ಪತ್ರಿಕೆಗಳಿಗೆ ಸ್ವಂತ ನಿಧನದ ಸುದ್ಧಿ ನೀಡಿದ ವ್ಯಕ್ತಿ: ನಕಲಿ ಚಿನ್ನಾಭರಣ ಅಡವಿರಿಸಿ ವಂಚಿಸಿದ ಆರೋಪಿ ಸೆರೆ

ಪಾಲಕ್ಕಾಡ್: ವಂಚನೆ ನಡೆಸಿ ಸೆರೆಯಾಗದಿರಲು ಮೃತ ಪಟ್ಟಿರುವುದಾಗಿ ಸ್ವಂತವಾಗಿ ವರದಿ ನೀಡಿ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಮಾಡಿ ತಲೆಮರೆಸಿಕೊಂಡಿದ್ದ ವ್ಯಕ್ತಿ ಸೆರೆಯಾಗಿದ್ದಾನೆ. ಪಾಲಕ್ಕಾಡ್ ಪೆರುಂಬಾಯಿಕ್ಕಾಡ್ ವಿಲ್ಲೇಜ್‌ನಲ್ಲಿ ಕುಮಾರನಲ್ಲೂರ್‌ಕರ ನಿವಾಸಿ ಸಜೀವ್ ಎಂ.ಆರ್.ನನ್ನು ಕೊಡೈಕೆನಲ್‌ನಿಂದ ಗಾಂಧೀನಗರ ಪೊಲೀಸರು ಬಂಧಿಸಿದ್ದಾರೆ. ನಕಲಿ ಚಿನ್ನಾಭರಣ ಅಡವಿರಿಸಿ ಹಣ ತೆಗೆದ ಪ್ರಕರಣದಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ. ಕುಮಾರನ ಲ್ಲೂರ್‌ನಲ್ಲಿರುವ ಚಿನ್ನ ಅಡವಿರಿಸುವ ಸಂಸ್ಥೆಯಿಂದ ನಾಲ್ಕೂವರೆ ಲಕ್ಷ ರೂ. ವಂಚಿಸಿದ ಬಳಿಕ ಆರೋಪಿ ತಮಿಳುನಾಡಿನಲ್ಲಿ ರಹಸ್ಯವಾಗಿ ವಾಸಿಸುತ್ತಿದ್ದನು. ೨೦೨೪ರಲ್ಲಿ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ. ವಂಚನೆ …

ಕನಿಯಾಲ: ಶ್ರೀ ಶಾರದಾ ಯಕ್ಷಗಾನ ಕಲಾಕೇಂದ್ರ ಉದ್ಘಾಟನೆ, ಸನ್ಮಾನ ನಾಳೆ

ಧರ್ಮತ್ತಡ್ಕ: ಶ್ರೀ ಶಾರದಾ ಯಕ್ಷಗಾನ ಕಲಾಕೇಂದ್ರ ಕನಿಯಾಲ ಇದರ ಉದ್ಘಾಟನೆ ಹಾಗೂ ಯಕ್ಷಗಾನ ಬಯಲಾಟ ಮತ್ತು ಯಕ್ಷಗಾನ ಸಾಧಕರಿಗೆ ಸನ್ಮಾನ, ವಿವಿಧ ರಂಗಗಳಲ್ಲಿ ದುಡಿಯುತ್ತಿರುವ ಸ್ಥಳೀಯರಿಗೆ ಅಭಿನಂದನಾ ಕಾರ್ಯಕ್ರಮ ನಾಳೆ ಕನಿಯಾಲ ಶ್ರೀ ಶಾರದಾ ಎಎಲ್‌ಪಿ ಶಾಲೆಯಲ್ಲಿ ನಡೆಯಲಿದೆ. ಸಂಜೆ 6.30ಕ್ಕೆ ದೀಪ ಪ್ರಜ್ವಲನೆ, ಬಳಿಕ ಮಕ್ಕಳ ಯಕ್ಷಗಾನ ಪ್ರದರ್ಶ ಗೊಳ್ಳಲಿದೆ. ರಾತ್ರಿ 8.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕಲಾಕೇಂದ್ರದ ಅಧ್ಯಕ್ಷ ವಿಷ್ಣು ಭಟ್ ಚಾಕಟೆಗುಳಿ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿ ರಾಮಕೃಷ್ಣ ಭಟ್ ಪೆರುವೋಡಿ, ಪುಷ್ಪಲಕ್ಷ್ಮೀ, ಸುಮನ …

ಮೇ 19ರಂದು ಸಚಿವೆ ಚಿಂಜುರಾಣಿ ಜಿಲ್ಲೆಯಲ್ಲಿ

ಕಾಸರಗೋಡು: ರಾಜ್ಯ ಪಶು ಸಂಗೋಪನಾ ಖಾತೆ ಸಚಿವೆ ಜೆ. ಚಿಂಜುರಾಣಿಯವರು ಮೇ 19ರಂದು ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಅಂದು ಬೆಳಿಗ್ಗೆ 10 ಗಂಟೆಗೆ ಇಡೆಯಿಂಕ್ಕೋಡಿನಲ್ಲಿ ನಡೆಯುವ ಹೈನುಗಾರಿಕಾ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಚಿವರು ಕಟ್ಟಡದ ಉದ್ಘಾಟನೆಯನ್ನು ನೆರವೇರಿಸುವರು. ಮಧ್ಯಾಹ್ನ 12 ಗಂಟೆಗೆ ನೀಲೇಶ್ವರ ಎಲ್‌ಎಂಟಿಸಿ ಕಟ್ಟಡ, 2 ಗಂಟೆಗೆ ಬೇಡಡ್ಕ ಆಡು ಫಾಂಗೂ ಭೇಟಿ ನೀಡುವರು. ಅಪರಾಹ್ನ 3 ಗಂಟೆಗೆ ಮುಳಿಯಾರಿನಲ್ಲಿ ಹೊಸದಾಗಿ ಆರಂಭಿಸಲಾದ ಆನಿಮಲ್ ಬರ್ತ್ ಕಂಟ್ರೋಲ್ (ಎಬಿಸಿ) ಕೇಂದ್ರದ ಉದ್ಘಾಟನೆ ನೆರವೇರಿಸುವರು. …

ಪೆರಿಯಾ ಅವಳಿ  ಕೊಲೆ ಪ್ರಕರಣ: ಆರೋಪಿಗಳಿಗೆ ಪರೋಲ್ ನೀಡಿದರೆ ಕಾನೂನು  ಸುವ್ಯವಸ್ಥೆ  ಉಂಟಾಗಲಿದೆ -ಪೊಲೀಸ್ ವರದಿ ಸಲ್ಲಿಕೆ

ಕಾಸರಗೋಡು: ಪೆರಿಯ ಕಲ್ಯೋಟ್‌ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್‌ರನ್ನು ಕೊಲೆಗೈದ  ಪ್ರಕರಣದಲ್ಲಿ ಎರ್ನಾಕುಳಂ ಸಿಬಿಐ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿ ಈಗ ಜೈಲಿನಲ್ಲಿರುವ ಅಪರಾಧಿಗಳಿಗೆ ಪರೋಲ್ ಮಂಜೂರು ಮಾಡಿದರೆ ಅದು ಕಾನೂನು ಮತ್ತು ಸುವವಸ್ಥೆ ಸಮಸ್ಯೆ ಸೃಷ್ಟಿಗೆ  ದಾರಿ ಮಾಡಿಕೊಡಲಿದೆಯೆಂದು ಬೇಕಲ ಪೊಲೀಸರು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.  ಅವಳಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಈಗ ಜೈಲಿನಲ್ಲಿ ಕಳೆಯುತ್ತಿರುವ ಒಂದನೇ ಆರೋಪಿ ಎ. ಪೀತಾಂಭರನ್ ಮತ್ತು ನಾಲ್ಕನೇ ಆರೋಪಿ ಕೆ. ಅನಿಲ್ ಕುಮಾರ್ …

ಪೆಟ್ರೋಲ್ ಪಂಪ್ ಟ್ಯಾಂಕ್ ಸ್ಥಾಪಿಸಲು ತೋಡಿದ ಹೊಂಡದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಕಾಸರಗೋಡು: ಪೆರಿಯ ನವೋದ ಯನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಪೆಟ್ರೋಲ್ ಪಂಪ್‌ನ ಟ್ಯಾಂಕ್ ಸ್ಥಾಪಿಸಲು ತೋಡಿದ ಹೊಂಡದಲ್ಲಿ  ವ್ಯಕ್ತಿಯೊಬ್ಬರು ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ವೇಳೆ  ಮೃತದೇಹ ಪತ್ತೆಯಾಗಿದ್ದು, ಆದರೆ  ವ್ಯಕ್ತಿಯ ಗುರುತು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.  ಮೃತದೇಹವನ್ನು ಸಮಗ್ರ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾ ಗಿದೆ.  ಹೊಂಡದಿಂದ ದುರ್ನಾತ ಬೀರತೊಡಗಿದ ಹಿನ್ನೆಲೆಯಲ್ಲಿ ಸಮೀಪದ ಮನೆಗಳ ಮಕ್ಕಳು ಅಲ್ಲಿಗೆ ತೆರಳಿ ನೋಡಿದಾಗ ಮೃತದೇಹ ಕಂಡುಬಂದಿತ್ತು. ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿದ್ದು ಮೂರು ದಿನಗಳ ಹಿಂದೆ …

ನಾಪತ್ತೆಯಾದ ವ್ಯಕ್ತಿ ಕಾಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ನಾಪತ್ತೆಯಾಗಿದ್ದ ವ್ಯಕ್ತಿ ಕಾಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವರ್ಕಾಡಿ ಕೆಳಗಿನ ಉಜಾರು ನಿವಾಸಿ ಥೋಮಸ್ ಡಿ’ಸೋಜಾ (72) ಎಂಬವರು ಮೃತಪಟ್ಟ ವ್ಯಕ್ತಿ. ಇವರ ಮೃತದೇಹ ಮನೆಯಿಂದ ಅರ್ಧ ಕಿಲೋ ಮೀಟರ್ ದೂರದ ಕಾಡಿನಲ್ಲಿ ಪತ್ತೆಯಾಗಿದೆ. ಸಮೀಪದಲ್ಲೇ ವಿಷ ಹಾಗೂ ಮದ್ಯದ ಬಾಟ್ಲಿಗಳು ಕಂಡುಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.  ಮೇ ೧೩ರಂದು ಥೋಮಸ್ ಡಿ’ಸೋಜಾ ನಾಪತ್ತೆ ಯಾಗಿದ್ದರು. ಅಂದು ಸಂಜೆ ಮನೆಯಿಂದ ಹೊರಗೆ ತೆರಳಿದ …

ರಾಷ್ಟ್ರೀಯ ಹೆದ್ದಾರಿ ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣ: ಸಂದಿಗ್ಧತೆಯೊಂದಿಗೆ ಆತಂಕ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣ ಆತಂಕದ ಜೊತೆಗೆ ಸಂದಿಗ್ಧತೆಯನ್ನು ಹುಟ್ಟಿಸಿದೆ. ಈ ಹಿಂದೆ ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಿಸುವ ಕಾಮಗಾರಿ ಆರಂಭಗೊಂಡಿದ್ದು, ಆ ವೇಳೆ  ಟೋಲ್ ಬೂತ್ ನಿರ್ಮಿಸಕೂಡದೆಂಬ ಒತ್ತಾಯಿಸಿ ನಾಗರಿಕರ ನೇತೃತ್ವದ ಜನಪರ ಸಮಿತಿ ರಂಗಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕಾಮಗಾರಿಯನ್ನು ನಿಲ್ಲಿಸಿದ್ದರು. ನಿನ್ನೆ ಬೆಳಿಗ್ಗೆ ಟೋಲ್ ಬೂತ್ ನಿರ್ಮಾಣ ಕೆಲಸ ಪುನರಾರಂಭಿಸಲು ಗುತ್ತಿಗೆದಾರರು ಪ್ರಯತ್ನಿಸಿದ್ದು, ಅದರ ಅಂಗವಾಗಿ ಪೊಲೀಸರು ಸ್ಥಳಕ್ಕೆ ತಲುಪಿ ಭದ್ರತೆ ಏರ್ಪಡಿಸಿದ್ದರು. ವಿಷಯ ತಿಳಿದ ನಾಗರಿಕರು …

ಎಂಡಿಎಂಎ ಸಹಿತ ಬೇಳ ನಿವಾಸಿ ಸೆರೆ

ಕಾಸರಗೋಡು: ಮಾರಕ ಮಾದಕವಸ್ತು ವಾದ ಎಂಡಿಎಂಎ ಸಹಿತ ಯುವಕನನ್ನು ಬಂಧಿಸಲಾಗಿದೆ. ಬೇಳ ಕುಂಜಾರು ಹೌಸ್‌ನ ಕೆ.ಎ. ಇಬ್ರಾಹಿಂ ಇಷ್ಫಾಕ್ (27) ಎಂಬಾತ ನನ್ನು ಕಾಸರಗೋಡು ನಗರ ಠಾಣೆ ಎಸ್‌ಐ ಕೆ. ರಾಜೀವನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಇಬ್ರಾಹಿಂ ಇಷ್ಫಾಕ್‌ನ ಕೈಯಿಂದ 1.17 ಗ್ರಾಂ ಎಂಡಿಎಂಎ ವಶಪಡಿಸಲಾ ಗಿದೆ. ನಿನ್ನೆ ರಾತ್ರಿ ೧೦.೩೦ರ ವೇಳೆ ಕಾಸರಗೋಡು ಕೆಎಸ್‌ಆರ್‌ಟಿಸಿ ಡಿಪೋ ಸಮೀಪದಿಂದ ಈತನನ್ನು ಬಂಧಿಸಲಾಗಿದೆ. ಪಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರನ್ನು ಕಂಡು ಪರಾರಿಯಾಗಲೆತ್ನಿಸಿದಾಗ ಇಬ್ರಾಹಿಂ ಇಷ್ಫಾಕ್‌ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಬಳಿಕ …

ಅಂಚೆ ಮತಗಳಲ್ಲಿ ತಿದ್ದುಪಡಿ ನಡೆಸಿರುವುದಾಗಿ ಹೇಳಿಕೆ: ಸಿಪಿಎಂ ನೇತಾರ ಜಿ. ಸುಧಾಕರನ್‌ರಿಂದ ಚುನಾವಣಾ ಅಧಿಕಾರಿಗಳು ಮಾಹಿತಿ ಸಂಗ್ರಹ

ಆಲಪ್ಪುಳ: ಚುನಾವಣೆಯಲ್ಲಿ ಅಂಚೆ ಮತಗಳಲ್ಲಿ ತಿದ್ದುಪಡಿ ನಡೆಸಲಾಯಿತೆಂಬ ಬಗ್ಗೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಹಿರಿಯ ಸಿಪಿಎಂ ನೇತಾರ, ಮಾಜಿ ಸಚಿವರಾದ ಜಿ. ಸುಧಾಕರನ್ ವಿರುದ್ಧ ಕೇಸು ದಾಖಲಿಸಲಾಗುವುದೆಂಬ ಸೂಚನೆಯಿದೆ. ಈ ಬಗ್ಗೆ ತುರ್ತು ಕ್ರಮಕ್ಕಾಗಿ ಜಿಲ್ಲಾ ಚುನಾವಣಾ ಅಧಿಕಾರಿಗೆ ಮುಖ್ಯ ಚುನಾವಣಾ ಆಯುಕ್ತರು ನಿರ್ದೇಶ ನೀಡಿದ್ದಾರೆ. ಚುನಾವಣಾ ಅಧಿಕಾರಿಗಳು ಸುಧಾಕರನ್‌ರ ಆಲಪ್ಪುಳದ ಮನೆಗೆ ತಲುಪಿ ಅವರ ಹೇಳಿಕೆ ದಾಖಲಿಸಿ ಕೊಂಡಿದ್ದಾರೆ. ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮುಖ್ಯ ಚುನಾವಣಾ ಆಯುಕ್ತ ರತನ್ ಯು. ಖೇಲ್‌ಕರ್ ತಿಳಿಸಿದ್ದಾರೆ. ಆಲಪ್ಪುಳದ ಎನ್‌ಜಿಒ …

ವನ್ಯಮೃಗಗಳ ಬೇಟೆ ಪ್ರಕರಣದಲ್ಲಿ ಆರೋಪಿಯಾದ ವ್ಯಕ್ತಿ ಗುಂಡೇಟು ತಗಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಲ್ಲಿಕೋಟೆ: ವನ್ಯಮೃಗಗಳನ್ನು ಬೇಟೆಯಾಡಿದ ಸಂಬಂಧ ಎರಡು ಕೇಸುಗಳಲ್ಲಿ ಆರೋಪಿಯಾದ ವ್ಯಕ್ತಿ ಗುಂಡೇಟು ತಗಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೋಡಂಜೇರಿ ಪಾತಿಪ್ಪಾರ ಎಂಬಲ್ಲಿಗೆ ಸಮೀಪದ ಕಾಟಿಲೇಡತ್ ಚಂದ್ರನ್ (52) ಮೃತಪಟ್ಟ ವ್ಯಕ್ತಿ. ವನ್ಯಮೃಗಗಳನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡಿದ ಪ್ರಕರಣದಲ್ಲಿ ಚಂದ್ರನ್ ವಿರುದ್ಧ ಅರಣ್ಯ ಇಲಾಖೆ ಕೇಸು ದಾಖಲಿಸಿಕೊಂಡಿತ್ತು. ಈ ಮಧ್ಯೆ ಚಂದ್ರನ್ ಮೂರು ದಿನಗಳಿಂದ ನಾಪತ್ತೆಯಾಗಿದ್ದನೆನ್ನಲಾಗಿದೆ. ನಿನ್ನೆ ಸಂಜೆ ೩ ಗಂಟೆ ವೇಳೆ ತೋಡೊಂದರ ಬಳಿ ಚಂದ್ರನ್‌ರ ಮೃತದೇಹ ಪತ್ತೆಯಾಗಿದೆ. ಸಮೀಪದಲ್ಲೇ ಪರವಾನಗಿ ಇಲ್ಲದ ಕೋವಿ ಕೂಡಾ …