ಮದ್ಯ ಸೇವಿಸಿ ಗಲಾಟೆ: ನಟ ವಿನಾಯಕನ್ ವಿರುದ್ಧ ದೂರು

ಕೊಲ್ಲಂ: ಕೊಲ್ಲಂನ ಪಂಚನಕ್ಷತ್ರ ಹೋಟೆಲ್‌ನಲ್ಲಿ ಮದ್ಯ ಸೇವಿಸಿ ಸಮಸ್ಯೆ ಸೃಷ್ಟಿಸಿದ ಆರೋಪದಂತೆ ನಟ ವಿನಾಯಕನ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮದ್ಯ ಸೇವಿಸಿ  ಗಲಾಟೆ ಎಬ್ಬಿಸಿದ ನಟ ವಿದೇಶ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವು ದಾಗಿಯೂ ದೂರಲಾಗಿದೆ.  ಸಿನಿಮಾ ಚಿತ್ರೀಕರಣದಂಗವಾಗ ವಿನಾಯಕನ್ ಹೋಟೆಲ್‌ನಲ್ಲಿ ತಂಗಿದ್ದರು. ನಟ ಜಯಸೂರ್ಯ ಮೊದಲಾದವರೂ ಅಲ್ಲಿದ್ದರು.  

ಅಪ್ರಾಪ್ತ ಚಲಾಯಿಸಿದ ಸ್ಕೂಟರ್ ವಶ ಆರ್.ಸಿ. ಮಾಲಕನ ವಿರುದ್ಧ ಕೇಸು

ಮಂಜೇಶ್ವರ: ಅಪ್ರಾಪ್ತ ಚಲಾಯಿಸಿದ ಸ್ಕೂಟರ್‌ನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದು ಆರ್.ಸಿ ಮಾಲಕನ ವಿರುದ್ದ ಕೇಸು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ 1.05 ರ ವೇಳೆ ಎಸ್.ಐ ಉಮೇಶ್ ನೇತೃತ್ವದಲ್ಲಿ ಅಂಗಡಿಪದ್ಣ್ಬೃ´ ಪೆಟ್ರೋಲ್ ಬಂಕ್ ಬಳಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಾಲಕ ಚಲಾಯಿಸಿದ ಸ್ಕೂಟರ್‌ನ್ನು ವಶಕ್ಕೆ ತೆಗೆದಿದ್ದಾರೆ. ಈ ಸಂಬAಧ ಸ್ಕೂಟರ್‌ನ ಆರ್.ಸಿ ಮಾಲಕನ ವಿರುದ್ದ ಕೇಸು ದಾಖಲಿಸಿದ್ದಾರೆ.

ರಾಜ್ಯದಲ್ಲಿ ಮತ್ತೆ ನಿಫಾ ಸೋಂಕು ಪತ್ತೆ

ಕಲ್ಲಿಕೋಟೆ: ರಾಜ್ಯದಲ್ಲಿ ಮತ್ತೆ ನಿಫಾ ರೋಗ ಸೋಂಕು ಪತ್ತೆಹಚ್ಚಲಾಗಿದೆ. ಕಲ್ಲಿಕೋಟೆ ವಳಾಂಚೇರಿ ನಿವಾಸಿಯಾದ 42ರ ಹರೆಯದ ಮಹಿಳೆಗೆ ರೋಗ ಬಾಧಿಸಿದೆಯೆಂದು ತಿಳಿದುಬಂದಿದೆ. ಪುಣೆ ವೈರಾಲಜಿ ಲ್ಯಾಬ್‌ನಿಂದ ಲಭಿಸಿದ ಸ್ಯಾಂಪಲ್ ತಪಾಸಣಾ ಫಲಿತಾಂಶ ಪೊಸಿಟಿವ್ ಆಗಿದೆ. ಈ ಮಹಿಳೆಯನ್ನು ಪೆರಿಂದಲ್ ಮಣ್ಣದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಗೆ ಜ್ವರ, ಕೆಮ್ಮು, ಉಸಿರಾಟ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಸ್ಯಾಂಪಲ್ ತಪಾಸಣೆಗಾಗಿ ಕಳುಹಿಸಲಾಗಿತ್ತು.

ಸನ್ನಿ ಜೋಸೆಫ್ ಕಾಂಗ್ರೆಸ್ ರಾಜ್ಯ ಘಟಕದ ಹೊಸ ಅಧ್ಯಕ್ಷ

ನವದೆಹಲಿ: ಕಾಂಗ್ರೆಸ್ ರಾಜ್ಯ ಘಟಕ (ಕೆಪಿಸಿಸಿ)ದ ಹೊಸ ಅಧ್ಯಕ್ಷರನ್ನಾಗಿ ಪೆರುವಾಯೂರ್ ಶಾಸಕ ಸನ್ನಿ ಜೋಸೆಫ್ (72)ರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಿಸಿದೆ. ಇವರು 1970ರಿಂದಲೇ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕಾಂಗ್ರೆಸ್‌ನ ಹಾಲಿ ರಾಜ್ಯ ಅಧ್ಯಕ್ಷ ಕೆ. ಸುಧಾಕರನ್‌ರನ್ನು ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಇದರ ಹೊರತಾಗಿ ಯುಡಿಎಫ್ ರಾಜ್ಯ ಸಂಚಾಲಕ ಸ್ಥಾನದಿಂದ ಎಂ.ಎಂ. ಹಸ್ಸನ್‌ರನ್ನು ಹೊರತುಪಡಿಸಿ, ಸಂಸದ ಅಡೂರ್ ಪ್ರಕಾಶ್‌ರಿಗೆ ಆ ಸ್ಥಾನ ನೀಡಲಾಗಿದೆ. ಪಿ.ಸಿ. ವಿಶ್ವನಾಥ್, ಎ.ಪಿ. ಅನಿಲ್ ಕುಮಾರ್ ಮತ್ತು …

ಸಚಿವೆ ವೀಣಾ ಜೋರ್ಜ್‌ಗೆ ಅಮೆರಿಕ ಸಂದರ್ಶನಕ್ಕೆ ಅನುಮತಿ ನಿರಾಕರಣೆ

ತಿರುವನಂತಪುರ: ಆರೋಗ್ಯ ಸಚಿವೆ ವೀಣಾ ಜೋರ್ಜ್‌ರ ಅಮೆರಿಕ ಸಂದರ್ಶನಕ್ಕೆ ಕೇಂದ್ರ ಸರಕಾರ ಅನುಮತಿ ನಿರಾಕರಿಸಿದೆ. ವಿಶ್ವದ ಪ್ರಸಿದ್ಧ ಖಾಸಗಿ ಆರೋಗ್ಯ ಸಂಶೋಧನಾ ವಿಶ್ವವಿದ್ಯಾಲಯವಾದ ಜೋನ್ಸ್ ಹೋಪಕಿನ್ಸ್ ವಿ.ವಿ.ಯಲ್ಲಿ ಇಂದು ನಡೆಯುವ ಕಾರ್ಯಕ್ರಮಕ್ಕೆ ಸಚಿವೆ ವೀಣಾ ಜೋರ್ಜ್ ಭಾಗವಹಿಸಲು ಆಮಂತ್ರಣ ಲಭಿಸಿತ್ತು. ಇದರಂತೆ ಸಚಿವೆ ನಿನ್ನೆ ಅಲ್ಲಿಗೆ ತಲುಪಬೇಕಿತ್ತು. ಆದರೆ ಸಚಿವೆಗೆ ಅಮೆರಿಕಕ್ಕೆ ತೆರಳಲು ಕೇಂದ್ರದಿಂದ ಅನುಮತಿ ಲಭಿಸಿಲ್ಲ, ಮೂರು ವಾರಗಳ ಹಿಂದೆ ಪ್ರಯಾಣಕ್ಕೆ ಅನುಮತಿ ಕೇಳಲಾಗಿತ್ತು. ಆದರೆ ಅನುಮತಿ ನಿಷೇಧಿಸಿದ ವಿಷಯ ಕೇಂದ್ರದಿಂದ ಮಂಗಳವಾರ ಸಚಿವೆಗೆ ಲಭಿಸಿದೆ …

ರಾಬರ್ಟ್ ಪ್ರಿವೋಸ್ಟ್ ನೂತನ ಪೋಪ್

ವಾಟಿಕನ್: ರಾಬರ್ಟ್ ಫ್ರಾನ್ಸಿಸ್ ಪ್ರಿವೋಸ್ಟ್ ಅವರು ೨೬೭ನೇ ಪೋಪ್ ಆಗಿ ಆಯ್ಕೆಯಾ ಗಿದ್ದಾರೆ. ಅಮೆರಿಕದ ಪ್ರಿವೋಸ್ಟ್ ಅವರನ್ನು ಪೋಪ್ ಲಿಯೋ ಎಂದು ಕರೆಯಲಾಗುತ್ತದೆ. ಪೋಪ್ ಹುದ್ದೆಗೇರಿದ ಅಮೇರಿಕಾದ ಮೊದಲ ವ್ಯಕ್ತಿಯಾಗಿದ್ದಾರೆ ಇವರು. ವ್ಯಾಟಿಕನ್ ಸಿಸ್ಟನ್ ಚಾಪೆಲ್‌ನಲ್ಲಿ ಪೋಪ್ ಆಯ್ಕೆಗೆ ಕಾರ್ಡಿನಲ್‌ಗಳ ಸಭೆ ನಡೆದಿತ್ತು. ಪೋಪ್ ಆಯ್ಕೆ ಖಚಿತವಾಗುತ್ತಿದ್ದಂತೆ ಚಾಪೆಲ್‌ನ ಚಿಮಿಣಿಯಿಂದ ಬಿಳಿ ಹೊಗೆ ಹೊರ ಚಿಮ್ಮಿದೆ.

ಮಣ್ಣಂಗುಳಿ ಮೈದಾನ ಪರಿಸರದಲ್ಲಿ ತ್ಯಾಜ್ಯಗಳ ರಾಶಿ: ದುರ್ವಾಸನೆಯಿಂದ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಮಣ್ಣಂಗುಳಿ ಮೈದಾನ ಹಾಗೂ ಇಲ್ಲಿನ ಅಂಗನ ವಾಡಿ ಕಟ್ಟಡ ಪರಿಸರದಲ್ಲಿ ತ್ಯಾಜ್ಯ ರಾಶಿಯಿಂದ ಸ್ಥಳೀಯರು ಸಹಿತ ಸಾರ್ವಜನಿಕರು ಸಮಸ್ಯೆಗೀ ಡಾಗಿದ್ದು, ಆತಂಕಗೊAಡಿದ್ದಾರೆ. ಕೋಡಿಬೈಲ್ ರಸ್ತೆ, ಮೈದಾನ ಸುತ್ತಲು ಅಲ್ಲದೆ ಈ ಪರಿಸರದಲ್ಲಿ ನೂತನವಾಗಿ ನಿರ್ಮಿಸಿ ಉದ್ಘಾಟನೆಗೆ ಮೀನ-ಮೇಷ ಎಣಿಸು ತ್ತಿರುವ ಅಂಗನವಾಡಿ ಕಟ್ಟಡದ ಬಳಿ ಯಲ್ಲಿ ತ್ಯಾಜ್ಯಗಳ ರಾಶಿ ಕಂಡುಬರು ತ್ತಿದೆ. ತ್ಯಾಜ್ಯಗಳನ್ನು ಇಲ್ಲಿ ಉರಿಸ ಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ವರ್ಷಗಳಿಂದಲೂ ಈ ಪರಿಸರದಲ್ಲಿ ತ್ಯಾಜ್ಯ ರಾಶಿ ಕಂಡು …

ಯಕ್ಷಮಿತ್ರರು ಮಾನ್ಯ ಸಂಸ್ಥೆಯ 24ನೇ ವಾರ್ಷಿಕ ಸಂಭ್ರಮ ನಾಳೆ: ಯಕ್ಷಗಾನ ಕಲಾವಿದರಿಗೆ ಸನ್ಮಾನ, ಯಕ್ಷಗಾನ ಬಯಲಾಟ

ಮಾನ್ಯ: ಮಾನ್ಯದಲ್ಲಿ ಮಣ್ಣಿನ ಕಲೆ ಯಕ್ಷಗಾನದ ಜೀವದುಸಿರನ್ನು ಕಾಪಾಡಿ ಹೊಸ ತಲೆಮಾರಿಗೆ ಕಲೆಯ ಒಲವನ್ನು  ಕೈದಾಟಿಸಿದ ಯಕ್ಷ ಮಿತ್ರರು ಸಾಂಸ್ಕೃತಿಕ ಸಂಘ ಮಾನ್ಯ ಇದರ 25ನೇ ವಾರ್ಷಿ ಕೋತ್ಸವ ನಾಳೆ ಮಾನ್ಯ ಜ್ಞಾನೋದಯ ಶಾಲಾ ಮೈದಾನದಲ್ಲಿ ನಡೆಯಲಿದೆ. ನಾಳೆ ಸಂಜೆ 6.30ಕ್ಕೆ ಸನ್ಮಾನ ಸಮಾರಂಭ ನಡೆಯಲಿರುವುದು. ಎಡನೀರು ಮಠಾಧೀಶ ಶ್ರೀ ಸಚ್ಚಿದಾ ನಂದ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಯಕ್ಷ ಮಿತ್ರರು ಮಾನ್ಯ ಇದರ ನಿರ್ದೇಶಕ, ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಮಾನವ ಹಕ್ಕು …

ಕೃಷಿಕರನ್ನು ವಂಚಿಸುವ ಕೇರಳ ಸರಕಾರದ ನೀತಿ ಖಂಡನೀಯ- ಬಿಜೆಪಿ

ಮೀಂಜ: ಈಗಾಗಲೇ ಬೆಳೆ ಕುಸಿತದಿಂದ ನಷ್ಟ ಅನುಭವಿಸಿರುವ ಕೃಷಿಕರನ್ನು ಕೇರಳ ಸರಕಾರ ಹಾಗೂ ಕೆಎಸ್‌ಇಬಿ ಇಲಾಖೆ ಬಹಿರಂಗವಾಗಿ ಲೂಟಿಗೆ ಇಳಿದಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಆರೋಪಿಸಿದರು. ಅನೇಕ ವರ್ಷಗಳಿಂದ ಕೃಷಿಕರ ಉಚಿತ ವಿದ್ಯುತ್ ಸಂಪರ್ಕಗಳಿಗೆ ವಿದ್ಯುತ್ ಇಲಾಖೆ ಯಾವುದೇ ಮುನ್ಸೂಚನೆ ಇಲ್ಲದೆ 30ಸಾವಿರದಿಂದ 50 ಸಾವಿರದವರೆಗೆ ಪಾವತಿ ಮಾಡುವಂತೆ ಬಿಲ್ ನೀಡಲಾಗಿದ್ದು, ಪಾವತಿಗೆ ಕೆಲವೇ ದಿನಗಳು ಅವಕಾಶ ಎಂದು ಕೃಷಿಕರನ್ನು ಬೆದರಿಸುವ ಪ್ರಕ್ರಿಯೆ ಕೂಡಾ ಇಲಾಖೆಯಿಂದ ಆಗುತ್ತಿದೆ ಎಂದು ಅವರು ಆರೋಪಿಸಿದರು. …

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಇಂದು ಅಪರಾಹ್ನ ಪ್ರಕಟ

ಕಾಸರಗೋಡು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಇಂದು ಅಪರಾಹ್ನ 3 ಗಂಟೆಗೆ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ  ಪ್ರಕಟಿಸುವರು. ಇದಾದ ಬಳಿಕ ಪಿ.ಆರ್.ಡಿಯ ಲೆವ್ ಮೊಬೈಲ್ ಅಪ್ಲಿಕೇಷನ್, ಪರೀಕ್ಷಾ ಭವನದ ಔದ್ಯೋಗಿಕ ವೆಬ್ ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಇದರ ಜೊತೆಗೆ ಬಿಎಚ್‌ಎಸ್‌ಎಲ್‌ಸಿ ಮತ್ತು ಟಿಎಚ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶಗಳನ್ನೂ ಪ್ರಕಟಿಸಲಾಗುವುದು.