ಸಮೋಸ ವಿಷಯದಲ್ಲಿ ತರ್ಕ ಹೋಟೆಲ್ ಮಾಲಕನನ್ನು ಗುಂಡಿಕ್ಕಿ ಕೊಂದ ತಂಡ

ಲಕ್ನೋ: ಕೇವಲ ಒಂದು ಸಮೋಸದ ವಿಷಯದಲ್ಲಿ ಉಂಟಾದ ತರ್ಕ ಹೋಟೆಲ್ ಮಾಲಕನ ಕೊಲೆಯಲ್ಲಿ  ಪರ್ಯವಸಾನ ಗೊಂಡಿದೆ. ಉತ್ತರಪ್ರದೇಶದ ಗುರುಗ್ರಾಮ್ ಫಾರೂಕ್ ನಗರದಲ್ಲಿ ಈ ಘಟನೆ ನಡೆದಿದೆ. ರಾಕೇಶ್ ಕುಮಾರ್ ಎಂಬವರು ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ಸೋಮವಾರ ಬೆಳಿಗ್ಗೆ ಯುವಕರ ತಂಡವೊಂದು ಹೋಟೆಲ್‌ಗೆ ತಲುಪಿ ಚಹಾ ಕುಡಿದಿತ್ತು. ಬಳಿಕ ಸಮೋಸ ಪಡೆದ ವಿಷಯದಲ್ಲಿ  ರಾಕೇಶ್ ಹಾಗೂ ತಂಡದ ಮಧ್ಯೆ ತರ್ಕವುಂಟಾಗಿತ್ತು. ಈ ವೇಳೆ ಕೊಲೆ ಬೆದರಿಕೆಯೊಡ್ಡಿ ತಂಡ ಅಲ್ಲಿಂದ ಮರಳಿತ್ತು. ಈ ಬಗ್ಗೆ ರಾಕೇಶ್ ಪೊಲೀಸ್ ಠಾಣೆಗೆ ತಲುಪಿ ದೂರು …

ಉದ್ಯೋಗ ಭರವಸೆ ನೀಡಿ ಅಸ್ಸಾಂನಿಂದ ಬಾಲಕಿಯನ್ನು ಕೇರಳಕ್ಕೆ ತಲುಪಿಸಿ ಅನೈತಿಕ ದಂಧೆ: ಯುವಕ, ಪ್ರಿಯತಮೆ ಬಂಧನ

ಕಲ್ಲಿಕೋಟೆ: ಉದ್ಯೋಗದ ಭರವಸೆ ಒಡ್ಡಿ ಅಸ್ಸಾಂ ನಿವಾಸಿಯಾದ 17ರ ಹರೆಯದ ಬಾಲಕಿಯನ್ನು ಕೇರಳಕ್ಕೆ ತಲುಪಿಸಿ ಅನೈತಿಕ ಚಟುವಟಿಕೆ ನಡೆಸಿದ ಯುವಕ ಹಾಗೂ ಪ್ರಿಯತಮೆಯನ್ನು ಕಲ್ಲಿಕೋಟೆ ನಗರ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ನಿವಾಸಿಗಳಾದ ಫುರ್ಖಾನ್ ಅಲಿ(26), ಆಕ್ಸೀಮಾ ಖಾತುನ್ (24) ಬಂಧಿತ ಆರೋಪಿಗಳು. ಇನ್ಸ್ಟಾಗ್ರಾಂ ಮೂಲಕ ಇವರು ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದರು. ಬಳಿಕ ಕೇರಳದಲ್ಲಿ ಮನೆ ಕೆಲಸ ದೊರಕಿಸಿ ಕೊಡುವುದಾಗಿ ಭರವಸೆ ನೀಡಿ ಬಾಲಕಿಯನ್ನು ಅಸ್ಸಾಂ ನಿಂದ ಕೇರಳಕ್ಕೆ ಕರೆದುಕೊಂಡು ಬಂದಿದ್ದಾರೆ. ಅನಂತರ ಕಲ್ಲಿಕೋಟೆ ರೈಲ್ವೇ ನಿಲ್ದಾಣ ಬಳಿಯ …

ಆಪರೇಶನ್ ಸಿಂಧೂರ್ ಬಳಿಕ ಪಾಕಿಸ್ತಾನದಿಂದ 15 ಲಕ್ಷ ಸೈಬರ್ ದಾಳಿಯನ್ನು ವಿಫಲಗೊಳಿಸಿದ ಭಾರತ

ಮುಂಬೈ: ಪಾಕಿಸ್ತಾನದ ಮೇಲೆ ಭಾರತೀಯ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿದ ಬಳಿಕ ಪಾಕಿಸ್ತಾನದ ಹ್ಯಾಕರ್‌ಗಳು ಭಾರತವನ್ನು ಗುರಿಯಾಗಿರಿಸಿ 15 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿ ನಡೆಸಿದ್ದಾರೆ. ಆದರೆ ಅದರಲ್ಲಿ 150 ದಾಳಿಗಳು ಮಾತ್ರವೇ ಯಶಸ್ವಿಯಾ ಗಿದೆಯೆಂದು ಮಹಾರಾಷ್ಟ್ರದ ರಾಜ್ಯ ಸೈಬರ್ ಅಪರಾಧ ವಿಭಾಗ ತಿಳಿಸಿದೆ. ಭಾರತದ ಸೇನೆ, ಆಡಳಿತ ಸರಕಾರ ಸೇರಿ ಇನ್ನಿತರ ವೆಬ್‌ಸೈಟ್‌ಗಳನ್ನು ಪ್ರಧಾನವಾಗಿ ಗುರಿಯಾಗಿರಿಸಿಕೊಂಡು ಈ 15 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿ ನಡೆಸಲಾಗಿದೆ.  ಪಾಕಿಸ್ತಾನ ಮಾತ್ರವಲ್ಲ ಬಾಂಗ್ಲಾದೇಶ, ಇಂಡೋನೇಶ್ಯಾ, ಮೊರಾಕ್ಕೋ ಮತ್ತು ಮಧ್ಯಪ್ರಾಚ್ಯ …

ಅವಯವಗಳಿಗಾಗಿ ರಾಜ್ಯದಲ್ಲಿ ಕಾದು ನಿಂತಿರುವವರು 2767 ಮಂದಿ

ಕಾಸರಗೋಡು:ಆರೋಗ್ಯರAಗದಲ್ಲಿ ಮುಂಚೂಣಿಗೆ ತಲುಪಲು ಪ್ರಯಾಣಿಸುತ್ತಿರುವ ಕೇರಳ ಅವಯವ ದಾನದಲ್ಲಿ ಭಾರೀ ಹಿನ್ನಡೆಯಲ್ಲಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳ 12ನೇ ಸ್ಥಾನದಲ್ಲಿದೆ. ಅವಯವ ದಾನಕ್ಕೆ ಅನುಮತಿ ತಿಳಿಸಿ 51506 ಮಂದಿ ಹೆಸರು ನೋಂದಾಯಿಸಿರುವ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ. ಕೇರಳದಲ್ಲಿ 5891 ಮಂದಿ ಮಾತ್ರವೇ ಹೆಸರು ನೋಂದಾಯಿಸಿದ್ದಾರೆ. ಕಳೆದ 13 ವ ರ್ಷಗಳ ಮಧ್ಯೆ 387 ಮಂದಿ ಮಾತ್ರವೇ ಕೇರಳದಲ್ಲಿ ಮರಣಾನಂತರ ಅವಯವ ದಾನ ಮಾಡಲಾಗಿದೆ. 1108 ಅವಯವ ಬದಲಾವಣೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈ ವರ್ಷ ಇದುವರೆಗೆ ಮೆದುಳಿನ …

ಪ್ಲಸ್ ವನ್: ಜೂನ್ 18ರಿಂದ ತರಗತಿ ಆರಂಭ

ಕಾಸರಗೋಡು: ಸರಕಾರಿ ಹಾಗೂ ಅನುದಾನಿತ (ಐಡೆಡ್) ಶಾಲೆಗಳಲ್ಲಿ ಪ್ಲಸ್ ವನ್ ತರಗತಿ ಪ್ರವೇಶಕ್ಕಾಗಿರುವ ಅರ್ಜಿಗಳನ್ನು ಇಂದಿನಿಂದ ಏಕಕಿಂಡಿ ವ್ಯವಸ್ಥೆಯಡಿ ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ ಮೇ 20 ಆಗಿದೆ. ಹೀಗೆ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಶೀಲಿಸಿ ಅದರ ಆಧಾರದಲ್ಲಿ ಮೂರು ಹಂತಗಳಲ್ಲಾಗಿ ಅಲೋಟ್‌ಮೆಂಟ್ ನಂತೆ ಪ್ರವೇಶ ಕ್ರಮಗಳನ್ನು  ಪೂರ್ತೀಕರಿಸಿ ಜೂನ್ 18ರಿಂದ  ಪ್ಲಸ್‌ವನ್ ತರಗತಿ ಆರಂಭಗೊಳ್ಳಲಿದೆ. ಈ ಪ್ರಕ್ರಿಯೆ ಬಳಿಕ ಸಪ್ಲಿಮೆಂಟ್ ಅಲೋಟ್‌ಮೆಂಟ್‌ಗಳನ್ನು ನಡೆಸಿ ಜೂನ್ 23ರಂದು ಪ್ರವೇಶಾತಿ ಕ್ರಮಗಳನ್ನು ಪೂರ್ತೀಕರಿಸಲಾಗುವುದು. ಇದರ ಜೊತೆಗೆ …

ಬಾವಿಗೆ ಬಿದ್ದ ಆಡನ್ನು ಸಾಹಸಿಕವಾಗಿ ಉಪ್ಪಳ ಅಗ್ನಿಶಾಮಕ ದಳದಿಂದ ರಕ್ಷಣೆ

ಉಪ್ಪಳ: ಉಪಯೋಗಶೂನ್ಯ ಗೊಂಡ ಬಾವಿಗೆ ಬಿದ್ದ ಆಡನ್ನು ಉಪ್ಪಳ ಅಗ್ನಿಶಾಮಕ ದಳ ಸಿಬ್ಬಂದಿ ಸಾಹಸಿಕ ವಾಗಿ ರಕ್ಷಿಸಿದ ಘಟನೆ ಬಂದ್ಯೋಡು ಬಳಿಯಲ್ಲಿ ನಡೆದಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಬಂದ್ಯೋಡು ಬಳಿಯ ಮುಟ್ಟಂ ಪೆಟ್ರೋಲ್ ಪಂಪ್ ಸಮೀಪದ ಹನೀಫ ಅಡ್ಕ ಎಂಬವರ ಹಿತ್ತಿಲಿನಲ್ಲಿರುವ ಉಪಯೋಗಶೂನ್ಯ ಬಾವಿಗೆ ನಿನ್ನೆ ಸಂಜೆ ಪರಿಸರದ ಸೌದ ಮೊಹಮ್ಮದ್ ಎಂಬವರ ಆಡು ಬಿದ್ದಿದೆ. ಆವರಣಗೋಡೆ ಇರುವ ಈ ಬಾವಿ ೧೬ ಕೋಲು ಆಳವಿದ್ದು, ಎರಡು ಕೋಲು ನೀರು ತುಂಬಿಕೊಂಡಿದೆ. ತ್ಯಾಜ್ಯ ತುಂಬಿ ಬಾವಿಗೆ ಇಳಿಯಲಾಗದ …

ರೋಟರಿ ಕಾಸರಗೋಡು ಮೊಬೈಲ್ ಬ್ಲಡ್ ಬ್ಯಾಂಕ್ ವ್ಯಾನ್ ಲೋಕಾರ್ಪಣೆ

ಕಾಸರಗೋಡು: ಆರೋಗ್ಯ ರಂಗದಲ್ಲಿ ಹೊಸ ಬದಲಾವಣೆಗಳಿಗೆ ನಾಂದಿ ಹಾಡುವ ಮೂಲಕ ಕಾಸರಗೋಡು ರೋಟರಿ ಕ್ಲಬ್ ಆಯೋಜಿಸಿದ್ದ ಸಂಚಾರಿ ರಕ್ತ ನಿಧಿ ವ್ಯಾನ್ ಅನ್ನು ರೋಟರಿ ಕ್ಲಬ್ ಆಶ್ರಯದಲ್ಲಿ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ಹಸ್ತಾಂತರಿ ಸಲಾಯಿತು. ನಿ£್ನೆ ಬೆಳಿಗ್ಗೆ ನಡೆದ ಸಮಾರಂಭದ ಉದ್ಘಾಟನೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ನೆರವೇರಿಸಿದರು. ಸಂಚಾರಿ ರಕ್ತ ಬ್ಯಾಂಕ್ ವಾಹನದ ಕೀ ಯನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಆಧೀಕ್ಷಕ ರೋಟರಿಯನ್ ಡಾ. ಜನಾರ್ದನ ನಾಯ್ಕ್ ಅವರು ರೋಟರಿ ಜಿಲ್ಲಾ ಗವರ್ನರ್ ರೋಟರಿಯನ್ ಡಾ. ಸಂತೋಷ್ …

ನಿವೃತ್ತ ನೌಕರ ರೈಲು  ಢಿಕ್ಕಿ ಹೊಡೆದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಉದ್ದಿಮೆ ಇಲಾಖೆಯ ನಿವೃತ್ತ ನೌಕರ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚೆರುವತ್ತೂರು ವೆಂಙಾಡ್ ನಿವಾಸಿ ಎನ್.ಕೆ. ಸುಕಮಾರನ್ (7೦) ಮೃತಪಟ್ಟ ವ್ಯಕ್ತಿ. ಚೆರುವತ್ತೂರು ರೈಲ್ವೇ ನಿಲ್ದಾಣ ಬಳಿ ಮೃತದೇಹ ಪತ್ತೆಯಾಗಿದೆ. ಇಂದು ಮುಂಜಾನೆ  ಗೂಡ್ಸ್ ರೈಲು ಢಿಕ್ಕಿ ಹೊಡೆದು  ಸಾವು ಸಂಭವಿಸಿರಬಹು ದೆಂದು ಅಂದಾಜಿಸಲಾಗಿದೆ. ರೈಲ್ವೇ ಸ್ಟೇಶನ್ ಮಾಸ್ತರ್ ನೀಡಿದ ಮಾಹಿತಿಯಂತೆ ಪೊಲೀಸರು ತಲುಪಿ ಪರಿಶೀಲನೆ ನಡೆಸಿದಾಗ ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿದೆ. ಘಟನೆ ಬಗ್ಗೆ ಚಂದೇರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ರಸ್ತೆ ಸಂಚಾರ ನಿಷೇಧ

ಕಾಸರಗೋಡು: ಕರದಕ್ಕಾಡ್ ನಿಂದ ರೈಲು ನಿಲ್ದಾಣವರೆಗಿನ ರಸ್ತೆಯಲ್ಲಿ ಕ್ಲಾಕ್‌ಟವರ್ ವರೆಗೆ ಇಂದು ಅಪರಾಹ್ನ 2 ಗಂಟೆಯಿಂದ ಸಂಚಾರ ನಿಷೇಧ ಏರ್ಪಡಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ. ದುರಸ್ತಿ ಕಾಮಗಾರಿ ನಡೆಸಿದ ಬಳಿಕ ತೆರೆದು ಕೊಡಲಾಗುವುದು.

ಸ್ಥಳ ನಾಮಗಳ ಮಲಯಾಳೀಕರಣ: ಅಧ್ಯಯನಕ್ಕೆ ಗಡಿ ಪ್ರಾಧಿಕಾರದಿಂದ ಪಂಚ ಸದಸ್ಯ ಸಮಿತಿ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಕನ್ನಡ ನಾಮಾಂಕಿತ ಪ್ರದೇಶ, ಗ್ರಾಮ, ಸ್ಥಳ ನಾಮಗಳನ್ನು ನಿರಂತ ರವಾಗಿ ಮಲಯಾಳೀಕರಣ ಗೊಳಿಸ ಲಾಗುತ್ತಿದ್ದು, ಈ ಗಂಭೀರ ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ಪರಿಹಾರ ಕಲ್ಪಿಸಲು ಕರ್ನಾಟಕ ರಾಜ್ಯ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಕನ್ನಡದ ಸ್ಥಳ ನಾಮಗಳನ್ನು ಮಲಯಾಳೀಕರಣ ಗೊಳಿಸುತ್ತಿರುವ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಪ್ರಾಧಿಕಾರ ಪಂಚ ಸದಸ್ಯರ ತಜ್ಞ ಸಮಿತಿಯನ್ನು ನಿಯೋಜಿಸಿದ್ದು, ಅಧ್ಯಯನ ನಡೆಸಿ ವರದಿ ಸಲ್ಲಿಸಲು ಆದೇಶ ನೀಡಲಾಗಿದೆ. ಕಾಸರಗೋಡು …