ಬಂಬ್ರಾಣ ನಿವಾಸಿ ಯುವತಿ ನಾಪತ್ತೆ

ಕುಂಬಳೆ ಠಾಣೆ ವ್ಯಾಪ್ತಿಯ ಯುವತಿ ಯೋರ್ವೆ ನಿನ್ನೆ ಸಂಜೆಯಿಂದ ನಾಪತ್ತೆಯಾಗಿ ರುವುದಾಗಿ ಸಹೋದರಿ ಕುಂಬಳೆ ಠಾಣೆಗೆ ದೂರು ನೀಡಿದ್ದಾರೆ. ಬಂಬ್ರಾಣ ನಿವಾಸಿ ರಂಜಿತ (22) ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದ್ದು, ಈ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪೆರ್ಲದ ಐಶ್ವರ್ಯ ಟ್ರೇಡಿಂಗ್ ಮಾಲಕ ನಾಪತ್ತೆ

ಪೆರ್ಲ: ಪೆರ್ಲ ನಿವಾಸಿ ಮಾಲಿಂಗ ಪಾಟಾಳಿಯವರ ಪುತ್ರ,  ಪೇಟೆಯಲ್ಲಿ ವ್ಯಾಪಾರ ಸಂಸ್ಥೆ ಹೊಂದಿರುವ ವಿವೇಕಾನಂದ (41) ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಈ ತಿಂಗಳ 13ರಂದು ಬೆಳಿಗ್ಗೆ ಮನೆಯಿಂದ ಅಂಗಡಿ ಗೆಂದು ತೆರಳಿದ್ದ ಇವರು ಆ ಬಳಿಕ ಹಿಂತಿರುಗಿಲ್ಲವೆಂದು ಪತ್ನಿ ಸುನಿತಾ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. 14ರಂದು ಬೆಳಿಗ್ಗೆ ಪತ್ನಿಗೆ ಕರೆ ಮಾಡಿ ನಾನು ಗೋವಾಗೆ ತೆರಳುತ್ತಿದ್ದೇನೆ ಎಂದು ತಿಳಿಸಿರುವುದಾಗಿಯೂ, ಆದರೆ ಗೋವಾದಲ್ಲಿರುವ ಸಂಬಂಧಿಕರ ಮನೆಗೆ ತಲುಪಿಲ್ಲವೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ. ಇವರು …

ಹೊಗೆಸೊಪ್ಪು ಉತ್ಪನ್ನ ವಶ: ಓರ್ವ ಸೆರೆ

ಉಪ್ಪಳ: ಶಂಕಾಸ್ಪದ ರೀತಿ ಯಲ್ಲಿ ಕಂಡು ಬಂದ ವ್ಯಕ್ತಿಯನ್ನು ಗಸ್ತು ನಡೆಸುತ್ತಿದ್ದ ಮಂಜೇಶ್ವರ ಠಾಣೆ ಎಸ್ ಐ ಉಮೇಶ್ ಸೆರೆ ಹಿಡಿದು ಪರಿಶೀಲಿಸಿದಾಗ 115 ಪ್ಯಾಕೆಟ್ ನಿಷೇಧಿತ ಹೊಗೆಸೊಪ್ಪು ಉತ್ಪನ್ನ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಸೆರೆ ಹಿಡಿದು ಕೇಸು ದಾಖಲಿಸಲಾಗಿದೆ. ಉತ್ತರಪ್ರದೇಶ ನಿವಾಸಿ ಅರವಿಂದ್ ಸೋಂಕಾರ್ (30) ಸೆರೆಯಾಗಿದ್ದು, ನಿನ್ನೆ ಸಂಜೆ ಉಪ್ಪಳ ಬಸ್ ನಿಲ್ದಾಣ ಪರಿಸರದಲ್ಲಿ ನಿಂತಿದ್ದ ವೇಳೆ ಸೆರೆ ಹಿಡಿಯಲಾಗಿದೆ.

ಗ್ರೇಡ್ ಎಸ್‌ಐ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಆಲಪ್ಪುಳ: ಚೆರಿಯ ಕಲವೂರು ಎಂಬಲ್ಲಿ ಪೊಲೀಸ್ ಅಧಿಕಾರಿ ಹೋಮ್‌ಸ್ಟೇಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಳಮಶ್ಶೇರಿ ಠಾಣೆಯ ಗ್ರೇಡ್ ಎಸ್‌ಐ ಅಜಯ್ ಸರಸ (55) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದವರು. ಗುರುವಾರ ಮಧ್ಯಾಹ್ನ ಅಜಯ್ ಕಲವೂರಿನ ಹೋಮ್‌ಸ್ಟೇಯಲ್ಲಿ ಕೊಠಡಿ ಪಡೆದಿದ್ದರು. ನಿನ್ನೆ ಬೆಳಿಗ್ಗೆ ಕೊಠಡಿ ಖಾಲಿ ಮಾಡಬೇಕಾದ ಸಮಯವಾದರೂ ಅಜಯ್‌ರನ್ನು ಕಾಣದ ಹಿನ್ನೆಲೆಯಲ್ಲಿ ನೌಕರರು ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಟುಂಬ ಸಮಸ್ಯೆ ಆತ್ಮಹತ್ಯೆಗೆ ಕಾರಣವೆಂದು ಪೊಲೀಸರು ಸೂಚಿಸುತ್ತಿದ್ದಾರೆ.

ಬಸ್ ಢಿಕ್ಕಿ ಹೊಡೆದು ಪುಟ್ಟ ಮಕ್ಕಳಿಬ್ಬರು ಸಾವನ್ನಪ್ಪಿದ ಪ್ರಕರಣ: ಚಾಲಕನಿಗೆ 2 ವರ್ಷ ಸಜೆ

ಕಾಸರಗೋಡು: ಬೈಕ್‌ಗೆ ಬಸ್ ಢಿಕ್ಕಿ ಹೊಡೆದು ಪುಟ್ಟ ಮಕ್ಕಳಿಬ್ಬರು ದಾರುಣವಾಗಿ ಸಾವನ್ನಪ್ಪಿದ ಪ್ರಕರಣದ ಆರೋಪಿಯಾಗಿರುವ ಬಸ್ ಚಾಲಕನಿಗೆ ಕಾಸರಗೋಡು ಚೀಫ್ ಜ್ಯುಡೀಶ್ಯಲ್ ಮೆಜಿಸ್ಟ್ರೇಟ್ ನ್ಯಾಯಾಲಯ ೨ ವರ್ಷ ಸಜೆ ವಿಧಿಸಿ ತೀರ್ಪು ನೀಡಿದೆ. ಬಸ್ ಚಾಲಕ ಮಂಜೇಶ್ವರ ನಿವಾಸಿ ಗೌತಮ್ (30) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಮೊಗ್ರಾಲ್ ಪುತ್ತೂರಿಗೆ ಸಮೀಪದ ಚೌಕಿ ನಿವಾಸಿ ಎ.ಕೆ. ರಜೀಶ್ ಎಂಬವರ ಮಕ್ಕಳಾದ ಮೊಹಮ್ಮದ್ ಮಿನಾಸ್ (ನಾಲ್ಕೂವರೆ ವರ್ಷ) ಮತ್ತು ಇಬ್ರಾಹಿಂ ಹಾಶಿಂ (7) ಎಂಬಿಬ್ಬರು ಮಕ್ಕಳು ಅಪಘಾತದಲ್ಲಿ ಸಾವನ್ನಪ್ಪಿದ …

ಪೆರಡಾಲ ಕ್ಷೇತ್ರ ರಸ್ತೆ ಅಭಿವೃದ್ಧಿಗೆ ಕ್ರಮ : ಶಾಸಕರ ನಿಧಿಯಿಂದ 45 ಲಕ್ಷ ರೂ. ಮಂಜೂರು

ಬದಿಯಡ್ಕ: ಬದಿಯಡ್ಕದಿಂದ ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರಕ್ಕೆ ತೆರಳುವ ರಸ್ತೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬದಿಯಡ್ಕ ಪಂಚಾಯತ್ 14ನೇ ವಾರ್ಡ್ (ಪಟ್ಟಾಜೆ) ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ ತಿಳಿಸಿದ್ದಾರೆ. ಬದಿಯಡ್ಕ – ಪೆರಡಾಲ ರಸ್ತೆ ಅಭಿವೃದ್ದಿಗೆ ಸ್ಥಳೀಯಾಡಳಿತ ರಸ್ತೆ ಅಭಿವೃದ್ಧಿ ಯೋಜನೆ ಪ್ರಕಾರ ಶಾಸಕರ ನಿಧಿಯಿಂದ 45 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ. ಈ ಯೋಜನೆಗೆ ಈಗಾಗಲೇ ತಾಂತ್ರಿಕ ಅನುಮತಿ ಲಭಿಸಿದೆ. ಟೆಂಡರ್ ಕ್ರಮ ಶೀಘ್ರ ನಡೆಯಲಿದೆಯೆಂದು ತಿಳಿಸಿದ್ದಾರೆ. ಚೆರ್ಕಳ – ಬದಿಯಡ್ಕ ರಸ್ತೆಯಿಂದ ಪೆರಡಾಲ …

ಶಾಂತಿಗುರಿ ಶ್ರೀ ಮೂಕಾಂಬಿಕ ದೇವಸ್ಥಾನ ಬ್ರಹ್ಮಕಲಶಾಭಿಷೇಕ ಪೂರ್ವಭಾವಿ ಸಭೆ

ಉಪ್ಪಳ: ಬೇಕೂರು ಬಳಿಯ ಶಾಂತಿಗುರಿ ಶ್ರೀ ಮೂಕಾಂಬಿಕ ದೇವಸ್ಥಾನದಲ್ಲಿ ಇಂದಿನಿAದ ಆರಂಭಗೊಳ್ಳುವ ಶ್ರೀ ಮೂಕಾಂಬಿಕಾ ದೇವಿಯ ಪೀಠ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಮತ್ತು ಸಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಕಾರ್ಯಕ್ರಮದ ಪೂರ್ವಭಾವಿ ಸಭೆ ನಿನ್ನೆ ಸಂಜೆ ಕ್ಷೇತ್ರದಲ್ಲಿ ನಡೆಯಿತು. ಇಂದು ಸಂಜೆ ನಡೆಯುವ ಹೊರೆಕಾಣಿಕೆ ಮೆರವಣಿಗೆ ಹಾಗೂ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ವ್ಯವಸ್ಥೆಯ ತಯಾರಿ ಮಾಡಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ, ಮಾತೃ ಸಮಿತಿ, ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳ ಸಹಿತ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಚಾಲಕ ನಿಧನ

ಕಾಸರಗೋಡು: ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಚಾಲಕ ನಿಧನ ಹೊಂದಿದರು. ಪರವನಡ್ಕ ಮಾಡಕ್ಕಾಲ್ ನಿವಾಸಿ ಎಂ. ಜಗದೀಶ್ (36) ಮೃತಪಟ್ಟ ವರು. ತಿರುವನಂತಪುರದ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದರು. ದಿ| ಟಿ. ಬಾಲಕೃಷ್ಣನ್- ಟಿ. ಕಲ್ಯಾಣಿ ದಂಪತಿ ಪುತ್ರನಾಗಿದ್ದಾರೆ. ಮೃತರು ತಾಯಿ, ಪತ್ನಿ ಮಾಳವಿಕ, ಪುತ್ರಿ ಇವ, ಸಹೋದರ ರಮೇಶ್, ಸಹೋದರಿ ಎಂ. ಜಯಂತಿ ಹಾಗೂ ಅಪಾರ ಬಂಧು-ಮಿತ್ರರನ್ನು  ಅಗಲಿದ್ದಾರೆ.

ಪ್ರಾಣಕ್ಕೆ ಅಪಾಯ: ಪೊಲೀಸರಿಂದ ರಕ್ಷಣೆ ಬೇಡಿದ ನಟಿ ಗೌತಮಿ

ಚೆನ್ನೈ: ತನ್ನ ಪ್ರಾಣಕ್ಕೆ ಬೆದರಿಕೆಯಿದೆ ಎಂದು ಸೂಚಿಸಿ ನಟಿ ಹಾಗೂ ರಾಜಕೀಯ ಕಾರ್ಯಕರ್ತೆ ಗೌತಮಿ ಪೊಲೀಸರಿಂದ ಸಂರಕ್ಷಣೆ ಆಗ್ರಹಿಸಿದ್ದಾರೆ. ತನ್ನ ಜೀವಕ್ಕೆ ಸಂರಕ್ಷಣೆ ಬೇಕೆಂದು ಗೌತಮಿ ಚೆನ್ನೈ ಪೊಲೀಸ್ ಕಮಿಷನರ್‌ರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ. ಆಸ್ತಿ ಸಂಬಂಧವಾದ ವಿವಾದದಲ್ಲಿ ಬೆದರಿಕೆ ಉಂಟಾಗಿದೆ ಎಂದು ನಟಿ ತಿಳಿಸಿದ್ದಾರೆ. ಚೆನ್ನೈಯ ನೀಲಂಗ ರೈಯಲ್ಲಿರುವ ಗೌತಮಿಯ 9 ಕೋಟಿ ರೂ. ಮೌಲ್ಯದ ಸೊತ್ತಿಗೆ ಸಂಬಂಧಿಸಿದ ವಿವಾದ ಈಗಲೂ ನೆಲೆಗೊಂಡಿದೆ. ಈ ಸೊತ್ತು ಅಳಗಪ್ಪನ್ ಎಂಬವರು ಅನಧಿಕೃತವಾಗಿ ಕೈವಶಪಡಿಸಿರುವುದಾಗಿ ಆರೋಪಿಸಿ ಗೌತಮಿ ಈ …

ವಿವಾಹ, ಮನೆ ರಿಪೇರಿ, ವೈದ್ಯಕೀಯ ಚಿಕಿತ್ಸೆಗೆ ಸಾಯಿರಾಂ ಕೃಷ್ಣ ಭಟ್‌ರಿಂದ ನೆರವು

ಬದಿಯಡ್ಕ: ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಬಡಜನತೆಗೆ ಉಚಿತವಾಗಿ ಕೊಡಮಾಡುವ ವಿವಿಧ ಸೌಲಭ್ಯಗಳ ವಿತರಣೆ ನಿನ್ನೆ ಕಿಳಿಂಗಾರು ಸಾಯಿನಿಲಯದಲ್ಲಿ ಜರಗಿತು. ಸಾಯಿರಾಂ ಗೋಪಾಲಕೃಷ್ಣ ಭಟ್‌ರ ನಂತರ ಅವರ ಪುತ್ರ ಕೆ.ಎನ್.ಕೃಷ್ಣ ಭಟ್ ಹಾಗೂ ಕುಟುಂಬ ಬಡಜನತೆಯ ಮದುವೆಗೆ ಧನಸಹಾಯ, ಮನೆ ರಿಪೇರಿ, ಹೊಲಿಗೆ ಯಂತ್ರ ವಿತರಣೆ ಮೊದಲಾದ ಸೇವಾಕಾರ್ಯಗಳು ನಡೆಸುತ್ತಿದೆ. ಒಂದು ಕಾಲಿಗೆ ಬಲವಿಲ್ಲದ ಅಮ್ಮು ಮುಕಾರಿಗದ್ದೆ ಎಂಬವರ ಮಗಳ ವಿವಾಹಕ್ಕೆ 20000 ರೂಪಾಯಿಯನ್ನು ವೇದಮೂರ್ತಿ ಮಹಾಲಿಂಗೇಶ್ವರ ಉಪಾಧ್ಯಾಯ ಹಸ್ತಾಂತರಿಸಿದರು.ಪೆರ್ಲದ ಕಿಶನ್ ಕುಮಾರ್ ಎಂಬವರಿಗೆ ಮನೆ ರಿಪೇರಿಗೆ …