10ರ ಹರೆಯದ ಬಾಲಕ, 16ರ ಬಾಲಕಿಗೆ ಕಿರುಕುಳ: ಮಂಜೇಶ್ವರದಲ್ಲಿ ಇಬ್ಬರು ಪೋಕ್ಸೋ ಪ್ರಕಾರ ಬಂಧನ

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಕಡೆಗಳಲ್ಲಿ ಪ್ರಾಯಪೂರ್ತಿಯಾಗದ ಇಬ್ಬರು ಮಕ್ಕಳ ಮೇಲೆ ಕಿರುಕುಳ ನಡೆದ ಬಗ್ಗೆ ದೂರಲಾಗಿದೆ. ಈ ಸಂಬಂಧ ಪೊಲೀಸರು ಎರಡು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಹತ್ತರ ಹರೆಯದ ಬಾಲಕನನ್ನು ಅಂಗಡಿಗೆ ಕರೆದೊಯ್ದು ಕಿರುಕುಳ ನೀಡಿದ ಬಗ್ಗೆ ನೀಡಿದ ದೂರಿನಂತೆ ಉಪ್ಪಳ ಆರ್‌ಎಸ್ ರೋಡ್‌ನ ರುಕ್ಸಾನ ಮಂಜಿಲ್‌ನ ಶೇಕ್ ಮೊಯ್ದೀನ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಇನ್ನೊಂದು ಪ್ರಕರಣದಲ್ಲಿ 16ರ ಹರೆಯದ ಬಾಲಕಿಗೆ …

ಬಸ್‌ಗಾಗಿ ಕಾಯುತ್ತಿದ್ದ  ಬಾಲಕಿಯನ್ನು ಅಪ್ಪಿದ ರಿಕ್ಷಾ ಚಾಲಕ: ಪೋಕ್ಸೋ ಕೇಸು ದಾಖಲು

ಕಾಸರಗೋಡು: ಬಸ್‌ಗಾಗಿ ಕಾಯುತ್ತಿದ್ದ ೧೪ರ ಬಾಲಕಿಯನ್ನು  ಮಾನಭಂಗಪಡಿಸಿದ ದೂರಿನಂತೆ ಆಟೋಚಾಲಕನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಮಾರ್ಚ್ 6ರಂದು ಸಂಜೆ 3.15ರ ವೇಳೆ ವೆಳ್ಳರಿಕುಂಡ್ ಲಿಟ್ಲ್ ಫ್ಲವರ್ ಮಸೀದಿ ಸಮೀಪದಲ್ಲಿ ಘಟನೆ ನಡೆದಿತ್ತು. ಬಾಲಕಿ ಬಸ್‌ಗಾಗಿ ಕಾಯುತ್ತಿದ್ದಳು. ಈ ಸಮಯದಲ್ಲಿ ಹಿಂದಿನಿಂದ ತಲುಪಿದ ಅಕ್ರಮಿ ಬಾಲಕಿಯನ್ನು ಅಪ್ಪಿ ಹಿಡಿದು ಆಕ್ರಮಣ ನಡೆಸಿರುವುದಾಗಿ ದೂರಲಾಗಿತ್ತು. ಘಟನೆ ಬಗ್ಗೆ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿರುವುದಾಗಿಯೂ ದೂರಲಾಗಿದೆ. ಕಂಡರೆ ಗುರುತು ಹಚ್ಚಬಹುದಾದ ಆಟೋ ಚಾಲಕ ಈ ರೀತಿ ವರ್ತಿಸಿರುವುದಾಗಿ ಬಾಲಕಿ …

ಕುಂಬಳೆಯಲ್ಲಿ ವ್ಯಾಪಾರಿ ಕಟ್ಟಡದ ಮೇಲೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಕುಂಬಳೆಯಲ್ಲಿ ಯುವ ವ್ಯಾಪಾರಿಯೊಬ್ಬರು ಕಟ್ಟಡದ ಮೇಲೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ  ಪತ್ತೆಯಾದ ಘಟನೆ ನಡೆದಿದೆ. ಕುಂಬಳೆ ಪೆರುವಾಡ್‌ನ ಕೃಷ್ಣ-ಪ್ರೇಮಾವತಿ ದಂಪತಿಯ ಪುತ್ರ ಸಂತೋಷ್ ಯಾನೆ ಸಂತು (40) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬದರ್ ಜುಮಾ ಮಸೀದಿಯ ಮುಂಭಾಗದಲ್ಲಿ ಹಣ್ಣು ಹಂಪಲು, ತರಕಾರಿ ವ್ಯಾಪಾರಿಯಾಗಿದ್ದರು. ಮರ್ಚೆಂಟ್ಸ್ ಯೂತ್ ವಿಂಗ್ ಕುಂಬಳೆ ಯೂನಿಟ್ ಕೋಶಾಧಿಕಾರಿಯೂ ಆಗಿದ್ದರು. ನಿನ್ನೆ ಮಧ್ಯಾಹ್ನ ವೇಳೆ ಇವರು ಕುಂಬಳೆ ಪೇಟೆಯ ಅರಿಮಲ ಕಾಂಪ್ಲೆಕ್ಸ್‌ನ ಮೇಲೆ ಶೀಟ್ ಅಳವಡಿಸಿದ …

ಕರ್ನಾಟಕ ಮದ್ಯ ಸಹಿತ ಓರ್ವನ ಸೆರೆ

ಪೆರ್ಲ: ಪೆರ್ಲ ಅಬಕಾರಿ ತಪಾ ಸಣಾ ಕೇಂದ್ರದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ  ಕಾರ್ಯಾ ಚರಣೆಯಲ್ಲಿ 7.200 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಬದಿಯಡ್ಕ ಚೆನ್ನಡ್ಕದ ಮನೋಜ್ ಕುಮಾರ್ 33) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಬಂಧಿತನನ್ನು ನಂತರ ನ್ಯಾಯಾಲಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿ ಸಲಾಗಿದೆ. ಕಾಸರಗೋಡು ರೇಂಜ್ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ.ಯವರ ನೇತೃತ್ವದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ವಿನಯರಾಜ್ ಪಿ.ಕೆ, ಪ್ರಿವೆಂಟಿವ್ ಆಫೀಸರ್ ಸುಮೋದ್ ಕುಮಾರ್ ಎಂ.ವಿ, ಮತ್ತು …

ಕ್ವಾರ್ಟರ್ಸ್ ಮಾಲಕನಿಗೆ ತಂಡದಿಂದ ಹಲ್ಲೆ

ಕುಂಬಳೆ: ಕೊಠಡಿ ಬಾಡಿಗೆಗೆ ಪಡೆಯಲು ಬಂದ ಕುಟುಂಬಕ್ಕೆ ಕ್ವಾರ್ಟರ್ಸ್ ತೋರಿಸಲು ಹೋದ ವ್ಯಕ್ತಿ ಮೇಲೆ ತಂಡವೊಂದು ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಉಪ್ಪಳ ಬಪ್ಪಾಯಿತೊಟ್ಟಿ ನಿವಾಸಿ ಅಬ್ದುಲ್ ಲತೀಫ್ (65)ರ ಮೇಲೆ ಹಲ್ಲೆಗೈಯ್ಯಲಾಗಿದೆ. ಇವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖ ಲಾಗಿದ್ದಾರೆ. ಅಬ್ದುಲ್ ಲತೀಫ್‌ರ ಪತ್ನಿ ಯ ಮಾಲಕತ್ವದಲ್ಲಿರುವ ಕುಬಣೂರಿ ನಲ್ಲಿ ಕ್ವಾರ್ಟರ್ಸ್ ಇದ್ದು, ಅಲ್ಲಿ ಕೊಠಡಿ ಪಡೆಯಲು ಬಂದ ಕುಟುಂಬವನ್ನು ಇವರು ಕರೆದೊಯ್ದಿದ್ದರು. ಈ ವೇಳೆ ಸ್ಥಳೀಯ ನಿವಾಸಿ ಪುರುಷೋತ್ತಮ ಎಂಬಾತನ ನೇತೃತ್ವದಲ್ಲಿ ಐದು …

ಪುತ್ರಿಯ ಕೊಂದ ಪ್ರಿಯತಮನ ತಂದೆಯನ್ನು ಇರಿದು ಕೊಲೆ

ಮಡಿಕೇರಿ: ಯುವತಿಯನ್ನು ಕೊಂದು ಹೂತುಹಾಕಿದ ಪ್ರಕರಣ ದಲ್ಲಿ ತಲೆಮರೆಸಿಕೊಂಡಿದ್ದ ಪ್ರಿಯತ ಮನ ತಂದೆಯನ್ನು ಕೊಲೆಗೀಡಾದ ಯುವತಿಯ ತಂದೆ ಇರಿದು ಕೊಲೆಗೈದ ಘಟನೆ ನಡೆದಿದೆ. ಮಂಡ್ಯ ಪಾಂಡವಪುರ ಸಮೀಪದ ಮಾಣಿಕ್ಯಹಳ್ಳಿಯ ನರಸಿಂಹ ಗೌಡ (60) ಕೊಲೆಗೀಡಾದ ವ್ಯಕ್ತಿ. ಶಾಲಾ ಅಧ್ಯಾಪಿಕೆ ಹಾಗೂ ಮಗುವಿನ ತಾಯಿಯಾಗಿದ್ದ ದೀಪಿಕ (28)ಳನ್ನು ನಾಲ್ಕು ತಿಂಗಳ ಹಿಂದೆ ಕೊಲೆಗೈದ ಪ್ರಕರಣದ ಆರೋಪಿ ನಿತೇಶ್‌ನ ತಂದೆಯಾಗಿದ್ದಾರೆ ನರಸಿಂಹ ಗೌಡ. ದೀಪಿಕ ಹಾಗೂ 21ರ ಹರೆಯದ ನಿತೇಶ್ ಪ್ರೀತಿಸುತ್ತಿದ್ದರು. ಈ ಸಂಬಂಧವನ್ನು ಕೊನೆಗೊಳಿಸಲು ದೀಪಿಕ ಆಗ್ರಹಿಸಿದ್ದಳು. ಆದರೆ …

ರವೀಂದ್ರನಾಥ ಠಾಗೋರ್ ಸಂಸ್ಮರಣೆ: ಪಾರ್ಲಿಮೆಂಟ್‌ನಲ್ಲಿ ಮಾತನಾಡಲು ಕೇರಳ ಕೇಂದ್ರ ವಿ.ವಿ.ಯ ವಿದ್ಯಾರ್ಥಿನಿಗೆ ಅವಕಾಶ

ಕಾಸರಗೋಡು: ರವೀಂದ್ರನಾಥ ಠಾಗೋರ್ ಸಂಸ್ಮರಣೆ ಪಾರ್ಲಿಮೆಂಟ್ ನಲ್ಲಿ ಈ ತಿಂಗಳ ೯ರಂದು ನಡೆಯಲಿದ್ದು, ಈ ವೇಳೆ ಸಂಸ್ಮರಣಾ ಭಾಷಣ ಮಾಡಲು ಕೇರಳ ಕೇಂದ್ರ ವಿವಿಯ ವಿದ್ಯಾರ್ಥಿನಿ ಹಾಗೂ ಎಕನಾಮಿಕ್ಸ್ ವಿಭಾಗ ಸ್ನಾತಕೋತ್ತರ ವಿದ್ಯಾರ್ಥಿನಿಯಾದ ಪಿ. ಅನುಶ್ರೀಗೆ ಅವಕಾಶ ಲಭಿಸಿದೆ. ಪಾರ್ಲಿಮೆಂಟ್‌ನ ಸೆಂಟ್ರಲ್ ಸಭಾಂ ಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಇವರಿಗೆ ಅವಕಾಶ ಲಭಿಸಿದೆ. ದೇಶದಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳ 12 ಮಂದಿಗೆ ಈ ಅವಕಾಶ ಲಭಿಸಿದ್ದು, ಇದರಲ್ಲಿ ಕೇರಳದಿಂದ ಅನುಶ್ರೀ ಸೇರಿದ್ದಾರೆ.ಕರ್ನಾಟಕ, ಝಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, …

ತಲಪಾಡಿ- ಚೆಂಗಳ ಸರ್ವೀಸ್ ರಸ್ತೆಯಲ್ಲಿ 77 ಬಸ್ ತಂಗುದಾಣ ನಿರ್ಮಾಣ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಒಂದನೇ ರೀಚ್ ಆಗಿರುವ ತಲಪಾಡಿಯಿಂದ ಚೆಂಗಳದ ವರೆಗಿನ ಸರ್ವೀಸ್ ರಸ್ತೆಯಲ್ಲಿ 77 ಕಡೆ ಬಸ್ ತಂಗುದಾಣವನ್ನು ನಿರ್ಮಿಸಲಾಗುವುದು. ಕುಂಬಳೆ ದೇವಿನಗರದಲ್ಲಿ ತಂಗುದಾಣ ನಿರ್ಮಾಣ ಪೂರ್ತಿಗೊಂಡಿದೆ. ಇತರ 76 ಕಡೆಗಳಲ್ಲಿ ಬಸ್ ತಂಗುದಾಣದ ಕಾಮಗಾರಿ ಎರಡು ವಾರದೊಳಗೆ ಆರಂಭಿಸಲಾಗುವುದು. ಈ ಮೊದಲು 64 ಕಡೆಗಳಲ್ಲಿ ತಂಗುದಾಣ ನಿರ್ಮಾಣದ ಯಾದಿ ಪ್ರಕಟಿಸಲಾಗಿತ್ತು. ಬಳಿಕ 13 ಕಡೆಗಳಲ್ಲಿ ತಂಗುದಾಣ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ೫.೫ ಮೀಟರ್ ಉದ್ದ, 2.7 ಮೀಟರ್ ಎತ್ತರ, 1.8 ಮೀಟರ್ ಅಗಲ ಎಂಬೀ …

ಆಸ್ಪತ್ರೆಗೆ ತಲುಪುವವರಲ್ಲಿ ಮಾನವೀಯತೆಯಿಂದ ವ್ಯವಹರಿಸಲು ಮಾನವಹಕ್ಕು ಆಯೋಗ ನಿರ್ದೇಶ

ಕಾಸರಗೋಡು: ಆಸ್ಪತ್ರೆಗಳ ಕ್ಯಾಶ್ವಾಲಿಟಿಗಳಲ್ಲೂ ಹಾಗೂ ಇತರ ಕಡೆಗಳಲ್ಲೂ ನೇಮಕ ಮಾಡುವ ಸೆಕ್ಯೂರಿಟಿ ನೌಕರರು, ನರ್ಸ್‌ಗಳು ಸಹಿತದ ನೌಕರರು ರೋಗಿಗಳೊಂದಿಗೆ ಹಾಗೂ ಜೊತೆಗಿರುವವರೊಂದಿಗೆ ಮಾನವೀಯ ರೀತಿಯಲ್ಲಿ ವ್ಯವಹರಿಸಬೇಕೆಂದು ಎಲ್ಲಾ ಸರಕಾರಿ ಆಸ್ಪತ್ರೆಗಳ ಸುಪರಿಂಟೆಂಡರಿಗೆ ನಿರ್ದೇಶ ನೀಡಬೇಕೆಂದು ಮಾನವಹಕ್ಕು ಆಯೋಗದ ಜ್ಯುಡೀಶ್ಯಲ್ ಸದಸ್ಯ ಕೆ. ಬೈಜುನಾಥ್ ಜಿಲ್ಲಾ ಮೆಡಿಕಲ್ ಆಫೀಸರ್‌ರಿಗೆ ನಿರ್ದೇಶಿಸಿದ್ದಾರೆ. ರೋಗದ ಹಾಗೂ ರೋಗಿಯ ಅವಸ್ಥೆಯನ್ನು ತಿಳಿದುಕೊಂಡು ತುರ್ತು ಚಿಕಿತ್ಸೆ ಲಭ್ಯಗೊಳಿಸಲಿರುವ ಸಹಾಯ ಮಾಡಲು ನೌಕರರು ಎಂದೂ ಸನ್ನದ್ಧರಾಗಿರಬೇಕೆಂದು ಆಯೋಗ ಆಗ್ರಹಿಸಿದೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಹೆರಿಗೆ ನೋವು …

ಭ್ರಷ್ಟಾಚಾರ, ದುಂದುವೆಚ್ಚದ ಸರಕಾರ ಮುಖ್ಯಮಂತ್ರಿ ರಾಜೀನಾಮೆಗೆ ಕಾಂಗ್ರೆಸ್ ಮಾರ್ಚ್

ಕಾಸರಗೋಡು: ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇ ಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಲೆಕ್ಟ್ರೇಟ್‌ಗೆ ಬಹುಜನ ಮಾರ್ಚ್ ನಡೆಸಲಾಯಿತು. ಮುಖ್ಯಮಂತ್ರಿ ಭ್ರಷ್ಟಾಚಾರ ನಡೆಸಿ ಅದರ ಹೆಸರಲ್ಲಿ ಪ್ರತಿಫಲವಾಗಿ ಪುತ್ರಿಯ ಬ್ಯಾಂಕ್ ಖಾತೆಗೆ ಲಕ್ಷಾಂತರ ಠೇವಣಿ ಸಂಗ್ರಹವಾಗುವ ಮಾಯಾಜಾಲ ಆಡಳಿತವಾಗಿದೆ ಕೇರಳದಲ್ಲಿ ನಡೆಯುತ್ತಿರುವುದು. ಇತಿಹಾಸದಲ್ಲೇ ಅತ್ಯಂತ ಹೆಚ್ಚು ಭ್ರಷ್ಟಾಚಾರ ನಡೆಯುವ ರಾಜ್ಯವಾಗಿ ಕೇರಳವನ್ನು ಬದಲಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸೋನಿ ಸೆಬಾಸ್ಟಿಯನ್ ನುಡಿದರು. ಪಿಣರಾಯಿ ವಿಜಯನ್‌ರ ೯ ವರ್ಷದ ಆಡಳಿತದಿಂದ ಕೇರಳ ಪಾತಾಳಕ್ಕೆ ತಲುಪಿದ್ದು, …