ಸಂಬಂಧಿಕರು ಆಗಮಿಸದ ಅಪರಿಚಿತ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು

ಕಾಸರಗೋಡು: ಹೊಸ ಬಸ್ ನಿಲ್ದಾಣ ಪರಿಸರದಿಂದ ಮೇ 7ರಂದು ಆಂಬುಲೆನ್ಸ್‌ನಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಂದು ದಾಖಲಿಸಿದ ನಂತರ ಸಾವನ್ನಪ್ಪಿದ 60 ವರ್ಷ ಪ್ರಾಯ ತೋರುವ ವ್ಯಕ್ತಿಯ ಸಂಬಂಧಿಕರು ಯಾರೂ ಈತನಕ ಆಗಮಿಸದೇ ಇರುವ ಹಿನ್ನೆಲೆಯಲ್ಲಿ  ಮೃತದೇಹವನ್ನು ಇಂದು ಮರ ಣೋತ್ತರ ಪರೀಕ್ಷೆಗೊಳಪಡಿಸ ಲಾಗು ವುದೆಂದು ಕಾಸರಗೋಡು ಪೊಲೀಸರು ತಿಳಿಸಿದ್ದಾರೆ. ಮೃತವ್ಯಕ್ತಿ  ನೆರೆಗೂದಲು ಹಾಗೂ ಗಡ್ಡ ಹೊಂದಿದ್ದು, ನಸು ಕಂದು ಬಣ್ಣದ ತೆಳ್ಳಗಿನ ಶರೀರ ಹೊಂದಿದ್ದಾರೆ.  164 ಸೆಂ.ಮೀ ಎತ್ತರ ಹೊಂದಿರುವ ಈ ವ್ಯಕ್ತಿಯ ಹೊಕ್ಕುಳ ಭಾಗದಲ್ಲಿ …

ಡಿಪಿಸಿ ಕಪ್ ಫುಟ್ಬಾಲ್ ಪಂದ್ಯಾಟದಲ್ಲಿ ಕುಂಬಳೆ ಪೊಲೀಸ್ ತಂಡಕ್ಕೆ ಗೆಲುವು

ಕಾಸರಗೋಡು: ಕ್ರೀಡೆಗಳು ಮಾದಕವಾಗಿರಲಿ ಎಂಬ ಸಂದೇಶ ದೊಂದಿಗೆ ಜಿಲ್ಲಾ ಪೊಲೀಸ್  ಹಮ್ಮಿ ಕೊಂಡ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಕುಂಬಳೆ ಪೊಲೀಸ್ ತಂಡ ಗೆಲುವು ಸಾಧಿಸಿದೆ. ಬೇಕಲ ಪೊಲೀಸ್ ತಂಡವನ್ನು ಒಂದರ ವಿರುದ್ಧ ಎರಡು ಗೋಲುಗಳಿಗೆ ಸೋಲಿಸಿ ಕುಂಬಳೆ ಗೆಲುವು ತನ್ನದಾಗಿಸಿದೆ. ಡಿಐಜಿ ಕಪ್ ಪಂದ್ಯಾಟದ ಪೂರ್ವಭಾವಿಯಾಗಿ ಫುಟ್ಬಾಲ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಕೆ. ಇಂಬಶೇಖರ್‌ರಿಂದ ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಹಾಗೂ ತಂಡ ಟ್ರೋಫಿ ಪಡೆದುಕೊಂಡಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭಾರತ್ ರೆಡ್ಡಿ, …

ವ್ಯಕ್ತಿ ನಾಪತ್ತೆ: ಪತ್ನಿಯಿಂದ ದೂರು

ಕಾಸರಗೋಡು: ನಾಪತ್ತೆಯಾದ ಪತಿಯನ್ನು ಪತ್ತೆಹಚ್ಚಬೇಕೆಂದು ಒತ್ತಾಯಿಸಿ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.  ವಿದ್ಯಾನಗರ ಪೋಸ್ಟಲ್ ಸ್ಟಾಫ್ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶರೀಫ್ ಎಂಬವರು ಕಾಸರಗೋಡು ನಗರ ಠಾಣೆ ಪೊಲೀಸರಿಗೆ ಈ ದೂರು ನೀಡಿದ್ದಾರೆ. 2024 ಜನವರಿ 1ರಂದು ಕಾಸರಗೋಡು ಪ್ರಧಾನ ಅಂಚೆ ಕಚೇರಿ ಬಳಿಯಿಂದ ಅಬ್ದುಲ್ (62) ನಾಪತ್ತೆಯಾಗಿರುವುದಾಗಿ ಶರೀಫ್ ದೂರಿನಲ್ಲಿ ತಿಳಿಸಿದ್ದಾರೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಬನವಾಸಿಯ ಬೆಳದಿಂಗಳಲ್ಲಿ ಸೌಹಾರ್ದ ಸಂವಾದ ಇಂದು

ನೀರ್ಚಾಲು : ಮಾತೃಭಾಷೆ ಅಥವಾ ಪರಿಸರ ಭಾಷೆಯ ಮಹತ್ವವನ್ನು ತಿಳಿಯಪಡಿಸುವ ನಿಟ್ಟಿನಲ್ಲಿ ಸಮತಾ ಸಾಹಿತ್ಯ ವೇದಿಕೆ, ಬದಿಯಡ್ಕ ಇವರು, ನೀರ್ಚಾಲು ಬನವಾಸಿ ಮನೆ ಪರಿಸರದಲ್ಲಿ ಇಂದು ಸಂಜೆ ಸೌಹಾರ್ದ ಸಂವಾದ ಕಾರ್ಯಕ್ರಮವೊಂದನ್ನು ಆಯೋಜಿಸಿ ದ್ದಾರೆ. ಪ್ರಾಥಮಿಕ ಶಿಕ್ಷಣ ಮತ್ತು ಮಗು ಅರಳುವ ಭಾಷೆ ಎಂಬ ಶೀರ್ಷಿಕೆಯಲ್ಲಿ ಈ ಸಂವಾದ ನಡೆಯಲಿದ್ದು, ಬುದ್ದ ಪೂರ್ಣಿಮೆಯ ಬೆಳದಿಂಗಳಲ್ಲಿ ಈ ಮಾತುಕತೆ, ಚರ್ಚೆ, ಕಾಸರಗೋಡಿನ ಕನ್ನಡ ಅಸ್ಮಿತೆ, ಮುಂದುವರಿಕೆ, ಕನ್ನಡ ಮಾಧ್ಯಮ ಶಾಲೆಗಳ ಬಗೆಗಿನ ಚಿಂತನ ಮಂಥನ ನಡೆಯಲಿದೆ. ಕಾಸರಗೋಡಿನ ಕನ್ನಡ, …

ಪಯಸ್ವಿನಿ ನದಿಯಲ್ಲಿ ಬೃಹತ್ತಾಕಾರದ ಆಮೆಯ ಕಳೇಬರ ಪತ್ತೆ

ಬೋವಿಕ್ಕಾನ: ಪಯಸ್ವಿನಿ ಹೊಳೆಯ ಆಲೂರಿನಲ್ಲಿ ಬೃಹತ್ತಾಕಾರದ ಆಮೆ (ಪಾಲಪ್ಪೂವನ್) ಸತ್ತ ಸ್ಥಿತಿಯಲ್ಲಿ ಕಂಡುಬಂದಿದೆ. ಬಾವಿಕ್ಕೆರೆ ಅಣೆಕಟ್ಟು ಇರುವ ಕೆಳಗಿನ ಭಾಗದಲ್ಲಿ ಅಪೂರ್ವ ಜಾತಿಯ ಭೀಮಾಕಾರದ ಆಮೆಯ ಕಳೇಬರ ಪತ್ತೆಯಾಗಿದೆ. ಅಣೆಕಟ್ಟದ ಶಟರ್‌ನಲ್ಲಿ ಸಿಲುಕಿ ಸಾವು ಸಂಭವಿಸಿರಬೇಕೆಂದು ಶಂಕಿಸಲಾಗಿದೆ. 1.25 ಮೀಟರ್ ಉದ್ದ, ಅದರ ಅರ್ಧದಷ್ಟು ಅಗಲವಿರುವ ಆಮೆ ಸತ್ತಿದೆ. 4.5 ಕಿಲೋ ಭಾರ ಅಂದಾಜಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು  ಪರಿಶೀಲಿಸಿದ ಬಳಿಕ ಪೋಸ್ಟ್ ಮಾರ್ಟಂ ಕ್ರಮ ಕೈಗೊಂಡು ಸಂಸ್ಕರಿಸಲಾಗಿದೆ. ಕಳೆದ ವರ್ಷವೂ ಅಣೆಕಟ್ಟದ ಶಟರ್‌ಗೆ ಸಿಲುಕಿ ಒಂದು …

16ರ ಹರೆಯದ ಬಾಲಕಿ ರಕ್ತಸ್ರಾವದಿಂದ ಸಾವು: ಗರ್ಭ ಛಿದ್ರಕ್ಕೆ ಔಷಧಿ ನೀಡಿರುವುದಾಗಿ ಸಂಶಯ: ತನಿಖೆ ಆರಂಭ

ಕಾಸರಗೋಡು: ಹದಿನಾರರ ಹರೆಯದ ಬಾಲಕಿ ಅಪರಿಮಿತ ರಕ್ತಸ್ರಾವದಿಂದ ಮೃತಪಟ್ಟ ಘಟನೆ ನಡೆದಿದೆ. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಮಧ್ಯರಾತ್ರಿ ವೇಳೆ ರಕ್ತಸ್ರಾವ ಉಂಟಾದ ಬಾಲಕಿಯನ್ನು ಮೊದಲು ಪರಪ್ಪದ ವೈದ್ಯರೊಬ್ಬರ ಬಳಿಗೆ ಕರೆದೊಯ್ಯಲಾಗಿದೆ. ವೈದ್ಯ ನೀಡಿದ ಸೂಚನೆಯಂತೆ ಬಳಿಕ ಕಾಞಂಗಾಡ್‌ನ ಆಸ್ಪತ್ರೆಗೆ ತಲುಪಿಸಲಾಗಿತ್ತು. ಅಲ್ಲಿ ನಡೆಸಿದ ತಪಾಸಣೆಯಲ್ಲಿ ಗರ್ಭಿಣಿಯೆಂದೂ ಆಕೆ ಗಂಭೀರ ಸ್ಥಿತಿಯಲ್ಲಿರುವುದಾಗಿ ತಿಳಿದು ಬಂದಿದೆ. ಇದರಿಂದ ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಲು ವೈದ್ಯರು ತಿಳಿಸಿದ್ದಾರೆ. ಇದರಂತೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದಂತೆ ಬಾಲಕಿ ಮೃತಪಟ್ಟಿದ್ದಾಳೆ. …

ಕುಂಬಳೆಯಿಂದ ನಾಪತ್ತೆಯಾದ ಯುವತಿಗಾಗಿ ತೀವ್ರ ಶೋಧ

ಕುಂಬಳೆ: ಕುಂಬಳೆಯಿಂದ ನಾಪತ್ತೆಯಾದ ಯುವತಿಯ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕೊಯಿಪ್ಪಾಡಿ ವಿಲ್ಲೇಜ್ ಕುಂಟಂಗೇರಡ್ಕದ ಗೋಪಾಲಕೃಷ್ಣ ಎಂಬವರ ಪತ್ನಿ ರೋಹಿಣಿ (34) ನಾಪತ್ತೆ ಯಾಗಿದ್ದಾರೆ. ಕಳೆದ ಬುಧವಾರ ಬೆಳಿಗ್ಗೆ 9.30ರ ವೇಳೆ ಪಳ್ಳತ್ತಡ್ಕ ದಲ್ಲಿರುವ ತಾಯಿಯ ಮನೆಗೆಂದು ತಿಳಿಸಿ ರೋಹಿಣಿ ಹೋದಿದ್ದಾರೆ. ಅಂತರ ಆಕೆಯ ಕುರಿತು ಯಾವುದೇ ಮಾಹಿತಿಯಿಲ್ಲವೆಂದು ಪತಿ ಕುಂಬಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಕರಂದಕ್ಕಾಡಿನಲ್ಲಿ ಅಬಕಾರಿ ದಾಳಿ : 240 ಪ್ಯಾಕೆಟ್ ಕರ್ನಾಟಕ ಮದ್ಯ ವಶ

ಕಾಸರಗೋಡು: ನಗರದ ಕರಂದ ಕ್ಕಾಡಿನ ಶೇಂದಿ ಅಂಗಡಿ ಎದುರುಗಡೆ ಇರುವ ಜನವಾಸವಿಲ್ಲದ ಹಿತ್ತಿಲಿಗೆ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಸಿಕೆವಿ ಸುರೇಶ್ (ಗ್ರೇಡ್)ರ ನೇತೃತ್ವ ಅಬಕಾರಿ ತಂಡ  ನಡೆಸಿದ  ದಾಳಿಯಲ್ಲಿ 180 ಎಂಎಲ್‌ನ 240 ಟೆಟ್ರಾ ಪ್ಯಾಕೆಟ್ (43.2 ಲೀಟರ್) ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಕಪ್ಪು ಪ್ಲಾಸ್ಟಿಕ್ ಕವರುಗಳಲ್ಲಿ ಈ ಮದ್ಯ  ಪ್ಯಾಕೆಟ್‌ಗಳನ್ನು ತುಂಬಿಸಿ ಹಿತ್ತಿಲ ಪೊದೆಯಲ್ಲಿ ಬಚ್ಚಿಡಲಾಗಿತ್ತೆಂದೂ ಇದಕ್ಕೆ ಸಂಬಂಧಿಸಿ ದಾಖಲಿಸಲಾದ ಪ್ರಕರಣದಲ್ಲಿ ಯಾರನ್ನೂ ಆರೋಪಿಯಾಗಿ ಸೇರ್ಪಡೆಗೊಳಿಸಲಾಗಿಲ್ಲವೆಂದು ಅಬಕಾರಿ …

ಬದಿಯಡ್ಕ ಅಕ್ಷಯಾ ಫ್ಯಾನ್ಸಿ ಮಾಲಕ ನಿಧನ

ಬದಿಯಡ್ಕ: ಬದಿಯಡ್ಕ ಅಕ್ಷಯ ಫ್ಯಾನ್ಸಿಯ ಮಾಲಕರಾದ ಬದಿಯಡ್ಕ ಶಾಂತಿಯಡಿ ಅಕ್ಷಯದ ಶ್ರೀನಿವಾಸ ರಾವ್ (73 ನಿಧನಹೊಂದಿದರು. ಅಲ್ಪ ಕಾಲದಂದ ಇವರಿಗೆ ಅಸೌಖ್ಯ ಬಾಧಿಸಿತ್ತು. ನಿನ್ನೆ ಬೆಳಿಗ್ಗೆ ಅಸೌಖ್ಯ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ೧೧.೨೦ರ ವೇಳೆ  ನಿಧನ ಸಂಭವಿಸಿದೆ. ಮೃತರು ಪತ್ನಿ ಪುಷ್ಪಾರಾಜೀವಿ, ಮಕ್ಕಳಾದ ರೋಶನ್ ಕಿರಣ್, ರಚನಾ ಎ.ಎಸ್, ಅಳಿಯ ಡಾ. ಯಶಸ್ ಸೈಪಂಗಲ್ಲು (ಭಾರತೀಯ ಸೇನೆ), ಸೊಸೆ ಅಂಜು, ಸಹೋದರ-ಸಹೋದರಿಯರಾದ ಸಂಜೀವ ರಾವ್, ವಸಂತ ರಾವ್, ಸುಗಂಧಿ, …

ಪೊಲೀಸ್ ಪೆನ್ಶನರ್ಸ್ ಸಂಘಟನೆಯ ಹಿತ್ತಿಲಿನಿಂದ ಮೋಟಾರ್, ಪೈಪ್ ಕಳವು

ಕಾಸರಗೋಡು: ಮಧೂರು ಪಂಚಾಯತ್‌ನ ಮಂಗಲಮೂಲೆ ಯಲ್ಲಿರುವ ಕೇರಳ ಪೊಲೀಸ್ ಪೆನ್ಶನರ್ಸ್ ಅಸೋಸಿಯೇ ಷನ್‌ನ ಹಿತ್ತಿಲ ಕೊಳವೆ ಬಾವಿಯ ಮೋಟಾರು ಮತ್ತು ಪೈಪ್‌ಗಳನ್ನು ಕಳವುಗೈಯ್ಯ ಲಾಗಿದೆ. ಈ ಬಗ್ಗೆ ಅಸೋಸಿಯೇ ಷನ್‌ನ ಅಧ್ಯಕ್ಷ ಶ್ರೀಧರನ್ ಎಂ. ನೀಡಿದ ದೂರಿನಂತೆ  ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ಈ  ಕೊಳವೆ ಬಾವಿ ಮೋ ಟರ್‌ನ ಮೀಟರ್ ಬಾಕ್ಸ್‌ನ್ನು ಒಡೆದು ಹಾಕಲಾಗಿದೆಯೆಂದು ಮೇ 7ರಂದು ಸಂಜೆ ಮತ್ತು ನಿನ್ನೆ ಬೆಳಿಗ್ಗೆಯ ಸಮಯದೊಳಗಾಗಿ ಈ ಕಳವು ನಡೆದಿದೆ ಎಂದು ಪೊಲೀಸರಿಗೆ …