ಗುರಿಯನ್ನು ತಲುಪಲು ಶ್ರೇಷ್ಠವಾದ ಪ್ರಯತ್ನ ಅಗತ್ಯ-ಮಾಜಿ ಸೈನಿಕ ಅಚಲ ಎಂ.ಜಿ:  ಮುಳ್ಳೇರಿಯ ಮಂಡಲದ ಜೀವನಬೋಧ ಶಿಬಿರ ಉದ್ಘಾಟನೆ

ಬದಿಯಡ್ಕ: ಸೇನೆಯಲ್ಲಿ ಅನೇಕ ವಿಭಾಗಗಳಿವೆ. ಪ್ರತಿಯೊಬ್ಬನಿಗೂ ತನ್ನದೇ ಆದ ಜವಾಬ್ದಾರಿ ಇರುತ್ತದೆ. ಆದರೆ ಒಂದು ತಂಡದ ವ್ಯವಸ್ಥೆ ಇನ್ನೊಂ ದು ತಂಡಕ್ಕೆ ಗೊತ್ತಿರುವುದಿಲ್ಲ. ರಕ್ಷಣಾ ವಿಚಾರದಲ್ಲಿ ಯಾವುದೇ ರಾಜಿ ಇರುವುದಿಲ್ಲ. ನಿರ್ಧಿಷ್ಟವಾದ ಗುರಿಯನ್ನು ತಲುಪಲು ನಮ್ಮ ಶ್ರೇಷ್ಠ ಪ್ರಯತ್ನ ಇರಬೇಕು ಎಂದು ಮಾಜಿ ಸೈನಿಕ ಹವಾಲ್ದಾರ್ ಅಚಲ ಎಂ.ಜಿ  ಪುತ್ರಕಳ ಹೇಳಿದರು. ಶ್ರೀ ರಾಮ ಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಿನ್ನೆ ಆರಂಭವಾದ ಎರಡು ದಿನಗಳ ಜೀವನಬೋಧ ಶಿಬಿರವನ್ನು …

ಕಾಟುಕುಕ್ಕೆ ಕ್ಷೇತ್ರ ಬ್ರಹ್ಮಕಲಶೋತ್ಸವ: ಅಲಂಗೋಡು ಶ್ರೀ ಧೂಮಾವತಿ ನೃತ್ಯ ತಂಡದಿಂದ ತಿರುವಾದಿರ ನೃತ್ಯ

ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸ ವದಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾಸರಗೋಡು ಮನ್ನಿ ಪ್ಪಾಡಿ ಅಲಂಗೋಡು ಶ್ರೀ ಧೂಮಾವತಿ ನೃತ್ಯ ತಂಡದವರಿಂದ ಫ್ಯೂಶನ್ ತಿರುವಾದಿರ ನೃತ್ಯ ನಡೆಯಿತು. ಓಮನ ರವಿ ಮನ್ನಿಪ್ಪಾಡಿ, ಪೂರ್ಣಿಮಾ ರಾಜೇಶ್ ಮನ್ನಿಪ್ಪಾಡಿ, ಅನುಶ್ರೀ, ಶೀಬಾ ಸತೀಶ್ ಕಾಂತಿಕೆರೆ, ಲತಾ ವಸಂತ ಕಾಂತಿಕೆರೆ, ವಿನೀತ ರಾವ್, ಅಶ್ವನಿ ಶರತ್, ಡಾ. ಚೈತ್ರ ರವಿ ಮನ್ನಿಪ್ಪಾಡಿ, ಡಾ. ಮೃದುಲ ರಾಘವನ್ ಮನ್ನಿಪ್ಪಾಡಿ, ಧನಶ್ರೀ, ರಮ್ಯಾ, ಅಮಿತಾ ಶರತ್ ಮನ್ನಿಪ್ಪಾಡಿ, ಸೌಮ್ಯ ಸುನೇಶ್ …

ಮನೆಯ ಮೇಲಂತಸ್ತಿಗೆ ಕಲ್ಲು ಸಾಗಿಸುತ್ತಿದ್ದಾಗ ಬಿದ್ದು ಯುವಕ ದಾರುಣ ಮೃತ್ಯು

ಕುಂಬಳೆ: ಮನೆಯ ಮೇಲಿನ ಮಹಡಿಗೆ ಕಲ್ಲು ಕೊಂಡೊಯ್ಯುತ್ತಿದ್ದ ವೇಳೆ ಕಾಲು ಜಾರಿ ಕೆಳಕ್ಕೆ ಬಿದ್ದು ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕುಬಣೂರು ಬಳಿಯ ಜೋಡುಕಲ್ಲು ನವೋದಯ ನಗರದ ಕಿಟ್ಟು ಪುರುಷ ಎಂಬವರ ಪುತ್ರ ಶಶಿಧರ ಜೆ. (32) ಮೃತಪಟ್ಟ ದುರ್ದೈವಿ. ನಿನ್ನೆ ಅಪರಾಹ್ನ ಕುಬಣೂರು  ಚಿನ್ನಮೊಗರು ಬನತ್ತಡಿ ಎಂಬಲ್ಲಿ ಘಟನೆ ನಡೆದಿದೆ. ಬಿದ್ದು ಗಂಭೀರ ಗಾಯಗೊಂಡ ಶಶಿಧರರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಅಪಘಾತ ಸಂಬಂಧ ಕುಂಬಳೆ …

ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಸಿಪಿಎಂ ಬ್ರಾಂಚ್ ಕಾರ್ಯದರ್ಶಿಯಾಗಿರುವ ವ್ಯಕ್ತಿ ಮನೆಯ ಸನ್‌ಶೇಡ್‌ನ ಕೊಕ್ಕೆಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಕಾರಡ್ಕ, ಶಾಂತಿ ನಗರ ನಿವಾಸಿ ಸಿ.ಎಚ್.ಶಶಿ (58) ಮೃತಪಟ್ಟವರು. ನಿನ್ನೆ ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಯಾಗಿದೆ. ಮನೆಯಲ್ಲಿ ಏಕಾಂಗಿ ಯಾಗಿ ಇವರು ವಾಸಿಸುತ್ತಿದ್ದರು. ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಶಾಂತಿನಗರ ರಾಮಣ್ಣ ರೈ ಗ್ರಂಥಾಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿರುವ ಇವರು ದಿ| ಸಿ.ಎಚ್. ರಾಮ-ಲಕ್ಷ್ಮಿ ದಂಪತಿಯ ಪುತ್ರನಾಗಿದ್ದಾರೆ. ಮೃತರು ಸಹೋದರರಾದ ಸಿ.ಎಚ್. ಗೋಪಾಲನ್ …

ರಕ್ತಸ್ರಾವದಿಂದ ಸಾವಿಗೀಡಾದ ಬಾಲಕಿ: ನಾಲ್ಕೂವರೆ ತಿಂಗಳ ಗರ್ಭಿಣಿ ; ತನಿಖೆ ತೀವ್ರಗೊಳಸಿದ ಪೊಲೀಸ್; ಸಹಪಾಠಿ ನಿಗಾದಲ್ಲಿ

ಕಾಸರಗೋಡು: ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹದಿನಾರರ ಹರೆಯದ ಬಾಲಕಿ ಅಪರಿಮಿತವಾಗಿ ರಕ್ತಸ್ರಾವದಿಂದಾಗಿ ಸಾವಿಗೀಡಾದ ಪ್ರಕರಣದಲ್ಲಿ ಪೊಲೀಸರು ತನಿಖ ತೀವ್ರಗೊಳಿಸಿದ್ದಾರೆ. ಶುಕ್ರವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಆಂಬುಲೆನ್ಸ್‌ನಲ್ಲಿ ಸಾಗಿಸುತ್ತಿದ್ದಾಗ ಬಾಲಕಿ ಮೃತಪಟ್ಟಿದ್ದಾಳೆ. ಮನೆಯಲ್ಲಿ ರಕ್ತಸ್ರಾವವುಂಟಾದ ಬಾಲಕಿಯನ್ನು ಕಾಞಂಗಾಡ್‌ನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಗರ್ಭಿಣಿ ಎಂದು ತಿಳಿದು ಬಂದಿತ್ತು. ಬಾಲಕಿಯ ಸ್ಥಿತಿ ಗಂಭೀರವಾಗಿದ್ದುದರಿಂದ ಮಂಗಳೂರಿನ ಆಸ್ಪತ್ರೆಗೆ ತಲುಪಿಸಲು ವೈದ್ಯರು ಸೂಚಿಸಿದ್ದರು. ಆದರೆ ಮಂಗಳೂರಿಗೆ ತಲುಪುವ ಮೊದಲೇ ಸಾವು ಸಂಭವಿಸಿತ್ತು. ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ …

ಮಾದಕ ದ್ರವ್ಯ ಪತ್ತೆ: ಕಾರು ಸಹಿತ ಓರ್ವನ ವಿರುದ್ಧ ಕೇಸು ದಾಖಲು

ಉಪ್ಪಳ: ಮಂಗಲ್ಪಾಡಿ ಗ್ರಾಮದ ಶಿರಿಯ ಪೆಟ್ರೋಲ್ ಬಂಕ್‌ನ ಬಳಿ ಅಬಕಾರಿ ಇಲಾಖೆ ವಾಹನ ತಪಾಸಣೆ ಯಲ್ಲಿ ತೊಡಗಿದ್ದ ವೇಳೆ ನಿಲ್ಲಿಸದೆ ಇಲಾಖೆಯ ವಾಹನಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿ ಅದನ್ನು ಹಿಂಬಾಲಿಸಿದ ಅಬಕಾರಿ ಇಲಾಖೆಯವರು ಅದರಿಂದ 12.087 ಗ್ರಾಂ ಮಾದಕ ದ್ರವ್ಯವಾದ ಮೆಥಾ ಫಿಟಮಿನ್ ಪತ್ತೆಹಚ್ಚಿ ವಶಪಡಿಸಿಕೊಂಡಿ ದ್ದಾರೆ. ಇದಕ್ಕೆ ಸಂಬಂಧಿಸಿ ಕುಬಣೂರು ಗ್ರಾಮದ ಬೈತಲ ನಿವಾಸಿ ಅಬ್ದುಲ್ ಲತೀಫ್ ಎಂಬಾತನನ ವಿರುದ್ಧ ಎನ್‌ಡಿಪಿಎಸ್ ಕಾನೂನು ಪ್ರಕಾರ ಕೇಸು ದಾಖಲಿಸಲಾಗಿದೆ. ಆತ ಚಲಾಯಿಸಿದ ಕಾರನ್ನು ನಂತರ ಕುಂಬಳೆ ಅಬಕಾರಿ …

ಅಸೌಖ್ಯ: ಚಾಲಕ ನಿಧನ

ಬದಿಯಡ್ಕ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಚಾಲಕ ಮೃತಪಟ್ಟರು. ಮೂಕಂಪಾರೆ ನಿವಾಸಿ ಹಾಗೂ ಕನ್ಯ ಪ್ಪಾಡಿಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ವೆಂಕಟೇಶ್ (60) ಮೃತಪಟ್ಟವರು. ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಆದಿತ್ಯವಾರ ಸಂಜೆ ನಿಧನ ಸಂ ಭವಿಸಿದೆ. ಖಾಸಗಿ ಬಸ್, ಲಾರಿಗಳಲ್ಲಿ ಚಾಲಕನಾಗಿದ್ದರು. ಮೃತರು ಪತ್ನಿ ಕಲಾವತಿ, ಮಕ್ಕಳಾದ ಅರ್ಷಿತಾ, ಅವಿನಾಶ್, ಅಳಿಯ ಜಯಪ್ರಕಾಶ್ ಮಂಗಳೂರು, ಸಹೋದರಿಯರಾದ ಬೇಬಿ, ಪುಷ್ಪಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ ಪುತ್ರಿ ಶ್ರುತಿ ಈ ಹಿಂದೆ ನಿಧನ ಹೊಂದಿದ್ದಾರೆ.

ಒಂದು ಕಿಲೋ ಗಾಂಜಾ ಸಹಿತ ಓರ್ವ ಸೆರೆ

ಕಾಸರಗೋಡು: ಪಿಕ್‌ಅಪ್ ವಾಹನದಲ್ಲಿ ಮಾರಾಟಕ್ಕಾಗಿ ತರಲಾಗುತ್ತಿದ್ದ ಒಂದು ಕಿಲೋ ಗಾಂಜಾವನ್ನು ಕಳ್ಳಾರ್ ಬಳಿಯಿಂದ ರಾಜಪುರಂ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ರಾಜೇಶ್‌ರ ನೇತೃತ್ವದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಪಾಣತ್ತೂರು ಕಂಬಿಕಾನಂ ವೀಟಿಲ್ ಮೊಹಮ್ಮದ್  ಅಶ್ರಫ್ (20) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಮಾಲು ಸಾಗಿಸಲು ಬಳಸಲಾಗಿದ್ದ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತ ಆರೋಪಿ ಪಾಣತ್ತೂರಿನಲ್ಲಿ ಮೀನು ಮಾರಾಟ ಮಾಡುವ ವ್ಯಕ್ತಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಹೋದರಿ ನಿಧನ ಹೊಂದಿದ 12ನೇ ದಿನ ಸಹೋದರ ನಿಧನ

ಕಾಸರಗೋಡು:  ಸಹೋದರಿ ನಿಧನ ಹೊಂದಿದ 12ನೇ ದಿನ ಸಹೋದರ  ನಿಧನ ಹೊಂದಿದ ಘಟನೆ ನಡೆದಿದೆ. ಕಾಞಂಗಾಡ್ ಕೋಟ್ಟಪ್ಪಾರ ವಾಳಕ್ಕೋಡ್ ನಿವಾಸಿ ಎಂ.ವಿ. ಕೇಳು (70) ನಿಧನಹೊಂದಿ ದವರು. ಇವರ ಸಹೋದರಿ ಜಾನಕಿ ಅಸೌಖ್ಯ ತಗಲಿ ಎಪ್ರಿಲ್ 30ರಂದು ರಾತ್ರಿ ನಿಧನರಾಗಿದ್ದರು. ಬಿಜೆಪಿ ವಾಳಕ್ಕೋಡ್ ಬೂತ್ ಸಮಿತಿ ಅಧ್ಯಕ್ಷರಾಗಿ ಹಲವು ವರ್ಷ ಕೇಳು ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಪ್ರೀತಿ, ನಿತೀಶ್, ಪ್ರಭಾ, ಅಳಿಯಂದಿರಾದ ರಾಘವ ಕುಂಬಳೆ, ಶಶಿಧರನ್, ಸೊಸೆ ಸಂಗೀತ ಹಾಗೂ ಅಪಾರ ಬಂಧು-ಮಿತ್ರರನ್ನು …

ವೃದ್ದೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬೋವಿಕ್ಕಾನ: ವೃದ್ದೆಯೊಬ್ಬರು ನೇಣು ಬಿಗಿದು ಸಾವಿಗೀಡಾದ ಘಟನೆ ನಡೆದಿದೆ. ಬೋವಿಕ್ಕಾನ ತೇಜಸ್ ಹೌಸಿಂಗ್ ಕಾಲನಿಯ ಚೋಮ ಎಂಬವರ ಪತ್ನಿ ಚೋಮು (80) ಮೃತಪಟ್ಟವರಾಗಿದ್ದಾರೆ. ಮನೆ ಹಿತ್ತಿಲಿನಲ್ಲಿರುವ ಮಾವಿನ ಮರದ ರೆಂಬೆಗೆ ಇವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೊನ್ನೆ ಸಾವಿಗೀಡಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಪುತ್ರಿ ಸುಗಂಧಿ ನೀಡಿದ ದೂರಿನಂತೆ ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.