ರಾಜ್ಯಸಭೆಯಲ್ಲಿ ಮತ್ತೆ 100 ಸದಸ್ಯರ ಬಲ ದಾಟಿದ ಬಿಜೆಪಿ

ನವದೆಹಲಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಸೆ. 9ರಂದು ಚುನಾವಣೆ ನಡೆಯಲಿರು ವಂತೆಯೇ ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯರ ಬಲ ಮತ್ತೆ 100 ದಾಟಿದೆ.ರಾಜ್ಯಸಭೆಯಲ್ಲಿ ಬಿಜೆಪಿಸದಸ್ಯರ ಬಲ 100ರ ಗಡಿ ದಾಟುತ್ತಿರುವುದು 2022ರ ನಂತರ ಇದೇ ಮೊದಲ ಬಾರಿಯಾಗಿದೆ. ಕೇರಳದಿಂದ ಸಿ. ಸದಾನಂದನ್ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶಗೊಂಡು ಅವರು ಪ್ರಮಾಣವಚನ ಸ್ವೀಕರಸುವ ಮೂಲಕ ಬಿಜೆಪಿಯ ಸದಸ್ಯರ ಸಂಖ್ಯೆ ಈಗ 102ಕ್ಕೇರಿದೆ. 2022ರಲ್ಲಿ 13 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆದ ಬಳಿಕ ರಾಜ್ಯ ಸಭೆಯಲ್ಲಿ ಬಿಜೆಪಿಯ ಸಂಖ್ಯಾ ಬಲ 97ರಿಂದ 101ಕ್ಕೇರಿತ್ತು. ಅನಂತರ …

ರೈಲಿನಲ್ಲಿ ಕಾಲೇಜು ಪ್ರಾಧ್ಯಾಪಕರ ಮೇಲೆ ಹಲ್ಲೆ ಇಬ್ಬರು ವಿದ್ಯಾರ್ಥಿಗಳು ಸೆರೆ

ಕಾಸರಗೋಡು:  ಕಳೆದ ತಿಂಗಳ 28ರಂದು ಸಂಜೆ ಮಂಗಳೂರಿನಿಂದ ಕಣ್ಣೂರಿಗೆ ಸಂಚರಿಸುತ್ತಿದ್ದ ಪ್ಯಾಸೆಂ ಜರ್ ರೈಲಿನಲ್ಲಿ  ಪ್ರಯಾಣಿಸು ತ್ತಿದ್ದ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಾಧ್ಯಾಪಕರಾದ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಬಳಿಯ ನಿವಾಸಿ  ಕೆ. ಸಾಜನ್ (48)ರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಾದ ಇಬ್ಬರು ವಿದ್ಯಾರ್ಥಿಗಳನ್ನು ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಎಸ್‌ಐ ಎಂ.ಕೆ. ಪ್ರಕಾಶನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಪಾಲಕುನ್ನು ತಿರುವಕ್ಕೋಳಿ ಹೌಸ್‌ನ ಪಿ.ಎ. ಮೊಹಮ್ಮದ್  ಜಸಿ (20) ಮತ್ತು …

ರೈಲುಗಳಲ್ಲಿ ರ‍್ಯಾಗಿಂಗ್ ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ನಿರ್ಧಾರ

ಕಾಸರಗೋಡು: ಶಾಲೆಗಳಲ್ಲಿ ಹಾಗೂ ರೈಲುಗಳಲ್ಲಿ ತೀವ್ರಗೊಂ ಡಿರುವ ರ‍್ಯಾಗಿಂಗ್ ತಡೆಯಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸ ಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆರ್.ಪಿ.ಎಫ್, ಕೇರಳ ರೈಲ್ವೇ ಪೊಲೀಸ್, ಜಿಲ್ಲಾ ಅಡಿಶನಲ್ ಎಸ್ಪಿ ದೇವದಾಸನ್ ಸಿ.ಎಂ, ಜಿಲ್ಲಾ ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಅನಿಲ್ ಕುಮಾರ್ ಎ, ಆರ್‌ಪಿಎಫ್ ಇನ್‌ಸ್ಪೆಕ್ಟರ್, ಕೇರಳ ರೈಲ್ವೇ ಪೊಲೀಸ್ …

ಕೇಂದ್ರ ಸರಕಾರದ ಹೆಲ್ತ್ ಸ್ಕೀಂ ಮಲಬಾರ್ ಕ್ಯಾನ್ಸರ್ ಸೆಂಟರ್‌ನಲ್ಲೂ ಲಭ್ಯ

ಕಾಸರಗೋಡು: ಕೇಂದ್ರ ಸರಕಾರದ ಹೆಲ್ತ್ ಸ್ಕೀಂ ತಲಶ್ಶೇರಿ ಮಲಬಾರ್ ಕ್ಯಾನ್ಸರ್ ಸೆಂಟರ್‌ನಲ್ಲಿ ಲಭ್ಯವಾಗಲಿದೆ. ಕೇಂದ್ರ ಸರಕಾರಿ ನೌಕರರಿಗೂ, ನಿವೃತ್ತ ನೌಕರರಿಗೂ, ಅವರ ಆಶ್ರಿತರಿಗೂ ಚಿಕಿತ್ಸಾ ಸಹಾಯ ಯೋಜನೆಯಾದ ಸೆಂಟ್ರಲ್ ಗವರ್‌ಮೆಂಟ್ ಹೆಲ್ತ್ ಸ್ಕೀಂ ಈ ತಿಂಗಳ 1ರಿಂದ ತಲ ಶ್ಶೇರಿ ಮಲಬಾರ್ ಕ್ಯಾನ್ಸರ್ ಸೆಂಟರ್‌ನಲ್ಲಿ ಆರಂಭಗೊಂಡಿದೆ. ಈ ಬಗ್ಗೆ ಒಪ್ಪಂದ ಪತ್ರದಲ್ಲಿ ಕ್ಯಾನ್ಸರ್ ಸೆಂಟರ್‌ನ ಡಾ| ಸತೀಶನ್ ಬಿ. ಹಾಗೂ ಸಿ.ಜಿ.ಎಚ್.ಎಸ್‌ನ ಹೆಚ್ಚುವರಿ ನಿರ್ದೇಶಕ ಡಾ| ನಿತಿನ್ ಸಹಿ ಹಾಕಿದ್ದಾರೆ. ಯೋಜನೆ ಪ್ರಕಾರ ನಿವೃತ್ತ ನೌಕರರಿಗೂ, ಅವರ …

‘ದಿ ಕೇರಳ ಸ್ಟೋರಿ’ ನಿರ್ದೇಶಕರಿಗೆ ರಾಷ್ಟ್ರೀಯ ಪುರಸ್ಕಾರ: ಮುಖ್ಯಮಂತ್ರಿ ಆಕ್ರೋಶ

ತಿರುವನಂತಪುರ: ನಿನ್ನೆ ಪ್ರಕಟಿಸಲಾದ 2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘ದಿ ಕೇರಳಸ್ಟೋರಿ’ ಎಂಬ ಸಿನಿಮಾ ನಿರ್ದೇಶಿಸಿದ  ಸುದೀಪ್ರೋ ಸೇನ್‌ರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಿದುದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀರ್ಪುಗಾರರು ಭಾರತೀಯ ಚಿತ್ರರಂಗದ  ಹೆಮ್ಮೆಯ ಸಂಪ್ರದಾಯಕ್ಕೆ ದ್ರೋಹ ಬಗೆದಿದ್ದಾರೆ. ಕೇರಳವನ್ನು ಕೆಣಕುವ ಮತ್ತು ಕೋಮುವಾದವನ್ನು ಹರಡುವ ಉದ್ದೇಶದಿಂದ ಸುಳ್ಳುಗಳ ಮೇಲೆ ನಿರ್ಮಿಸಲಾದ ದಿ ಕೇರಳ ಸ್ಟೋರಿ ಚಿತ್ರಕ್ಕೆ ಪ್ರಶಸ್ತಿ ನೀಡುವ ಮೂಲಕ ತೀರ್ಪುಗಾರರು ದೀರ್ಘ ಕಾಲದಿಂದ ಕೋಮು ಸಾಮರಸ್ಯ ಮತ್ತು ರಾಷ್ಟ್ರೀಯ  …

ಛತ್ತೀಸ್‌ಘಡ್‌ನಲ್ಲಿ ಕ್ರೈಸ್ತ ಭಗಿನಿಯರ ಬಂಧನ: ಕಾಂಗ್ರೆಸ್‌ನಿಂದ ಪ್ರತಿಭಟನೆ

ವರ್ಕಾಡಿ: ಹಳ್ಳಿಗಾಡಿನ ಆದಿವಾಸಿ ಗಳ ಸೇವೆ ಮಾಡುತ್ತಿದ್ದ ಇಬ್ಬರು ಕ್ರೈಸ್ತ ಭಗಿನಿಯರನ್ನು ಅನ್ಯಾಯವಾಗಿ ಬಂ ಧಿಸಿ ಛತ್ತೀಸ್‌ಘಡ್ ಸರಕಾರ ಜೈಲಿ ಗಟ್ಟಿದ್ದು ಅದರ ಕೆಟ್ಟ ಫಲಗಳನ್ನು ಅನುಭವಿಸಲಿದೆ ಎಂದು ಕಾಸರ ಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್ ಹೇಳಿದ್ದಾರೆ. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿ ಯಿಂದ ಮಜಿರ್ಪಳ್ಳದಲ್ಲಿ ಹಮ್ಮಿಕೊಂ ಡಿದ್ದ ಪ್ರತಿಭಟನಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದ್ದರು.  ನೇತಾರರಾದ ಶಾಹುಲ್ ಹಮೀದ್ ಪೆರ್ಲ, …

ಸಿನೆಮಾ, ಮಿಮಿಕ್ರಿ ತಾರೆ ಕಲಾಭವನ್ ನವಾಸ್ ನಿಧನ

ಕೊಚ್ಚಿ: ಚಲನಚಿತ್ರ ಹಾಗೂ ಮಿಮಿಕ್ರಿ ನಟನೂ ಆಗಿರುವ ಕಲಾಭವನ್ ನವಾಸ್ (51) ನಿಧನ ಹೊಂದಿದರು. ಮಲಯಾಳಂ ಸಿನೆಮಾ ಚಿತ್ರೀಕರಣವೊಂದರಲ್ಲಿ ಪಾಲ್ಗೊಳ್ಳಲು ಕಲಾಭವನ್ ನವಾಸ್ ಚೋಟಾಣಿಕ್ಕರೆಗೆ ಬಂದು ಹೋಟೆಲೊಂದರ ಕೊಠಡಿಯಲ್ಲಿ ತಂಗಿದ್ದರು. ಅಲ್ಲಿ ನಿನ್ನೆ ಅವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಿಮಿಕ್ರಿ ವೇದಿಕೆಗಳಲ್ಲಿ ಮಿಂಚಿದ್ದ ನವಾಸ್ ಬಳಿಕ ಮಲಯಾಳಂ ಸಿನೆಮಾರಂಗಕ್ಕೂ ಪ್ರವೇಶಿಸಿ ಹಲವು ಸಿನೆಮಾಗಳಲ್ಲಿ ಅಭಿನಯಿಸಿದ್ದರು. ಅವರು ಕಲಾಭವನ್ ಮಿಮಿಕ್ರಿ ಟ್ರೂಪ್‌ನ ಸದಸ್ಯರೂ ಆಗಿದ್ದರು. ನಾಟಕ ಕಲಾವಿದರಾದ ಅಬೂಬಕ್ಕರ್‌ರ ಪುತ್ರನಾಗಿರುವ ಮೃತರು ಪತ್ನಿ ನಟಿ ರೆಹ್ನಾ, ಮಕ್ಕಳಾದ ನಹರಿನ್, …

ಹೃದಯಾಘಾತ: ವಾದ್ಯ ಕಲಾವಿದ ನಿಧನ

ಪಾವೂರು: ಮುಡಿಮಾರು ನಿವಾಸಿ ಕೇಶುವ (39) ನಿಧನ ಹೊಂದಿದರು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ವಾದ್ಯ ಕರಾವಿದರಾಗಿದ್ದರು. ಮೃತರು ತಂದೆ ಕೊಗ್ಗ, ತಾಯಿ ಯಮುನ, ಪತ್ನಿ ಕುಸುಮ, ಮಕ್ಕಳಾದ ಗಣ್ಯ, ನಿತಿನ್, ಸಹೋದರರಾದ ವಾಮನ, ರಾಜೇಶ, ಉಮೇಶ, ಸಹೋದರಿಯರಾದ ವಿಮಲ, ಲೀಲಾ, ಸುಜಾತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕೊರಗಜ್ಜ ಸೇವಾ ಸಮಿತಿ ಕೊಂಡೆಯೂರು, ಮುಡಿಮಾರು ಮಲರಾಯ ಗುಳಿಗ ಸೇವಾ ಸಮಿತಿ ಸಂತಾಪ ಸೂಚಿಸಿದೆ.

ಹೋಟೆಲ್ ಮಾಲಕ ನಿಧನ

ಉಪ್ಪಳ: ಹೋಟೆಲ್ ಮಾಲಕ, ಬಿಜೆಪಿ ಹಿರಿಯ ಕಾರ್ಯಕರ್ತ ಬಂದ್ಯೋಡು ನಿವಾಸಿ ಕೃಷ್ಣ (ಶೈಲು- 58) ಅಸೌಖ್ಯ ತಗಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕದ್ರಿ ಸಿಟಿ ಆಸ್ಪತ್ರೆ ಪರಿಸರದಲ್ಲಿ ೨೫ ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ದಿ| ಕುಂಞಂಬು ಕೋಮರ- ದಿ| ಮಾಣಿಕ್ಯ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಸುಶೀಲ, ಮಕ್ಕಳಾದ ಉಜ್ವಲ್, ನವನೀತ, ಸೊಸೆ ಶ್ರುತಿ, ಸಹೋದರ ಶ್ರೀಧರ, ಸಹೋದರಿ ಯರಾದ ಸುಮತಿ, ಶಾರದ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ನೀರ್ಚಾಲು ವ್ಯಾಪಾರಿ ಘಟಕ ಮಹಾಸಭೆ

ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ನೀರ್ಚಾಲು ಘಟಕದ ವಾರ್ಷಿಕ ಮಹಾಸಭೆ ನೀರ್ಚಾಲು ವ್ಯಾಪಾರ ಭವನದಲ್ಲಿ ಜರಗಿತು. ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಉದ್ಘಾಟಿಸಿ, ಮಾತನಾಡಿದರು. ನೀರ್ಚಾಲು ಘಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ರವಿ ನೀರ್ಚಾಲು ವಾರ್ಷಿಕ ವರದಿ, ಕೋಶಾಧಿಕಾರಿ ಗೋಪಾಲ ಬಿ. ಆಯವ್ಯಯ ಮಂಡಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ದಾಮೋದರನ್, ದಿನೇಶ್, ಮೊಹಮ್ಮದ್ ಕುಂಞಿ ಹಾಜಿ ಕುಂಜಾರು ಶುಭ ಕೋರಿದರು. ರವಿ ನೀರ್ಚಾಲು ಸ್ವಾಗತಿಸಿ, ಉಪಾಧ್ಯಕ್ಷ ಸತ್ಯಶಂಕರ ಭಟ್ ವಂದಿಸಿದರು.