ಗಾಂಜಾ ಸಹಿತ ಯುವಕ ಸೆರೆ

 ಕುಂಬಳೆ: 10 ಗ್ರಾಂ ಗಾಂಜಾ ಸಹಿತ ಯುವಕನನ್ನು ಬಂಧಿಸಲಾಗಿದೆ. ಕುಂಬಳೆ ಕೊಯಿಪ್ಪಾಡಿ  ಬದ್ರಿಯಾ ನಗರದ ನೀರೋಳಿ ವೀಟಿಲ್ ಅಪ್ಸಲ್ (28) ಎಂಬಾತನನ್ನು ಕುಂಬಳೆ ರೇಂಜ್ ಅಬಕಾರಿ ಇನ್‌ಸ್ಪೆಕ್ಟರ್ ಕೆ.ಡಿ. ಮಾಥ್ಯು ಹಾಗೂ ತಂಡ ಬಂಧಿಸಿದೆ. ಈತನ ವಿರುದ್ದ ಎನ್‌ಡಿಪಿಎಸ್ ಪ್ರಕಾರ ಕೇಸು ದಾಖಲಿಸಲಾಗಿದೆ. ಅಬಕಾರಿ ತಂಡದಲ್ಲಿ  ಪ್ರಿವೆಂಟೀವ್ ಆಫೀಸರ್‌ಗಳಾದ ಕೆ.ವಿ. ಮನಾಸ್, ಸಿಇಒಗಳಾದ ವಿ. ಜಿತೇಶ್, ಎಂ. ಧನೇಶ್, ಚಾಲಕ ಪ್ರವೀಣ್ ಕುಮಾರ್ ಎಂಬಿವರು.

ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಬದಿಯಡ್ಕ: ನಾಲ್ಕೂವರೆ ಲೀಟರ್ ಕರ್ನಾಟಕ ಮದ್ಯ ಸಹಿತ ಮುಳಿಯಾರು ಪಯರ್‌ಪಳ್ಳದ ಗೋಪಾಲಕೃಷ್ಣ ಎಂಬಾತನನ್ನು ಅಬಕಾರಿ ತಂಡ ಬಂಧಿಸಿದೆ. ಬದಿಯಡ್ಕ ಅಬಕಾರಿ ಪ್ರಿವೆಂಟೀವ್ ಆಫೀಸರ್ ಬಿ.ಎಸ್. ಮುಹಮ್ಮದ್ ಕಬೀರ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಮದ್ಯ ಪತ್ತೆಹಚ್ಚಲಾಗಿದೆ. ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಜಿ.ಎಸ್. ಲಿಜು, ವಿನೋದ್ ಕೆ, ಅಲೋಕ್ ಗುಪ್ತ, ಸದಾನಂದನ್ ಪಿ, ಧನ್ಯ ಟಿ ಂಬಿವರು ಅಬಕಾರಿ ತಂಡದಲ್ಲಿದ್ದರು.

ಕೆಪಿಸಿಸಿ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ

ತಿರುವನಂತಪುರ: ಕೆಪಿಸಿಸಿ ನೂತನ ಅಧ್ಯಕ್ಷರಾಗಿ  ಸಣ್ಣಿ ಜೋ ಸೆಫ್ ಅಧಿಕಾರ ವಹಿಸಿಕೊಂಡರು. ಇಂದು ಬೆಳಿಗ್ಗೆ ತಿರುವನಂತಪುರ ಇಂದಿರಾ ಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಸುಧಾಕರನ್, ರಮೇಶ್  ಚೆನ್ನಿತ್ತಲ ಕೆ.ಸಿ. ವೇಣುಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.

ಅರ್ಧ ಬೆಲೆಗೆ ಸ್ಕೂಟರ್ ತನಿಖೆ ಕ್ರೈಂಬ್ರಾಂಚ್‌ಗೆ

ಕಾಸರಗೋಡು: ಅರ್ಧ ಬೆಲೆಗೆ ಸ್ಕೂಟರ್ ಸಹಿತ ವಿವಿಧ ಉಪಕರಣಗಳನ್ನು ನೀಡಲಾಗುವುದೆಂಬ ಭರವಸೆಯೊಡ್ಡಿ ಹಲವರಿಂದ ಹಣ ಸಂಗ್ರಹ ನಡೆಸಿ ವಂಚಿಸಲಾಯಿತೆಂಬ ಪ್ರಕರಣದ ತನಿಖೆಯನ್ನು ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ. ಬದಿಯಡ್ಕ  ಹಾಗೂ ಹೊಸದುರ್ಗ ಪೊಲೀಸರು ದಾಖಲಿಸಿಕೊಂಡ ಪ್ರಕರಣವನ್ನು ಕ್ರೈಂಬ್ರಾಂಚ್‌ಗೆ  ಹಸ್ತಾಂತರಿಸಿರುವುದಾಗಿ ತಿಳಿದುಬಂದಿದೆ. ಅರ್ಧ ಬೆಲೆಗೆ ಸ್ಕೂಟರ್ ಹಾಗೂ ಇತರ ಉಪ ಕರಣಗಳನ್ನು ನೀಡಲಾಗುವುದೆಂದು  ನಂಬಿಸಿ ಹಣ ಸಂಗ್ರಹ ನಡೆಸಲಾ ಯಿತೆಂಬ ಆರೋಪ ರಾಜ್ಯದ ವಿವಿಧೆಡೆಗಳಲ್ಲಿ ಕೇಳಿಬಂದಿತ್ತು.

ಖಾಸಗಿ ವ್ಯಕ್ತಿಯ ಕಟ್ಟಡದಿಂದ ತ್ಯಾಜ್ಯನೀರು ಹರಿದುಬಿಡುವುದು ಸಾರ್ವಜನಿಕ ಸ್ಥಳಕ್ಕೆ: ಬದಿಯಡ್ಕದಲ್ಲಿ ನಾಗರಿಕರಿಗೆ ಸಮಸ್ಯೆ

ಬದಿಯಡ್ಕ: ಬದಿಯಡ್ಕ ಮೇಲಿನ ಪೇಟೆಯ ಹೃದಯ ಭಾಗದಲ್ಲಿರುವ ಖಾಸಗಿ ವ್ಯಕ್ತಿಯ ಕಟ್ಟಡದಿಂದ ತ್ಯಾಜ್ಯ ನೀರನ್ನು  ಸಾರ್ವಜನಿಕ ಸ್ಥಳದಲ್ಲಿ ಹರಿಯಬಿಡುತ್ತಿರುವುದಾಗಿ ದೂರಲಾಗಿದೆ.ಈ ಬಗ್ಗೆ ಸ್ಥಳೀಯರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಕಾಸರಗೋಡು ಜೆಡಿ ಆಫೀಸ್‌ನ (ಐವಿಒ) ಇಂಟೆಲಿಜೆನ್ಸ್ ವಿಭಾಗ, ಪಂಚಾಯತ್, ಬದಿಯಡ್ಕ ಸಿಎಚ್‌ಸಿಯ ಆರೋಗ್ಯ ವಿಭಾಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಅದರ ಸಮೀಪದಲ್ಲೇ ಇರುವ ಪಂಚಾಯತ್ ಹಾಗೂ ಆರೋಗ್ಯ ಇಲಾಖ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದಾಗಿಯೂ ನಾಗರಿಕರು ಆರೋಪಿಸುತ್ತಿದ್ದಾರೆ. ಬದಿಯಡ್ಕ ಮೇಲಿನ ಪೇಟೆಯಿಂದ ಅಲ್ಪವೇ …

ಎಂಡಿಎಂಎ ಉಪಯೋಗಿಸುತ್ತಿದ್ದ ಓರ್ವ ಸೆರೆ

ಮಂಜೇಶ್ವರ: ಸಾರ್ವಜನಿಕ ಸ್ಥಳದಲ್ಲಿ ಎಂ.ಡಿ.ಎA.ಎ ಉಪಯೋಗಿಸುತ್ತಿದ್ದ ಓರ್ವನನ್ನು ಮಂಜೇಶ್ವರ ಪೋಲೀಸರು ಸೆರೆಹಿಡಿದಿದ್ದಾರೆ. ತೂಮಿನಾಡ್ ಹಿಲ್‌ಟಾಪ್ ನಗರದ ರಿಯಾಸ್ ಕೆ.ಎಂ (38) ಸೆರೆಗೀಡಾದ ವ್ಯಕ್ತಿ. ಶನಿವಾರ ಬೆಳಿಗ್ಗೆ 9ಗಂಟೆಗೆ ಮಂಜೇಶ್ವರ ಠಾಣೆಯ ಎಸ್.ಐ ಉಮೇಶ್ ನೇತೃತ್ವದಲ್ಲಿ ಗಸ್ತು ನಡೆಸುತ್ತಿದ್ದಾಗ ಹಿಲ್‌ಟಾಪ್ ನಗರದ ಸಾರ್ವಜನಿಕ ಸ್ಥಳದಲ್ಲಿ ಸಂಶಯಾಸ್ಪದ ವಾಗಿ ಕಂಡುಬAದ ಈತನನ್ನು ತಪಾಸಣೆ ನಡೆಸಿದಾಗ ಟ್ಯೂಬ್‌ನಲ್ಲಿ ಎಂ.ಡಿ.ಎA.ಎ ಉಪಯೋಗಿಸುತ್ತಿ ರುವುದಾಗಿ ಗಮನಕ್ಕೆ ಬಂದಿದೆ. ಸಾಮಗ್ರಿಗಳನ್ನು ಸೆರೆಹಿಡಿದು ಕೇಸು ದಾಖಲಿಸಿದ್ದಾರೆ.

ತಲೆಹೊರೆ ಕಾರ್ಮಿಕರನ್ನು ದ್ರೋಹಿಸುವ ನೀತಿಯನ್ನು ಸರಕಾರ ಕೈಬಿಡಬೇಕು-ಬಿ.ಎಂ.ಎಸ್

ಕಾಸರಗೋಡು: ಕೇರಳದಲ್ಲಿ ಲಕ್ಷಾಂತರ ತಲೆಹೊರೆ ಕಾರ್ಮಿಕರನ್ನು ದ್ರೋಹಿಸುವ ನೀತಿಯನ್ನು ರಾಜ್ಯ ಸರಕಾರ ಕೈಗೊಳ್ಳುತ್ತಿದೆ. ೨೬ ಎ ಕಾರ್ಡ್‌ಗಳಿರುವ ಕಾರ್ಮಿಕರು ನಡೆಸಬೇಕಾದ ಕೆಲಸಗಳನ್ನು ಅನ್ಯರಾಜ್ಯ ಕಾರ್ಮಿಕರು ಕಡಿಮೆ ವೇತನಕ್ಕೆ ನಡೆಸುವುದರಿಂದ ಇಲ್ಲಿನ ಕಾರ್ಮಿಕರಿಗೆ ಕೆಲಸವಿಲ್ಲದ ಸ್ಥಿತಿ ಉಂಟಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಹಲವು ವರ್ಷಗಳಿಂದ ಕೇರಳವನ್ನಾಳುವ ಎಡರಂಗ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಇನ್ನಾದರೂ ಈ ವಿಷಯದಲ್ಲಿ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಬೇ ಕೆಂದು ಹೆಡ್‌ಲೋಡ್ ಆಂಡ್ ಜನರಲ್ ಮಜ್ದೂರ್ ಸಂಘ್ (ಬಿಎಂಎಸ್) ಜಿಲ್ಲಾ ಸಮ್ಮೇಳನ ಒತ್ತಾಯಿಸಿದೆ. ಹೆಡ್‌ಲೋಡ್ ಆಂಡ್ ಜನರಲ್ …

ಯಕ್ಷಗಾನಾಭಿರುಚಿಯ ಬೀಜ ಬಿತ್ತಿ, ಕಲಾಪ್ರೀತಿಯ ವೃಕ್ಷ ಬೆಳೆಸುವಲ್ಲಿ ಯಕ್ಷ ಮಿತ್ರರು ಮಾನ್ಯದ ಕೊಡುಗೆ ಶ್ಲಾಘನೀಯ- ಎಡನೀರು ಶ್ರೀ

ಮಾನ್ಯ: ಕುಂಬಳೆ ಸೀಮೆಯ ನೆಲಮೂಲದ ಕಲೆ ಯಕ್ಷಗಾನವನ್ನು ಈ ನೆಲದಲ್ಲಿ ಹೊಸ ತಲೆಮಾರಿಗೆ ಕೈದಾಟಿಸಿ, ಹೊಸ ಪೀಳಿಗೆಗೂ ನೆಲದ ಸಂಸ್ಕೃತಿ ಪ್ರೇಮ ಮೂಡಿಸಿ ಮಾನ್ಯ ಪರಿಸರದಲ್ಲಿ ಯಕ್ಷಗಾನಾಭಿರುಚಿಯ ಬೀಜ ಬಿತ್ತಿ, ಕಲಾಪ್ರೀತಿಯ ವೃಕ್ಷ ಬೆಳೆಸುವಲ್ಲಿ ‘ಯಕ್ಷ ಮಿತ್ರರು ಮಾನ್ಯ’ ನೀಡಿದ ಕೊಡುಗೆ ಶ್ಲಾಘನೀಯ. ಮಾನ್ಯ ಪರಿಸರ ಸುಸಂಸ್ಕೃತ ನಾಗರಿಕ ಲಕ್ಷಣದಿಂದ ರೂಪುಗೊಂಡಿದ್ದರೆ ಅದಕ್ಕೆ ಈ ನೆಲದ ಯಕ್ಷಗಾನ ಪ್ರೀತಿಯೂ ಕಾರಣ. ಈ ಹಿನ್ನೆಲೆಯಲ್ಲಿ ರಜತ ಮಹೋತ್ಸವದತ್ತ ಹೆಜ್ಜೆ ಎತ್ತಿದ ‘ಯಕ್ಷಮಿತ್ರರು ಮಾನ್ಯ’ ಇದರ ಸಾಂಸ್ಕೃತಿಕ ಚಟುವಟಿಕೆಗೆ ನಾಡು …

ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಅಷ್ಟಬಂಧ  ಬ್ರಹ್ಮಕಲಶೋತ್ಸವ ಇಂದು ಸಮಾಪ್ತಿ

ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಇಂದು ಸಮಾಪ್ತಿಗೊಳ್ಳಲಿದೆ. ಕೀಕಾಂಗೋಡು ನೀಲೇಶ್ವರ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಈ ತಿಂಗಳ 6ರಿಂದ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗುತ್ತಾ ಬಂದಿದೆ. ನಿನ್ನೆ ಬೆಳಿಗ್ಗೆ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಮಧ್ಯಾಹ್ನ  ಬ್ರಹ್ಮಕಲಶಾಭಿಷೇಕ, ರಾತ್ರಿ ಶ್ರೀರಂಗಪೂಜೆ, ಶ್ರೀಬಲಿ, ಶ್ರೀ ಭೂತಬಲಿ, ಪಲ್ಲಕ್ಕಿ ಉತ್ಸವ, ಚಂದ್ರಮಂಡಲ ರಥೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಮೊದಲಾದ ವೈದಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮ, ಯಕ್ಷಗಾನ ಬಯಲಾಟ, …

ಕಾಸರಗೋಡು ರೋಟರಿಯಿಂದ ಜನರಲ್ ಆಸ್ಪತ್ರೆಗೆ ಮೊಬೈಲ್ ಬ್ಲಡ್ ಬ್ಯಾಂಕ್ ವ್ಯಾನ್ ನಾಳೆ ಹಸ್ತಾಂತರ

ಕಾಸರಗೋಡು: ರೋಟರಿ ಕಾಸರ ಗೋಡು ಇದರ ಗ್ಲೋಬಲ್ ಗ್ರಾಂಟ್ ಯೋಜನೆ ಅಂಗವಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಮೊಬೈಲ್ ಬ್ಲಡ್ ಬ್ಯಾಂಕ್ ವ್ಯಾನ್ ನೀಡಲಾಗುವುದು.  ನಾಳೆ ಬೆಳಿಗ್ಗೆ ೧೦ ಗಂಟೆಗೆ ಕಾಸರಗೋಡು ಜನರಲ್ ಆಸ್ಪತ್ರೆಯ ಕಾರುಣ್ಯ ಫಾರ್ಮಸಿ ಬಳಿ ನಡೆಯುವ ಕಾರ್ಯಕ್ರಮವನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು. ರೋಟರಿ ಕಾಸರಗೋಡು ಇದರ ಅಧ್ಯಕ್ಷ ಡಾ| ಬಿ. ನಾರಾಯಣ ನಾಯ್ಕ್ ಅಧ್ಯಕ್ಷತೆ ವಹಿಸುವರು. ಜನರಲ್ ಆಸ್ಪತ್ರೆಯ ಸುಪರಿಂಟೆಂಡೆಂಟ್ ಇನ್ ಚಾರ್ಜ್ ಡಾ| ಜನಾರ್ದನ ನಾಯ್ಕ ಕೀಲಿ ಕೈ ಹಸ್ತಾಂತರಿ ಸುವರು. …