ಅಸೌಖ್ಯ: ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು

ಕಾಸರಗೋಡು: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಕುಂಡಂಗುಳಿ ನೆಡುಂಬಯಲ್ ನಿವಾಸಿ ರಮ್ಯ (37) ಮೃತಪಟ್ಟ ಯುವತಿ. ಒಂದು ತಿಂಗಳಿನಿಂದ ಇವರು ತಲಶ್ಶೇ ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಕುಂಡಂಗುಳಿ ನೆಡುಂಬಯಲಿನ ಟೈಲರ್ ವಿ.ಪಿ. ಗೋವಿಂದನ್- ಪದ್ಮಾವತಿ ದಂಪತಿಯ ಪುತ್ರಿಯಾದ ಮೃತರು ಪತಿ ರವೀಂದ್ರನ್ (ಬಂದಡ್ಕ), ಸಹೋದರ ರಾಜೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಂಗಳೂರು- ಕಾಸರಗೋಡು- ರಾಮೇಶ್ವರ ರೈಲು ಸೇವೆಗೆ ಹಸಿರು ನಿಶಾನೆ

ಕಾಸರಗೋಡು: ಮಂಗಳೂರು (ಬೈಂದೂರು)- ಕಾಸರಗೋಡು- ರಾಮೇಶ್ವರಂ ರೂಟ್‌ನಲ್ಲಿ ರೈಲು ಸೇವೆ ಆರಂಭಿಸಬೇಕೆಂಬ ಜಿಲ್ಲೆಯ ಜನರ ದೀರ್ಘ ಕಾಲದ ಬೇಡಿಕೆಗೆ ಕೊನೆಗೂ ಹಸಿರುನಿಶಾನೆ ಲಭಿಸಿದೆ. ದಕ್ಷಿಣ ರೈಲ್ವೇ ಜನರಲ್ ಮೆನೇಜರ್ ಆರ್.ಎನ್. ಸಿಂಗ್‌ರ ಅಧ್ಯಕ್ಷತೆಯಲ್ಲಿ ಪಾಲಕ್ಕಾಡ್ ರೈಲ್ವೇ ಡಿವಿಷನ್‌ನ  ವ್ಯಾಪ್ತಿಗೊಳಪಟ್ಟ ಸಂಸದರು ಪಾಲ್ಗೊಂಡ ಸಭೆಯಲ್ಲಿ ಈ ಹೊಸ ರೈಲು ಸೇವೆ ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಇದರಂತೆ ಈ ಹೊಸ ರೈಲು ಸೇವೆ ಮುಂದಿನ ತಿಂಗಳಿಂದ ಆರಂಭಿಸಲಿದೆ ಎಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ. ಇದರ ಹೊರತಾಗಿ ಕೊಯಂ ಬತ್ತೂರು- …

ಎದೆಗೆ ದೋಣಿ ಬಡಿದು ಬೆಸ್ತ ಸಾವು

ಕಾಸರಗೋಡು: ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಹಿಂತಿರುಗುತ್ತಿದ್ದ ವೇಳೆ ಬಲವಾದ ಅಲೆಯೆದ್ದು ಅದರಿಂದ ದೋಣಿ ನಿಯಂತ್ರಣ ತಪ್ಪಿ ಅದರ ಒಂದು ಭಾಗ ಎದೆಗೆ ತಾಗಿ ಬೆಸ್ತ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.  ಅಜಾನೂರು ಕಡಪ್ಪುರದ ಕಣ್ಣನ್‌ರ ಪುತ್ರ ಕೆ. ರವಿ (50) ಸಾವನ್ನಪ್ಪಿದ ವ್ಯಕ್ತಿ. ನಿನ್ನೆ ಮೂರು ಗಂಟೆ ವೇಳೆ ಪಡನ್ನ ತೈಕಡಪ್ಪುರದ ಅಳಿವೆ ಬಾಗಿಲಿನಲ್ಲಿ ಈ ಘಟನೆ ನಡೆದಿದೆ.  ಎ.ಕೆ. ರಂಜಿತ್ ಎಂಬವರ ಮಾಲಕತ್ವದಲ್ಲಿರುವ ಕೃಷ್ಣ ಕೃಪಾ ಎಂಬಹೆಸರಿನ ಫೈಬರ್ ದೋಣಿಯಲ್ಲಿ ರವಿ ಮತ್ತು ಇತರ ಕಾರ್ಮಿ …

ಹಡಗಿನಲ್ಲಿ ಸಿಬ್ಬಂದಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಹಡಗಿನೊಳಗೆ ಸಿಬ್ಬಂದಿಯೋರ್ವ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಲಕುನ್ನಿಗೆ ಸಮೀಪದ ತಿರುವಕ್ಕೋಳಿ ಅಂಗಕಳರಿ ವೀಟಿಲ್‌ನ ಪ್ರಶಾಂತ್ (36) ಸಾವನ್ನಪ್ಪಿದ ವ್ಯಕ್ತಿ. ಜಪಾನ್‌ನಿಂದ ಯುಎಸ್ ಬಂದರಿಗೆ ಹೋಗುತ್ತಿದ್ದ ತೈಬೋಕ್ಸ್ ಎಕ್ಸ್‌ಪ್ಲೋರ್ ಎಂಬ ಹೆಸರಿನ ಎಲ್‌ಪಿಜಿ ಹಡಗಿನಲ್ಲಿ ಸಾಗುತ್ತಿದ್ದ ವೇಳೆ ಪ್ರಶಾಂತ್  ಹಡಗಿನೊಳಗೆ ಕುಸಿದು ಬಿದ್ದಿದ್ದಾರೆ. ಇವರು ಪ್ರಸ್ತುತ ಹಡಗಿನ ಸಿಬ್ಬಂದಿಯಾ ಗಿದ್ದಾರೆ.  ಹೃದಯಾಘಾತವೇ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ. ಪ್ರಶಾಂತ್‌ರ ಸಾವಿನ ಸುದ್ದಿಯನ್ನು ಆ ಹಡಗಿನವರೇ ಮನೆಯವರಿಗೆ  ಫೋನ್ ಮೂಲಕ ತಿಳಿಸಿದ್ದಾರೆ. ಹಡಗಿನ ಇಂಜಿನ್ ರೂಂನ ಮೋಟಾರ್ ಮ್ಯಾನ್ ಆಗಿ …

ರಾಜ್ಯದಲ್ಲಿ ಮತ್ತೆ ಕಾಲರಾ ಭೀತಿ : ಆಲಪ್ಪುಳದಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತ್ಯು

ಆಲಪ್ಪುಳ: ರಾಜ್ಯದಲ್ಲಿ ಕಾಲರಾ ಬಾಧಿಸಿ ಚಿಕಿತ್ಸೆಯಲ್ಲಿದ್ದ ಇನ್ನೋರ್ವ ವ್ಯಕ್ತಿ ಮೃತಪಟ್ಟರು. ತಿರುವಲ್ಲದ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಯಲ್ಲಿದ್ದ ಆಲಪ್ಪುಳ ತಲವಡಿ ಎಂಬಲ್ಲಿನ ಟಿ.ಜಿ. ರಘು (48) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ರಘುವಿಗೆ ರೋಗ ಯಾರಿಂದ ಹರಡಿದೆ ಎಂದು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅಸೌಖ್ಯ ಬಾಧಿಸಿ ಚಿಕಿತ್ಸೆಗೆ ತಲುಪಿದ ಇವರ ರಕ್ತ ತಪಾಸಣೆ ನಡೆಸಿದಾಗ ಇವರಿಗೆ ಕಾಲರಾ ಬಾಧಿಸಿರುವುದು ತಿಳಿದು ಬಂದಿತ್ತು. ಮಲ ತಪಾಸಣೆಯ ಫಲಿತಾಂಶ ಲಭಿಸಿದ ಬಳಿಕವೇ ರೋಗದ ಕುರಿತು ನಿರ್ಧಾರ ಕೈಗೊಳ್ಳಲು ಸಾಧ್ಯವಿದೆ ಎಂದು …

ಮೂರು ವರ್ಷಗಳಿಂದ ಬಿಸಿಲು- ಮಳೆಗೆ ನಿಂತು ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು: ಪಂಚಾಯತ್‌ನಿಂದ ಮೌನ

ಬದಿಯಡ್ಕ: ಕಾಂಕ್ರೀಟ್ ತುಂಡಾಗಿ ಬಿದ್ದು ಇಬ್ಬರು ಗಾಯಗೊಂಡ ಹಿನ್ನೆಲೆಯಲ್ಲಿ ಮುರಿದು ತೆಗೆದ ಬಸ್ ಪ್ರಯಾಣಿಕರ ತಂಗುದಾಣವನ್ನು ಪುನರ್ ನಿರ್ಮಿಸಲು ಕ್ರಮವುಂಟಾಗಿಲ್ಲ. ಇದರ ಪರಿಣಾಮವಾಗಿ ಪ್ರಯಾಣಿಕರಿಗೆ ಬಸ್‌ಗಾಗಿ ಕಾದು ನಿಲ್ಲಲು ಸೌಕರ್ಯವಿಲ್ಲದಂತಾಗಿದೆ. ಇದನ್ನು ಪ್ರತಿಭಟಿಸಿ ಸಾಮಾಜಿಕ ಕಾರ್ಯಕರ್ತ ಹಾರಿಸ್ ಬದಿಯಡ್ಕ ಅವರ ನೇತೃತ್ವದಲ್ಲಿ ನಾಗರಿಕರು ಹೊಸ ತಂಗುದಾಣ ನಿರ್ಮಿಸಲು ನಿರ್ಧರಿಸಿದ್ದಾರೆ. ಪಂಚಾಯತ್ ಅಧ್ಯಕ್ಷೆಯ ವಾರ್ಡ್ ಆಗಿರುವ ಬೀಜಂತಡ್ಕದಲ್ಲಿ ಬಸ್ ಪ್ರಯಾಣಿಕರ ತಂಗುದಾಣದ ಸಮಸ್ಯೆ ಎದುರಾಗಿದೆ. ಇದರಿಂದ ಪ್ರಯಾಣಿಕರು ಬಿಸಿಲು-ಮಳೆಗೆ ರಸ್ತೆ ಬದಿಯಲ್ಲೇ ನಿಂತು ಬಸ್‌ಗಾಗಿ ಕಾಯಬೇಕಾಗಿದೆ. ಚೆರ್ಕಳ- ಕಲ್ಲಡ್ಕ …

ಯುವಕ ದುಬಾಯಿಯಲ್ಲಿ ಹೃದಯಾಘಾತದಿಂದ ನಿಧನ

ಕಾಸರಗೋಡು: ಉದುಮ ಮಾಂಙಾಡ್ ನಿವಾಸಿ ದುಬಾಯಿಯಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಮಾಂಙಾಡ್ ಅಂಬಾಪುರ ರಸ್ತೆ ನಿವಾಸಿ ಪಾಕ್ಯಾರ ಮಾಂಙಾಡನ್ ಹಸೈನಾರ್- ರಾಹಿಲ ದಂಪತಿಯ ಪುತ್ರ ರಕೀಬ್ (25) ಮೃತ ಪಟ್ಟ ವ್ಯಕ್ತಿ. ದುಬಾಯಿಯ ಕಂಪೆನಿಯೊಂದರಲ್ಲಿ ಇವರು ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸು ತ್ತಿದ್ದರು. ಮೃತದೇಹವನ್ನು ಊರಿಗೆ ತಲುಪಿಸಲು ಕ್ರಮ ಆರಂಭಿಸಲಾಗಿದೆ. ಮೃತರು ತಂದೆ, ತಾಯಿ, ಸಹೋದರ ರಾದ ಶಫೀಕ್, ತೌಫೀಕ್ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಶಾಂತಿಗುರಿ ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ  ಬ್ರಹ್ಮಕಲಶಾಭಿಷೇಕ ಹೊರೆಕಾಣಿಕೆ ಮೆರವಣಿಗೆ ನಾಳೆ

ಉಪ್ಪಳ: ಬೇಕೂರು ಬಳಿಯ ಶಾಂತಿಗುರಿ ಶ್ರೀ ಮೂಕಾಂಬಿಕಾ ದೇವ ಸ್ಥಾನದಲ್ಲಿ ಶ್ರೀ ಮೂಕಾಂಬಿಕಾ ದೇ ವಿಯ ಪೀಠಪ್ರತ್ಗ್ರಿಡಿ ಬ್ರಹ್ಮಕಲಶಾಭಿಷೇಕ ಮತ್ತು ಸಪರಿವಾರ ದೈವಗಳ ಪ್ರತ್ಗ್ರಿಡಿ ಕಲಶಾಭಿಷೇಕ ನಾಳೆಯಿಂದ ಈ ತಿಂಗಳ 19ರ ತನಕ ನಡೆಯಲಿದೆ. ಇದರಂಗವಾಗಿ ಹೊರೆಕಾಣಿಕೆ ಮೆರ ವಣಿಗೆ ನಾಳೆ ಅಪರಾಹ್ನ 3 ಗಂಟೆಗೆ ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಿಂದ ಹೊರಡಲಿದೆ. 5.30ರಿಂದ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, 6ರಿಂದ ಉಗ್ರಾಣ ಮುಹೂರ್ತ, 6.30ಕ್ಕೆ ಶಿಲ್ಪಿಗಳಿಂದ ಆಲಯ ಪರಿಗ್ರಹ ಸಹಿತ ವಿವಿಧ ಕಾರ್ಯಕ್ರಮ, ರಾತ್ರಿ 7ರಿಂದ ವಿವಿಧ …

ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕನನ್ನು ಕೊಂದು ತಿಂದ ನರಭಕ್ಷಕ ಹುಲಿ

ಮಲಪ್ಪುರಂ: ಬೆಳಿಗ್ಗೆ ಎಂದಿನಂತೆ ರಬ್ಬರ್ ತೋಟಕ್ಕೆ ಟಾಪಿಂಗ್ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕನನ್ನು ನರಭಕ್ಷಕ ಹುಲಿಯೊಂದು ಕೊಂದು ತಿಂದ ಘಟನೆ ಮಲಪ್ಪುರಂ ಜಿಲ್ಲೆಯ ಕಾಳಿಕಾವು ಎಂಬಲ್ಲಿ ನಿನ್ನೆ ನಡೆದಿದೆ. ತೀವ್ರಗೊಂಡಿದೆ. ಕಾಳಿಕಾವು ಕಲ್ಲಾಮೂಲೆ ಪಾಲತ್ತಿಂಗಾಲ್‌ನ ಕಳಪರಂಬಿಲ್ ಗಫೂರ್ ಅಲಿ (41) ಹುಲಿ ದಾಳಿಗೆ ಬಲಿಯಾದ ದುರ್ದೈವಿ ಕಾರ್ಮಿಕ. ರಬ್ಬರ್ ಟ್ಯಾಪಿಂಗ್ ಕಾರ್ಮಿಕ ನಾಗಿರುವ ಗಫೂರ್ ಅಲಿ ಎಂದಿನಂತೆ ನಿನ್ನೆ ಬೆಳಿಗ್ಗೆ ಮಲೆನಾಡ ವಲಯವಾದ ಕಾಳಿಕಾವಿಗೆ ಸಮೀಪದ ಅಡಯಾಕುಂಡು ರಾವುತ್ತನ್‌ಕಾಡ್ ಮಲೆಯ ರಬ್ಬರ್ ತೋಟಕ್ಕೆ ಇನ್ನೋರ್ವ ಕಾಮಿನ ಕಲ್ಲಾಮುಲ ಅಬ್ದುಲ್ …

ಉಪ್ಪಳ ಬಸ್ ನಿಲ್ದಾಣ ಸುತ್ತ ಕತ್ತಲು : ಬೀದಿ ದೀಪ ಆಳವಡಿಸಲು ಆಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್‌ನ ಉಪ್ಪಳ ಬಸ್ ನಿಲ್ದಾಣದಲ್ಲಿ ರಾತ್ರಿ ಬೆಳಕಿನ ವ್ಯವಸ್ಥೆಯಿಲ್ಲದೆ ಕತ್ತಲಾವರಿಸಿ ಆತಂಕದ ವಾತಾವರಣ ಉಂಟಾಗುತ್ತದೆ. ಬೀದಿ ದೀಪಗಳನ್ನು ಸ್ಥಾಪಿಸಿ ಬೆಳಕಿನ ವ್ಯವಸ್ಥೆ  ಕಲ್ಪಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಹಿಂದೆ ಬಸ್ ನಿಲ್ದಾಣದ ಹೆದ್ದಾರಿ ಬದಿಯಲ್ಲಿದ್ದ ಬೀದಿ ದೀಪಗಳನ್ನು ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದ್ದು, ಮರು ಸ್ಥಾಪನೆಗೆ ಕ್ರಮ ಕೈಗೊಂಡಿಲ್ಲ. ಇದು ಸಾರ್ವಜನಿಕ ರನ್ನು ಸಂಕಷ್ಟಕ್ಕೊಳಗಾ ಗುವಂತೆ ಮಾಡಿರುವುದಾಗಿ ದೂರಲಾಗಿದೆ. ಬಸ್ ನಿಲ್ದಾಣದಲ್ಲಿ ಹಲವಾರು ವ್ಯಾಪಾರ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಪೊಲೀಸ್ ಕಂಟ್ರೋಲ್ ಕೊಠಡಿ ಇದ್ದು …