ಅಪ್ರಾಪ್ತ ಸ್ಕೂಟರ್ ಚಾಲನೆ ಆರ್‌ಸಿ ಮಾಲಕಿಯ ವಿರುದ್ಧ ಕೇಸು

ಮಂಜೇಶ್ವರ: ಅಪ್ರಾಪ್ತರು ವಾಹನ ಚಲಾಯಿಸುತ್ತಿರುವುದು ವ್ಯಾಪಕಗೊಂಡಿದ್ದು, ಇದನ್ನು ನಿಯಂತ್ರಿಸಲು ಮಂಜೇಶ್ವರ ಪೊಲೀ ಸರು ನಿರಂತರ ವಾಹನ ತಪಾಸಣೆ ಹಾಗೂ ಗಸ್ತು ನಡೆಸುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಹಲವು ದ್ವಿಚಕ್ರ ವಾಹನಗಳನ್ನು ವಶಕ್ಕೆ ತೆಗೆದು ಆರ್.ಸಿ ಮಾಲಕರ ವಿರುದ್ದ ಕೇಸು ದಾಖಲಿಸಿದ್ದಾರೆ. ನಿನ್ನೆ ರಾತ್ರಿ 7.20ರ ವೇಳೆ ಉಪ್ಪಳ ಬಸ್ ನಿಲ್ದಾಣ ಬಳಿಯಲ್ಲಿ ಎಸ್.ಐ ರತೀಶ್ ನೇತೃತ್ವದಲ್ಲಿ ವಾಹನ ತಪಾಸಣೆ ವೇಳೆ ಈ ದಾರಿಯಾಗಿ ಆಗಮಿಸಿದ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ ಸ್ಕೂಟರ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಆರ್.ಸಿ ಮಾಲಕಿಯ …

23,000 ಕಿ.ಮೀ. ಬೈಕ್ ಸವಾರಿ ನಡೆಸಿ ದಾಖಲೆಗೈದ ಕುಂಬಳೆಯ ಅಮೃತ ಜೋಷಿಯಿಂದ ಯುಎಇ, ಒಮಾನ್‌ನಲ್ಲೂ ಬೈಕ್ ಸವಾರಿ

ಕುಂಬಳೆ: ಸಣ್ಣ ಪ್ರಾಯದಲ್ಲೇ ಅತೀ ಹೆಚ್ಚು ದೂರ ಏಕಾಂಗಿಯಾಗಿ ಬೈಕ್ ಸವಾರಿ ನಡೆಸಿ ಗಿನ್ನೆಸ್ ಬುಕ್‌ನಲ್ಲಿ ಹೆಸರು ದಾಖಲುಗೊಂಡ ಕುಂಬಳೆ ನಿವಾಸಿ ಅಮೃತ ಜೋಷಿ ಇದೀಗ ಯುಎಇ, ಒಮಾನ್‌ನಲ್ಲೂ ಬೈಕ್ ಸವಾರಿ ಆರಂಭಿಸಿದ್ದಾರೆ. ಈ ತಿಂಗಳ 5ರಂದು ಮಂಗಳೂರು ವಿಮಾನ ನಿಲ್ದಾಣದಿಂದ ಅಮೃತ ದುಬಾಗೆ ತೆರಳಿದ್ದಾರೆ. ತನ್ನ ಬೈಕನ್ನು ಅದಕ್ಕಿಂತ ಮುಂಚೆಯೇ ಅಮೃತ ಕೊಚ್ಚಿಯಿಂದ ದುಬಾಗೆ  ಕಳುಹಿಸಿಕೊಟ್ಟಿದ್ದರು.  ದುಬಾ ಸಂದರ್ಶನದ ಅಂಗವಾಗಿ ಕರಾಮಕ್ಕೆ ತಲುಪಿದ ಅಮೃತ ಅಲ್ಲಿಯೂ ಬೈಕ್‌ನಲ್ಲಿ ಸಂಚರಿಸಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು. ಅನಂತರ …

40 ಕೋಟಿ ರೂ.ಗಳ ಮಾದಕವಸ್ತು ಸಹಿತ ಮೂವರು ಮಹಿಳೆಯರ ಸೆರೆ

ಕಾಸರಗೋಡು: ಮಾದಕವಸ್ತು ವಿರುದ್ಧ ರಾಜ್ಯದಾದ್ಯಂತ ಪೊಲೀಸ್, ಅಬಕಾರಿ ಅಧಿಕಾರಿಗಳು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿರುವಾಗಲೇ ರಾಜ್ಯಕ್ಕೆ  ಭಾರೀ ಪ್ರಮಾಣದಲ್ಲಿ ಮಾದಕವಸ್ತು ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಕಸ್ಟಂಸ್ ಹಾಗೂ ಏರ್ ಇಂಟೆಲಿಜೆನ್ಸ್ ಸಂಯುಕ್ತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ೪೦ ಕೋಟಿ ರೂಪಾಯಿಗಳ ಮಾದಕವಸ್ತು ವಶಪಡಿಸಲಾಗಿದೆ. ಈ ಸಂಬಂಧ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ. ಚೆನ್ನೈ ನಿವಾಸಿ ರಾಬಿಯತ್ ಸೈದು ಸೈನುದ್ದೀನ್ (40), ಕೊಯಂಬತ್ತೂರು ನಿವಾಸಿ ಕವಿತಾ ರಾಜೇಶ್ ಕುಮಾರ್ (40), ತೃಶೂರಿನ ಸಿಮಿ ಬಾಲಕೃಷ್ಣನ್ (36) ಎಂಬಿವರು ಬಂಧಿತ …

ಮಸೂದೆಗೆ ಅನುಮೋದನೆ ಗಡುವು: ಸುಪ್ರೀಂಕೋರ್ಟ್‌ನ ಮುಂದೆ ಹಲವು ಪ್ರಶ್ನೆಗಳನ್ನಿಟ್ಟ ರಾಷ್ಟ್ರಪತಿ

ನವದೆಹಲಿ: ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಮೂರು ತಿಂಗಳೊಳಗಾಗಿ ಯಾವುದೇ ಮಸೂದೆಯನ್ನು  ಅನುಮೋದಿಸಬೇಕೆಂದು ನಿರ್ದೇಶಿಸಿ ಸುಪ್ರೀಕೋರ್ಟ್ ದಿನಗಳ ಹಿಂದೆ ನೀಡಿದ ಆದೇಶದ ಬಗ್ಗೆ  ರಾಷ್ಟ್ರಪತಿ ದ್ರೌಪದಿ ಮುರ್ಮು ಹಲವು ಕಠಿಣ ಪ್ರಶ್ನೆಗಳನ್ನು ಸುಪ್ರೀಂಕೋರ್ಟ್‌ನ ಮುಂದಿರಿಸಿದ್ದಾರೆ. ಸಂವಿಧಾನದ 141 (1) ವಿಧಿಯನ್ನು ಬಳಸಿಕೊಂಡು ಎಪ್ರಿಲ್ ೮ರಂದು ರಾಷ್ಟ್ರಪತಿಗೆ ನಿರ್ದೇಶ ಹೊರಡಿಸಿದ ಸುಪ್ರೀಂಕೋರ್ಟ್‌ನ ತೀರ್ಪಿನ ವಿರುದ್ಧ  ರಾಷ್ಟ್ರಪತಿ ಈ ಪ್ರಶ್ನೆ ಮುಂದಿರಿಸಿದ್ದಾರೆ.  ಈ ನಡವಳಿಕೆಯು ವ್ಯವಸ್ಥೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಮತ್ತು ಸಾಂವಿಧಾನಿಕ ಮಿತಿಗಳನ್ನು ಉಲ್ಲಂಘಿಸಿದೆಯೆಂದು ಎಂದು ಹೇಳಿರುವ …

ಪೆರಡಾಲ ಕ್ಷೇತ್ರ ರಸ್ತೆ ಸ್ಥಿತಿ ಶೋಚನೀಯ: ದುರಸ್ತಿಗೆ ಸ್ಥಳೀಯರ ಆಗ್ರಹ

ಬದಿಯಡ್ಕ: ಮಳೆಯಾವಾಗ ಬರುತ್ತದೆ ಎಂಬ  ನಿರೀಕ್ಷೆಯಲ್ಲಿ ಜನರಿರುವಾಗ ಮಳೆ ಬಂದರೆ ಸಂಚಾರ ಹೇಗೆ ಎಂಬ ಆತಂಕದಲ್ಲಿ ಪೆರಡಾಲ ಪರಿಸರ ನಿವಾಸಿಗಳಿದ್ದಾರೆ. ಚೆರ್ಕಳ- ಬದಿಯಡ್ಕ ರಸ್ತೆಯಿಂದ ಪೆರಡಾಲ ಕ್ಷೇತ್ರಕ್ಕೆ ಸಾಗುವ ರಸ್ತೆಯ ಶೋಚನೀಯ ಸ್ಥಿತಿಯೇ ಇಲ್ಲಿನವರಿಗೆ ಈ ರೀತಿಯ ಚಿಂತೆಗೆ ಕಾರಣ ಪಂ.ನ 14ನೇ ವಾರ್ಡ್ ಪಟ್ಟಾಜೆ ವ್ಯಾಪ್ತಿಯ ಈ ರಸ್ತೆಯಲ್ಲಿ ಡಾಮರು ಜಲ್ಲಿ ಕಲ್ಲುಗಳು ಎದ್ದು ಹೋಗಿ ಹೊಂಡ ಗುಂಡಿಗಳು ತುಂಬಿಕೊಂ ಡಿದ್ದು, ಈಗ ವಾಹನ ಸಂಚಾರ ವೇಳೆ ಧೂಳಿನ ಅಭಿಷೇಕ ಉಂಟಾಗುತ್ತಿದೆ. ಮುಂದೆ ಮಳೆ ಸಂದರ್ಭದಲ್ಲಿ  …

ಕರಂದಕ್ಕಾಡ್- ರೈಲು ನಿಲ್ದಾಣ ತನಕದ ರಸ್ತೆ ನವೀಕರಣ ಕೆಲಸ ಆರಂಭ: ಭಾರೀ ಟ್ರಾಫಿಕ್ ಜಾಮ್

ಕಾಸರಗೋಡು: ನಗರದ ಕರಂದ ಕ್ಕಾಡ್‌ನಿಂದ ರೈಲು ನಿಲ್ದಾಣ ಕ್ಲೋಕ್ ಟವರ್ ತನಕದ ರಸ್ತೆಯ ನವೀಕರಣ ಕೆಲಸ ನಿನ್ನೆ ಮಧ್ಯಾಹ್ನದ ಬಳಿಕ ಆರಂಭಗೊಂಡಿದೆ. ಆದರೆ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಎಂಬು ದನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿಲ್ಲ. ನವೀಕರಣ ಕೆಲಸ ಪೂರ್ಣಗೊಂಡ ಬಳಿಕವಷ್ಟೇ ಈ ರಸ್ತೆಯನ್ನು ಸಾರಿಗೆ ಸಂಚಾರಕ್ಕಾಗಿ  ಪೂರ್ಣವಾಗಿ ಬಿಟ್ಟುಕೊಡಲಾಗು ವುದೆಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ. ನವೀಕರಣ ಕೆಲಸದಿಂದಾಗಿ ರಸ್ತೆಯ ಒಂದು ಬದಿಯ ನಿರ್ಮಾಣ ಕೆಲಸ ಈಗ ನಡೆಯುತ್ತಿದೆ. ಇನ್ನೊಂದು ಬದಿಯಲ್ಲಿ ಕರಂದಕ್ಕಾಡಿನತ್ತ  ಬರುವ ವಾಹನಗಳನ್ನು ಈಗ …

ತಿರುವನಂತಪುರ ಕ್ಷೇತ್ರದಿಂದ ಚಿನ್ನದ ಸರ ಕಳವು: ಚಿನ್ನ ಸಿಕ್ಕಿದರೂ ಕಳ್ಳರು ತೆರೆಮರೆಯಲ್ಲಿ

ತಿರುವನಂತಪುರ: ಇಲ್ಲಿನ ಶ್ರೀ  ಪದ್ಮನಾಭಸ್ವಾಮಿ ಕ್ಷೇತ್ರದ ಚಿನ್ನ ನಾಪತ್ತೆ ಯಾದ ಘಟನೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗದೆ ಪೊಲೀಸರು ತಡಕಾಡು ತ್ತಿದ್ದಾರೆ.  ಶಂಕಿತ ನೌಕರರನ್ನು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದರೂ ಸರಿಯಾದ ಪುರಾವೆ ಪತ್ತೆಮಾಡಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಲಭಿಸಿದ ಆಧಾರಗ ಳನ್ನಿಟ್ಟು ವರದಿ ನೀಡಲು ತನಿಖಾ ತಂಡಕ್ಕೆ ಎಡಿಜಿಪಿ ಎಚ್. ವೆಂಕಟೇಶ್ ನಿರ್ದೇಶಿ ಸಿದ್ದಾರೆ. ಗರ್ಭಗುಡಿಯ ಬಾಗಿಲಿಗೆ ಹಾಸಲು ಸಂಗ್ರಹಿಸಿಟ್ಟಿದ್ದ ಚಿನ್ನದ ತಗಡು ನಾಪತ್ತೆಯಾಗಿತ್ತು. ಈ ಬಗ್ಗೆ ಕ್ಷೇತ್ರದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ನಡೆಸಿದ ಪರಿಶೀಲನೆಯಲ್ಲಿ ಹೊಯ್ಗೆಯಲ್ಲಿ …

1.923 ಕೆ.ಜಿ ಗಾಂಜಾ ವಶ: ಸ್ಕೂಟರ್ ಸಹಿತ ಇಬ್ಬರ ಸೆರೆ

ಕಾಸರಗೋಡು: ಅಮಲು ಪದಾರ್ಥ ಪತ್ತೆಗಾಗಿ ಅಬಕಾರಿ ಇಲಾಖೆ ಆರಂಭಿಸಿರುವ ಕಾರ್ಯಾಚರಣೆಯಂತೆ ನೀಲೇಶ್ವರ ಕರುವಾಚ್ಚೇರಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್ನಲ್ಲಿ ಸಾಗಿಸಲಾಗುತ್ತಿದ್ದ 1.923 ಕಿಲೋ ಗಾಂಜಾ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬAಧಿಸಿ ಹೊಸದುರ್ಗ ಬಲ್ಲಾ ಗ್ರಾಮದ ಕುಶಾಲ್ ನಗರದ ಅಶ್ವಂತ್ ಕುಮಾರ್ ಎಚ್.ಎ. (28) ಮತ್ತು ಬಲ್ಲಾ ಆವಿಕ್ಕರೆ ಎಎಲ್ಪಿ ಶಾಲೆ ಬಳಿಯ ನವಿತ್ ಎ. (31) ಎಂಬಿಬ್ಬರನ್ನು ಬಂಧಿಸಲಾಗಿದೆ. ನೀಲೇಶ್ವರ ಎಕ್ಸೈಸ್ ರೇಂಜ್ ಇನ್ಸ್ಪೆಕ್ಟರ್ ಎನ್ ವೈಶಾಖ್ರ ನೇತೃತ್ವದ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ತಂಡದಲ್ಲಿ ಅಸಿಸ್ಟೆಂಟ್ …

ಎಸ್‌ಎಸ್‌ಎಲ್ ಸಿ, ಪ್ಲಸ್‌ಟು ಪರೀಕ್ಷೆಗಳಲ್ಲಿ  ಚಿನ್ಮಯ ವಿದ್ಯಾಲಯಕ್ಕೆ 100 ಶೇ. ಫಲಿತಾಂಶ

ಕಾಸರಗೋಡು: ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳು ಶೇ. 100 ಫಲಿತಾಂಶವನ್ನು ಪಡೆದು ಸಾಧನೆ ಮಾಡಿದ್ದಾರೆ. ಹತ್ತನೇ ತರಗತಿಯ ಪರೀಕ್ಷೆಗೆ ಹಾಜರಾದ 100 ವಿದ್ಯಾರ್ಥಿಗಳಲ್ಲಿ 69 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲೂ 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಪ್ರಾರ್ಥನಾ ಆರ್. ರಂಜೀವ್ 98.60% ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಹರ್ಷಿಣಿ ಹರಿಹರನ್ 98.00% ಪಡೆದು ದ್ವಿತೀಯ ಸ್ಥಾನ ಹಾಗೂ ಶದಾ ಶರೀಫ್ 97.80% ಪಡೆದು ತೃತೀಯ ಸ್ಥಾನ …

ಪ್ರಶಾಂತಿ ವಿದ್ಯಾಕೇಂದ್ರ: ಸಿಬಿಎಸ್‌ಸಿ 10ನೇ ತರಗತಿ ಪರೀಕ್ಷೆಯಲ್ಲಿ ನೂರು ಶೇ. ಫಲಿತಾಂಶ

ಬಾಯಾರು: ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಸಿಬಿಎಸ್‌ಸಿ 10ನೇ ತರಗತಿ ಪರೀಕ್ಷೆಯಲ್ಲಿ ಸತತ 20ನೇ ಬಾರಿಗೆ ಶೇ.100 ಫಲಿತಾಂಶವನ್ನು ಸಾಧಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮೆರೆದಿದೆ.ಒಟ್ಟು 76 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 54 ವಿದ್ಯಾರ್ಥಿಗಳು ಉನ್ನತ ಶ್ರೇಣಿ,  20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 97ಶೇ. ಅಂಕಗಳೊAದಿಗೆ ಕುಮಾರಿ ತನ್ವಿ ಶೆಟ್ಟಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಉತ್ತಮ ಅಂಕಗಳೊAದಿಗೆ ಉತ್ತೀರ್ಣಗೊಂಡ ಎಲ್ಲ …