107 ಗ್ರಾಂ ಎಂಡಿಎಂಎ ಪತ್ತೆ : ಇಬ್ಬರು ಯುವಕರ ಸೆರೆ

ಬದಿಯಡ್ಕ: ಅಮಲು ಪದಾರ್ಥ ತಡೆ ಹಾಗೂ ಪತ್ತೆಗಾಗಿ ಪೊಲೀಸರು ಆರಂಭಿಸಿರುವ ಕೊಂಬಿಂಗ್ ಕಾರ್ಯಾ ಚರಣೆಯಲ್ಲಿ ಎಂಡಿಎಂಎ ಸಹಿತ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ ನಾರಂಪಾಡಿ ಪ್ಲಾವಿಂಡಡಿ ರಫೀಕ್ ಮಂಜಿಲ್‌ನ ಮೊಹಮ್ಮದ್ ರಫೀಕ್ (23), ಬದಿಯಡ್ಕ ಮೂಕಂಪಾರೆಯ ಅಲೆಕ್ಸ್ ಚಾಕೋ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಮೊಹಮ್ಮದ್ ರಫೀಕ್‌ನ ಮನೆಯಲ್ಲಿ ಬಚ್ಚಿಟ್ಟಿದ್ದ 107.090 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮೊಹಮ್ಮದ್ ರಫೀಕ್ ನೀಡಿದ ಮಾಹಿತಿಯಂತೆ ಬಳಿಕ ಅಲೆಕ್ಸ್ ಚಾಕೋನನ್ನು ಬಂಧಿಸಲಾಗಿದೆ. ಕೊಂಬಿಂಗ್ …

ಉಪ್ಪಳದ ಅಂಗಡಿಯಿಂದ ಲಕ್ಷಾಂತರ ರೂ.ಗಳ ಸಾಮಗ್ರಿ ಕಳವುಗೈದ ಆರೋಪಿ ಸೆರೆ

ಉಪ್ಪಳ: ಉಪ್ಪಳದ ಅಂಗಡಿ ಯೊಂದರಿಂದ ಲಕ್ಷಾಂತರ ರೂಪಾಯಿಗಳ ಕಬ್ಬಿಣದ ಸಾಮಗ್ರಿಗಳನ್ನು ಕಳವು ನಡೆಸಿದ ಪ್ರಕರಣದ  ಆರೋಪಿಯನ್ನು ಮಂ ಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ದ.ಕ. ಜಿಲ್ಲೆಯ ಮಂಗಳೂರು ಕಸಬ ಬೆಂಗ್ರೆ ನಿವಾಸಿ ನೌಮಾನ್ (31) ಎಂಬಾತ ಬಂಧಿತ ಆರೋ ಪಿಯಾಗಿದ್ದಾನೆ. ಈತ ಉಪ್ಪಳ ದಲ್ಲಿರುವ ವೈಟ್ ಮಾರ್ಟ್ ಎಂಬ ಸಂಸ್ಥೆಯ ಗೋಡೌನ್‌ನ ಶಟರ್ ಮುರಿದು  ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಣ ಹಾಗೂ ಸ್ಟೀಲ್ ಸಾಮಗ್ರಿಗಳನ್ನು ಕಳವುಗೈದ ಪ್ರಕರಣದ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಕಳವುಗೈದ ಸಾಮಗ್ರಿಗಳನ್ನು ಈತ ಪಿಕಪ್ ವಾಹ …

ಒಂದು ಬೈಕ್‌ನಲ್ಲಿ ಮೂವರು: ಅಬಕಾರಿ ತಂಡ ತಪಾಸಣೆಗೈದಾಗ ಗಾಂಜಾ ಪತ್ತೆ

ಹೊಸದುರ್ಗ: ಒಂದು ಬೈಕ್‌ನಲ್ಲಿ ಮೂರು ಮಂದಿ ಸಂಚರಿಸುತ್ತಿದ್ದವರನ್ನು ಕಂಡ ಅಬಕಾರಿ ತಂಡ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಒಂದು ಕಿಲೋ ಗಾಂಜಾ ಪತ್ತೆಯಾಗಿದೆ. ಈ ಸಂಬಂಧ ಅಸ್ಸಾಂ ನಿವಾಸಿಗಳಾದ ಸಮೀರುದ್ದೀನ್ (31), ಜಾಹಿರುಲ್ ಇಸ್ಲಾಂ (19), ಅಸ್ಸರುಲ್ ಇಸ್ಲಾಂ (19) ಎಂಬಿವರನ್ನು  ತಳಿಪರಂಬ ಅಬಕಾರಿ ರೇಂಜ್ ಕಚೇರಿಯ ಅಬಕಾರಿ ಇನ್‌ಸ್ಪೆಕ್ಟರ್ ಎಬಿ ಥೋಮಸ್ ನೇತೃತ್ವದ ತಂಡ ಬಂಧಿಸಿದೆ.  ತಳಿಪರಂಬ-ಪೂವಂ ರಸ್ತೆಯಲ್ಲಿ ಅಬಕಾರಿ ತಂಡ ವಾಹನ ತಪಾಸಣೆ ನಡೆಸುತ್ತಿದ್ದಾಗ ಬೈಕ್‌ನಲ್ಲಿ ಮೂರು ಮಂದಿ ತಲುಪಿದ್ದಾರೆ. ಅವರನ್ನು ತಡೆದು ನಿಲ್ಲಿಸಿ …

ಕ್ರೀಡೆಗೂ ತಟ್ಟಿದ ಪಾಕಿಸ್ತಾನದ ಭಯೋತ್ಪಾದನೆ ಕಾವು:  ಏಷ್ಯಾ ಕಪ್ ಟೂರ್ನಿಯಿಂದ ಹಿಂದೆ ಸರಿದ ಭಾರತ

ನವದೆಹಲಿ: ಪಾಕಿಸ್ತಾನ ನಡೆಸುತ್ತಿ ರುವ  ಭಯೋತ್ಪಾದನೆಯ  ಕಾವು ಇದೀಗ ಕ್ರೀಡೆಗೂ ತಟ್ಟಿದೆ. ಪಾಕಿಸ್ತಾನ ಪ್ರಾಯೋಜಕತ್ವದ ಭಯೋತ್ಪಾದನೆ ಉಭಯ ದೇಶಗಳ  ನಡುವಿನ  ಬಾಂಧವ್ಯ ಇನ್ನಷ್ಟು ಬಿಗಡಾಯಿಸುತ್ತಿ ರುವಂತೆ ಇನ್ನೊಂದೆಡೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ನಡೆಸುವ ಎಲ್ಲಾ ಟೂರ್ನಿಗಳಿಂದ ಸದ್ಯ ದೂರವಿರಲು ನಿರ್ಧರಿಸಿದೆ. ಹೀಗಾಗಿ ಈ ವರ್ಷ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ  ಕಣಕ್ಕಿಳಿಯದಿರುವ ತೀರ್ಮಾನವನ್ನು ಬಿಸಿಸಿಐ ಕೈಗೊಂಡಿದೆ. ಇದೇ ರೀತಿ ಮುಂದಿನ ತಿಂಗಳಿಂದ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್ ಟೂರ್ನಿ …

ರಸ್ತೆ ಕಾಮಗಾರಿ: ಕಾರ್ಮಿಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ರಸ್ತೆ ಕಾಮಗಾರಿ ಕಂಪೆನಿಯ ಕಾರ್ಮಿಕನೋರ್ವ  ಕೊಠಡಿಯಲ್ಲಿ ಫ್ಯಾನ್‌ಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಪೈವಳಿಕೆಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾ ಗಿರುವ ನಾಗ್ಪುರ್ ನಿವಾಸಿ ವಿಲಾಸ್ ದೇಶ್‌ಮುಖ್ (27) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.  ಇತರ ಕಾರ್ಮಿಕರ  ಜೊತೆ ವಾಸ ವಾಗಿದ್ದ ಇವರು ಎರಡು ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಶನಿವಾರ ಸಂಜೆ ಇತರ ಕಾರ್ಮಿಕರು ಕೊಠಡಿಗೆ ತಲುಪಿದಾಗ ಫ್ಯಾನ್‌ಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ  ಮೃತದೇಹ ವನ್ನು …

8.64 ಲೀಟರ್ ಕರ್ನಾಟಕ ಮದ್ಯ ಪತ್ತೆ           

ಮಂಜೇಶ್ವರ: ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಲ್ಲಿ ಎಕ್ಸೈಸ್ ಇನ್‌ಸ್ಪೆಕ್ಟರ್ ಜಿನು ಜೇಮ್ಸ್  ಬಿ.ಯು ನೇತೃತ್ವದ ತಂಡ ನಿನ್ನೆ  ವಾಹನ ತಪಾಸಣೆಯಲ್ಲಿ ತೊಡಗಿದಾಗ ಕರ್ನಾಟಕದಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಬಸ್ಸಿನೊಳಗೆ ವಾರಿಸುದಾರರಿಲ್ಲದ 8.64 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿದೆ. ಬಳಿಕ ಆ ಮಾಲನ್ನು ಕುಂಬಳೆ ರೇಂಜ್ ಅಬಕಾರಿ ಕಚೇರಿಗೆ ಹಸ್ತಾಂತರಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಸಂತೋಷ್ ಕುಮಾರ್ ವಿ ಮತ್ತು ಸಿವಿಲ್ ಪೊಲೀಸ್ ಆಫೀಸರ್ ಸಜಿತ್ ಟಿ.ವಿ ಎಂಬವರು …

ಹೈದರಾಬಾದ್‌ನಲ್ಲಿ ಸ್ಫೋಟಕ ಸಂಚು ಹೂಡಿದ ಉಗ್ರರಿಬ್ಬರ ಬಂಧನ

ಹೈದರಾಬಾದ್: ಹೈದರಾಬಾದ್ ನಗರದಲ್ಲಿ ಸ್ಫೋಟಕ ಸಂಚು ರೂಪಿಸಿದ್ದ ಇಬ್ಬರು ಉಗ್ರರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.  ಆ ಮೂಲಕ ಭಯೋತ್ಪಾದಕ ಪ್ರಯತ್ನ ವನ್ನು ವಿಫಲಗೊಳಿಸಿದ್ದಾರೆ. ಬಂಧಿತ ರನ್ನು  ಸಿರಾಜು ಉರ್ ರೆಹ್ಮಾನ್ (29) ಮತ್ತು ಸೈಯರ್ ಸಮೀರ್ (28) ಎಂದು ಗುರುತಿಸಲಾಗಿದೆ. ಸೌದಿ ಅರೇಬಿಯಾದ ಐಸಿಸ್ ಮಾಡ್ಯೂಲ್‌ನೊಂದಿಗೆ ಸಂಪರ್ಕ ಹೊಂದಿರುವ  ಉಗ್ರರಾಗಿದ್ದಾರೆಂದು  ಆಂಧ್ರ ಪೊಲೀಸರು ತಿಳಿಸಿದ್ದಾರೆ.

17ರ ಬಾಲಕಿಗೆ ಕಿರುಕುಳ ಸಹಪಾಠಿ ವಿರುದ್ಧ ಕೇಸು

ಕಾಸರಗೋಡು: 17ರ ಹರೆಯದ ಬಾಲಕಿಯನ್ನು ಸಹಪಾಠಿಯೋರ್ವ ತನ್ನ ಮನೆಗೆ ಕರೆದೊಯ್ದು ಆಕೆಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ರಾಜಪುರಂ ಪೊಲೀಸರು ಬಾಲಕಿಯ ಸಹಪಾಠಿ ವಿರುದ್ಧ ಪೋಕ್ಸೋ ಕೇಸು ದಾಖಲಿಸಿಕೊಂ ಡಿದ್ದಾರೆ. ಆರು ತಿಂಗಳ ಹಿಂದೆ ಕಿರುಕುಳ ನಡೆದಿರುವುದಾಗಿ ಹೇಳಲಾಗುತ್ತಿದೆ. ವಿಷಯವನ್ನು ಬಾಲಕಿ ಮನೆಯವರಲ್ಲಿ ಈಗ ತಿಳಿಸಿದ್ದಾಳೆ. ಇದರಂತೆ ಪೊಲೀಸರಿಗೆ ದೂರು ನೀಡಲಾಗಿದೆ. ಆರೋ ಪಿಯ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ಜಿಲ್ಲೆಯಲ್ಲಿ ಇಂದು, ನಾಳೆ ಆರೆಂಜ್ ಅಲರ್ಟ್

ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದ್ದು, ಆ ಹಿನ್ನೆಲೆಯಲ್ಲಿ  ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡಿನ ಹೊರತಾಗಿ ಕಲ್ಲಿಕೋಟೆ ಮತ್ತು ವಯನಾಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮೂರು ಜಿಲ್ಲೆಗಳ ವಿವಿಧೆಡೆಗಳಲ್ಲಾಗಿ 115.5 ನಿಂದ 204 ಮಿಲ್ಲಿ ಮೀಟರ್‌ನಷ್ಟು ಮಳೆ ಸುರಿಯುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಹೊರತಾಗಿ ಇಂದು ರಾಜ್ಯದ ೭ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.

ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿ 8ವರ್ಷಗಳ ಬಳಿಕ ಸೆರೆ

ಕಾಸರಗೋಡು: ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ನ್ಯಾಯಾಲಯದಲ್ಲಿ ಹಾಜರಾಗದೆ ಕಳೆದ ಎಂಟು ವರ್ಷಗಳಿಂದ ತಲೆಮರೆಸಿಕೊಂಡು ಜೀವಿಸುತ್ತಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ನೀಲಗಿರಿ ನಿವಾಸಿ ಪಾರ್ತಿವನ್ ಅಲಿಯಾಸ್ ರಮೇಶ್ (26) ಬಂಧಿತ ಆರೋಪಿ. ಈತ ನೀಲೇಶ್ವರಕ್ಕೆ ಸಮೀಪದ ಕರಿಂದಳಂ ಕರಿಂಬಿಲ್ ತರಲಡಿನ ಎಸ್ಟೇಟ್‌ನ ಮೇಲ್ನೋಟಗಾರನಾಗಿ ಸೇವೆ ಸಲ್ಲಿಸುತ್ತಿದ್ದ ಕರಿಂದಳ ಚೂರಿ ಪಡದ ಪಿ.ವಿ. ಚಿಂಡನ್ (58) ಎಂಬವರನ್ನು 2018 ಫೆಬ್ರವರಿ 24ರಂದು ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದಾನೆ. ಪಾರ್ತಿವನ್ ಅಲಿಯಾಸ್ ರಮೇಶ್ ಈ ಹಿಂದೆ ಕರಿಂಬಿಲ್ ಎಸ್ಟೇಟ್‌ನಲ್ಲಿ …