ವ್ಯಾಪಾರಿ ನಿಧನ

ಕುಂಬಳೆ: ದೀರ್ಘ ಕಾಲದಿಂದ ಕುಂಬಳೆ ಹಾಗೂ ಮೊಗ್ರಾಲ್‌ನಲ್ಲಿ ತರಕಾರಿ, ಹಣ್ಣು ಹಂಪಲು ವ್ಯಾಪಾ ರಿಯಾಗಿದ್ದ ಕುಂಬಳೆ ಬದ್ರಿಯಾ ನಗರ ನಿವಾಸಿ ಮೊಯ್ದೀನ್ (65) ನಿಧನ ಹೊಂದಿದರು. ಅಲ್ಪ ಕಾಲದಿಂದ ಇವರಿಗೆ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು.ಮೃತರು ಪತ್ನಿ ಸುಹರಾ, ಮಕ್ಕಳಾದ ಬಾಸಿತ್, ಶಾಹುಲ್ ಹಮೀದ್, ಶಾಹಿದ, ಸಹೋದರ- ಸಹೋ ದರಿಯರಾದ ಮುಹಮ್ಮದ್, ಅಬ್ದುಲ್ಲ, ಫಾತಿಮ, ಆಯಿಶ, ರುಖಿಯ, ಜಮೀಲ, ಅಳಿಯ ಹಸನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಮೊಗ್ರಾಲ್ ದೇಶೀಯವೇದಿ ಸಂತಾಪ ಸೂಚಿಸಿದೆ.

ಜೋಡುಕಲ್ಲು ರಸ್ತೆ ಬದಿಯಲ್ಲಿ ಒಣಗಿದ ಮರದಿಂದ ಅಪಾಯ ಭೀತಿ: ತೆರವುಗೊಳಿಸಲು ಆಗ್ರಹ

ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಜೋಡುಕಲ್ಲು ಎಂಬಲ್ಲಿ ಒಣಗಿದ ಮರಗಳು ಯಾವುದೇ ಕ್ಷಣದಲ್ಲಿ ಧರಾಶಾಯಿಗೊಳ್ಳುವ ಆತಂಕ ಎದುರಾಗಿದೆ. ಈ ರಸ್ತೆ ಅಭಿವೃದ್ದಿಗೊಳಿಸುವ ವೇಳೆ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರೆವುಗೊಳಿಸಲಾಗಿತ್ತು. ಆದರೆ ಒಣಗಿದ ಈ ಮರವನ್ನು ತೆರವುಗೊಳಿಸಿರಲಿಲ್ಲ. ಇದು ಈಗ ಭೀತ್ತಿಗೆ ಕಾರಣವಾಗಿದೆ. ಈ ಪರಿಸರದಲ್ಲಿ ಪ್ರಮುಖ ವಿದ್ಯುತ್ ತಂತಿಹೊAದಿರುವ ಕಂಬಗಳಿದ್ದು, ಮರ ಮುರಿದು ತಂತಿ ಮೇಲೆ ಬಿದ್ದಲ್ಲಿ ಹಲವಾರು ಕಂಬಗಳು ರಸ್ತೆಗೆ ಮುರಿದು ಬೀಳಬಹುದಾಗಿದೆ. ಜನನಿಬಿಡ ಪ್ರದೇಶದಲ್ಲಿ ಅಪಾಯದ ಸ್ಥಿತಿಯಲ್ಲಿರುವ ಒಣಗಿದ ಮರಗಳನ್ನು ತೆರವುಗೊಳಿಸಲು ಮಂಗಲ್ಪಾಡಿ ಪಂಚಾಯತ್ ಸದಸ್ಯೆ …

ಬಿಜೆಪಿ ಮಂಡಲ ಸಮಿತಿ ಸದಸ್ಯನ ಅಮಾನತು ಕ್ರಮಕ್ಕೆ ಅಸಮಾಧಾನ: ಜೋಡುಕಲ್ಲಿನಲ್ಲಿ ಕಾರ್ಯಕರ್ತರ ಸಭೆ

ಪೈವಳಿಕೆ: ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಸದಸ್ಯ ಕೆ.ಪಿ. ಪ್ರಶಾಂತ್‌ರನ್ನು ಪಕ್ಷದಿಂದ ಹೊರ ಹಾಕಿದ ಜಿಲ್ಲಾಧ್ಯಕ್ಷೆಯ ಕ್ರಮಕ್ಕೆ ಪಕ್ಷದ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಬಗ್ಗೆ ತಿಳಿದು ಬಂದಿದೆ. ಕಳೆದ 30 ವರ್ಷಗಳಿಂದ ಪಕ್ಷದಲ್ಲಿ ದುಡಿಯುತ್ತಿರುವ ಸಕ್ರಿಯ ಕಾರ್ಯ ಕರ್ತನನ್ನು ಅಮಾನತುಗೊಳಿಸಿರುವುದಕ್ಕೆ ಪೈವಳಿಕೆ ಪಂಚಾಯತ್ ಹಾಗೂ ಮಂ ಡಲದ ವಿವಿಧ ಭಾಗಗಳಿಂದ ಪ್ರತಿಭಟನೆ ವ್ಯಕ್ತವಾಗಿದೆ. ನಿನ್ನೆ ರಾತ್ರಿ ಜೋಡು ಕಲ್ಲಿನಲ್ಲಿ ಬಿಜೆಪಿ ನೇತಾರರ ಹಾಗೂ ಕಾರ್ಯಕರ್ತರ ಸಭೆ ನಡೆದಿದ್ದು, ಅದರಲ್ಲಿ ಕೆ.ಪಿ. ಪ್ರಶಾಂತ್ ವಿರುದ್ಧ ಕೈಗೊಂಡ ಅಮಾನತು …

ಮಡಪ್ಪುರ ಅಶೋಕನ್ ನಿಧನ

ಕಾಸರ ಗೋಡು: ಪಿಲಿಕುಂ ಜೆಯ ಮಡಪ್ಪುರ ಅಶೋಕನ್ (60) ನಿಧನ ಹೊಂದಿದರು. ದಿ| ಜನಾರ್ದನನ್ ಮಡಪ್ಪುರ ಅವರ ಪುತ್ರನಾದ ಇವರು ಭಗವತಿ ಸೇವಾ ಸಂಘದ ಸಕ್ರಿಯ ಕಾರ್ಯಕರ್ತನಾಗಿದ್ದರು. ಮನ್ನಿಪ್ಪಾಡಿಯ ವರ್ಕ್‌ಶಾಪ್‌ನ ನೌಕರನೂ ಆಗಿದ್ದರು. ಮೃತರ ಅಂತ್ಯ ಸಂಸ್ಕಾರ ಇಂದು ಬೆಳಿಗ್ಗೆ ಪಳ್ಳಂ ಸಾರ್ವಜನಿಕ ಸ್ಮಶಾನದಲ್ಲಿ ನಡೆಯಿತು. ಮೃತರು ಪತ್ನಿ ಶುಭ, ಮಕ್ಕಳಾದ ಅನುಷಾ, ಧನುಷ, ಅಳಿಯ ಗಿರೀಶ್ ಅಂಬಲತ್ತರ, ಸಹೋದರ- ಸಹೋದರಿಯರಾದ ವಿಜಯನ್, ಗಿರೀಶ್, ಹರೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಭಾಸ್ಕರನ್ ಈ …

ಕೈಕಂಬ- ಬಾಯಾರು ರಸ್ತೆಯಲ್ಲಿ ಹಂಪ್‌ಗಳಿಂದಲೇ ಅಪಘಾತ ಭೀತಿ

ಉಪ್ಪಳ: ವೇಗವನ್ನು ನಿಯಂತ್ರಿಸಿ ಅಪಘಾತಗಳನ್ನು ಕಡಿಮೆ ಮಾಡಿ ಜೀವಹಾನಿ ಆತಂಕವನ್ನು ಕಡಿಮೆ ಗೊಳಿಸಲು ರಸ್ತೆಗಳಲ್ಲಿ ಹಂಪ್‌ಗಳನ್ನು ಸ್ಥಾಪಿಸಲಾಗುತ್ತದೆ. ಆದರೆ ಕೈಕಂಬ- ಬಾಯಾರು ರಸ್ತೆಯಲ್ಲಿ ಹಂಪ್‌ಗಳೇ ಅಪಘಾತ ಬೆದರಿಕೆ ಸೃಷ್ಟಿಸುತ್ತಿರುವುದು ವಿಪರ್ಯಾಸವಾಗಿದೆ. ಕೈಕಂಬದಿಂದ ಮುಳಿಗದ್ದೆಗೆ 16 ಕಿಲೋ ಮೀಟರ್ ಇದ್ದು ಈ ಮದ್ಯೆ 17 ಹಂಪ್‌ಗಳನ್ನು ಸ್ಥಾಪಿಸಲಾಗಿದೆ. ಇದು ಕೆಲವು ಕಡೆಗಳಲ್ಲಿ ಇಳಿಜಾರಿನಲ್ಲಿದ್ದು, ಕೆಲವು ಕಡೆಗಳಲ್ಲಿ ಹಂಪ್ ಇದೆ ಎಂಬುವುದೇ ತಿಳಿಯ ದಂತಿದೆ. ಇದರಿಂದಾಗಿ ಅಪಘಾತಕ್ಕೆ ಹಂಪ್ ಕಾರಣವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮೊದಲು ರಸ್ತೆಯಲ್ಲಿ ಅಪಘಾತ ವಲಯಗಳಲ್ಲಿ …

ಚರಂಡಿ ಅವ್ಯವಸ್ಥೆ: ಉಪ್ಪಳ-ಮೀಯಪದವು ರಸ್ತೆಯಲ್ಲಿ ಮಳೆ ನೀರು ಸಂಗ್ರಹ; ವಾಹನ, ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆ

ಉಪ್ಪಳ: ಚರಂಡಿಯ ಅವ್ಯವಸ್ಥೆಯಿಂದ ರಸ್ತೆಯಲ್ಲಿ ಮಳೆ ನೀರು ಸಂಗ್ರಹಗೊಂಡು ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಮಂಗಲ್ಪಾಡಿ ಮತ್ತು ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಉಪ್ಪಳ-ಮೀಯಪದವು ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ಈ ಸಮಸ್ಯೆ ಉಂಟಾಗಿದೆ. ರಸ್ತೆ ಉದ್ದಕ್ಕೂ ಅಲ್ಲಲ್ಲಿ ಮಳೆ ನೀರು ಸಂಗ್ರಹಗೊಳ್ಳುತ್ತಿದೆ. ಇದರಿಂದ ವಾಹನಗಳ ಸಹಿತ ಸ್ಥಳೀಯರಿಗೆ ನಡೆದಾಡಲು ಸಾಧ್ಯ ವಾಗುತ್ತಿಲ್ಲವೆಂದು ದೂರಲಾಗಿದೆ. ಮೊನ್ನೆ ಒಂದೇ ದಿನ ಸುರಿದ ಮಳೆಗೆ ದಡ್ಡಂಗಡಿ, ಕಂಚಿಲ  ಪರಿಸರದಲ್ಲಿ  ಮಳೆ ನೀರು ತುಂಬಿಕೊಂಡಿತ್ತು. ಇದೇ ರೀತಿಯಲ್ಲಿ ಮಳೆಗಾಲದಲ್ಲಿ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗಿ …

ಜಲಮಟ್ಟ ಪರಿಶೀಲಿಸಲು ಕೇಂದ್ರ ಅಂತರ್ಜಲ ಮಂಡಳಿಯ ವಿಜ್ಞಾನಿ ನಾಳೆ ಕಾಸರಗೋಡಿಗೆ

ಕಾಸರಗೋಡು: ಜಿಲ್ಲೆಯ ಅಂತರ್ಜಲ ಮಟ್ಟದ ಬಗ್ಗೆ ಹಾಗೂ ಭೂಮಿಯಡಿ ನೀರು ಇಂಗಿಸುವಿಕೆಗಾಗಿ ಆರಂಭಿಸಲಾಗಿರುವ ನಿರ್ಮಾಣ ಕೆಲಸಗಳನ್ನು ಪರಿಶೀಲಿಸಲು ಕೇಂದ್ರ ಅಂತರ್ಜಲ ಮಂಡಳಿಯ ವಿಜ್ಞಾನಿ ಡಾ. ಪಂಕಜ್ ಬಾಕ್ಲೆ ನಾಳೆ ಕಾಸರಗೋಡಿಗೆ ಆಗಮಿಸುವರು. ಇವರು ನಾಳೆ ಮತ್ತು ಗುರುವಾರದಂದು ಜಿಲ್ಲೆಯಲ್ಲಿ ಠಿಕಾಣಿ ಹೂಡಿ ಜಿಲ್ಲೆಯ ಅಂತರ್ಜಲ ಕುಸಿದ ಪ್ರದೇಶಗಳಿಗೆ ನೇರವಾಗಿ ಸಂದರ್ಶಿಸಿ ಅದು ಹಾಗೂ ಅಂತರ್ಜಲ ಮಟ್ಟವನ್ನು ಏರಿಸುವಂತೆ ಮಾಡಲು ಕೈಗೊಳ್ಳಲಾದ ನಿರ್ಮಾಣ ಕೆಲಸಗಳನ್ನು ನೇರವಾಗಿ ಪರಿಶೀಲಿಸುವರು. ಜಿಲ್ಲೆಯಲ್ಲಿ ೬೪೦ ಪ್ರದೇಶಗಳ ಅಂತರ್ಜಲ ಮಟ್ಟ ಕುಸಿದಿರುವುದಾಗಿ ಗುರುತಿಸಲಾಗಿದ್ದು, ಇದನ್ನು …

ಕರ್ಷಕ ಕಾಂಗ್ರೆಸ್‌ನಿಂದ ಮುಳಿಯಾರು ಕೃಷಿ ಭವನಕ್ಕೆ ಮಾರ್ಚ್, ಧರಣಿ

ಬೋವಿಕ್ಕಾನ: ತೆಂಗಿನಕಾಯಿ ಕೃಷಿಕರಿಗೆ ವಿಶ್ವ ಬ್ಯಾಂಕ್ ಮಂಜೂರು ಮಾಡಿದ 136 ಕೋಟಿ ರೂಪಾಯಿಗಳನ್ನು ಬೇರೆ ಅಗತ್ಯಕ್ಕೆ ಖರ್ಚು ಮಾಡಿರುವುದಾಗಿ ಆರೋಪಿಸಿ, ರಬ್ಬರ್‌ಗೆ 250 ರೂ. ಬೆಲೆ ಎಂಬ ಭರವಸೆಯನ್ನು ಪಾಲಿಸದ ಸರಕಾರದ ಕ್ರಮವನ್ನು ಪ್ರತಿಭಟಿಸಿ  ಕರ್ಷಕ ಕಾಂಗ್ರೆಸ್ ಮುಳಿಯಾರು ಮಂಡಲದ ನೇತೃತ್ವದಲ್ಲಿ ಮುಳಿಯಾರು ಕೃಷಿ ಭವನಕ್ಕೆ ಮಾರ್ಚ್ ಹಾಗೂ ಧರಣಿ ನಡೆಸಲಾಯಿತು.  ಕೃಷಿ ಬೆಳೆಗಳಿಗೆ ನಷ್ಟ ಪರಿಹಾರ ನೀಡಬೇಕು, ಸರಕಾರ ಕೃಷಿಕರೊಂದಿಗೆ ತೋರಿಸುವ ನಿರ್ಲಕ್ಷ್ಯ ನೀತಿಯನ್ನು ಕೊನೆಗೊಳಿ  ಸಬೇಕೆಂದೂ ಒತ್ತಾಯಿಸಲಾಯಿತು.  ಕರ್ಷಕ ಕಾಂಗ್ರೆಸ್  ಮುಳಿಯಾರು ಮಂಡಲ ಅಧ್ಯಕ್ಷ …

ವ್ಯಾಪಾರಿ ನಿಧನ

ಕಾಸರಗೋಡು: ಪೆರ್ಲಡ್ಕದ ವ್ಯಾಪಾರಿ ಕೆ.ಪಿ. ಕುಂಞಿರಾಮನ್ ವರಿಕ್ಕುಳಂ (74) ನಿಧನ ಹೊಂದಿದರು. ಮೃತರು ಪತ್ನಿ ಸುಶೀಲ, ಮಕ್ಕಳಾದ ಸುಧೀಶ್, ಪ್ರತೀಶ್, ಅಶ್ವತಿ, ಅಳಿಯ-ಸೊಸೆಯಂದಿರಾದ ವಿನೋದ್ (ಗಲ್ಫ್), ರಮ್ಯ (ನೆಲ್ಲಿಕಟ್ಟೆ), ಬಿಂದು (ನಾರಂ ಪಾಡಿ), ಸಹೋದರ- ಸಹೋದರಿಯ ರಾದ ನಾರಾಯಣನ್ (ಅರಮಂಗಾನ), ಚಂದ್ರಾವತಿ (ಚೆರುಪನತ್ತಡಿ), ಸೀಮಂತಿನಿ (ಪುಳಿಂಚಾಲ್), ರೋಹಿಣಿ (ಪಳ್ಳಿಪುರಂ), ಸತಿ (ಆರಾಟ್‌ಕಡವು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಗಳ ವರ್ಷಾವಧಿ ಉತ್ಸವ ಸಮಾಪ್ತಿ

ಮಂಜೇಶ್ವರ: ಕಳೆದ ನಾಲ್ಕು ದಿನಗಳ ಕಾಲ ನಡೆದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಉತ್ಸವ ಕಡೆ ಬಂಡಿ ಉತ್ಸವದೊಂದಿಗೆ ಸಮಾಪ್ತಿಗೊಂ ಡಿತು. ಕೊಟ್ಯದಾಯನ ಅಣ್ಣ ದೈವದ ನೇಮ, ಕೆರೆ ದೀಪಾರಾಧನೆ, ತಮ್ಮ ದೈವದ ನೇಮ, ಮಡಸ್ಥಾನ, ಮುಂಡತ್ತಾಯ ದೈವದ ನೇಮ, ನಡುಬಂಡಿ ಉತ್ಸವ, ಅಣ್ಣ ದೈವದ ನೇಮ, ತಮ್ಮ ದೈವದ ನೇಮ, ಮುಂಡತ್ತಾಯ ದೈವದ ನೇಮ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಿತು.  ಉತ್ಸವದ ಕೊನೆಯ ದಿನದಂದು ಮಂಜೇಶ್ವರ ಕ್ಷೇತ್ರದ  ಆಹ್ವಾನ ಮೇರೆಗೆ ಸಾವಿರ ಜಮಾಅತ್ ಮಸೀದಿಯ …