ಮಂಜೇಶ್ವರದಲ್ಲಿ ಬೀಗ ಹಾಕಿದ ಮನೆಯಿಂದ 22 ಪವನ್ ಚಿನ್ನಾಭರಣ ಕಳವು: ಬೆರಳಚ್ಚು, ಶ್ವಾನದಳದಿಂದ ತಪಾಸಣೆ

ಮಂಜೇಶ್ವರ: ಬೀಗ ಹಾಕಿದ ಮನೆಯಿಂದ 22 ಪವನ್ ಚಿನ್ನಾಭರಣ ಕಳವು ನಡೆದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಂಜೇಶ್ವರ ಚರ್ಚ್ ಬೀಚ್ ರಸ್ತೆಯ ನವೀನ್ ಮೊಂತೇರೋ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಎಪ್ರಿಲ್ ೨೧ರಂದು ನವೀನ್ ಮೊಂತೇರೋ ಸಹಿತ ಕುಟುಂಬ ಮನೆಗೆ ಬೀಗ ಹಾಕಿ ಗಲ್ಫ್‌ಗೆ ತೆರಳಿದ್ದರು. ಮೇ ೩ರಂದು ಸಂಜೆ ಮರಳಿದ್ದು, ಈ ವೇಳೆ ಕಳವು ನಡೆದ ಬಗ್ಗೆ ಅರಿವಿಗೆ ಬಂದಿದೆ. ಎರಡಂತಸ್ತಿನ ಮನೆಯ ಹಿಂಭಾಗದ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿದ …

ಕಿಡ್ನಿ ಸಂಬಂಧ ಅಸೌಖ್ಯ: ಯುವಕ ಮೃತ್ಯು

ಕುಂಬಳೆ: ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಬಂದ್ಯೋಡಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ದಿ| ಆದಂ ಸಕಲೇಶಪುರ-ನಫೀಸ ದಂಪತಿಯ ಪುತ್ರ ಉಮ ರುಲ್ ಫಾರೂಕ್ (31) ಮೃತಪಟ್ಟ ವ್ಯಕ್ತಿ. ಕೆಲವು ಕಾಲದಿಂದ ಇವರಿಗೆ ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿದ್ದು, ಇದರಿಂದ ಡಯಾಲಿಸಿಸ್ ಸಹಿತ ಚಿಕಿತ್ಸೆ ನಡೆಸುತ್ತಿದ್ದರು. ಇಂದು ಮುಂಜಾನೆ ಮನೆಯಲ್ಲಿ ಅಸೌಖ್ಯ ಉಲ್ಭಣಗೊಂಡು ನಿಧನ ಸಂಭವಿಸಿದೆ. ಮೃತರು ಪತ್ನಿ ಫಾತಿಮತ್ ಪರ್ಸಾನ, ಪುತ್ರ ಆದಂ ಫೈಸಾನ್, ಸಹೋದರ-ಸಹೋದರಿ ಯರಾದ ನಾಸರ್, ಸಮೀರ್, ಅಶ್ರಫ್, ಸಿದ್ದಿಕ್, ರಸಾಕ್, …

ಎನ್‌ಎಂಜಿ ಬ್ಯಾಂಕ್ ನಿವೃತ್ತ  ರೀಜ್ಯನಲ್ ಮೆನೇಜರ್ ನಿಧನ

ಕಾಸರಗೋಡು: ನೋರ್ತ್ ಮಲಬಾರ್ ಗ್ರಾಮೀಣ ಬ್ಯಾಂಕ್ ರೀಜ್ಯನಲ್ ಮೆನೇಜರ್ ಆಗಿ ನಿವೃತ್ತರಾದ ಅಣಂಗೂರು ನಿವಾಸಿ ಕಮಲಾಕ್ಷ ಕಲ್ಲುಗದ್ದೆ (72) ನಿಧನ ಹೊಂದಿದರು. ಹೃದಯಾಘಾತ ನಿಧನಕ್ಕೆ ಕಾರಣವೆನ್ನಲಾಗಿದೆ. ರಾಮರಾಜ ಕ್ಷತ್ರಿಯ ಸೇವಾ ಸಂಘದ ಜಿಲ್ಲಾ ಅಧ್ಯಕ್ಷರಾಗಿದ್ದರು. ವಿವಿಧ ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದರು. ಮೃತರು ಪತ್ನಿ ಸುಗಂಧಿ, ಮಕ್ಕಳಾದ ಚಂದ್ರಶೇಖರ, ರಾಜಲಕ್ಷ್ಮಿ, ಅಳಿಯ ಗಜೇಂದ್ರ, ಸೊಸೆ ವರ್ಷ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಗೋವಾ ಮದ್ಯ ಸಹಿತ ಓರ್ವ ಸೆರೆ

ಕಾಸರಗೋಡು: ನಗರದ ಅಣಂಗೂರಿನಲ್ಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಮುರಳಿ ಕೆ.ವಿ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಗೋವಾ ನಿರ್ಮಿತ 180 ಎಂ.ಎಲ್‌ನ ೪೮ ಬಾಟಲಿ (8.64 ಲೀಟರ್) ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಜೆ.ಪಿ.ನಗರ ಶಾಂತಿಯಡ್ಕ ನಿವಾಸಿ ಶಿವಕುಮಾರ್ ಶೆಟ್ಟಿ ಬಿ.ಜಿ (32) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಬೈಕ್‌ನಲ್ಲಿ ಈ ಮಾಲು ಸಾಗಿಸಲಾಗುತ್ತಿ ತ್ತೆಂದೂ ಆದ್ದರಿಂದ ಬೈಕ್‌ನ್ನು ವಶಪಡಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಿವೆಂಟೀ …

ಕುಂಬಳೆಯಲ್ಲಿ ಟೋಲ್‌ಬೂತ್ ವಿರುದ್ಧ ಪ್ರತಿಭಟನೆ ತೀವ್ರ: ಸಂಸದ, ಶಾಸಕರ ನೇತೃತ್ವದಲ್ಲಿ ಕಾಮಗಾರಿಗೆ ತಡೆ ; ಇಂದು ರಾತ್ರಿ ಸರ್ವಪಕ್ಷಗಳಿಂದ ನೈಟ್ ಮಾರ್ಚ್

ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಬೂತ್ ನಿರ್ಮಾಣದ ವಿರುದ್ಧ ನಾಗರಿಕರು ಹಾಗೂ ವಿವಿಧ ಪಕ್ಷಗಳ ನೇತೃತ್ವದಲ್ಲಿ ಚಳವಳಿ ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಕುಂಬಳ ಸೇತುವೆ ಹಾಗೂ ಆರಿಕ್ಕಾಡಿ ಕಡವತ್ ಮಧ್ಯೆ ಟೋಲ್ ಬೂತ್ ನಿರ್ಮಾಣ ಕೆಲಸ ನಡೆಯುತ್ತಿದೆ. ಅದರ ವಿರುದ್ಧ ಸರ್ವಪಕ್ಷಗಳಿಂದ  ಹಾಗೂ ನಾಗರಿಕರಿಂದ ಪ್ರತಿಭಟನೆ ವ್ಯಕ್ತವಾದರೂ ಕೆಲಸ ಮುಂದುವರಿಯುತ್ತಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ನೂರಾರು ಮಂದಿ ನಾಗರಿಕರು ಹಾಗೂ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಅಲ್ಲಿಗೆ ತಲುಪಿ ಕಾಮಗಾರಿಗೆ ತಡೆಯೊಡ್ಡಿದ್ದಾರೆ. …

ಪತ್ರಿಕೆ ಓದುತ್ತಿದ್ದ ವೇಳೆ ಕುಸಿದು ಬಿದ್ದು ಯುವತಿ ಮೃತ್ಯು

ಮುಳ್ಳೇರಿಯ: ನಿನ್ನೆ ಬೆಳಿಗ್ಗೆ ಚಹಾ ಕುಡಿದ ಬಳಿಕ ಪತ್ರಿಕೆ ಓದುತ್ತಿದ್ದ ವೇಳೆ ಯುವತಿ ಕುಸಿದು ಬಿದ್ದು ಮೃತಪಟ್ಟರು. ಕಾರಡ್ಕ ಶಾಂತಿನಗರ ನಂದನ ನಿವಾಸಿ ಚಂದ್ರನ್‌ರ ಪತ್ನಿ ಪೂರ್ಣಿಮ (34) ಮೃತಪಟ್ಟವರು. ಕುಸಿದು ಬಿದ್ದ ಕೂಡಲೇ ಇವರನ್ನು ಮುಳ್ಳೇರಿಯದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆ ವೇಳೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೆ ಮೃತದೇಹವನ್ನು ತಲುಪಿಸಲಾಗಿದ್ದು, ಇಂದು ಬೆಳಿಗ್ಗೆ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಮೃತ ಯುವತಿ ದಿ| ಮಾಧವನ್ ನಾಯರ್ ಹಾಗೂ ಸರೋಜಿನಿ ದಂಪತಿ ಪುತ್ರಿಯಾಗಿದ್ದು, ಪತಿ, …

ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದವರಿಗೆ ಐಲದಲ್ಲಿ ನುಡಿನಮನ: ಜಾತಿ ಭೇದವ ಮರೆತು ಹಿಂದೂ ಧರ್ಮದ ಒಗ್ಗಟ್ಟಿಗೆ ಕಟಿಬದ್ಧರಾಗಬೇಕಿದೆ- ಎಡನೀರುಶ್ರೀ

ಉಪ್ಪಳ: ಕಾಶ್ಮೀರ ದೇಶದ ಮುಕುಟ ಮಣೆ. ಅದು ಹಿಂದೂ ರಾಷ್ಟ್ರದ ಮುಕುಟ ಮಣÉಯೂ ಹೌದು. ಕಾಶ್ಮೀರದ  ಪಹಲ್ಗಾಮಿನಲ್ಲಿ ಧರ್ಮ ಕೇಳಿ ಕಗ್ಗೊಲೆ ಮಾಡಿದ ರೀತಿ ಖೇದ ಕರ. ನಮ್ಮ ಮಧ್ಯೆಯೇ ಭಯೋತ್ಪಾದಕರು ಇರಬಹುದು. ಜಾತಿ ಭೇದವ ಮರೆತು ಹಿಂದೂ ಧರ್ಮದ ಒಗ್ಗಟ್ಟಿಗೆ ಕಟಿ ಬದ್ದರಾಗ ಬೇಕಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ನುಡಿದರು. ಉಪ್ಪಳ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಶ್ರೀ ಜಗದ್ಗುರು ಶಂಕರಾ ಚಾರ್ಯ ಮಹಾಸಂಸ್ಥಾನಮ್ ಎಡನೀರು ಮಠ ಹಾಗೂ ಶ್ರೀ …

ರಾಷ್ಟ್ರಪತಿ ಶಬರಿಮಲೆಗೆ

ತಿರುವನಂತಪುರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇ 18 ಅಥವಾ 19ರಂದು ಶಬರಿಮಲೆ ಕ್ಷೇತ್ರ ದರ್ಶನ ನಡೆಸುವರು. ರಾಷ್ಟ್ರಪತಿ ಯೋರ್ವರು ಶಬರಿಮಲೆ ಕ್ಷೇತ್ರ ದಶನ ನಡೆಸುವುದು ಇದು ಮೊದಲ ಬಾರಿಯಾಗಿದೆ.  ಮೇ 18ರಂದು ಕೊಚ್ಚಿಗೆ ತಲುಪುವ ರಾಷ್ಟ್ರಪತಿ ಅಲ್ಲಿಂದ ರಸ್ತೆ ಮೂಲಕ ಅಥವಾ ಹೆಲಿಕಾಫ್ಟರ್‌ನಲ್ಲಿ ಶಬರಿಮಲೆ ಕ್ಷೇತ್ರಕ್ಕೆ ತೆರಳುವರು. 19ರಂದು ಕೋಟ್ಟಯಂ ಜಿಲ್ಲೆಯ ಪಾಲಾದ ಸೈಂಟ್ ಥೋಮಸ್ ಕಾಲೇಜನ ಪ್ಲಾಟಿನಂ ಜ್ಯುಬಿಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ದಿಲ್ಲಿಗೆ ಹಿಂತಿರುಗುವರು. ರಾಷ್ಟ್ರಪತಿ ಶಬರಿಮಲೆ ಕ್ಷೇತ್ರ ದರ್ಶನ ನಡೆಸುವ …

ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಡಿನಾಡಿನ ಕಾಳಜಿ ಪ್ರೇರಣದಾಯಿ- ಸಚಿವ ಚೆಲುವರಾಯ ಸ್ವಾಮಿ

ಸೀತಾಂಗೋಳಿ: ಬಹುಭಾಷಾ ನೆಲೆ ಗಟ್ಟಿನ ಕಾಸರಗೋಡಿನಲ್ಲಿ ಕನ್ನಡವನ್ನು ಇನ್ನೂ ಕಾಯ್ದುಕೊಂಡು ಬೆಂಬಲಿಸುತ್ತಿರುವುದು ಸ್ತುತ್ಯಾರ್ಹವಾಗಿದ್ದು, ಪತ್ರಕರ್ತರ ಕೊಡುಗೆಯು ಮಹತ್ವಪೂರ್ಣವಾಗಿದೆ ಎಂದು ಕರ್ನಾಟಕ ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ ನುಡಿದರು. ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಡಿನಾಡು ಕಾಸರಗೋಡಿನ ಕಾಳಜಿ ಪ್ರೇರಣದಾಯಿ. ಭಾಷೆ, ಸಂಸ್ಕೃತಿಗೆ ಇಲ್ಲಿನ ಪತ್ರಿಕೆಗಳು ನೀಡುತ್ತಿರುವ ಜವಾಬ್ದಾರಿಯುತ ಕಾಳಜಿಯೇ ಕನ್ನಡ ಶುದ್ಧ ಸುಂದರವಾಗಿ ಉಳಿದುಕೊಳ್ಳಲು ಕಾರಣ ಎಂದು ಅವರು ಪ್ರಶಂಸಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ …

ನಾಲ್ಕೂವರೆ ಲೀಟರ್ ಬಿಯರ್ ವಶ: ಓರ್ವ ಸೆರೆ 

ಬದಿಯಡ್ಕ: ನಾಲ್ಕೂವರೆ ಲೀಟರ್  ಕೇರಳ ನಿರ್ಮಿತ   ಬಿಯರ್ ಕೈವಶವಿರಿಸಿಕೊಂಡಿದ್ದ ಬದಿಯಡ್ಕ ಎಡಕ್ಕಾನ ಚೀಮುಳ್ಳು ಎಂಬಲ್ಲಿನ ವಿ. ರಾಜೇಶ್‌ನನ್ನು ಅಬಕಾರಿ ತಂಡ ಬಂಧಿಸಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಿಯರ್ ಕೈವಶವಿರಿಸಿಕೊಂಡ ಆರೋಪದಂತೆ ಬಂಧಿಸಿ ಕೇಸು  ದಾಖಲಿಸಲಾಗಿದೆ. ಕುಂಬಳೆ ಅಬಕಾರಿ ಪ್ರಿವೆಂಟೀವ್ ಆಫೀಸರ್ ಕೆ.ವಿ. ಮನಾಸ್, ಸಿಇಒಗಳಾದ ಅಖಿಲೇಶ್ ಎಂ.ಎಂ, ಎಂ. ಧನೇಶ್ ಎಂಬಿವರು ಕಾರ್ಯಾಚರಣೆ ನಡೆಸಿದ್ದಾರೆ.