ಮುಳಿಯಾರು ಎಬಿಸಿ ಕೇಂದ್ರ ಬೇಳ ಅಡ್ಮಿನಿಸ್ಟ್ರೇಟಿವ್ ಕಟ್ಟಡ ಉದ್ಘಾಟನೆ 19ರಂದು

ಕಾಸರಗೋಡು: ಮೃಗ ಸಂರಕ್ಷಣಾ ಇಲಾಖೆ, ತ್ರಿಸ್ತರ ಪಂಚಾಯತ್‌ಗಳು ಜಂಟಿಯಾಗಿ ಜ್ಯಾರಿಗೊಳಿಸುವ ಎಬಿಸಿ ಕೇಂದ್ರ ಮುಳಿಯಾರಿನಲ್ಲಿ ಚಟುವಟಿಕೆ ಆರಂಭಿಸಲಿದೆ. ಈ ಕೇಂದ್ರವನ್ನು ಈತಿಂಗಳ 19ರಂದು ಹೈನುಗಾರಿಕೆ ಇಲಾಖೆ ಸಚಿವೆ ಜೆ. ಚಿಂಜುರಾಣಿ ಉದ್ಘಾಟಿಸುವರು. ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ನಿಯಂತ್ರಿಸಲು ಎಬಿಸಿ ಕೇಂದ್ರಗಳ ಚಟುವಟಿಕೆ ಇನ್ನಷ್ಟು ಚುರುಕುಗೊಳಿಸಲು ತೀರ್ಮಾನಿ ಸಲಾಗಿದೆ. 2016ರಲ್ಲಿ ಜಿಲ್ಲೆಯಲ್ಲಿ ಎಬಿಸಿ ಕೇಂದ್ರಗಳು ಜಾರಿಗೆ ಬಂದಿತ್ತು. 19ರಂದು ಅಪರಾಹ 3 ಗಂಟೆಗೆ ಉದ್ಘಾಟನೆ ನಡೆಯಲಿದೆ. ಅಂದು ಜಿಲ್ಲೆಗೆ ತಲುಪುವ ಸಚಿವೆ ಚಿಂಜುರಾಣಿ ಬೆಳಿಗ್ಗೆ …

ಬದಿಯಡ್ಕ: ಬ್ಯಾಂಕ್ ಪ್ರಬಂಧಕಿಗೆ ಬೀಳ್ಕೊಡುಗೆ

ಬದಿಯಡ್ಕ: ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಬದಿಯಡ್ಕ ಶಾಖೆಯಿಂದ ವರ್ಗಾವಣೆಗೊಳ್ಳುತ್ತಿರುವ ಶಾಖಾ ಪ್ರಬಂಧಕಿ ವಸಂತಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿ ಸಲಾಯಿತು. ಕಾರ್ಯಕ್ರಮದಲ್ಲಿ  ನಿವೃತ್ತ ಯೋಧ ದಾಮೋದರ ಅಧ್ಯಕ್ಷತೆ ವಹಿಸಿದರು.  ಬದಿಯಡ್ಕ ಪಂಚಾಯತ್ ಸದಸ್ಯ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು. ಪಂಚಾಯತ್ ಸದಸ್ಯರಾದ ಈಶ್ವರ ಮಾಸ್ತರ್, ಗೋಪಾಲಕೃಷ್ಣ ಮುಂ ಡೋಳುಮೂಲೆ, ಅನಂತಪ್ರಸಾದ್, ಬಿ. ಹಂಸ, ರಮೇಶ್ ಆಳ್ವ ಅತಿಥಿಗಳಾಗಿ ಉಪಸ್ಥಿತರಿದ್ದರು. ಹರೀಶ್ ನಾರಂಪಾಡಿ ಸ್ವಾಗತಿಸಿ, ಕೃಷ್ಣ ಪ್ರಸಾದ್ ವಂದಿಸಿದರು.

ಆರ್ಯಸಮಾಜದ ಕುಂಟಾರು ವಲಯ ಸಮಾವೇಶ 18ರಂದು

ಮುಳ್ಳೇರಿಯ: ಆರ್ಯ ಮರಾಠ ಸಮಾಜ ಮಂಗಳೂರು-ಕಾಸರಗೋಡು ಇದರ ಕುಂಟಾರು ವಲಯ ಸಮಾವೇಶ ಮೇ ೧೮ರಂದು ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಲ್ಲಿ ನಡೆಯಲಿದೆ.ಅಂದು ಬೆಳಿಗ್ಗೆ ೯.೩೦ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಆರಂಭ, ಮಧ್ಯಾಹ್ನ ಮಹಾಮಂಗಳಾರತಿ, ಅನ್ನಸಂತರ್ಪಣೆ, ೧.೩೦ರಿಂದ ನಡೆಯುವ ಸಭಾಕಾರ್ಯಕ್ರಮವನ್ನು ಸಮಾಜ ಸಂಘದ ಗೌರವಾಧ್ಯಕ್ಷೆ ಪ್ರೇಮಲತಾ.ವೈ. ರಾವ್ ಉದ್ಘಾಟಿ ಸುವರು, ಆರ್ಯ ಸಮುದಾಯ ಸಂಘದ ಕೋಶಾಧಿಕಾರಿ ಪ್ರಕಾಶ. ಎಂ. ಅಧ್ಯಕ್ಷತೆ ವಹಿಸುವರು. ಆರ್ಯ ಮರಾಠ ಸಮಾಜ ಸಂಘದ ಅಧ್ಯಕ್ಷ ಮೋಹನ್ ರಾವ್, ಆರ್ಯ ಸಮುದಾಯ ಸಂಘ …

ನಕಲಿ ಪ್ರಮಾಣಪತ್ರ ತಯಾರಿ ಕೇಂದ್ರ: ಕೇರಳ ಮಾತ್ರವಲ್ಲದೆ ಹೊರ ರಾಜ್ಯಗಳು, ವಿದೇಶಗಳಲ್ಲೂ ದಲ್ಲಾಳಿಗಳು

ಕಾಸರಗೋಡು: ಹೊಸದುರ್ಗ ದಲ್ಲಿ ನಕಲಿ ಪ್ರಮಾಣಪತ್ರ ಹಾಗೂ ಇತರ ದಾಖಲುಪತ್ರಗಳನ್ನು ನಿರ್ಮಿಸಿ ಕೊಡುವ ಕೇಂದ್ರ ಪತ್ತೆಯಾದ ಬೆನ್ನಲ್ಲೇ ಆ ಬಗ್ಗೆ ನಡೆಸಿದ ತನಿಖೆಯಲ್ಲಿ ಈ ಕೇಂದ್ರ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಂಗಳೂರು, ಚೆನ್ನೈ, ಮುಂಬೈ ಮತ್ತು ದುಬಾಯಿಯಲ್ಲಿ ದಲ್ಲಾಳಿಗಳನ್ನು ಹೊಂದಿದೆ ಎಂದೂ ಅವರ ಮೂಲಕವೂ ಸಹಸ್ರಾರು ನಕಲಿ ಪ್ರಮಾಣ ಪತ್ರಗಳನ್ನು ವಿತರಿಸಿದೆ ಎಂಬ ಸ್ಪಷ್ಟ ಮಾಹಿತಿಗಳು ಲಭಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.  ವಿವಿಧ ವಿಶ್ವವಿದ್ಯಾಲಯಗಳ ಸರ್ಟಿಫಿಕೇಟ್‌ಗಳು, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸನ್ಸ್ ಇತ್ಯಾದಿಗಳ  ಹೊರತಾಗಿ ನಕಲಿ ಎಂಬಿಬಿಎಸ್ …

ಕ್ವಾರ್ಟರ್ಸ್ ಬಾಗಿಲು ಮುರಿದು ಚಿನ್ನಾಭರಣ, ಹಣ ಕಳವು

ಮುಳ್ಳೇರಿಯ: ಕ್ವಾರ್ಟರ್ಸ್‌ನ ಬಾಗಿಲು ಮುರಿದು ಒಳ ನುಗ್ಗಿದಕಳ್ಳರು ಕಪಾಟಿನಲ್ಲಿದ್ದ ಒಂದುಕಾಲು ಪವನ್ ಚಿನ್ನಾಭರಣ ಹಾಗೂ 25,೦೦೦ ರೂಪಾಯಿಗಳನ್ನು ದೋಚಿರುವುದಾಗಿ ದೂರಲಾಗಿದೆ. ಬೋವಿಕ್ಕಾನ ತೇಜಸ್ ಕಾಲನಿಯ ಕಿರಣ್ ಕುಮಾರ್‌ರ ಪತ್ನಿ ಶ್ರೀವಿದ್ಯಾ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು  ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶ್ರೀವಿದ್ಯಾ ಹಾಗೂ ಕುಟುಂಬ ಬೋವಿಕ್ಕಾನದ ತೇಜಸ್ ಕಾಲನಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದಾರೆ.  ಪತಿ ಕಿರುಣ್ ಕುಮಾರ್ ಅಸೌಖ್ಯ ಬಾಧಿಸಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ದ್ದಾರೆ.  ಆದ್ದರಿಂದ ಶ್ರೀವಿದ್ಯಾ ಕ್ವಾರ್ಟರ್ಸ್‌ಗೆ ಬೀಗ ಜಡಿದು  ಪತಿಯೊಂದಿಗೆ …

ಜೆಸಿಬಿ ಆಪರೇಟರ್ ನೇಣು ಬಿಗಿದು ಸಾವು: ಆತ್ಮಹತ್ಯೆ ಪ್ರೇರಣೆ ಆರೋಪದಂತೆ ಓರ್ವ ಸೆರೆ

ಬದಿಯಡ್ಕ:  ಜೆಸಿಬಿ ಆಪರೇಟರ್ ಬಾಡಿಗೆ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆಗೆ ಪ್ರೇರಣೆ ಆರೋಪದಂತೆ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕಿಳಿಂಗಾರು ನಿವಾಸಿ ಗಣೇಶ್ (36) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಕರ್ನಾಟಕದ ಸುಳ್ಯ ಪೆರಾಜೆ ನಿಧಿಮಲೆ ನಿವಾಸಿ ಟಿ.ಎನ್. ಕುಮಾರ್ (26) ರ ಸಾವಿಗೆ ಸಂಬಂಧಿಸಿ ಗಣೇಶ್‌ನನ್ನು ಬಂಧಿಸಲಾ ಗಿದೆ. ಪಾಡ್ಲಡ್ಕ ನಿಡುಗಳದ ಬಾಡಿಗೆ ಮನೆಯ ಅಡುಗೆ ಕೋಣೆ ಯೊಳಗೆ ಕಳೆದ ಸೋಮವಾರ ಸಂಜೆ ಕುಮಾರ್ ನೇಣು ಬಿಗಿದು …

14ರ ಬಾಲಕಿಗೆ ಕಿರುಕುಳ: ಆರೋಪಿ ಬಂಧನ

ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ೧೪ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅರುಣ್ (34) ಎಂಬಾತ ಬಂಧಿತ ಆರೋಪಿ ಯೆಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಮನೆಯವರೊಂದಿಗೆ ಉತ್ತಮ ಸೌಹಾರ್ದತೆಯಲ್ಲಿದ್ದ ಈತ ಹಲವು ಬಾರಿ ಬಾಲಕಿಗೆ ಕಿರುಕುಳ ನೀಡಿದ್ದನೆನ್ನಲಾಗಿದೆ. ಈತನ ಬೆದರಿಕೆಗೆ ಹೆದರಿ ಬಾಲಕಿ ಈ ವಿಷಯವನ್ನು ಯಾರಲ್ಲೂ ತಿಳಿಸಿರಲಿಲ್ಲ. ಶಾಲೆಯಲ್ಲಿ ನಡೆದ ಕೌನ್ಸಿಲಿಂಗ್‌ನಲ್ಲಿ ಬಾಲಕಿ ವಿಷಯ ತಿಳಿಸಿದ್ದಾಳೆ. ಈ ಬಗ್ಗೆ ಸಂಬಂಧಪಟ್ಟವರು ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೋಕ್ಸೋ …

ಪರಿಸರ ಮಾಲಿನ್ಯ:  ಬದಿಯಡ್ಕದಲ್ಲಿ ಇಬ್ಬರಿಂದ ದಂಡ ವಸೂಲಿ

ಬದಿಯಡ್ಕ: ತ್ಯಾಜ್ಯನೀರನ್ನು ಸಾರ್ವಜನಿಕ ಸ್ಥಳಕ್ಕೆ ಹರಿದು ಬಿಟ್ಟು ಪರಿಸರದಲ್ಲಿ ದುರ್ನಾತ ಬೀರುವ ರೀತಿ ಯಲ್ಲಿ ತ್ಯಾಜ್ಯ ತುಂಬಿಸಿಟ್ಟ ಆರೋಪ ದಂತೆ ಅದಕ್ಕೆ ಕಾರಣವಾ ದವರಿಗೆ ಅಧಿಕಾರಿಗಳು 15,000  ರೂಪಾಯಿ ದಂಡ ವಿಧಿಸಿದ್ದಾರೆ. ಬದಿಯಡ್ಕ ಮೇ ಲಿನ ಪೇಟೆಯ ಅಪಾರ್ಟ್‌ಮೆಂ ಟ್‌ವೊಂದರಿಂದ ತ್ಯಾಜ್ಯ ನೀರನ್ನು ಪ್ರತ್ಯೇಕ ಪೈಪ್ ಮೂಲಕ ರಸ್ತೆ ಬದಿಗೆ  ಹರಿದು ಬಿಡಲಾಗಿದೆಯೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಇಲಾಖೆ ಜಿಲ್ಲಾ ಎನ್‌ಫೋರ್ಸ್ ಮೆಂಟ್ ಸ್ಕ್ವಾಡ್ ತಲುಪಿ ಪರಿಶೀಲನೆ  ನಡೆಸಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧ ಪಟ್ಟವರಿಗೆ ದಂಡ …

ಮಹಿಳೆಯರ ಮುಂದೆ ನಗ್ನತೆ ಪ್ರದರ್ಶನ: ವ್ಯಕ್ತಿ ವಿರುದ್ಧ ಕೇಸು

ಕಾಸರಗೋಡು:  ಮಹಿಳೆಯರ ಮುಂದೆ ನಗ್ನತೆ ಪ್ರದರ್ಶಿಸುತ್ತಿದ್ದ ವ್ಯಕ್ತಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಳನಾಡು ಚಾತಂಗೈಯ ಸಂತೋಷ್ ಎಂಬಾತನ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತ ಹಿಳೆಯರನ್ನು ಕಂಡಾಗ ನಗ್ನತೆ ಪ್ರದರ್ಶಿಸುತ್ತಿರುವುದಾಗಿ ಆರೋಪಿಸಿ ಮಹಿಳೆಯೋರ್ವೆ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಕೇಸು ದಾಖಲಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಲು ಪ್ರಯತ್ನ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವೃದ್ದ ನಾಪತ್ತೆ

ವರ್ಕಾಡಿ: ಇಲ್ಲಿನ ಕೆಳಗಿನ ಉಜಾರು ನಿವಾಸಿ ಥೋಮಸ್ ಡಿಸೋಜ (72) ಎಂಬವರು ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಈ ತಿಂಗಳ 13ರಂದು ಸಂಜೆ 4 ಗಂಟೆಗೆ ಇವರು ಮನೆಯಿಂದ ಹೊರಗೆ ತೆರಳಿದ್ದಾರೆ. ಆದರೆ ಮರಳಿ ಬಾರದ ಹಿನ್ನೆಲೆಯಲ್ಲಿ ವಿವಿಧೆಡೆ  ಹುಡುಕಿದರೂ ಪತ್ತೆಯಾಗಿಲ್ಲವೆನ್ನ ಲಾಗಿದೆ. ಈ ಬಗ್ಗೆ ಸಹೋದರ ಲಾರೆನ್ಸ್ ಡಿಸೋಜ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.