಯ ಪರಿಹಾರ ವಿಭಾಗ, ವಿಪತ್ತು ನಿರ್ವಹಣಾ ಕೋಶ, ಸಂಶೋಧನಾ ಮಂಡಳಿಯ ಅಧಿಕಾರಿಗಳೊಂದಿಗೆ ಭಾರತೀಯ …

ಆಟವಾಡಲು ಮನೆಯಿಂದ ಹೋದ ಇಬ್ಬರು ಬಾಲಕರು ನಾಪತ್ತೆ

ಕಾಸರಗೋಡು: ಆಟವಾಡ ಲೆಂದು ಮನೆಯಿಂದ ಹೊರಕ್ಕೆ ಹೋದ ಬಾಲಕರಿಬ್ಬರು ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ಚೆಂಗಳ ಮುಟ್ಟತ್ತೋಡಿಯ ಎರ್ಮಾಳಂನ ಹಾಗೂ ತೈವಳಪ್ ವಲಿಯಮೂಲೆ ನಿವಾಸಿಗಳಾದ 14 ಮತ್ತು 15 ವರ್ಷ ಪ್ರಾಯದ ಬಾಲಕರಿಬ್ಬರು ನಾಪತ್ತೆಯಾದವರು. ನಿನ್ನೆ ಸಂಜೆ 4.30ಕ್ಕೆ ಹೊರಗಡೆ ಆಟಕ್ಕೆಂದು ಹೋಗುವುದಾಗಿ ತಿಳಿಸಿ ಈ ಬಾಲಕರು ಮನೆಯಿಂದ ಹೋಗಿದ್ದಾರೆ. ಅನಂತರ ಅವರು ಮನೆಗೆ ಹಿಂತಿರುಗಿಲ್ಲವೆಂದು ಮಕ್ಕಳ ಹೆತ್ತವರ ಪೈಕಿ ಒಬ್ಬರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಶೋಧ ಆರಂಭಿಸಿದ್ದಾರೆ.

ಸೈಕಲ್ ಚೈನ್ ಕಾಲಿಗೆ ಸಿಲುಕಿ ಒದ್ದಾಡುತ್ತಿದ್ದ ಬಾಲಕನನ್ನು ರಕ್ಷಿಸಿದ ಅಗ್ನಿಶಾಮಕದಳ

ಕಾಸರಗೋಡು: ಸೈಕಲ್ ಚಲಾಯಿಸುವ ವೇಳೆ ಅದರ ಚೈನ್ ಕಾಲಿಗೆ ಸಿಲುಕಿ ನೋವಿನಿಂದ ಒದ್ದಾಡುತ್ತಿದ್ದ ಬಾಲಕನನ್ನು ಅಗ್ನಿಶಾಮಕ ದಳ ರಕ್ಷಿಸಿದ ಘಟನೆ ತಳಂಗರೆಯಲ್ಲಿ ನಡೆದಿದೆ. ತಳಂಗರೆ ಜದೀದ್ ರಸ್ತೆಯ ಅಬ್ದುಲ್ ಸಲೀಂ ಎಂಬವರ ಪುತ್ರ ಹತೀಮ್ (6) ನಿನ್ನೆ ಮಧ್ಯಾಹ್ನ ಮನೆ ಬಳಿ ಸೈಕಲ್ ಚಲಾಯಿಸುತ್ತಿದ್ದ ವೇಳೆ ಬಿದ್ದಿದ್ದು, ಈ ವೇಳೆ ಸೈಕಲ್‌ನ ಚೈನ್ ಆತನ ಕಾಲಿಗೆ ಸಿಲುಕಿಕೊಂಡಿದೆ. ತಕ್ಷಣ ಮನೆಯವರು ಮತ್ತು ಇತರರು ರಕ್ಷಾಕಾರ್ಯಾಚರಣೆ ನಡೆಸಿದರೂ ಸಫಲವಾಗದಾಗ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸೀನಿಯರ್ ಫಯರ್ ಆಂಡ್ …

ಕುಂಬಳೆಯಲ್ಲಿ ರಸ್ತೆ ಬದಿ ಟ್ರಾನ್ಸ್‌ಫಾರ್ಮರ್‌ನಿಂದ ಅಪಾಯ ಭೀತಿ

ಕುಂಬಳೆ: ಕುಂಬಳೆಯಲ್ಲಿ ಕೆಎಸ್‌ಇಬಿ ಅಧಿಕಾರಿಗಳು ಇತ್ತೀಚೆಗೆ ನಿರ್ಮಿಸಿದ ಟ್ರಾನ್ಸ್‌ಫಾರ್ಮರ್ ವೊಂದು ಅಪಾಯ ಭೀತಿ ಹುಟ್ಟಿಸುತ್ತಿದೆ. ಕುಂಬಳೆ ಪೇಟೆಯಲ್ಲಿ ಬದರ್ ಜುಮಾ ಮಸೀದಿ ಮುಂಭಾಗ ಸರ್ವಿಸ್ ರಸ್ತೆ ಬದಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ನಿಂದ ಆತಂಕ ಹುಟ್ಟಿಕೊಂಡಿದೆ. ಸರ್ವಿಸ್ ರಸ್ತೆಯಲ್ಲಿ ಸಾರ್ವಜನಿಕರಿಗೆ ನಡೆದು ಹೋಗಲು ನಿರ್ಮಿಸಿದ ಫೂಟ್‌ಪಾತ್‌ಗೆ ಸಮೀಪದಲ್ಲೇ ಟ್ರಾನ್ಸ್‌ಫಾರ್ಮರ್ ಇದ್ದು, ಅದರ ಮತ್ತೊಂದು ಬದಿಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಇದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸುವಾಗ ತಾತ್ಕಾಲಿಕ ಎಂಬ ನೆಲೆಯಲ್ಲಿ ಈ ಟ್ರಾನ್ಸ್‌ಫಾರ್ಮರ್ ಇಲ್ಲಿ ಸ್ಥಾಪಿಸಿರುವುದಾಗಿ ಹೇಳಲಾಗುತ್ತಿದೆ. ಆದರೆ ಇದೀಗ ಅದು ಇಲ್ಲಿ …

ರಾಷ್ಟ್ರೀಯ ಹೆದ್ದಾರಿ: ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣ ಕಾಮಗಾರಿ ಕೇಂದ್ರ-ರಾಜ್ಯ ಸರಕಾರಗಳ ನಿರ್ಧಾರ ಬರುವವರೆಗೆ ನಿಲುಗಡೆ; ಸಂಸದ ಇಂದು ದೆಹಲಿಗೆ: ಶಾಸಕರಿಂದ ಈವಾರ ಮುಖ್ಯಮಂತ್ರಿ ಭೇಟಿ

ಕಾಸರಗೋಡು:  ರಾಷ್ಟ್ರೀಯ ಹೆದ್ದಾರಿ ಕುಂಬಳೆಯಲ್ಲಿ ನಿರ್ಮಿಸಲು ಸಿದ್ಧತೆ ನಡೆಸಿದ್ದ ಟೋಲ್ ಬೂತ್‌ನ ನಿರ್ಮಾಣ ಕೇಂದ್ರ- ರಾಜ್ಯ ಸರಕಾg ಗಳು ಕೈಗೊಳ್ಳುವ ನಿರ್ಧಾರಕ್ಕೆ ಅನುಸರಿಸಿ ಜ್ಯಾರಿಗೊಳಿಸಲು ಜಿಲ್ಲಾಧಿಕಾರಿ, ಜನ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮಧ್ಯೆ ನಡೆದ ಚರ್ಚೆಯಲ್ಲಿ ನಿರ್ಧರಿಸಲಾಯಿತು. ಸರಕಾರಗಳು ನಿರ್ಧಾರ ಕೈಗೊಳ್ಳುವವರೆಗೆ ಟೋಲ್ ಬೂತ್‌ನ ನಿರ್ಮಾಣ ನಿಲ್ಲಿಸಲಾಗು ವುದು. ಜಿಲ್ಲಾಧಿಕಾರಿ ಕೆ. ಇಂಭಶೇ ಖರ್‌ರ ಅಧ್ಯಕ್ಷತೆಯಲ್ಲಿ ಕಲೆಕ್ಟರೇ ಟ್‌ನಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಜಿಲ್ಲೆಯ ಶಾಸಕರಾದ ಎನ್.ಎ. ನೆಲ್ಲಿಕುನ್ನು, ಸಿ.ಎಚ್. …

ನಗರದಲ್ಲಿ ಬಿರುಗಾಳಿಗೆ ಮರ ಬಿದ್ದು ಸಾರಿಗೆ ಅಡಚಣೆ

ಕಾಸರಗೋಡು: ತಾಳಿ ಪಡ್ಪು ಬಳಿ ಇಂದು ಮುಂಜಾನೆ ಬೀಸಿದ ಗಾಳಿಗೆ ರಾಷ್ಟ್ರೀಯ ಹೆದ್ದಾರಿ ಬಳಿಯ ಬೃಹತ್ ಮರವೊಂದರ ರೆಂಬೆ ಮುರಿದು ರಸ್ತೆಗೆ ಬಿದ್ದಿದೆ. ಇದರಿಂದ ಸಾರಿಗೆ ಸಂಚಾರಕ್ಕೆ ಅಡಚಣೆ ಸೃಷ್ಟಿಸಿದೆ. ವಿಷಯ ತಿಳಿದು ತಕ್ಷಣ ಕಾಸರಗೋಡು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಮರಗಳನ್ನು ಕಡಿದು ತೆರವುಗೊಳಿಸಿದ್ದಾರೆ.  ಮರ ಬಿದ್ದ ಪರಿಣಾಮ ಅರ್ಧ ತಾಸು ತನಕ ವಾಹನ ಸಂಚಾರ ಹಾಗೂ ವಿದ್ಯುತ್ ವಿತರಣೆ ಮೊಟಕುಗೊಂಡಿತು.