ವಿಳಿಂಞಂ ಬಂದರು ಪ್ರಧಾನಮಂತ್ರಿ ಲೋಕಾರ್ಪಣೆ

ತಿರುವನಂತಪುರ: ಕೇರಳದ ಹೆಮ್ಮೆಯ ಯೋಜನೆಯಾದ ವಿಳಿಂಞಂ ಬಂದರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆಗೈದರು. ಈ ಕಾರ್ಯಕ್ರಮದ ಅಂಗವಾಗಿ ಪ್ರಧಾನಮಂತ್ರಿಯವರು ನಿನ್ನೆಯೇ ತಿರುವನಂತಪುರಕ್ಕೆ ಆಗಮಿಸಿದರು. ಇಂದು ಬೆಳಿಗ್ಗೆ ರಾಜ್ ಭವನದಿಂದ ಪಾಂಙೋಡ್ ಮಿಲಿಟರಿ ಕ್ಯಾಂಪ್‌ಗೆ ತಲುಪಿದ ಪ್ರಧಾನಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ವಿಳಿಂಞಕ್ಕೆ ತೆರಳಿದರು. ಹಲವು ವರ್ಷಗಳಿಂದ ಜನತೆ ಅತೀ ಕಾತರದಿಂದ ಕಾಯುತ್ತಿರುವ ಈ ಬೃಹತ್ ಯೋಜನೆಯ ಉದ್ಘಾಟನೆಯನ್ನು ವೀಕ್ಷಿಸಲು ಸಾವಿರಾರು ಮಂದಿ ವಿಳಿಂಞಕ್ಕೆ ತಲುಪಿದ್ದಾರೆ. ಮುಖ್ಯಮಂತ್ರಿ, ಸಚಿವರು, ವಿವಿಧ ರಾಜಕೀಯ, ಸಾಂಸ್ಕೃತಿಕ ರಂಗದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. …

ಕುಂಬಳೆ ಟೋಲ್ ಬೂತ್ ವಿರುದ್ಧ ಚಳವಳಿ ಘೋಷಣೆ ಭರವಸೆ ಪೊಳ್ಳು: ಶಾಸಕರ ಸಹಿತ ಜನಪ್ರತಿನಿಧಿಗಳನ್ನು ಹೊರತುಪಡಿಸಿ ನಾಗರಿಕರು ಕ್ರಿಯಾ ಸಮಿತಿ ರೂಪೀಕರಣದತ್ತ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬಳೆ ಆರಿಕ್ಕಾಡಿ ಕಡವತ್ ಸಮೀಪ ಟೋಲ್ ಬೂತ್ ನಿರ್ಮಾಣಕ್ಕೆ ಸಂಬಂಧಿಸಿ ರಾಜಕೀಯ ಆರೋಪ-ಪ್ರತ್ಯಾರೋ ಪಗಳು ತೀವ್ರಗೊಂಡಿದೆ. ನಾಗರಿಕರು ಹಾಗೂ ಯೂತ್ ಲೀಗ್ ಕಾರ್ಯಕರ್ತರು ಟೋಲ್ ಬೂತ್ ನಿರ್ಮಾಣಕ್ಕೆ ತಡೆಯೊಡ್ಡಿದ ಬೆನ್ನಲ್ಲೇ ಕಳೆದ ಶನಿವಾರ ಕುಂಬಳೆ ಪಂಚಾಯತ್ ಕಚೇರಿಯಲ್ಲಿ ಶಾಸಕ ಎಕೆಎಂ ಅಶ್ರಫ್‌ರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಲಾಗಿತ್ತು.  ಎರಡು ದಿನಗಳೊಳಗಾಗಿ ಟೋಲ್ ಬೂತ್  ನಿರ್ಮಾಣ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಾಗಿಯೂ, ಚಳವಳಿ ಘೋಷಣೆ ನಡೆಸುವುದಾಗಿ ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ ದಿನಗಳು ಕಳೆದರೂ ಚಳವಳಿ …

ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿ ಪ್ರದಾನ, ಕನ್ನಡ ಸಂಸ್ಕೃತಿ ಉತ್ಸವ ನಾಳೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿ ವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇವುಗಳ ಸಹಯೋಗದಲ್ಲಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ನಾಳೆ ಸೀತಾಂಗೋಳಿ ಎಚ್‌ಎಎಲ್ ಸಮೀಪ ಅಲಯನ್ಸ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಶೋಭಾಯಾತ್ರೆ ನಡೆಯಲಿದ್ದು, ಬೇಳ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಫಾ| ಸ್ಟ್ಯಾನಿ ಪೆರೇರಾ ಚಾಲನೆ ನೀಡುವರು. ಪುತ್ತಿಗೆ …

ಮುಂದಿನ ವರ್ಷದಿಂದ 5, 6,7ನೇ  ತರಗತಿಗಳಲ್ಲೂ ಕನಿಷ್ಠ ಅಂಕ ಸಂಪ್ರದಾಯ

ತಿರುವನಂತಪುರ: ಈ ವರ್ಷ ಎಂಟನೇ ತರಗತಿಯಲ್ಲಿ ಜ್ಯಾರಿಗೊಳಿ ಸಿದ ಕನಿಷ್ಠ ಅಂಕ ಸಂಪ್ರದಾಯವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ 5, 6,  ಹಾಗೂ 7ನೇ ತರಗತಿಗಳಲ್ಲೂ ಜ್ಯಾರಿಗೊಳಿಸಲಾಗುವುದೆಂದು ಶಿಕ್ಷಣ ಖಾತೆ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ. ಮುಂದಿನ ವರ್ಷ ೮ನೇ ತರಗತಿಯ ಮೌಲ್ಯಮಾಪನ ಇನ್ನಷ್ಟು ಕಠಿಣಗೊಳಿಸಲಾಗುವುದು. ಕಲೆ ಹಾಗೂ ಕ್ರೀಡೆಗೆ ನೀಡಿರುವ ಪಿರಿಯಾಡ್‌ಗಳನ್ನು ಕಡ್ಡಾಯವಾಗಿ ಅವುಗಳಿಗಾಗಿಯೇ ಉಪಯೋಗಿಸಬೇಕೆಂದೂ ತಿಳಿಸಲಾಗಿದೆ. ಹೈಯರ್ ಸೆಕೆಂಡರಿ ಅಧ್ಯಾಪಕರ ಆನ್‌ಲೈನ್ ವರ್ಗಾವಣೆ ಮೇ ತಿಂಗಳಲ್ಲಿ ಪೂರ್ತಿಗೊಳ್ಳಲಿದೆ. ಇದಕ್ಕಿರುವ ಅರ್ಜಿ ಆಹ್ವಾನಿಸಿ ಎರಡು ದಿನಗಳೊಳಗೆ …

ವನ್ಯಜೀವಿ ದಾಳಿಯಲ್ಲಿ ಸಾವನ್ನಪ್ಪುವವರ ಕುಟುಂಬಕ್ಕೆ 24 ಲಕ್ಷ ರೂ. ನಷ್ಟ ಪರಿಹಾರಕ್ಕೆ ಅರ್ಹತೆ ಇದೆ- ಅಮಿಕಸ್ ಕ್ಯೂರಿ

ಎರ್ನಾಕುಳಂ: ವನ್ಯಜೀವಿಗಳ ದಾಳಿಯಿಂದ ಸಾವನ್ನಪ್ಪುವ ವ್ಯಕ್ತಿಗಳ ಕುಟುಂಬಕ್ಕೆ 24 ಲಕ್ಷ ರೂ. ನಷ್ಟ ಪರಿಹಾರ ಲಭಿಸುವ ಅರ್ಹತೆ ಇದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಅಮಿಕಸ್ ಕ್ಯೂರಿ ಹೇಳಿದೆ. ವಿಷಪೂರಿತ ಹಾವು ಕಡಿತಕ್ಕೊಳಗಾಗಿ ಸಾವನ್ನಪ್ಪಿದವರ ಕುಟುಂಬದವರಿಗೆ ನಷ್ಟ ಪರಿಹಾರ ನೀಡುವಿಕೆಯಲ್ಲಿ ಪಕ್ಷಪಾತ ನೀತಿ ಸಲ್ಲದೆಂದೂ ವರದಿಯಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ ವನ್ಯಜೀವಿಗಳ ದಾಳಿ ಹೆಚ್ಚುತ್ತಿರುವ ಬಗ್ಗೆ ಹೈಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ಆಮಿಕಸ್ ಕ್ಯೂರಿ ಆ ಬಗ್ಗೆ ಅಧ್ಯಯನ ನಡೆಸಿ ಸರಕಾರಕ್ಕೆ ಈ ವರದಿ ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ …

ಭಾರತ ತೊರೆಯದ ಪಾಕಿಸ್ತಾನಿ ಪ್ರಜೆಗಳಿಗೆ 3 ವರ್ಷ ಸಜೆ, ಜುಲ್ಮಾನೆ

ನವದೆಹಲಿ: ಪಾಕಿಸ್ತಾನದ ಪ್ರಜೆಗಳು ಭಾರತ ತೊರೆಯಲು ಕೇಂದ್ರ ಸರಕಾರ ನೀಡಿದ ಗಡುವು ಈಗಾಗಲೇ ಮುಗಿದಿದೆ. ಈ ಗಡುವು ಮುಗಿದರೂ ಭಾರತ ತೊರೆಯದೆ ಇನ್ನೂ ಇಲ್ಲಿ ಉಳಿದುಕೊಂಡಿ ರುವುವವರನ್ನು ಬಂಧಿಸಿ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ. ಜುಲ್ಮಾನೆ ವಿಧಿಸಲಾಗು ವುದೆಂದು ಕೇಂದ್ರ ಸರಕಾರ ಖಡಕ್ ಮುನ್ನೆಚ್ಚರಿಕೆ ನೀಡಿದೆ. ಜಮ್ಮು- ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಉಗ್ರರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ಎಪ್ರಿಲ್ 29ರೊಳಗಾಗಿ ಭಾರತ ಬಿಟ್ಟು ತೊಲಗುವಂತೆ …

ಸಿಪಿಎಂ ಕಾರ್ಯಕರ್ತ ನಿಧನ

ಪೈವಳಿಕೆ: ಚಿಪ್ಪಾರು ನಡುವಳ ಚ್ಚಾಲ್ ರಾಧಾಕೃಷ್ಣ ಶೆಟ್ಟಿ (61) ನಿಧನಹೊಂದಿದರು. ಸಿಪಿಎಂ ಕಾರ್ಯಕರ್ತನಾಗಿದ್ದ ಇವರು ಕೃಷಿಕನಾಗಿದ್ದರು. ಮೃತರು ಪತ್ನಿ ವಿಜಯಲಕ್ಷ್ಮಿ, ಮಕ್ಕಳಾದ ಶರಣ್ಯ, ಶಿವಾನಿ, ಸಹೋದರಿಯರಾದ ಶಾಂಭವಿ, ಬೇಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಪುರುಷೋತ್ತಮ ಈ ಹಿಂದೆ ನಿಧನಹೊಂದಿದ್ದಾರೆ. ಸಿಪಿಎಂನ ಮಖಂಡರು ಮನೆಗೆ ತೆರಳಿ ಸಂತಾಪ ಸೂಚಿಸಿದರು. ನಿಧನಕ್ಕೆ ಸಿಐಟಿಯು, ಜನಶಕ್ತಿ ಫ್ರೆಂಡ್ಸ್ ಕ್ಲಬ್ ಗ್ರಂಥಾಲಯ ಸಂತಾಪ ಸೂಚಿಸಿದೆ.

ಬಿಜೆಪಿ ಮಧೂರು ಪಂ. ಈಸ್ಟ್, ವೆಸ್ಟ್ ಏರಿಯಾ ಪದಾಧಿಕಾರಿಗಳ ಪದಗ್ರಹಣ

ಮಧೂರು: ಕೇಂದ್ರ ಫಂಡ್‌ನ ಮೇಲೆ ಹಕ್ಕು ಮಂಡಿಸಲು ಹಾಗೂ ಅದು ತಮ್ಮ ಸಾಧನೆಯೆಂದು ಹೇಳಿಕೊಳ್ಳಲು ಕೇರಳದ ಎಡ-ಐಕ್ಯರಂಗಗಳು ಸ್ಪರ್ಧಿಸುತ್ತಿವೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಆರೋಪಿಸಿದ್ದಾರೆ. ಬಿಜೆಪಿ ಮಧೂರು ಪಂಚಾಯತ್ ಈಸ್ಟ್, ವೆಸ್ಟ್ ಏರಿಯಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿಳಿಂಞಂ ಯೋಜನೆಯನ್ನು ಮೊಟಕುಗೊಳಿಸಲು ಪ್ರಯತ್ನಿಸಿದ ಪಿಣರಾಯಿ ವಿಜಯನ್ ಸಹಿತ ಎಡರಂಗ ನೇತಾರರು ಈಗ ಈ ಯೋಜನೆಯ ಸಾಧನೆ ತಮ್ಮದೆಂದು ಹೇಳಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಫಂಡನ್ನು ಬೇರೆ ಅಗತ್ಯಗಳಿಗೆ ಬಳಸಲು …

ಸಿಐಟಿಯುನಿಂದ ಕಾರ್ಮಿಕ ದಿನಾಚರಣೆ

ಪೈವಳಿಕೆ: ಸಿಐಟಿಯು ನೇತೃತ್ವದಲ್ಲಿ ನಿನ್ನೆ ಪೈವಳಿಕೆಯಲ್ಲಿ ಕಾರ್ಮಿಕ ದಿನಾಚರಣೆ ನಡೆಸಲಾ ಯಿತು. ಬೆಳಿಗ್ಗೆ ಮಾನಿಪ್ಪಾಡಿ ಭಗತ್ ಸಿಂಗ್ ನಗರದಿಂದ ಮೆರವಣಿಗೆ ನಡೆಯಿತು. ಪೈವಳಿಕೆ ಯಲ್ಲಿ ಸಿಐಟಿಯು ಮಂಜೇಶ್ವರ ಏರಿಯಾ ಉಪಾಧ್ಯಕ್ಷ ಚಂದ್ರ ನಾಯ್ಕ್ ಮಾನಿ ಪ್ಪಾಡಿ ಧ್ವಜಾರೋಹಣಗೈದರ. ಬಾಬು ವಾದ್ಯಪಡ್ಪು ಅಧ್ಯಕ್ಷತೆ ವಹಿಸಿದರು. ಹುಸೈನ್ ಮಾಸ್ತರ್, ಶ್ಯಾಮ್ ಭಟ್ ಮೇ ದಿನ ಸಂದೇಶ ನೀಡಿದರು. ವಿನೋದ್ ಮಾನಿಪ್ಪಾಡಿ, ಎ.ಕೆ. ಸತೀಶ, ಮನೋಜ್, ಸೀತಾರಾಮ ನಾಯ್ಕ್,ಸಿಮಾಮ್ ಡಿ’ಸೋಜಾ, ಅನಿಲ್, ರಮೇಶ್ ನೇತೃತ್ವ ನೀಡಿದರು. ಶ್ಯಾಮ್ ಸುಂದರ್ ವಂದಿಸಿದರು.

ಕೆಜೆಯುನಿಂದ ಕಾರ್ಮಿಕ ದಿನಾಚರಣೆ

ಕುಂಬಳೆ: ಪತ್ರಕರ್ತರ ಸಂಘ, ಪ್ರೆಸ್ ಪೋರಂ ಕುಂಬಳೆ ನೇತೃತ್ವದಲ್ಲಿ ನಿನ್ನೆ ಕುಂಬಳೆ ಪ್ರೆಸ್ ಪೋರಂ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ ನಡೆಯಿತು. ಕೆಜೆಯು ನಿಕಟಪೂರ್ವ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್ ಧ್ವಜಾರೋಹಣ ನಿರ್ವಹಿಸಿದರು.ಫ್ರೆಸ್ ಪೋರಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನಾರೋಗ್ಯಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಅರೆ ಪಜ್ಞಾವಸ್ಥೆಯಲ್ಲಿರುವ ಪತ್ರಕರ್ತ ಧನರಾಜ್ ಉಪ್ಪಳ ಅವರ ಚಿಕಿತ್ಸಾ ನೆರವಿಗೆ ಸಾಧ್ಯವಿದ್ದಷ್ಟು ಕೈಜೋಡಿಸುವುದು ಕಾರ್ಮಿಕ ದಿನಕ್ಕೆ ನಾವು ಸಲ್ಲಿಸುವ ಕೊಡುಗೆಯಾಗಿದೆ. ಅಸಂಘಟಿತ ವಲಯದ ಪತ್ರಕರ್ತರ …