ಸೀತಾಂಗೋಳಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾದ ಯುವಕ ಸೆರೆ

ಸೀತಾಂಗೋಳಿ: ಸೀತಾಂಗೋಳಿ ಪೇಟೆಯಲ್ಲಿ  ನಿನ್ನೆ ರಾತ್ರಿ ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದ ವ್ಯಕ್ತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಪೆರಡಾಲ ನಿವಾಸಿ ವಿಜಯ ನಾಯ್ಕ್ (32) ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆ ವೇಳೆ ಎಸ್‌ಐ ಶ್ರೀಜೇಶ್  ನೇತೃತ್ವದ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಅಲ್ಲಿನ ಬಿವರೇಜಸ್ ಮದ್ಯದಂಗಡಿ ಸಮೀಪದಲ್ಲಿ ಈತ ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಕಾಂಬೋಡಿಯಾಕ್ಕೆ ತೆರಳಿದ ಬಂದ್ಯೋಡು ಬಳಿಯ ನಿವಾಸಿ ಮಾಹಿತಿ ಅಲಭ್ಯ-ದೂರು

ಕುಂಬಳೆ: ಉದ್ಯೋಗ ನಿಮಿತ್ತ ಕಾಂಬೋಡಿಯಾಕ್ಕೆ ಹೋದ ಯುವಕನ ಕುರಿತು ಯಾವುದೇ ಮಾಹಿತಿಯಿಲ್ಲವೆಂದು ತಿಳಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ಬಂದ್ಯೋಡು ಅಡ್ಕ ಮೆಹಮೂದ್ ಮಂಜಿಲ್‌ನ ಮೊಹಮ್ಮದ್ ಮುನೀರ್ (25)ರ ಕುರಿತು ಮಾಹಿತಿ ಇಲ್ಲವೆಂದು ದೂರಲಾಗಿದೆ. ಈ ಬಗ್ಗೆ ಸಹೋದರಿ ಮನ್ಸೀನ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೊಹಮ್ಮದ್ ಮುನೀರ್  2022ರಲ್ಲಿ ಉದ್ಯೋಗಕ್ಕೆಂದು ತಿಳಿಸಿ ಕಾಂಬೋಡಿಯಾಕ್ಕೆ ತೆರಳಿದ್ದಾರೆ. ಆದರೆ ಕಳೆದ ಎರಡು ತಿಂಗಳಿಂದ ಅವರ ಕುರಿತು ಯಾವುದೇ ಮಾಹಿತಿಯಿಲ್ಲ. ಫೋನ್ ಕರೆ ನೀಡಿದರೂ ಸಂಪರ್ಕಕ್ಕೆ …

ತೃಕ್ಕನ್ನಾಡ್‌ನಿಂದ ವಶಪಡಿಸಿದ 1.17 ಕೋಟಿ ರೂ. ಕಾಳಧನದ ಬಗ್ಗೆ ಇ.ಡಿ, ಆದಾಯ ತೆರಿಗೆ ಇಲಾಖಗೆ ಮಾಹಿತಿ ನೀಡಿದ ಪೊಲೀಸರು

ಕಾಸರಗೋಡು: ಕಾಸರಗೋಡು-ಹೊಸದುರ್ಗ ರಾಜ್ಯ ಹೆದ್ದಾರಿಯ ತೃಕ್ಕನ್ನಾಡು ಸಮೀಪದ ಚಿರಮ್ಮಲ್‌ನಿಂದ ವಶಪಡಿಸಿದ 1.17 ಕೋಟಿ ರೂ. ಕಾಳಧನದ ಬಗ್ಗೆ ಪೊಲೀಸರು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಆದಾಯ ತೆರಿಗೆ ಇಲಾಖೆಗೂ ಮಾಹಿತಿ ನೀಡಿದ್ದಾರೆ. ಕಾರಿನೊಳಗೆ ಗುಪ್ತ ಸೆರೆ ನಿರ್ಮಿಸಿ ಅದರೊಳಗೆ ಈ ಕಾಳಧನ ಬಚ್ಚಿಡಲಾಗಿತ್ತು. ಇದಕ್ಕೆ ಸಂಬಂಧಿಸಿ ವಶಕ್ಕೆ ತೆಗೆದುಕೊಳ್ಳಲಾದ ಮೇಲ್ಪ ರಂಬ ನಿವಾಸಿ ಎಂ.ಎಸ್. ಅಬ್ದುಲ್ ಖಾದರ್ (46)ನ ಹೇಳಿಕೆ ದಾಖಲಿಸಿಕೊಂಡ ಬಳಿಕ ಆತನನ್ನು ಪೊಲೀಸರು ನ್ಯಾ ಯಾಲಯದಲ್ಲಿ ಹಾಜರುಪಡಿಸಿದ್ದಾರೆ. ನಂತರ ನ್ಯಾಯಾಲಯ ಆತನಿಗೆ ಜಾಮೀನು ಮಂಜೂರು …

ಎಲ್‌ಪಿ ಶಾಲಾ ಅಧ್ಯಾಪಕ ರ‍್ಯಾಂಕ್ ಪಟ್ಟಿಯ ಕಾಲಾವಧಿ ಕೊನೆಗೊಳ್ಳಲು ಒಂದು ತಿಂಗಳು ಬಾಕಿ: ಉದ್ಯೋಗಾರ್ಥಿಗಳಿಗೆ ನಿರಾಸೆ

ಕಾಸರಗೋಡು: ಎಲ್ಪಿ ಶಾಲಾ ಅಧ್ಯಾಪಕ ನೇಮಕಾತಿಗೆ ಜಿಲ್ಲೆಯಲ್ಲಿ ಜ್ಯಾರಿಯಲ್ಲಿರುವ ರ್ಯಾಂ ಕ್ ಪಟ್ಟಿಯ ಕಾಲಾವಧಿ ಮೇ 31ರಂದು ಕೊನೆಗೊಳ್ಳಲಿದೆ. 2019ರ ವಿಜ್ಞಾಪನಾ ಪ್ರಕಾರ 2022 ಮೇ 31ರಂದು ಜ್ಯಾರಿಗೆ ಬಂದ ರ್ಯಾಂ ಕ್ ಪಟ್ಟಿಯಿಂದ 261 ಮಂದಿಯನ್ನು ಇದುವರೆಗೆ ಹುದ್ದೆಗೆ ನೇಮಕ ಮಾಡಲಾಗಿದೆ. ಪ್ರಧಾನ ಪಟ್ಟಿಯಿಂದ 598 ಮಂದಿ, ಸಪ್ಲಿಮೆಂಟರಿ ಪಟ್ಟಿಯಿಂದ 393 ಮಂದಿ ಸಹಿತ ಒಟ್ಟು 991 ಮಂದಿಯ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕೋವಿಡ್ ಕಾಲವಾದ 2019ರಲ್ಲಿ ಅರ್ಜಿ ಆಹ್ವಾನಿಸಿದ್ದು, 2022ರಲ್ಲಿ ಪಟ್ಟಿ ಪ್ರಕಟಿಸಲಾಗಿತ್ತು.ಜಿಲ್ಲಾ ಶಿಕ್ಷಣ ಉಪನಿರ್ದೇಶಕರು …

ಎ.ಟಿ.ಎಂ ಬಳಕೆ: ಮೇ 1ರಿಂದ ಉಚಿತ ವ್ಯವಹಾರದಲ್ಲಿ ಬದಲಾವಣೆ

ಕಾಸರಗೋಡು: ಎಟಿಎಂ ವ್ಯವಹಾರಗಳಿಗೆ ಮೇ 1ರಿಂದ ಹೊಸ ದರ ಜ್ಯಾರಿಗೆ ಬರಲಿದೆ. ಹೊಸ ನಿಬಂಧನೆ ಪ್ರಕಾರದೇಶದ ಎ.ಟಿ.ಎಂ ಉಚಿತ ವ್ಯವಹಾರಗಳಿಗೆ ಮಿತಿಯಿರುವುದು. ಹೆಚ್ಚು ವ್ಯವಹಾರ ನಡೆಸುವವರಿಂದ ದರ ವಸೂಲಿಯಾಗಲಿದೆ. ಇದೇ ವೇಳೆ ಇಂಟರ್‌ಚೇಂಜ್ ಫೀಸ್ ವ್ಯವಸ್ಥೆಯಲ್ಲೂ ಬದಲಾವಣೆಯಾಗಲಿದೆ. ಹೊಸ ನಿಬಂಧನೆಗಳ ಪ್ರಕಾರ  ಉಚಿತ ಎ.ಟಿ.ಎಂ ವ್ಯವಹಾರಗಳ ಸಂಖ್ಯೆ ಕಡಿಮೆಯಾಗಲಿದೆ. ಒಂದು ತಿಂಗಳಲ್ಲ್ಲಿ   ನಿಗದಿತ ಸಂಖ್ಯೆಗಿಂತ ಹೆಚ್ಚು ಉಪಯೋಗಿಸುವ ಎ.ಟಿ.ಎಂ ವ್ಯವಹಾರಗಳಿಗೆ ಶುಲ್ಕ ಹಾಗೂ ತೆರಿಗೆಗಳಿರುವುದು. ಸ್ಥಳಗಳಿಗೆ ಹೊಂದಿಕೊಂಡು ಇದರಲ್ಲಿ ವ್ಯತ್ಯಾಸವುಂಟಾಗಲಿದೆ. ಮೆಟ್ರೋ ಪೊಲಿಟನ್ ನಗರಗಳಲ್ಲ್ಲಿ ಒಂದು ತಿಂಗಳಲ್ಲಿ …

ವೈಟಿಂಗ್ ಲಿಸ್ಟ್ ಟಿಕೆಟ್‌ನೊಂದಿಗೆ ರೈಲ್ವೇ ರಿಸರ್ವೇಶನ್ ಬೋಗಿಗೆ ಹತ್ತಿದರೆ ದಂಡ: ಮೇ 1ರಿಂದ ಜ್ಯಾರಿಗೆ

ಹೊಸದಿಲ್ಲಿ: ವೈಟಿಂಗ್ ಲಿಸ್ಟ್ ಟಿಕೆಟ್ ಗಳೊಂದಿಗೆ ರೈಲುಗಳ ಸ್ಲೀಪರ್, ಎ.ಸಿ ಬೋಗಿಗಳಿಗೆ ಹತ್ತುವ ಪ್ರಯಾಣಿಕರಿಗೆ ಮೇ 1ರಿಂದ ಭಾರೀ ದಂಡ ಹೇರಲು ರೈಲ್ವೇ ಇಲಾಖೆ ನಿರ್ಧರಿಸಿದೆ. ದಂಡ ವಸೂಲು ಮಾಡಿದ ಬಳಿಕ ಅವರನ್ನು ಜನರಲ್ ಬೋಗಿಗೆ ಬದಲಾಯಿಸಲಾಗುವುದು. ಇದೇ ವೇಳೆ ರಿಸರ್ವೇಶನ್ ಖಚಿತಪಡಿಸಿದ ಪ್ರಯಾಣಿಕರ ಸುರಕ್ಷತೆ ಹಾಗೂ ಸುಗಮ ಪ್ರಯಾಣ ಖಚಿತಪಡಿಸಲಾಗುವುದೆಂದೂ ರೈಲ್ವೇ ತಿಳಿಸಿದೆ. ಈಗ ಸ್ಲೀಪರ್, ಎ.ಸಿ ಬೋಗಿಗಳಲ್ಲಿ ರಿಸರ್ವೇಶನ್ ಖಚಿತಗೊಳ್ಳದವರು ಆ ಬೋಗಿಗಳಿಗೆ ಹತ್ತಿ ಇತರರಿಗೆ ಖಚಿತಗೊಂಡ ಸೀಟುಗಳಲ್ಲಿ ಕುಳಿತುಕೊಳ್ಳುವುದು, ರಿಸರ್ವೇಶನ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಮಲಗುವುದು …

ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಮೇ 9ರಂದು

ತಿರುವನಂತಪುರ: ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಮೇ 9ರಂದು ಪ್ರಕಟಿಸಲಾಗುವುದೆಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ. ರಾಜ್ಯದಲ್ಲಿ ಈ ಬಾರಿ 4,27,021 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 2,17,696 ಮಂದಿ ಹುಡುಗರು ಮತ್ತು 2,09,325 ಮಂದಿ ಹುಡುಗಿಯರು ಒಳಗೊಂಡಿದ್ದಾರೆ. ಸರಕಾರಿ ಶಾಲೆಗಳ 1,42,298 ಮಂದಿ ಹಾಗೂ ಅನುದಾನಿತ ಶಾಲೆಗಳ 2,55,092 ಹಾಗೂ ಅನನುದಾನಿತ ವಲಯದ 29,621 ವಿದ್ಯಾರ್ಥಿಗಳು ಈಬಾರಿ ಪರೀಕ್ಷೆ ಬರೆದಿದ್ದಾರೆ.

ವಯನಾಡ್ ಭೂಕುಸಿತ: ಸರಕಾರದ ಸ್ಯಾಲರಿ ಚಾಲೆಂಜ್‌ಗೆ ಹಣ ನೀಡಲು ಇನ್ನೂ 20,000ಕ್ಕೂ ಹೆಚ್ಚು ಮಂದಿ ಬಾಕಿ

ಕಾಸರಗೋಡು: ವಯನಾಡ್‌ನ ಮುಂಡಕೈ- ಚೂರಲ್ ಮಲೆಯಲ್ಲಿ ಸಂಭವಿಸಿದ ಭೂ ಕುಸಿತದ ಪುನರ್ವಸತಿ ನಿಧಿಗೆ ಸಹಾಯವೊದಗಿಸುವ ನಿಟ್ಟಿನಲ್ಲಿ ಸರಕಾರ ಹೊರಡಿಸಿದ ಸ್ಯಾಲರಿ ಚಾಲೆಂಜ್‌ಗೆ ಒಪ್ಪಿಗೆ ಪತ್ರ ನೀಡಿದವರಲ್ಲಿ ಇನ್ನೂ 20 ಸಾವಿರಕ್ಕೂ ಹೆಚ್ಚು ನೌಕರರು ಹಣ ನೀಡಲು ಬಾಕಿಯಿದ್ದಾರೆಂದು ತಿಳಿದು ಬಂದಿದೆ. ಅಂತವರು ತಮ್ಮ ಮೊತ್ತವನ್ನು ಶೀಘ್ರ ಮುಖ್ಯಮಂತ್ರಿಯ ಬರ ಪರಿಹಾರ ನಿಧಿಗೆ ಹಸ್ತಾಂತರಿಸಬೇಕೆಂದು ಸರಕಾರ ನಿರ್ದೇಶ ಹೊರಡಿಸಿದೆ. ಪ್ರೊವಿಡೆಂಟ್ ಫಂಡ್ ಹಾಗೂ ಲೀವ್ ಸರಂಡರ್‌ನಿಂದ ಹಣ ನೀಡಲು ಒಪ್ಪಿಗೆ ಸೂಚಿಸಿದವರಲ್ಲಿ ಹಣ ನೀಡಲು ಬಾಕಿಯಿರುವುದಾಗಿ ಹೇಳಲಾಗುತ್ತಿದೆ. ಇದಕ್ಕೆ …

ಆಂಧ್ರ ಪ್ರದೇಶ: ದೇವಸ್ಥಾನದ ಉತ್ಸವ ವೇಳೆ ಗೋಡೆ ಕುಸಿದು ೮ ಭಕ್ತರು ಸಾವು:ಹಲವರಿಗೆ ಗಂಭೀರ

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟದ ಶ್ರೀ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಚಂದನೋತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ  20 ಅಡಿ ಉದ್ದದ ಗೋಡೆ ಭಾರೀ ಮಳೆಗೆ ಕುಸಿದುಬಿದ್ದು 8 ಮಂದಿ ಭಕ್ತರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.  ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿ ಸಲಾಗಿದೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್‌ನಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ದುರಂತಕ್ಕೆ ಪ್ರಧಾನಿ ನರೇಂದ್ರಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ ೨ ಲಕ್ಷರೂ.ನಂತೆ ನಷ್ಟ …

ಗಿರಣಿ ಮಾಲಕ ನಿಧನ

ಕಾಸರಗೋಡು: ನೆಲ್ಲಿಕುಂಜೆ ಬೀಚ್ ರಸ್ತೆಯ ಗಿರಣಿ ಮಾಲಕ ಬಂಗಾರಗುಡ್ಡೆ ತೈವಳಪ್ಪ್ ಹೌಸ್‌ನ ಅಬೂಬಕ್ಕರ್ ತೈವಳಪ್ಪ್ (72) ನಿಧನ ಹೊಂದಿದರು.  ದಿ| ಬಿ.ಕೆ. ಮುಹಮ್ಮದ್ ಹಾಜಿ ತೈವಳಪ್ಪ್-ಬೀಫಾತಿಮ ದಂಪತಿ ಪುತ್ರನಾಗಿರುವ ಇವರು ಪತ್ನಿ ನಫೀಸ ಚೇರಂಗೈ, ಮಕ್ಕಳಾದ  ಸಾಹು, ಸಾದಾತ್, ಸಮೀಮ, ಖೈರು, ಅಳಿಯ-ಸೊಸೆಯಂದಿರಾದ  ಹ್ಯಾರಿಸ್ ಪಳ್ಳಂ, ಮುಸ್ತಫ ಕಯ್ಯಾರು, ಶಬಾನ ಪಟ್ಲ,  ಸಾಹಿನಾ ಪಚ್ಚಂಬಳ, ಸಹೋದರರಾದ  ಹಸೈನಾರ್ ತೈವಳಪ್ಪ್, ಸತ್ತಾರ್ ತೈವಳಪ್ಪ್, ರಶೀದ್ ತೈವಳಪ್ ಹಾಗೂ  ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.