ಪ್ಲಾಂಟೇಶನ್ ಕಾರ್ಪೊರೇಶನ್‌ನ ಸ್ಥಳದಲ್ಲಿ ತ್ಯಾಜ್ಯ ಸುಟ್ಟು, ಮಲಿನ ಜಲ ಹರಿಯಬಿಟ್ಟ ಹಿನ್ನೆಲೆಯಲ್ಲಿ ಎನ್‌ಪೋರ್ಸ್‌ಮೆಂಟ್‌ನಿಂದ ದಂಡ
ಕಾಸರಗೋಡು: ಪ್ಲಾಂಟೇಶನ್ ಕಾರ್ಪೊರೇಶನ್‌ನ ಮುಳಿಯಾರು ಡಿವಿಶನ್ ಅಧೀನದಲ್ಲಿರುವ ಬಾವಿಕ್ಕರೆ ಎಸ್ಟೇಟ್‌ಗೆ ಅಪಾರ್ಟ್ ಮೆಂಟ್‌ನಿಂದಿರುವ ಮಲಿನ ಜಲವನ್ನು ಹರಿಯ ಬಿಟ್ಟಿರುವುದಕ್ಕೆ, ತ್ಯಾಜ್ಯಗಳನ್ನು ರಾಶಿ ಹಾಕಿ ಸುಟ್ಟಿರುವ ಹಿನ್ನೆಲೆಯಲ್ಲಿ ಮುದಲಪ್ಪಾರೆಯ ಅಪಾರ್ಟ್‌ಮೆಂಟ್ ಮಾಲಕನಿಂದ ೧೫ ಸಾವಿರ ರೂ. ದಂಡ ವಸೂಲು ಮಾಡಲಾಗಿದೆ. ಇದೇ ಸ್ಥಳದಲ್ಲಿ ತ್ಯಾಜ್ಯ ಉಪೇಕ್ಷಿಸಿದ ವ್ಯಕ್ತಿಯೊಬ್ಬರಿಂದ ೫ ಸಾವಿರ ರೂ.ವನ್ನು ದಂಡವಾಗಿ ವಸೂಲು ಮಾಡಲಾಗಿದೆ. ಜಲಮೂಲಗಳಿಗೆ ವಿವಾಹ ಮನೆ ಗಳಿಂದಿರುವ ಅವಶಿಷ್ಟಗಳನ್ನು ತಂದು ಹಾಕಿರುವುದು, ತ್ಯಾಜ್ಯಗಳನ್ನು ಉರಿಸಿದ ಬಗ್ಗೆ ಲಭಿಸಿದ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ …