ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯಿಂದ ಪಂಚಾಯತ್ ಕಚೇರಿ ಧರಣಿ

ಕಾಸರಗೋಡು: ಅನ್ಯಾಯವಾಗಿ ಹೆಚ್ಚಿಸಿದ ಉದ್ಯೋಗ ತೆರಿಗೆಯನ್ನು ಹಿಂತೆಗೆಯಬೇಕು, ಹಸಿರು ಕ್ರಿಯಾಸೇನೆಯ ಸೇವೆ ಅಗತ್ಯವಿಲ್ಲದ ವ್ಯಾಪಾರಿಗಳಿಂದ ಯೂಸರ್‌ಫಿ ಪಡೆಯುವುದನ್ನು ನಿಲ್ಲಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿರಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರಿಯ, ಅಂಬಲತ್ತರ, ಕಲ್ಯೋಟ್, ಪುಲ್ಲೂರು, ಚಾಲಿಂಗಾಲ್ ಘಟಕ ಸಮಿತಿಗಳ ನೇತೃತ್ವದಲ್ಲಿ ಪುಲ್ಲೂರು ಪೆರಿಯ ಪಂಚಾಯತ್ ಕಚೇರಿಯ ಮುಂದೆ ಧರಣಿ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ಕುಂಞಿರಾಮನ್ ಆಕಾಶ್ ಉದ್ಘಾಟಿಸಿದರು. ಅಂಬಲತ್ತರ ಘಟಕ ಅಧ್ಯಕ್ಷ ಜಯರಾಜನ್ ಕಣ್ಣೋತ್ತ್ ಅಧ್ಯಕ್ಷತೆ ವಹಿಸಿದರು. ಪುಲ್ಲೂರು ಘಟಕ ಅಧ್ಯಕ್ಷ ಗೋಪಾಲನ್ ಪುಲ್ಲೂರು, ಜೋನ್ಸನ್ …

ಹೊಸಂಗಡಿಯಲ್ಲಿ ಮೇ ದಿನಾಚರಣೆ

ಮಂಜೇಶ್ವರ: ಸಂಯುಕ್ತ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಹೊಸಂಗಡಿ ಯಲ್ಲಿ ವಿಶ್ವಕಾರ್ಮಿಕರ ದಿನಾಚರಣೆ ನಿನ್ನೆ ನಡೆಸಲಾಯಿತು. ಅಂಗಡಿ ಪದವಿನಿಂದ ಹೊಸಂಗಡಿ ವರೆಗೆ ಮೆರವಣಿಗೆ ನಡೆಸಲಾಗಿದ್ದು, ಕಾರ್ಯಕ್ರಮ ವನ್ನು ಬಿಕೆಎಂ ರಾಜ್ಯ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾ ಪಿಲ್ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಕಾರ್ಮಿಕರ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಸಿಯುತ್ತಿದೆ ಕಾರ್ಮಿಕರು ಹೋರಾಟ ದಿಂದ ಪಡೆದು ಕೊಂಡ 8 ಗಂಟೆ ಕೆಲಸ 8 ಗಂಟೆ ವಿನೋದ 8 ಗಂಟೆ ವಿಶ್ರಮ ಹಕ್ಕುಗಳನ್ನು ಇಲ್ಲದಾಗಿಸಿ 12 ಗಂಟೆ ದುಡಿಮೆ ಎಂಬ ನೀತಿಯನ್ನು ಜಾರಿಗೆ …

ಕೇರಳ ಯೂತ್ ಫ್ರಂಟ್(ಎಂ)ನ ಕರಾವಳಿ ಸಂರಕ್ಷಣೆ ಯಾತ್ರೆಗೆ ಚಾಲನೆ

ಕಾಸರಗೋಡು: ಮೀನುಗಾರಿಕಾ ವಲಯದಲ್ಲಿ ಕಂಡು ಬರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಬೇಕೆಂದು  ಕೇರಳ ಕಾಂಗ್ರೆಸ್ (ಎಂ) ಚೆಯರ್‌ಮೆನ್ ಸಂಸದ ಜೋಸ್ ಕೆ. ಮಾಣಿ ಒತ್ತಾಯಿಸಿದ್ದಾರೆ. ಕೇರಳ ಯೂತ್ ಫ್ರಂಟ್(ಎಂ) ರಾಜ್ಯಾಧ್ಯಕ್ಷ ಸಿರಿಯಕ್ ಚಾಳಿಕ್ಕಾಡನ್ ನೇತೃತ್ವದಲ್ಲಿ ನಡೆಯುವ ಕರಾವಳಿ ಸಂರಕ್ಷಣೆ ಯಾತ್ರೆಯನ್ನು ಕಾಸರಗೋಡು ಕಡಪ್ಪುರ ಶ್ರೀ ಕುರುಂಬಾ ಭಗವತಿ ಕ್ಷೇತ್ರ ಪರಿಸರದಲ್ಲಿ ಯಾತ್ರೆಯ ನಾಯಕನಿಗೆ ಧ್ವಜ ಹಸ್ತಾಂತರಿಸಿ, ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮೀನು ಕಾರ್ಮಿಕರಿಗೆ ಕರಾವಳಿ ಪ್ರದೇಶದ ಹಕ್ಕು ಪೂರ್ಣವಾಗಿ ಬಿಟ್ಟುಕೊಡಬೇಕು. ಸರಿಯಾದ ಅಧ್ಯಯನ ನಡೆಸದೆ ಸಮುದ್ರ ಹೊಯ್ಗೆ …

ಆಟೋರಿಕ್ಷಾ ಮಜ್ದೂರ್ ಸಂಘ ಚೌಕಿ ಯೂನಿಟ್ ಸಮ್ಮೇಳನ

ಕಾಸರಗೋಡು: ಆಟೋರಿಕ್ಷಾ ಮಜ್ದೂರ್ ಸಂಘ (ಬಿಎಂಎಸ್) ಚೌಕಿ ಯೂನಿಟ್ ಸಮ್ಮೇಳನ ಸಿಪಿಸಿಆರ್‌ಐ ಕಾವುಗೋಳಿ ಶ್ರೀ ಶಿವ ದೇವಸ್ಥಾನದಲ್ಲಿ ನಡೆಯಿತು. ಯೂನಿಟ್ ಅಧ್ಯಕ್ಷ ದಯಾನಂದ ಅಧ್ಯಕ್ಷತೆ ವಹಿಸಿದರು. ಆಟೋರಿಕ್ಷಾ ಮಜ್ದೂರ್ ಸಂಘದ ಜಿಲ್ಲಾ ಕೋಶಾಧಿಕಾರಿ ಕುಂಞಿಕೃಷ್ಣನ್ ಉದ್ಘಾಟಿಸಿ ಮಾತನಾಡಿದರು. ಯೂನಿಟ್ ಕಾರ್ಯದರ್ಶಿ ಯಧುಕುಲೇಶ್ ವರದಿ ಮಂಡಿಸಿದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಗುರುದಾಸ್ ಮಧೂರು ಸಮಾರೋಪ ಭಾಷಣ ನಡೆಸಿದರು. ಉದಯ ಮಲ್ಲಿ ಸ್ವಾಗತಿಸಿ, ಯೂನಿಟ್‌ನ ನೂತನ ಕಾರ್ಯದರ್ಶಿ ರಂಜಿತ್ ವಂದಿಸಿದರು. ನೂತನ ಸಮಿತಿಯ ಅಧ್ಯಕ್ಷರಾಗಿ ದಯಾನಂದ, ಉಪಾಧ್ಯಕ್ಷರಾಗಿ ಸತೀಶ್, …

ಕುಂಬಳೆಯಲ್ಲಿ ಮತ್ತೆ ಕಳ್ಳರ ಹಾವಳಿ: ಅಂಗಡಿಯ ಶಟರ್ ಮುರಿದು ಎರಡು ಗೋಣಿ ಕಾಳುಮೆಣಸು ಕಳವು

ಕುಂಬಳೆ:  ಅಲ್ಪ ಬಿಡುವಿನ ಬಳಿಕ ಕುಂಬಳೆ ಪೇಟೆಯಲ್ಲಿ ಮತ್ತೆ ಕಳ್ಳತನ ನಡೆದಿದೆ. ಕುಂಬಳೆ ಪೇಟೆಯಲ್ಲಿ ಬಸ್ ನಿಲ್ದಾಣ ಸಮೀಪ ಲೀಗ್ ಆಫೀಸ್‌ನ ಕೆಳಗೆ ಕಾರ್ಯಾಚರಿಸುವ ಕೆಎನ್‌ಬಿ ಟ್ರೇಡರ್ಸ್‌ನಲ್ಲಿ ಈ ಕಳವು ನಡೆದಿದೆ. ಎರಡು ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಕಾಳುಮೆಣಸು ಹಾಗೂ ಡ್ರವರ್‌ನಲ್ಲಿದ್ದ ಹಣವನ್ನು ಕಳ್ಳರು ದೋಚಿದ್ದಾರೆ. ಅಂಗಡಿಯ ಮಾಲಕ ಕಳತ್ತೂರು ನಿವಾಸಿ ಯಾಕೂಬ್  ಇಂದು ಬೆಳಿಗ್ಗೆ ತಲುಪಿದಾಗ ಅಂಗಡಿಯ ಶಟರ್ ಮುರಿದಿರುವುದು  ಕಂಡುಬಂದಿದೆ. ಬಳಿಕ ನಡೆದ ಪರಿಶೀಲನೆ ವೇಳೆ ಕಾಳುಮೆಣಸು ಹಾಗೂ ಹಣ ಕಳವಿಗೀಡಾಗಿರುವುದು ತಿಳಿದುಬಂದಿದೆ. ವಿಷಯ …

ಕಾವುನಲ್ಲಿ ಬೈಕ್-ಬಸ್ ಢಿಕ್ಕಿ : ವರ್ಕಾಡಿ ನಿವಾಸಿ ಯುವಕ ಮೃತ್ಯು

 ವರ್ಕಾಡಿ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಎಂಬಲ್ಲಿ ಬೈಕ್-ಕೆಎಸ್‌ಆರ್‌ಟಿಸಿ   ಮಧ್ಯೆ ಸಂಭವಿಸಿದ ಅಪಘಾತದಲ್ಲಿ ವರ್ಕಾಡಿ ಬದಿಮಲೆ ನಿವಾಸಿ ಯುವಕ ಮೃತಪಟ್ಟ ದಾರುಣ ಘಟನೆ ನಿನ್ನೆ ನಡೆದಿದೆ. ಬದಿಮಲೆ ನಿವಾಸಿ ಮೊಯ್ದೀನ್‌ಕುಂಞಿ ಎಂಬವರ ಪುತ್ರ ಅಶ್ರಫ್ (25) ಮೃತ ಯುವಕ. ಇವರು ನಿನ್ನೆ ಬೆಳಿಗ್ಗೆ ಪಾತೂರಿನಿಂದ ಬಸ್‌ನಲ್ಲಿ ಪುತ್ತೂರಿಗೆ ತೆರಳಿದ್ದರು. ಮಡಿಕೇರಿಯಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿ ಹೊಂದಿದ್ದ ಇವರು ಪುತ್ತೂರಿನ ಗ್ಯಾರೇಜ್‌ನಲ್ಲಿದ್ದ  ಬುಲ್ಲೆಟ್ ಬೈಕ್‌ನಲ್ಲಿ ಮಡಿಕೇರಿಯತ್ತ ಸಂಚರಿಸುತ್ತಿದ್ದಾಗ ಕಾವುನಲ್ಲಿ ಅಪಘಾತ ಸಂಭವಿಸಿದೆ. ಕೂಡಲೇ ಸ್ಥಳೀಯರು ಇವರನ್ನು ಆಸ್ಪತ್ರೆಗೆ ಕೊಂಡು ಹೋದರಾದರೂ …

ಆಟೋ ಚಾಲಕನ ಕೊಲೆ ಪ್ರಕರಣ: ಆರೋಪಿ ಕಸ್ಟಡಿಗೆ

ಮಂಜೇಶ್ವರ: ಕುಂಜತ್ತೂರು ಬಳಿಯ ಅಡ್ಕಪಳ್ಳ ಮಾನಿಗುಡ್ಡೆ ಎಂಬಲ್ಲಿ  ಮಂಗಳೂರು ಮುಲ್ಕಿ ಬಳಿಯ ಕೊಲ್ನಾ ಡು ನಿವಾಸಿಯೂ  ಆಟೋ ಚಾಲಕ ನಾದ ಮೊಹಮ್ಮದ್ ಶರೀಫ್ (52) ಎಂಬವರನ್ನು ಕೊಲೆಗೈದ ಪ್ರಕರಣದ ಹೆಚ್ಚಿನ ತನಿಖೆಯಂಗವಾಗಿ ಮಂಜೇಶ್ವರ  ಪೊಲೀಸರು ರಿಮಾಂಡ್ ನಲ್ಲಿದ್ದ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.  ಮಂಗಳೂರು ಸುರತ್ಕಲ್ ಬಳಿಯ ಕಲ್ಲಾಪು ಎಂಬಲ್ಲಿನ ಅಭಿಷೇಕ್ ಶೆಟ್ಟಿ (25)ಯನ್ನು ಐದು ದಿನಗಳಿಗೆ ಕಸ್ಟಡಿಗೆ ತೆಗೆದುಕೊಂಡಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆ ನಡೆದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು    ಮಾಹಿತಿ ಸಂಗ್ರಹಿಸ ಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. …

ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಮಾದಕವಸ್ತು ಸಾಗಿಸುವ ಜಾಲದ ಇಬ್ಬರ ಸೆರೆ  

ಬದಿಯಡ್ಕ: ಕಾಸರಗೋಡು ಸೇರಿದಂತೆ ಕೇರಳಕ್ಕೆ ಬೃಹತ್ ಪ್ರಮಾಣದಲ್ಲಿ ಮಾದಕವಸ್ತುವಾದ ಎಂಡಿಎಂಎ ಪೂರೈಸುವ ಜಾಲದ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕಲ್ಲಿಕೋಟೆ ಚಾಲಪುರಂ ಪೆರುಂಕುಳಿಪಾಡದ ಪಿ. ರಂಜಿತ್ (30) ಮತ್ತು ಮಡಿಕೇರಿ ಕುಂಜಿಲ್ ಪ್ಲಾರಿಕೆ ರಸ್ತೆ ಬಳಿಯ ಮಡಪಳ್ಳಿ ಹೌಸ್‌ನ ಸಫಾದ್ ಎಂ.ಎ (26) ಬಂಧಿತ ಆರೋಪಿಗಳು. ಇವರು ಕೇರಳಕ್ಕೆ ಎಂಡಿಎಂಎ ಸಾಗಿಸುವ  ಜಾಲದ ಪ್ರಧಾನ ಸೂತ್ರಧಾರರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇವರು ಬೆಂಗಳೂರಿನಿಂದ ಕೇರಳದ ಹಲವೆಡೆಗಳಿಗೆ ಎಂಡಿಎಂಎ ಪೂರೈಸುವವರಾಗಿದ್ದಾರೆ.  ಬದಿಯಡ್ಕ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುಧೀರ್ ನೇತೃತ್ವದಲ್ಲಿ ಎಸ್‌ಐ …

ಪ್ರಧಾನಿ ನೇತೃತ್ವದಲ್ಲಿ ನಿರ್ಣಾಯಕ ಸಭೆ ಇಂದು

ನವದೆಹಲಿ: ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಸೂಕ್ತ ತಿರುಗೇಟು ನೀಡಲು ಪ್ರಧಾನಮಂತ್ರಿ ನರೇಂದ್ರಮೋದಿಯವರ ನೇತೃತ್ವದಲ್ಲ್ಲಿ ರಾಜಕೀಯ  ವ್ಯವಹಾರಗಳ ಸಂಪುಟ ಸಭೆ  ನಡೆಸಲು ಇಂದು ನಡೆಯಲಿದೆ.  ಇದು  ಸೂಪರ್ ಕ್ಯಾಬಿನೆಟ್ ಎಂದು ಕರೆಯಲ್ಪಡುವ ಪ್ರಮುಖ ಸಮಿತಿಯಾಗಿದೆ. ಪಾಕಿಸ್ತಾನದ ವಿರುದ್ಧ ಕೈಗೊಳ್ಳಲಾಗುವ ಕ್ರಮದ ಬಗ್ಗೆ  ಇಂದಿನ  ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸೂಕ್ತ ರೀತಿಯಲ್ಲಿ  ಪ್ರತೀಕಾರ ನೀಡಲು ಪ್ರಧಾನಮಂತ್ರಿ ನರೇಂದ್ರಮೋದಿ  ಭಾರತೀಯ ಸೇನಾ …

ಹೆಚ್ಚುವರಿ ಚಿನ್ನಾಭರಣ, ನಗದು ಆಗ್ರಹಿಸಿ ದೌರ್ಜನ್ಯ: ಯುವತಿಯ ಕೂದಲೆಳೆದು, ಮೆಟ್ಟಿ, ಗಾಯಗೊಳಿಸಿದ ಬಗ್ಗೆ ದೂರು ; ಪತಿ ವಿರುದ್ಧ ಕೇಸು

ಕಾಸರಗೋಡು: ಹೆಚ್ಚುವರಿ ಚಿನ್ನಾಭರಣ, ನಗದು ಆಗ್ರಹಿಸಿ ಯುವತಿಗೆ ದೈಹಿಕ, ಮಾನಸಿಕವಾಗಿ ದೌರ್ಜನ್ಯಗೈದಿರುವುದಾಗಿ ನೀಡಿದ ದೂರಿನಲ್ಲಿ ಯುವಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಾಲೋತ್, ಪರಂಬ ರಸ್ತೆಯ ದೀಪಾ ಜೋಸೆಫ್ (22)ಳ ದೂರಿನಂತೆ ಪತಿ ಸ್ಟೀಫನ್ ಜೋಸೆಫ್ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿದ್ದಾರೆ. 2016 ಫೆಬ್ರವರಿ ೧ರಂದು ದೀಪಾ ಹಾಗೂ ಸ್ಟೀಫನ್ ಮಧ್ಯೆ ಧಾರ್ಮಿಕ ವಿಧಿ ಪ್ರಕಾರ ವಿವಾಹ ನಡೆದಿತ್ತು. ಮದುವೆಯ ಮರುದಿನದಿಂದ 2025 ಎಪ್ರಿಲ್ 29ರವರೆಗೆ ಹೆಚ್ಚುವರಿ ಹಣ, ಚಿನ್ನಾಭರಣ ಆಗ್ರಹಿಸಿ ದೌರ್ಜನ್ಯಗೈಯ್ಯುತ್ತಿ ದ್ದುದಾಗಿ ದೂರಿನಲ್ಲಿ …