ಜಿಲ್ಲೆಯಲ್ಲಿ ಉನ್ನತ ವೈದ್ಯಕೀಯ ಆಸ್ಪತ್ರೆ ಸ್ಥಾಪಿಸಲು ಆಗ್ರಹಿಸಿ ರಾಜೀವ್ ಚಂದ್ರಶೇಖರ್‌ಗೆ ಏಮ್ಸ್ ಒಕ್ಕೂಟ ಮನವಿ
ಕಾಸರಗೋಡು: ಸಾಕಷ್ಟು ಚಿಕಿತ್ಸಾ ಸೌಕರ್ಯವಿಲ್ಲದ ಜಿಲ್ಲೆಯಲ್ಲಿ ಕೇಂದ್ರ ಸರಕಾರದ ಅಧೀನದ ಏಮ್ಸ್, ಜಿಪ್‌ಮೆರ್, ಇಎಸ್‌ಐ ಮೆಡಿಕಲ್ ಕಾಲೇಜಿ ನಂತಹ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಲಭ್ಯಗೊಳಿಸುವುದಕ್ಕೆ ಕೇಂದ್ರದಲ್ಲಿ ಒತ್ತಡ ಹಾಕಬೇಕೆಂದು, ಎಂಡೋಸಲ್ಫಾನ್ ಸಂತ್ರಸ್ತರಾದ ರೋಗಿಗಳಿಗೆ ಉಪಕಾರಪ್ರದವಾಗುವ ರೀತಿಯಲ್ಲಿ ಚಿಕಿತ್ಸೆ, ರಿಸರ್ಚ್ ನಡೆಸಲು ಒದಗುವ ರೀತಿಯ ಮೆಡಿಕಲ್ ವ್ಯವಸ್ಥೆಗಳನ್ನು ಜಿಲ್ಲೆಗೆ ತರಲು ನೇತೃತ್ವ ನೀಡಬೇಕೆಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್‌ರಲ್ಲಿ ಏಮ್ಸ್ ಕಾಸರಗೋಡು ಜನಪರ ಒಕ್ಕೂಟ ಆಗ್ರಹಿಸಿದೆ. ನಿನ್ನೆ ಕಾಸರಗೋಡಿಗೆ ತಲುಪಿದ ಅವರನ್ನು …