ಸ್ಕೂಟರ್‌ನ ಹಿಂಬದಿಗೆ ಬೈಕ್ ಢಿಕ್ಕಿ: ಓರ್ವನಿಗೆ ಗಾಯ

ಮುಳ್ಳೇರಿಯ: ಸ್ಕೂಟರ್‌ನ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಕಿನ್ನಿಂ ಗಾರು ನಿವಾಸಿ ಕೊರಗಪ್ಪ ಪೂಜಾರಿ (51) ಎಂಬವರು ಗಾಯಗೊಂಡಿದ್ದಾರೆ. ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶನಿವಾರ ಮಧ್ಯಾಹ್ನ 12 ಗಂಟೆಗೆ ಸೀತಾಂಗೋಳಿ ಅಪ್ಸರ ಮಿಲ್ ಬಳಿ ಅಪಘಾತವುಂಟಾಗಿದೆ. ಕೊರಗಪ್ಪ ಪೂಜಾರಿ ಪೇರಾಲ್ ಕಣ್ಣೂರಿನ ತರವಾಡು ಮನೆಯಿಂದ ಸ್ವಂತ ಮನೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಇವರು ಸಂಚರಿಸುತ್ತಿದ್ದ ಸ್ಕೂಟರ್‌ಗೆ ಹಿಂಬದಿಯಿಂದ ಬಂದ ಬೈಕ್ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ.

ಪ್ಲಸ್‌ಟು ಫಲಿತಾಂಶ ಮೇ 22ರಂದು

ತಿರುವನಂತಪುರ: ರಾಜ್ಯದ ಪ್ಲಸ್‌ಟು ಪರೀಕ್ಷೆಯ ಫಲಿತಾಂಶ ಮೇ 22ರಂದು ಪ್ರಕಟಿಸಲಾಗುವುದು. ಅಂದು ಅಪರಾಹ್ನ 3 ಗಂಟೆಗೆ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಫಲಿತಾಂಶ ಘೋಷಿಸುವರು. 4,44,707  ಮಕ್ಕಳು   ದ್ವಿತೀಯ ವರ್ಷ ಪರೀಕ್ಷೆ ಬರೆದಿದ್ದಾರೆ. ಹೈಯರ್ ಸೆಕೆಂಡರಿ ಪರೀಕ್ಷೆಯ ಮೌಲ್ಯಮಾಪನ ಪೂರ್ಣಗೊಂಡಿ ರುವುದಾಗಿ ಸಚಿವ ತಿಳಿಸಿದ್ದಾರೆ.

ಕುಂಬಳೆ: ಬೆಂಕಿಗಾಹುತಿಯಾದ ಟ್ರಾನ್ಸ್‌ಫಾರ್ಮರ್ ದುರಸ್ತಿ ಬೆನ್ನಲ್ಲೇ ವಿದ್ಯುತ್ ಮೊಟಕು; ಜನರಿಗೆ ಸಮಸ್ಯೆ

ಕುಂಬಳೆ: ಇಲ್ಲಿನ ಭಾಸ್ಕರನಗರದಲ್ಲಿ ಬೆಂಕಿಗಾಹುತಿಯಾದ ಟ್ರಾನ್ಸ್‌ಫಾರ್ಮರ್ ದುರಸ್ತಿ ನಡೆಸಿದರೂ ಅದು ಮತ್ತೆ ಹಾನಿಗೀಡಾಗಿದೆ. ಇದರಿಂದ ಈ ಪ್ರದೇಶದ ಜನರಿಗೆ ನಿನ್ನೆ ರಾತ್ರಿಯಿಂದ    ಬೆಳಕಿಲ್ಲದೆ ಸಮಸ್ಯೆ ಎದುರಿಸಬೇಕಾಗಿ ಬಂದಿದೆ. ಭಾಸ್ಕರನಗರದಲ್ಲಿರುವ ಟ್ರಾನ್ಸ್‌ಫಾರ್ಮರ್ ನಿನ್ನೆ ಸಂಜೆ ೪ ಗಂಟೆ ವೇಳೆ ಬೆಂಕಿಗಾಹುತಿಯಾಗಿತ್ತು. ಟ್ರಾನ್ಸ್‌ಫಾರ್ಮರ್‌ಗಳ ಮೇಲ್ಭಾಗದಿಂದ ಬೆಂಕಿ ಹೊಗೆ ಕಾಣಿಸಿದೆ. ಅದನ್ನು ಕಂಡ ನಾಗರಿಕರು ಕೆಎಸ್‌ಇಬಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಕೂಡಲೇ ನೌಕರರು ತಲುಪಿ ವಿದ್ಯುತ್ ಸಂಪರ್ಕ ವಿಚ್ಛೇಧಿಸಿದರು. ಸಮೀಪದ ನವೋದಯ ಫ್ರೆಂಡ್ಸ್ ಕ್ಲಬ್ ಕಾರ್ಯಕರ್ತರು ಹಾಗೂ ನಾಗರಿಕರು ಸೇರಿ ಬೆಂಕಿ …

ಕಲ್ಲಿಕೋಟೆ ಹೊಸ ಬಸ್ ನಿಲ್ದಾಣದಲ್ಲಿ ಬೆಂಕಿ ಆಕಸ್ಮಿಕ: ಕಾರಣ ಪತ್ತೆಗೆ ತಪಾಸಣೆ ಇಂದು

ಕಲ್ಲಿಕೋಟೆ: ಇಲ್ಲಿನ ಹೊಸ ಬಸ್ ನಿಲ್ದಾಣದ ವ್ಯಾಪಾರ ಸಮುಚ್ಚಯದಲ್ಲಿ ಉಂಟಾದ ಬೆಂಕಿ ಆಕಸ್ಮಿಕದ ಕಾರಣವನ್ನು ಪತ್ತೆ ಮಾಡಲು ಅಗ್ನಿಶಾಮಕದಳ ಇಂದು ತಪಾಸಣೆ ನಡೆಸಲಿದೆ. ಜಿಲ್ಲಾಧಿಕಾರಿ ನಿರ್ದೇಶ ನೀಡಿದ ಪ್ರಕಾರ ಈ ತಪಾಸಣೆ ನಡೆಯಲಿದೆ. ಜಿಲ್ಲಾ ಫಯರ್ ಆಫೀಸರ್ ಪರಿಶೀಲಿಸು ವರು. ವರದಿಯನ್ನು ಇಂದೇ ಜಿಲ್ಲಾಧಿಕಾರಿಗೆ ನೀಡಬೇಕು ಎಂದು ಸೂಚಿಸಲಾಗಿದೆ. 2 ದಿನದೊಳಗೆ ಸಮಗ್ರ ವರದಿ ಸಲ್ಲಿಸಲು ಚೀಫ್ ಸೆಕ್ರೆಟರಿ ಸೂಚಿಸಿದ್ದಾರೆ. ಮೂರು ಮಹಡಿಯ ಕಟ್ಟಡದಲ್ಲಿ ಮೇಲಿನ ಎರಡು ಮಹಡಿಗಳಲ್ಲಿ ನಿನ್ನೆ ಸಂಜೆ ೪.೨೦ಕ್ಕೆ ಬೆಂಕಿ ಆಕಸ್ಮಿಕ ಸಂಭವಿಸಿದೆ. …

ಕಾಸರಗೋಡು ರೈಲು ನಿಲ್ದಾಣದಲ್ಲಿ ಲಿಫ್ಟ್ ಮತ್ತು ಎಕ್ಸಲೇಟರ್, ಕುಂಬಳೆ, ಹೊಸದುರ್ಗದಲ್ಲಿ ಲಿಫ್ಟ್

ಕಾಸರಗೋಡು: ಕಾಸರಗೋಡು, ಕುಂಬಳೆ ಮತ್ತು ಹೊಸದುರ್ಗ ರೈಲು ನಿಲ್ದಾಣಗಳಲ್ಲಿ ತಲಾ ಎರಡರಂತೆ ಲಿಫ್ಟ್ ಸೌಕರ್ಯ ಏರ್ಪಡಿಸಲಾಗುವುದು. ಇದರ ಹೊರತಾಗಿ ಕಾಸರಗೋಡು ರೈಲು ನಿಲ್ದಾಣದಲ್ಲಿ ಲಿಫ್ಟ್‌ನ ಹೊರತಾಗಿ ಎರಡು ಎಕ್ಸಲೇಟರ್ ಸೌಕರ್ಯವನ್ನು ಏರ್ಪಡಿಸಲಾಗುವುದು. ಪಾಲಕ್ಕಾಡ್ ರೈಲ್ವೇ ಡಿವಿಷನ್‌ಗೊಳಪಟ್ಟ ಪ್ರದೇಶದ ಸಂಸದರ ಸಭೆ ಕರೆದು ನಡೆಸಿದ ಚರ್ಚೆಯಲ್ಲಿ ರೈಲ್ವೇ ಇಲಾಖೆಯ ಉನ್ನತ ಅಧಿಕಾರಿಗಳು ಈ ವಿಷಯ ತಿಳಿಸಿದ್ದಾರೆ. ಕಾಸರಗೋಡು ಮತ್ತು ಹೊಸದುರ್ಗ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅತ್ತಿತ್ತ ಸಾಗಲು ಸಹಾಯವಾಗುವ ರೀತಿಯಲ್ಲಿ ಮೇಲ್ಸೇತುವೆ ನಿರ್ಮಾಣ ಕೆಲಸ ಈಗ ಭರದಿಂದ ಸಾಗುತ್ತಿದೆ. …

ಶಾಂತಿಗುರಿ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ: ಹೊರೆಕಾಣಿಕೆ ಮೆರವಣಿಗೆ, ಧಾರ್ಮಿಕ ಸಭೆ

ಉಪ್ಪಳ: ಬೇಕೂರು ಬಳಿಯ ಶಾಂತಿಗುರಿ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶ್ರೀ ದೇವಿಯ ಪೀಠ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮತ್ತು ಸಪರಿವಾರ ದೈವಗಳ ಪ್ರತಿಷ್ಠೆ ಕಲಶಾಭಿಷೇಕ ಇಂದು ನಡೆಯಿತು. ಬೆಳಿಗ್ಗೆ ಬ್ರಹ್ಮಶ್ರೀ ನಡಿಬೈಲು ಶಂಕರ ನಾರಾಯಣ ತಂತ್ರಿವರ್ಯ ಪೌರೋ ಹಿತ್ಯ ವಹಿಸಿದರು. ನಿನ್ನೆ ಸಂಜೆ ನಡೆದ ಧಾರ್ಮಿಕ ಸಬೆsಯಲ್ಲಿ ಮುಂಬಯಿ ಉದ್ಯಮಿ ಸಂಜೀವ ಶೆಟ್ಟಿ ತಿಂಬರ ಅಧ್ಯಕ್ಷತೆ ವಹಿಸಿದರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಮಂಗಲ್ಪಾಡಿ …

ಕಾನತ್ತೂರಿನಲ್ಲಿ ಕಾಡುಕೋಣ ಹಾವಳಿ :ವ್ಯಾಪಕ ಕೃಷಿ ನಾಶ

ಕಾನತ್ತೂರು: ಮುಳಿಯಾರು ಪಂಚಾಯತ್‌ಗೊಳಪಟ್ಟ ಕಾನತ್ತೂರು ಪಯೋಲದಲ್ಲಿ  ಭಾರೀ ವ್ಯಾಪಕವಾಗಿ ಕಾಡುಕೋಣಗಳ ಹಾವಳಿ ತಲೆಯೆತ್ತಿದ್ದು, ಇದರಿಂದ ಕೃಷಿ ನಾಶ ನಷ್ಟ ಉಂಟಾಗಿದೆ. ಮುಳಿಯಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ. ಜನಾರ್ದನನ್, ಅವರ ನೆರೆಮನೆಯ ವಿನೋದ್ ಕುಮಾರ್ ಎಂಬವರ ಕೃಷಿ ತೋಟಗಳಿಗೆ ರಾತ್ರಿ ವೇಳೆ ಕಾಡುಕೋಣಗಳು ನುಗ್ಗಿ ಎರಡು ವರ್ಷ ಪ್ರಾಯದ ಅಡಿಕೆ ಸಸಿಗಳು, ಬಾಳೆ ಇತ್ಯಾದಿ ಕೃಷಿಗಳನ್ನು ನಾಶಗೊಳಿಸಿವೆ. ಇದರಿಂದ ಭಾರೀ ನಷ್ಟ ಉಂಟಾಗಿದೆ. ದಿನಗಳ ಹಿಂದೆ ಕಾನತ್ತೂರಿನ ವೀಟಿಯಡ್ಕಕ್ಕೆ ಹಾಡಹಗಲೇ ಮನೆಯೊಂದರ ಗೇಟು ಮತ್ತು ಗೋಡೆಯನ್ನು ಕಾಡುಕೋಣಗಳು …

ಎಡರಂಗ ಸರಕಾರ ಕೇರಳವನ್ನು ಸ್ಮಾರ್ಟಾಗಿಸಿದೆ-ಇ.ಚಂದ್ರಶೇಖರನ್

ಮಂಜೇಶ್ವರ: ಎಡರಂಗ ಸರಕಾರ ಕೇರಳವನ್ನು ಸ್ಮಾರ್ಟಾಗಿಸಿದೆ ಎಂದು ಸಿಪಿಐ ರಾಜ್ಯ ಸಹ ಕಾರ್ಯದರ್ಶಿ, ಶಾಸಕ ಇ. ಚಂದ್ರಶೇಖರನ್ ಹೊಸಂಗಡಿ ಬಿ.ವಿ ರಾಜನ್ ವೇದಿಕೆಯಲ್ಲಿ ನಡೆದ ಸಿಪಿಐ ಮಂಜೇಶ್ವರ ಮಂಡಲ ಸಮ್ಮೇಳನದ ಪ್ರತಿನಿಧಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ಎಡರಂಗ ಸರಕಾರ ಎಲ್ಲಾ ವಲಯಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಕೇರಳವು ಕಡು ಬಡವರಿಲ್ಲದ ರಾಜ್ಯವಾಗುವ ಗುರಿಯತ್ತ ಸಾಗುತ್ತಿದೆ.600 ಗ್ರಾಮ ಕಚೇರಿಗಳು ಸ್ಮಾರ್ಟ್ ಆಗಿದೆ.ಪಡಿತರ ಅಂಗಡಿಗಳು ಕೆ. ಸ್ಟೋರ್ ಆಗಿ ಬದಲಾಗುತ್ತಿವೆ.ಈಗಾಗಲೇ 1959 ಪಡಿತರ ಅಂಗಡಿಗಳನ್ನು ಸ್ಮಾರ್ಟ್ ಮಾಡಲಾಗಿದೆ. ಆರೋಗ್ಯ …

ಕಣ್ವತೀರ್ಥ ಬೀಚ್ ರಸ್ತೆ ಮುಖ್ಯಮಂತ್ರಿಯಿಂದ ಉದ್ಘಾಟನೆ

ಮಂಜೇಶ್ವರ:  ಕೇರಳ  ಸರಕಾ ರದ ಅಭಿವೃದ್ಧಿ ಯೋಜನೆಯಂಗವಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ ಲಭಿಸಿದ 2 ಕೋಟಿ 37 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಂಡ 1340 ಮೀಟರ್ ಉದ್ದದ ಕಣ್ವತೀರ್ಥ ಬೀಚ್ ರಸ್ತೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್‌ಲೈನ್ ಮೂಲಕ ಲೋಕಾರ್ಪಣೆಗೊಳಿ ಸಿದರು.  ರಾಜ್ಯದ ೧೪ ಜಿಲ್ಲೆಗಳಲ್ಲಿ 60 ರಸ್ತೆಗಳನ್ನು ಒಂದೇ ದಿನದಲ್ಲಿ  ಮುಖ್ಯ ಮಂತ್ರಿ ಲೋಕಾ ರ್ಪಣೆಗೊಳಿಸಿದ್ದಾರೆ. ಲೋಕೋ ಪಯೋಗಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಮೊಹಮ್ಮದ್ ರಿಯಾಸ್ ಅಧ್ಯಕ್ಷತೆ ವಹಿಸಿದರು.  ಶಾಸಕ ಎಕೆಎಂ …

ಕಲಾವಿದರ ಸಂಗಮ: ನಾಟಕೋತ್ಸವ 23ರಿಂದ

ಕಾಸರಗೋಡು: ಕಲಾವಿದರ ಸಂಗಮ ಮತ್ತು ನಾಟಕೋತ್ಸವ ಈ ತಿಂಗಳ 23, 24ರಂದು ಅಪರಾಹ್ನ 3 ಗಂಟೆಗೆ ವಿದ್ಯಾನಗರ ಚಿನ್ಮಯ ತೇಜಸ್ ಸಭಾಂಗಣದಲ್ಲಿ ನಡೆಯಲಿದೆ. 23ರಂದು ಅಪರಾಹ್ನ ೩ ಗಂಟೆಗೆ ಮಂಜೇಶ್ವರ ಕಾಸರಗೋಡು ವಲಯಗಳ ಕಲಾವಿದರ ಸಂಗಮ ನಡೆಯಲಿದೆ. ಸಿನಿಮಾ ನಟ ಸಂತೋಷ್ ಕೀಳಟ್ಟೂರ್ ಉದ್ಘಾಟಿಸುವರು. ಕಾಸರಗೋಡಿನ ನಾಟಕ ಚರಿತ್ರೆ ಸಿದ್ಧಾಂತದ ಆರಂಭದ ಚರ್ಚೆ, ಕಲಾವಿದರ ಡಾಟಾ ಎಂಟ್ರಿ ಸಂಗ್ರಹ ಮತ್ತು ರಂಗ ಚಟುವಟಿಕೆಗಳು ಮುಂತಾದ ವಿಷಯಗಳ ಬಗ್ಗೆ ಅವಲೋಕನ ನಡೆಯಲಿದೆ. ಸಂಜೆ ೬ ಗಂಟೆಗೆ ನಾಟಕೋತ್ಸವದ ಉದ್ಘಾಟನೆಯನ್ನು …