ಉಕ್ಕಿನಡ್ಕ ವಸಿಷ್ಠಾಶ್ರಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ, ನೂತನ ಕಟ್ಟಡ ಸುಜ್ಞಾನ ಮಂದಿರ ಉದ್ಘಾಟನೆ ನಾಳೆಯಿಂದ

ಪೆರ್ಲ: ಉಕ್ಕಿನಡ್ಕದ ವಸಿಷ್ಠಾಶ್ರಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ನೂತನ ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಸಲಕರಣೆಗಳ ತರಗತಿ ಕೋಣೆ, ಮಾಹಿತಿ ತಂತ್ರಜ್ಞಾನ ಕೊಠಡಿ, ಆಟದ ಮೈದಾನ, ಸುಜ್ಞಾನ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ ನಾಳೆ, 17ರಂದು ನಡೆಯಲಿದೆ.ನಾಳೆ ಬೆಳಗ್ಗೆ ಗಣಪತಿ ಹೋಮ ಜರಗಲಿದೆ. ವಸಿಷ್ಠಾಶ್ರಮ ಸಂಘದ ಅಧ್ಯಕ್ಷ ಡಾ.ಪಿ.ಕೆ. ಶಂಕರನಾರಾಯಣ ಭಟ್ ಧ್ವಜಾರೋಹಣ ನೆರವೇರಿಸಿ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಕಾಂಚೀಪುರA ಶ್ರೀ ಕಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕ ರಾಚಾರ್ಯ …

ಭಯೋತ್ಪಾದನೆ ವಿರುದ್ಧ ದೇಶದ ಹೋರಾಟಕ್ಕೆ ಪೂರ್ಣ ಬೆಂಬಲ ನೀಡಿ ಕೇರಳ-ಕೇಂದ್ರ ವಿವಿಯಲ್ಲಿ  ಕಾರ್ಯಾಗಾರ

ಪೆರಿಯ: ಪಾಕಿಸ್ತಾನದ ಭಯೋ ತ್ಪಾದನೆ ವಿರುದ್ಧ ಭಾರತ ನಡೆಸುವ ಹೋರಾಟಕ್ಕೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೂರ್ಣ ಬೆಂಬಲ ನೀಡಿದೆ. ಸೈನ್ಯದ ಹಾಗೂ ಸರಕಾರದ ಕ್ರಮಗಳಿಗೆ  ಬೆಂಬಲ ಘೋಷಿಸಿ ಎನ್‌ಎಸ್‌ಎಸ್‌ನ ನೇತೃತ್ವದಲ್ಲಿ ಕ್ಯಾಂಪಸ್‌ನಲ್ಲಿ ಮಾನವ ಸರಪಳಿ ನಡೆಸ ಲಾಯಿತು. ರಾಷ್ಟ್ರ ಪ್ರಥಮ ಎಂಬ ಕಾರ್ಯಾಗಾರ ದಂಗವಾಗಿ ಹಮ್ಮಿ ಕೊಂಡ ಕಾರ್ಯಕ್ರಮದಲ್ಲಿ  ಅಧ್ಯಾಪ ಕರು, ನೌಕರರು, ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಜೊತೆಗೂಡಿದರು. ಆಪರೇಶನ್ ಸಿಂಧೂರ ಮೂಲಕ ಆಶ್ಚರ್ಯಕರ ತಿರುಗೇಟು ಭಾರತ ನೀಡಿದೆಯೆಂದು ವೈಸ್ ಚಾನ್ಸಲರ್  ಪ್ರೊ. ಸಿದ್ದು ಪಿ …

ಪೊಲೀಸರ ಗುಪ್ತ ಕಾರ್ಯಾಚರಣೆ: ನಕಲಿ ಸರ್ಟಿಫಿಕೇಟ್ ನಿರ್ಮಿಸುವ ಕೇಂದ್ರ ಪತ್ತೆ

ಕಾಸರಗೋಡು: ಪೊಲೀಸರು ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ   ಹೊಸದುರ್ಗದಲ್ಲಿ ಕಾರ್ಯವೆಸಗುತ್ತಿದ್ದ ನಕಲಿ ಸರ್ಟಿಫಿಕೇಟ್ ಹಾಗೂ  ದಾಖಲೆಪತ್ರಗಳನ್ನು ನಿರ್ಮಿಸುವ ಗುಪ್ತ ಕೇಂದ್ರಗಳನ್ನು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಹೊಸದುರ್ಗ ಕಡಪ್ಪುರದ ಶಿಹಾಬ್ (38), ಮುಳಿಕ್ಕಾಂ ಕ್ಲಾಯಿಕೋಡಿನ  ಪಿ. ರವೀಂದ್ರನ್ (51) ಮತ್ತು ಹೊಸದುರ್ಗ ಕೊವ್ವಲ್‌ಪಳ್ಳಿಯ ಸಂತೋಷ್ ಕುಮಾರ್ (45) ಎಂಬವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಟಿ. ಅಖಿಲ್ ನೇತೃತ್ವದ ಪೊಲೀಸರು ನಿನ್ನೆ ಈ ಕಾರ್ಯಾಚರಣೆ ನಡೆಸಿದ್ದಾರೆ. ನೆಟ್ ಫಾರ್ ಯೂ ಕೆಫೆ ಹಾಗೂ ಬಂಧಿತರಾದ ಆರೋಪಿಗಳ …

ಸಿಡಿಲಿನ ಆಘಾತ: 25 ದಿನ ಹಿಂದೆ ಶಸ್ತ್ರಚಿಕಿತ್ಸೆ ನಡೆದ ಮಗು ಮೃತ್ಯು

ಕಾಸರಗೋಡು: ಸಿಡಿಲಿನ ಆಘಾತದಿಂದಾಗಿ 25 ದಿನಗಳ ಹಿಂದೆ ಹೃದಯಶಸ್ತ್ರಚಿಕಿತ್ಸೆಗೊಳಗಾದ ಮಗು ಮೃತಪಟ್ಟ ಘಟನೆ ನಡೆದಿದೆ. ನೇಪಾಳ ನಿವಾಸಿ ಸಂಜೀವ್ ಭೇರ ಎಂಬವರ ಒಂದು ವರ್ಷ ೮ ತಿಂಗಳ ಪ್ರಾಯದ ಪುತ್ರಿ ಅಸ್ಮಿತ ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿ ಘಟನೆ ನಡೆದಿದೆ. ಭಾರೀ ಸಿಡಿಲಿನ ಆಘಾತದಿಂದಾಗಿ ಮಗು ಪ್ರಜ್ಞೆ ಕಳೆದುಕೊಂಡಿದ್ದಳೆನ್ನಲಾಗಿದೆ. ಕೂಡಲೇ ವೈದ್ಯರ ಬಳಿಗೆ ಕರೆದೊಯ್ಯಲಾಗಿತ್ತು. ಆದರೆ ಸ್ಥಿತಿ ಗಂಭೀರವಾಗಿದೆಯೆಂದು ತಿಳಿಸಿದ್ದು, ಇದರಿಂದ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಜನ್ಮತಾಃ ಹೃದಯಸಂಬಂಧ ಅಸೌಖ್ಯವಿದ್ದ ಅಸ್ಮಿತಾಳನ್ನು …

ಪ್ರಿಯತಮನೊಂದಿಗೆ ಸಲ್ಲಾಪಕ್ಕೆ ಅಡ್ಡಿಯಾದ ಬಾಲಕನೊಂದಿಗೆ ತಾಯಿಯ ಕ್ರೂರತೆ: ಪಾತ್ರೆ ಬಿಸಿ ಮಾಡಿ ಹೊಟ್ಟೆಗಿರಿಸಿ ಸುಟ್ಟು ಗಾಯ

ಕಾಸರಗೋಡು: ಪ್ರಿಯತಮನೊಂದಿಗೆ ಸಲ್ಲಾಪಕ್ಕೆ    ಅಡ್ಡಿಯಾದ ಹತ್ತರ ಹರೆಯದ ಪುತ್ರನನ್ನು ತಾಯಿ ಪಾತ್ರೆ ಬಿಸಿಮಾಡಿ  ಸುಟ್ಟು ಗಾಯಗೊಳಿಸಿದ ಘಟನೆ ನಡೆದಿದೆ. ಈ ಸಂಬಂಧ ಪಳ್ಳಿಕ್ಕೆರೆ ಕೀಕಾನ ನಿವಾಸಿಯಾದ ಯುವತಿ ವಿರುದ್ದ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.   ಬಾಲಕನ ತಾಯಿ ಹಾಗೂ ಓರ್ವ ಯುವಕನ ಮಧ್ಯೆ ಪ್ರೇಮವಿತ್ತೆನ್ನಲಾಗಿದೆ. ಈ ಇಬ್ಬರು ದಿನಂಪ್ರತಿ ವೀಡಿಯೋ ಕಾಲ್ ಮೂಲಕ ಮಾತನಾಡುತ್ತಿ ದ್ದರು. ಆದರೆ ಅದಕ್ಕೆ ಪುತ್ರ ಅಡ್ಡಿಯಾಗುತ್ತಿದ್ದಾನೆಂದು ರೋಷಗೊಂಡ ಯುವತಿ ಕೆಲವು ದಿನಗಳ ಹಿಂದೆ ಅಲ್ಯುಮಿನಿಯಂ ಪಾತ್ರೆ ಬಿಸಿ ಮಾಡಿ ಮಗನ ಹೊಟ್ಟೆಗೆ …

ನೈಋತ್ಯ ಮುಂಗಾರು ಮಳೆ ಆರಂಭ

ನವದೆಹಲಿ: ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಪ್ರದೇಶಗಳು, ದಕ್ಷಿಣ ಮತ್ತು ಉತ್ತರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮುಂಗಾರು ಮಳೆ ಈಗಾಗಲೇ ಪ್ರವೇಶಿಸಿದೆ. ಸಾಧಾರಣವಾಗಿ ಈ ಪ್ರದೇಶ ಗಳಲ್ಲಿ  ಮೇ 21ರಂದು ಮುಂಗಾರು ಮಳೆ  ಪ್ರವೇಶಿಸುತ್ತದೆ. ಆದರೆ ಈ ವರ್ಷ ಅದು ಮೇ 13ರಂದೇ ಪ್ರವೇಶಿಸಿದೆ. ಇದರಿಂದಾಗಿ ಕೇರಳದಲ್ಲಿ ಮೇ 27ರಂದು ಅಥವಾ ಅದರ  ಒಂದೆರಡು ದಿನಗಳ ಮುಂಚಿ ತವಾಗಿ ಅಥವಾ ನಂತರ ಮಳೆಗಾಲ ಆರಂಭಗೊಳ್ಳಲಿದೆ ಯೆಂದು ಕೇಂದ್ರ ಹವಾಮಾನ ಇಲಾಖೆ ಔಪಚಾರಿಕ ವಾಗಿ ಘೋಷಿಸಿದೆ. ಈ …

ಬಡಗಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮೊಗ್ರಾಲ್ ಪುತ್ತೂರು ಸಮೀಪದ  ಚೌಕಿ ಆಜಾದ್‌ನಗರ ಕ್ವಾರ್ಟರ್ಸ್ ನೊಳಗೆ  ಬಡಗಿಯೋರ್ವರು ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಲತಃ ತಿರುವನಂತಪುರ  ಕಾಟಾಕಡ ಕೂಟೂರು ನಿವಾಸಿ ಹಾಗೂ ಕಳೆದ 20 ವರ್ಷಗಳಿಂದ ಆಜಾದ್ ನಗರದ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿರುವ ಮಣಿಕಂಠನ್ (65) ಸಾವನ್ನಪ್ಪಿದ ದುರ್ದೈವಿ. ಕುಂಞೀಶನ್-ಸರಸಮ್ಮ ದಂಪತಿ ಪುತ್ರನಾಗಿದ್ದಾರೆ. ಪತ್ನಿ ಶೋಭನಾ, ಮಕ್ಕಳಾದ ಪ್ರಿಯಾಂಕಾ, ಪ್ರವೀಣ್, ಅಳಿಯ ಕೃಷ್ಣರಾಜ್, ಸೊಸೆ ನಿಖಿಲಾ, ಸಹೋದರ ಸಹೋದರಿಯರಾದ ನಾಗಮ್ಮ, ಕೋಶಲ, ಸಿಂಧು, ಸುಲೋಚನ, ಓಮನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕಾಸರಗೋಡು …

ಗಾಂಜಾ ಪ್ರಕರಣ: 2 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡ ಆರೋಪಿ ಮತ್ತೆ ಸೆರೆ

ಕಾಸರಗೋಡು: ಗಾಂಜಾ ಪ್ರಕರಣದಲ್ಲಿ ಸೆರೆಗೀಡಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡ ಆರೋಪಿ ಮತ್ತೆ ಗಾಂಜಾ ಸಹಿತ ಸೆರೆಗೀಡಾಗಿದ್ದಾನೆ. ಪಡನ್ನ ಆಲಕ್ಕೋಲ್‌ನ ಟಿ.ಎಸ್. ರತೀಶ್ (52) ಎಂಬಾತನನ್ನು ಚಂದೇರ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಪ್ರಶಾಂತ್ ಹಾಗೂ ತಂಡ ಬಂಧಿಸಿದೆ. ಈತನ ಕೈಯಿಂದ 180 ಗ್ರಾಂ ಗಾಂಜಾ ವಶಪಡಿಸಲಾಗಿದೆ. ಗಾಂಜಾ ಪ್ರಕರಣಗಳಲ್ಲಿ ಆರೋಪಿಯಾದ ರತೀಕ್ ಎರಡು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದನು. ಬಳಿಕ ಈತನ ಮೇಲೆ ಪೊಲೀಸರು ನಿಗಾ ಇರಿಸಿದ್ದರು. ಮೊನ್ನೆ ರಾತ್ರಿ ವಡಕ್ಕೇಪುರ ಎಂಬಲ್ಲಿಂದ ಈತನನ್ನು ಗಾಂಜಾ ಸಹಿತ ಬಂಧಿಸಲಾಗಿದೆ.

95.4 ಲೀಟರ್ ಕರ್ನಾಟಕ  ಮದ್ಯ ವಶ: ಆರೋಪಿ ಪರಾರಿ

ಬದಿಯಡ್ಕ: ಬೇಳ ಗ್ರಾಮದ ಮಾನ್ಯ- ಆಲಂಪಾಡಿ ರಸ್ತೆ ಬಳಿಯ ಮುಂಡೋಡುನಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 95.04 ಲೀಟರ್ ಕರ್ನಾಟಕ ನಿರ್ಮಿತ ಮದ್ಯ (528 ಪ್ಯಾಕೆಟ್) ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಕಾರೊಂದರಲ್ಲಿ ಈ ಮಾಲು ಸಾಗಿಸಲಾಗುತ್ತಿತ್ತೆಂದೂ, ಇದಕ್ಕೆ ಸಂಬಂಧಿಸಿ ಕುಂಜತ್ತೂರು ಶಾರದಾ ನಿವಾಸದ ಅಣ್ಣು ಅಲಿಯಾಸ್ ಅರವಿಂದಾಕ್ಷ ಕೆ. (44) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಆದರೆ ಈ ವೇಳೆ ಆತ ಕಾರು ಮತ್ತು ಮಾಲನ್ನು ಅಲ್ಲೇ ಉಪೇಕ್ಷಿಸಿ ಪರಾರಿಯಾದನೆಂದೂ ಅದರಿಂದಾಗಿ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲವೆಂದು ಅಬಕಾರಿ …

ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ 11.60 ಲಕ್ಷ ರೂ. ಪಡೆದು ವಂಚನೆಗೈದ ಬಗ್ಗೆ ಯುವತಿ ದೂರು

ಪುತ್ತಿಗೆ: ಆನ್ಲೈನ್ ಟ್ರೇಡಿಂ ಗ್ನ ಹೆಸರಲ್ಲಿ ಯುವತಿ ಯೋರ್ವೆಯಿಂದ 11,60,397 ರೂ. ಪಡೆದು ಬಳಿಕ ವಂಚನೆಗೈದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಪುತ್ತಿಗೆ ನಿವಾಸಿಯಾಗಿ ರುವ 37ರ ಹರೆಯದ ಯುವತಿ ಈ ದೂರು ನೀಡಿದ್ದು ಅದರಂತೆ ಎಕ್ಸ್-ಟ್ರೇಡ್ ಇಂಟರ್ ನೇಶನಲ್ ಟ್ರೇಡಿಂಗ್ ಕಂಪೆನಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಟ್ರೇಡಿಂಗ್ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಅಮಿತ ಲಾಭ ನೀಡುವುದಾಗಿ ನಂಬಿಸಿ ಮಾರ್ಚ್ 17ರಿಂದ ಎಪ್ರಿಲ್ 29ರ ತನಕದ ಅವಧಿಯ ಹಲವು ದಿನಗಳಲ್ಲಿ ಆನ್ಲೈನ್ …