ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಮೃತ್ಯು

ಕುಂಬಳೆ: ಬೈಕ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ  ಗೃಹಿಣಿ ಮೃತಪಟ್ಟರು. ಅಂಗಡಿಮೊಗರು ನಿವಾಸಿ ದಿ| ನವೀನ್‌ಚಂದ್ರ ಶೆಟ್ಟಿಯವರ ಪತ್ನಿ ಎನ್. ಸುಲೋಚನ ಶೆಟ್ಟಿ (56) ಮೃತಪಟ್ಟ ದುರ್ದೈವಿ. ಕಳೆದ ತಿಂಗಳ 28ರಂದು  ಪುತ್ರನ ಜೊತೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅಂಗಡಿಮೊಗ ರಿನಲ್ಲಿ ಅಪಘಾತ ಸಂಭವಿಸಿತ್ತು. ಗಾಯಗೊಂಡ ಇವರನ್ನು ಕೂಡಲೇ ಕುಂಬಳೆ ಆಸ್ಪತ್ರೆಗೂ ಬಳಿಕ ಮಂಗಳೂ ರಿನ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡ ಲಾಗಿತ್ತು.  ಶನಿವಾರ ನಿಧನ ಸಂಭವಿಸಿದೆ. ಮೃತರು ಮಕ್ಕಳಾದ ಅಮೃತ್, ಅಭಿಷೇಕ್, ಅಕ್ಷಯ್, ಸಹೋದ ರರಾದ ಚಂದ್ರಶೇಖರ, ಶೇಖರ, …

ಭಾರೀ ಪ್ರಮಾಣದ ತಂಬಾಕು ಉತ್ಪನ್ನಗಳ ವಶ: ಓರ್ವ ಸೆರೆ

ಕುಂಬಳೆ: ಕರ್ನಾಟಕದಿಂದ ಕಾಸರಗೋಡು ಭಾಗಕ್ಕೆ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ಕುಂಬಳೆ ಪೊಲೀಸರು ವಶಪಡಿ ಸಿಕೊಂ ಡಿದ್ದಾರೆ. ಈ ಸಂಬAಧ ಮಧೂರು ಹಿದಾಯತ್ನಗರ ಚೆಟ್ಟುಂಗುಳಿ ನಿವಾಸಿ ರಾಶಿದ್ (31) ಎಂಬಾತನನ್ನು ಬಂಧಿಸಲಾಗಿದೆ. ಪಿಕಪ್ ವಾಹನದಲ್ಲಿದ್ದ 1,14,878 ಪ್ಯಾಕೆಟ್ ತಂಬಾಕು ಉತ್ಪನ್ನಗಳು ಹಾಗೂ 60 ಕಿಲೋ ತಂಬಾಕು ಹುಡಿಯನ್ನು ವಶಪಡಿಸಲಾಗಿದೆ. ನಿನ್ನೆ ರಾತ್ರಿ ಕುಂಬಳೆ ಠಾಣೆ ಇನ್ ಸ್ಪೆಕ್ಟರ್ ಜಿಜೀಶ್ ಪಿ.ಕೆ ನೇತೃತ್ವದಲ್ಲಿ ಮೊಗ್ರಾಲ್ ಸೇತುವೆ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮಂಗಳೂರು …

8ನೇ ತರಗತಿ ವಿದ್ಯಾರ್ಥಿ ನೇಣುಬಿಗಿದು ಸಾವು

ಹೊಸದುರ್ಗ: 8ನೇ ತರಗತಿ ವಿದ್ಯಾರ್ಥಿ ಮನೆಯಕೊಠಡಿಯೊ ಳಗೆ ಕಿಟಿಕಿ ಸರಳಿಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾನೆ. ಪಿಲಾತ್ತರ ಪೆರಿಯಾಟ್ಟ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಪುದಿಯತೆರು ನಿವಾಸಿ  ವಿಜಿನಾ-ರಾಜೇಶ್ ದಂಪತಿಯ ಪುತ್ರ ಅಜುಲ್‌ರಾಜ್ (13) ಮೃತಪಟ್ಟ ಬಾಲಕ. ನಿನ್ನೆ ಮಧ್ಯಾಹ್ನ ಊಟದ ಬಳಿಕ ತಾಯಿ ಹಾಗೂ ಸಹೋದರಿ ನಿದ್ರಿಸಿದ್ದರು. ಸಂಜೆ 5.15ಕ್ಕೆ ಇವರು ಎದ್ದು ನೋಡಿ ದಾಗ ಅಜುಲ್‌ರಾಜ್ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈತ ಪಿಲಾತ್ತರ  ಮೇರಿ ಮಾತಾ ಆಂಗ್ಲ ಮಾಧ್ಯಮ ಶಾಲೆಯ …

ಝಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ನಿಧನ

ನವದೆಹಲಿ:  ಅನಾರೋಗ್ಯದಿಂದ ಬಳಲುತ್ತಿದ್ದ ಝಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಶಿಬು ಸೊರೇನ್ (81) ದೆಹಲಿಯ ಗಂಗಾರಾಂ ಆಸ್ಪತ್ರೆಯಲ್ಲಿ  ಇಂದು ಬೆಳಿಗ್ಗೆ ನಿಧನರಾದರು.  ಈ ವೇಳೆ ಅವರ ಮಗ ಹಾಗೂ ಪ್ರಸ್ತುತ ಝಾರ್ಖಂಡ್ ಮುಖ್ಯಮಂತ್ರಿಯಾ ರುವ ಹೇಮಂತ್ ಸೊರೇನ್    ಆಸ್ಪತ್ರೆಯಲ್ಲಿದ್ದರು.  ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದಾಗಿ ಜೂನ್ ಕೊನೆಯ ವಾರ  ಶಿಬು ಸೊರೇನ್‌ರನ್ನು ಆಸ್ಪತ್ರೆಯಲ್ಲಿ ದಾಖಲಿಸರಾಗಿತ್ತು. ಅಗೋಸ್ತ್ 2ರಂದು ಅವರ ಆರೋಗ್ಯಸ್ಥಿತಿ ಗಂಭೀರವಾಸ್ಥೆಗೆ ತಲುಪಿ ಬಳಿಕ ವೆಂಟಿಲೇಟರ್‌ನಲ್ಲಿ ದಾಖಲಿಸಲಾ ಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಿಧನಹೊಂದಿದರೆಂ ದು ಟ್ವಿಟರ್‌ನಲ್ಲಿ ಅವರ …

ಎರಡೆಡೆ ಅಬಕಾರಿ ದಾಳಿ: ಕರ್ನಾಟಕ ಮದ್ಯ ಪತ್ತೆ, ಸ್ಕೂಟರ್ ಸಹಿತ ಓರ್ವ ಸೆರೆ

ಕಾಸರಗೋಡು: ಅಬಕಾರಿ ತಂಡ ನಿನ್ನೆ ಜಿಲ್ಲೆಯ ಎರಡೆಡೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆಯಲ್ಲದೆ ಆತ ಚಲಾಯಿಸುತ್ತಿದ್ದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ನಗರದ ಕರಂದಕ್ಕಾಡ್ ಅಗ್ನಿಶಾಮಕದಳದ ಹಿಂದುಗಡೆಯ ಜನವಾಸವಿಲ್ಲದ ಹಿತ್ತಿಲಿಗೆ ಹೋಗುವ ರಸ್ತೆ ಬದಿಯ ಪೊದೆಯಲ್ಲಿ ಬಚ್ಚಿಡಲಾಗಿದ್ದ 15.66 ಲೀಟರ್ 180 ಎಂಎಲ್‌ನ 87 ಟೆಟ್ರಾ ಪ್ಯಾಕೆಟ್) ಕರ್ನಾಟಕ ನಿರ್ಮಿತ ಮದ್ಯವನ್ನು ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್‌ನ ಗ್ರೇಡ್ …

ತೆಂಗಿನ ಮರದಿಂದ ಬಿದ್ದು ಬೀಡಿ ಕಾರ್ಮಿಕ ಮೃತ್ಯು

ಕಾಸರಗೋಡು: ತೆಂಗಿನ ಮರದಿಂದ ಬಿದ್ದು ಬೀಡಿ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಅಚ್ಚಾಂ ತುರುತ್ತಿ ನಿವಾಸಿ ಆರಿಲ್ ಪ್ರೇಮರಾಜನ್ (58) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ಘಟನೆ ನಡೆದಿದೆ. ಮನೆ ಹಿತ್ತಿಲಿನ ತೆಂಗಿನ ಮರಕ್ಕೆ ಹತ್ತಿದ ಇವರು ಆಯ ತಪ್ಪಿ ಬಿದ್ದದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ದಿ| ಆರಿಲ್ ಮಲಪ್ಪಿಲ್ ಅಂಬು-ಮಾಣಿಕ್ಯ ದಂಪತಿಯ ಪುತ್ರನಾದ ಮೃತರು ಪತ್ನಿ ಉಷಾ, ಮಕ್ಕಳಾದ ಅಖಿಲ, ಅಶಿತ, ಸಹೋದರ-ಸಹೋದರಿಯರಾದ ಸಿದ್ದಾರ್ಥನ್, ಸುಪ್ರಿಯ, ವಸಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ತಲಪಾಡಿ- ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ 10 ತಿಂಗಳಲ್ಲಿ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದು 15 ಮಂದಿ

ಮಂಜೇಶ್ವರ: ತಲಪಾಡಿಯಿಂದ ಆರಂಭಗೊಂಡು ಕುಂಬಳೆ ತನಕದ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕಳೆದ 10 ತಿಂಗಳಲ್ಲಿ ಉಂಟಾದ ವಾಹನ ಅಪಘಾತಗಳಲ್ಲಾಗಿ 15 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. ಉಪ್ಪಳ ಗೇಟ್‌ನಲ್ಲಿ  ಕಳೆದ ಐದು ತಿಂಗಳಲ್ಲಿ ವಿವಿಧ ವಾಹನ ಅಪಘಾತಗಳಲ್ಲಾಗಿ ಐದು ಮಂದಿ ಸಾವನ್ನಪ್ಪಿದ್ದಾರೆ. ಒಂದೂವರೆ ತಿಂಗಳ ಹಿಂದೆ ಮಂಜೇಶ್ವರದಲ್ಲಿ ಬಸ್ ಮತ್ತು ಕಾರು ಢಿಕ್ಕಿ ಹೊಡೆದು ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದನು. ಮೂರು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯ  ನಿರ್ಮಾಣದ ಸಲುವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕ್ರೈನ್‌ಗೆ ಟೆಂಪೋವೊಂದು ಢಿಕ್ಕಿ …

ಕನ್ಯಪ್ಪಾಡಿ-ಪಳ್ಳ ರಸ್ತೆ ಶೋಚನೀಯಾವಸ್ಥೆ ಪ್ರತಿಭಟಿಸಿ ಯೂತ್ ಕಾಂಗ್ರೆಸ್‌ನಿಂದ ಚಳವಳಿ

ಪೆರ್ಲ: ಕನ್ಯಪ್ಪಾಡಿಯಿಂದ ಪಳ್ಳವರೆಗಿನ ಜಿಲ್ಲಾ ಪಂಚಾಯತ್ ರಸ್ತೆ ಯ ವಿವಿಧೆಡೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದರೂ ದುರಸ್ತಿಗೆ ಕ್ರಮ ಕೈಗೊಳ್ಳದಿರುವುದನ್ನು  ಪ್ರತಿಭಟಿಸಿ ಯೂತ್ ಕಾಂಗ್ರೆಸ್ ಎಣ್ಮಕಜೆ ಹಾಗೂ ಬದಿಯಡ್ಕ ಮಂಡಲ ಸಮಿತಿಗಳ ಸಂಯುಕ್ತ ನೇತೃತ್ವದಲ್ಲಿ ಚೆನ್ನೆಗುಳಿಯಲ್ಲಿ  ನಿನ್ನೆ ರಸ್ತೆಯ ಹೊಂಡದಲ್ಲಿ ದೋಣಿ ಇಳಿಸಿ ವಿನೂತನ ರೀತಿಯ ಚಳವಳಿ ನಡೆಸಲಾಯಿತು.  ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್ ಚಳವಳಿ ಯನ್ನು ಉದ್ಘಾಟಿಸಿ ಮಾತನಾಡಿ, ಈ ರಸ್ತೆಗೆ  ಕಳೆದ ಐದು ವರ್ಷಗಳಿಂದ ಎಡರಂಗ ಆಡಳಿತ ನಡೆಸುವ ಜಿಲ್ಲಾ …

ಪ್ರತಾಪನಗರದ ವಿವಿಧೆಡೆ ಪೋಲಾಗುತ್ತಿರುವ ಕುಡಿಯುವ ನೀರು: ಪೈಪ್ ದುರಸ್ತಿಗೆ ಒತ್ತಾಯ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ 7ನೇ ವಾರ್ಡ್ ಪ್ರತಾಪನಗರದಲ್ಲಿ ಹಲವು ಕಡೆಗಳಲ್ಲಿ ಪೈಪ್ ಒಡೆದು ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿ ರುವುದಾಗಿ ಸ್ಥಳೀಯರು ದೂರಿ ದ್ದಾರೆ. ಪ್ರತಾಪ ನಗರದ ಪ್ರಧಾನ ರಸ್ತೆ ಬದಿಯಲ್ಲಿ ಎರಡು ಕಡೆ ಹಾಗೂ ಒಳ ರಸ್ತೆಯಲ್ಲಿಯೂ ನೀರು ಪೋಲಾಗುತ್ತಿದೆ. ಪೈಪ್ ಬಿರುಕು ಬಿಟ್ಟು ತಿಂಗಳು ಕಳೆದರೂ ದುರಸ್ತಿಗೆ ಕ್ರಮಕೈಗೊಳ್ಳದಿರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ನೀರು ಪೋಲಾಗುತ್ತಿ ರುವುದರಿಂದ ವೇಗತೆ ಕಡಿಮೆಯಾಗಿ ಎತ್ತರದ ಸ್ಥಳಗಳಿಗೆ ನೀರು ತಲುಪದಿರುವುದು ಸ್ಥಳೀಯರನ್ನು ಸಮಸ್ಯೆಗೀಡು ಮಾಡಿದೆ. ಸಂಬAಧಪಟ್ಟ ನೀರಾವರಿ …

ಸೌಲಭ್ಯ ವಿತರಣೆಯಲ್ಲಿ ಪಾರದರ್ಶಕತೆ ತಂದ ಕೇಂದ್ರ ಸರಕಾರ- ಎಂ.ಎಲ್. ಅಶ್ವಿನಿ

ಬಂದಡ್ಕ: ಕೇಂದ್ರದ ಸೌಲಭ್ಯಗಳನ್ನು, ಸಬ್ಸಿಡಿಗಳನ್ನು ಪಾರದರ್ಶಕತೆಯಿಂದ ನಿಜವಾದ ಫಲಾನುಭವಿಗಳಿಗೆ ವಿತರಿಸಲು, ಅದು ಅವರಿಗೆ ಲಭಿಸುತ್ತಿದೆ ಎಂದು ಖಚಿತಪಡಿಸಲು ಡೈರೆಕ್ಟ್ ಬೆನಫಿಟ್ ಟ್ರಾನ್ಸ್‌ಫರ್ ಮೂಲಕ ಸಾಧ್ಯವಾಗಿದೆ ಎಂದು, ಇದಕ್ಕಾಗಿ ಕೋಟ್ಯಂತರ ಜನಸಾಮಾನ್ಯರು ನರೇಂದ್ರ ಮೋದಿ ಸರಕಾರಕ್ಕೆ ಋಣಿಗಳಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಬಿಜೆಪಿ ಕುತ್ತಿಕೋಲ್ ಪಂ. 5ನೇ ವಾರ್ಡ್ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. 10 ವರ್ಷ ಆಡಳಿತ ನಡೆಸಿದ ಪಿಣರಾಯಿ ವಿಜಯನ್‌ರಿಂದ ರಾಜ್ಯದ ಆರ್ಥಿಕತೆ ಸಂಪೂರ್ಣ ನಾಶವಾಗಿದೆ. ಆರೋಗ್ಯ -ಶಿಕ್ಷಣ ವಲಯಗಳಲ್ಲಿ …