ದೂರುದಾರರ ಹೆಸರು ಬಹಿರಂಗ: ಕುಂಬಳೆ ಪಂ. ಕಾರ್ಯದರ್ಶಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಂಪಿಟಿಎ ಅಧ್ಯಕ್ಷೆ

ಕುಂಬಳೆ: ಪೇಟೆಯಲ್ಲಿ ರಸ್ತೆ ಬದಿ ನಡೆಸುತ್ತಿರುವ ವ್ಯಾಪಾರದ ಬಗ್ಗೆ ಪಂಚಾಯತ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ನೀಡಿದವರ ಹೆಸರನ್ನು ಬಹಿರಂಗಪಡಿಸಿದ ಪಂಚಾಯತ್ ಕಾರ್ಯದರ್ಶಿಯ ಕರ್ತವ್ಯಲೋಪದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮಾತೃಸಮಿತಿ ಅಧ್ಯಕ್ಷೆ ವಿನೀಶ ಬಾಲಕೃಷ್ಣನ್ ಕುಂಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾರ್ಯದರ್ಶಿ ತನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದಾಗಿಯೂ ಅವರು ದೂರಿದರು. ಶಾಲಾ ವಿದ್ಯಾರ್ಥಿಗಳು ಸಂಚರಿಸುವ ದಾರಿಯಲ್ಲಿ ವಿದ್ಯಾರ್ಥಿನಿಯರು ಅನುಭವಿಸುವ ಕೆಟ್ಟ ಅನುಭವ ಸಾಮಾನ್ಯವಾದ ಹಿನ್ನೆಲೆಯಲ್ಲಿ ಪಂಚಾಯತ್‌ಗೆ ತಾನು ದೂರು ನೀಡಿದ್ದು, …

ತೋಡಿನಲ್ಲಿ ಯುವಕನ ಮೃತದೇಹ ಪತ್ತೆ

ಕಾಸರಗೋಡು: ಪಾಣತ್ತೂರು ಮಾಪಿಳಚ್ಚೇರಿಯಲ್ಲಿ ಯುವಕ ತೋಡಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮಾಪಿಳಚ್ಚೇರಿ ನಿವಾಸಿ ರಾಜೇಶ್ (35) ಮೃತಪಟ್ಟ ಯುವಕ. ನಿನ್ನೆ ಸಂಜೆ ೫ ಗಂಟೆ ವೇಳೆಗೆ ಮನೆ ಸಮೀಪದ ತೋಡಿನಲ್ಲಿ ಮೃತದೇಹ ಪತ್ತೆಯಾಗಿದೆ. ಅಜಾಗ್ರತೆಯಿಂದ ತೋಡಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಮಾಹಿತಿ ತಿಳಿದು ರಾಜಪುರಂ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಅಣ್ಣಯ್ಯ ನಾಯ್ಕ್- ಜಯಂತಿ ದಂಪತಿ ಪುತ್ರನಾದ ಮೃತರು ಸಹೋದರ ರಾಜೇಂದ್ರನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿವೃತ್ತ ಬ್ಯಾಂಕ್ ಉದ್ಯೋಗಿ ನಿಧನ

ಕಾಸರಗೋಡು: ನೆಲ್ಲಿಕುಂಜೆ ಗರ್ಲ್ಸ್ ಹೈಸ್ಕೂಲ್ ಬಳಿಯ ನಿವಾಸಿ ದಿ| ಮಾಧನ ಎನ್.ಎ ಎಂಬವರ ಪತ್ನಿ ನಿವೃತ್ತ ಬ್ಯಾಂಕ್ ಉದ್ಯೋಗಿ ನಳಿನಿ   (64) ನಿನ್ನೆ ರಾತ್ರಿ ನಿಧನ ಹೊಂದಿದರು.  ಇವರು ಉತ್ತರ ಕೇರಳ, ದ.ಕ. ಜಿಲ್ಲೆಯಾದ್ಯಂತ ಗಾಯಕಿಯಾಗಿ ರಸಮಂಜರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಖ್ಯಾತರಾಗಿದ್ದರು. ಕಾಸರಗೋಡಿನ ರೆಡ್ ರೋಸ್ ಆರ್ಕೆಸ್ಟ್ರಾ ತಂಡ, ತುಳು ಚಲನಚಿತ್ರ ರಂಗದ ಸಂಗೀತ ನಿರ್ದೇಶಕ ಎ.ಕೆ. ವಿಜಯ್ (ಕೋಕಿಲಾ) ಅವರ ತಂಡದಲ್ಲೂ  ಗಾಯಕಿಯಾಗಿದ್ದರು.  ನೆಲ್ಲಿಕುಂಜೆ ಶ್ರೀ ಕೋಮರಾಡಿ ದೈವಸ್ಥಾನ ಸಮಿತಿ ಸದಸ್ಯೆಯೂ ಆಗಿದ್ದರು. ಮೃತರು ಮಕ್ಕಳಾದ  …

ಕನ್ಯಪ್ಪಾಡಿ-ಪಳ್ಳ ರಸ್ತೆ ಶೋಚನೀಯ ಕಾಂಗ್ರೆಸ್‌ನಿಂದ ನಾಳೆ ಪ್ರತಿಭಟನೆ

ಬದಿಯಡ್ಕ: ಸಂಚಾರ ಯೋಗ್ಯ ವಲ್ಲದ ಕನ್ಯಪ್ಪಾಡಿ-ಪಳ್ಳ ರಸ್ತೆಯ ಶೋಚನೀಯಾವಸ್ಥೆಯನ್ನು ಪ್ರತಿಭಟಿಸಿ ಯೂತ್ ಕಾಂಗ್ರೆಸ್ ಎಣ್ಮಕಜೆ, ಬದಿಯಡ್ಕ ಮಂಡಲ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಚಳವಳಿ ನಡೆಸಲು ನಿರ್ಧರಿಸಲಾಗಿದೆ. ಇದರಂಗವಾಗಿ ನಾಳೆ ಬೆಳಿಗ್ಗೆ 11 ಗಂಟೆಗೆ ಚೆನ್ನೆಕುಂಡ್‌ನಲ್ಲಿ ರಸ್ತೆಯ ಹೊಂಡಗಳಲ್ಲಿ ದೋಣಿ ಇಳಿಸಿ ಪ್ರತಿಭಟನೆ ನಡೆಸಲಾ ಗುವುದು.  ಡಿಸಿಸಿ ಪ್ರಧಾನ ಕಾರ್ಯ ದರ್ಶಿ, ಎಣ್ಮಕಜೆ ಪಂಚಾ ಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್ ಉದ್ಘಾಟಿಸುವರು. ನೇತಾರರ ಸಹಿತ ಹಲವರು ಕಾರ್ಯಕರ್ತರು ಭಾಗವಹಿ ಸುವರು.  ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಬಂಧಪಟ್ಟವರು ವಿನಂತಿಸಿದ್ದಾರೆ.

ಶಾಲಾ ವಿದ್ಯಾರ್ಥಿಯನ್ನು ಅಪಹರಿಸಿ ಕುತ್ತಿಗೆ ಕೊಯ್ದು ಕೊಲೆ : ಇಬ್ಬರ ಬಂಧನ

ಬೆಂಗಳೂರು: ಟ್ಯೂಶನ್ ಮುಗಿಸಿ ಮನೆಗೆ ಮರಳುತ್ತಿದ್ದ ಬಾಲಕನನ್ನು ಅಪಹರಿಸಿ ಕುತ್ತಿಗೆ ಕೊಯ್ದು ಕೊಲೆಗೈದು ಮೃತದೇಹಕ್ಕೆ ಪೆಟ್ರೋಲ್ ಸುರಿದು ಕಿಚ್ಚಿಟ್ಟ ದಾರುಣ ಘಟನೆ ಬೆಂಗಳೂರು ಬಳಿ ನಡೆದಿದೆ. ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ಅರಕೆರೆಯ ಶಾಂತಿ ನಿಕೇತನ ಬಡಾವಣೆಯಲ್ಲಿ ಟ್ಯೂಶನ್ ಮುಗಿಸಿ ಮನೆಗೆ ಮರಳುತ್ತಿದ್ದ  ಸ್ಥಳೀಯ ನಿವಾಸಿಯಾದ ನಿಶ್ಚಿತ್ (13) ಎಂಬ ಬಾಲಕನನ್ನು ದುಷ್ಕರ್ಮಿಗಳು ಕೊಲೆಗೈದಿ ದ್ದಾರೆ.  ಈ ಸಂಬಂಧ ಗೋಪಾಲಕೃಷ್ಣ ಹಾಗೂ ಗುರುಮೂರ್ತಿ ಎಂಬಿಬ್ಬರನ್ನು  ಹುಳಿಮಾವು ಠಾಣೆ ಪೊಲೀಸರು ಬಂಧಿಸಿ ದ್ದಾರೆ.  ೮ನೇ ತರಗತಿ …

ಸ್ಕೂಟರ್‌ನಲ್ಲಿ ತಲುಪಿ ಮಾಲೆ ಅಪಹರಿಸಲೆತ್ನಿಸಿದ ದುಷ್ಕರ್ಮಿಯನ್ನು ಮೆಟ್ಟಿ ಬೀಳಿಸಿದ ಯುವತಿ; ಪರಾರಿಯಾದ ವ್ಯಕ್ತಿಗಾಗಿ ಶೋಧ

ಕುಂಬಳೆ: ದಾರಿಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಕುತ್ತಿಗೆಯಿಂದ ಚಿನ್ನದ ಮಾಲೆಯನ್ನು ಅಪಹರಿಸಲು ಯತ್ನ ನಡೆದಿದ್ದು ಈ ವೇಳೆ ದುಷ್ಕರ್ಮಿಯನ್ನು ಯುವತಿ ಬಲಪ್ರಯೋಗಿಸಿ ಎದುರಿಸಿದ ಘಟನೆ ನಡೆದಿದೆ. ಬೊಬ್ಬೆ ಕೇಳಿ ಜನರು ಸ್ಥಳಕ್ಕೆ ತಲುಪುವಷ್ಟರಲ್ಲಿ ದುಷ್ಕರ್ಮಿ ಸ್ಕೂಟರ್ ಸಹಿತ ಪರಾರಿಯಾಗಿ ದ್ದಾನೆ. ನಿನ್ನೆ ಸಂಜೆ ಪೈವಳಿಕೆ ಕುಡಾಲುಮೇರ್ಕಳದಲ್ಲಿ ಈ ಘಟನೆ ನಡೆದಿದೆ.  ವಸಂತಿ ಎಂಬವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ತಲುಪಿದ ದುಷ್ಕರ್ಮಿ ಸಮೀಪದಲ್ಲಿ ನಿಲ್ಲಿಸಿ ದಾರಿ ಕೇಳಿದ್ದಾನೆನ್ನಲಾಗಿದೆ. ಈ ವೇಳೆ ವಸಂತಿ  ದಾರಿ ಸೂಚಿಸುತ್ತಿದ್ದಂತೆ   ದುಷ್ಕರ್ಮಿ …

ಮಸೀದಿ ನಿರ್ಮಾಣ ಕಾಮಗಾರಿ ವೇಳೆ ಬಿದ್ದು ಕಾರ್ಮಿಕ ಮೃತ್ಯು

ಕುಂಬಳೆ: ಮಸೀದಿಯ ನಿರ್ಮಾಣ ಕಾಮಗಾರಿ ವೇಳೆ ಬಿದ್ದು ಅನ್ಯರಾಜ್ಯ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಉತ್ತರಪ್ರದೇಶದ ಮಾನ್ಪುರ್ ಗುಂಕೆಫ್ರಿ ನಿವಾಸಿ ಕವಿಲಾಲ್ ಎಂಬವರ ಪುತ್ರ  ರಾಮ್‌ದಾಸ್ (55) ಮೃತಪಟ್ಟ ದುರ್ದೈವಿಯಾಗಿ ದ್ದಾರೆ.  ಮೊಗ್ರಾಲ್ ಕೊಪ್ಪರ ಬಜಾರ್‌ನಲ್ಲಿ  ಹೊಸತಾಗಿ ನಿರ್ಮಿಸುವ ಮಸೀದಿಯ ಕೆಲಸದಲ್ಲಿ ಇವರು ಪಾಲ್ಗೊಂಡಿದ್ದರು. ನಿನ್ನೆ ಬೆಳಿಗ್ಗೆ 11 ಗಂಟೆ ವೇಳೆ ಮಸೀದಿಯ   ಕಾಂಕ್ರೀಟ್ ಮೆಟ್ಟಿಲಿಗೆ ಅಳವಡಿಸಿದ ಹಲಗೆ ತೆಗೆಯುತ್ತಿದ್ದ ವೇಳೆ ರಾಮ್‌ದಾಸ್ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು  ಪರಿಯಾರಂನ ಮೆಡಿಕಲ್ …

ಸುರಕ್ಷಿತ ಸಂಕ ನಿರ್ಮಾಣಕ್ಕೆ ಅಧಿಕಾರಿಗಳು ಕಣ್ತೆರೆಯಲು ಇನ್ನೆಷ್ಟು ಜೀವ ಹಾನಿಯಾಗಬೇಕು- ಬಾಳಗದ್ದೆ ಪರಿಸರ ನಿವಾಸಿಗಳ ಅಳಲು

ಕುಂಬ್ಡಾಜೆ: ಕೂಲಿ ಕಾರ್ಮಿಕ ನಾಪತ್ತೆಯಾದಾಗ ಸ್ಥಳೀಯರು ವ್ಯಕ್ತಪಡಿಸಿದ ಶಂಕೆ ನಿಜವಾಗಿದೆ. ಆ ದುರಂತ ಸಂಭವಿಸದಿರಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದರೂ, ಕಂಗಿನ ಕಾಲು ಸಂಕದಲ್ಲಿ ದಾಟುತ್ತಿದ್ದಾಗ ನೀರಿಗೆ ಬಿದ್ದು ಮೃತಪಟ್ಟ ದುರಂತ ಸಂಭವಿಸಿ ಹೋಯಿತು. ಕಾಯಿಮಲೆ- ಪೆರ್ವತ್ತೋಡಿಯಲ್ಲಿ ತೋಡಿಗೆ ಸುರಕ್ಷಿತ ಸಂಕ ನಿರ್ಮಿಸಬೇಕೆಂಬ ಸ್ಥಳೀಯರ ಹಲವು ಕಾಲದ ಬೇಡಿಕೆ ಇನ್ನೂ ಈಡೇರಿಲ್ಲ. ಇನ್ನೆಷ್ಟು ಜೀವ ಈ ಕಾಲು ಸಂಕದಿಂದ  ಬಿದ್ದು ಹಾನಿಯಾದರೆ ಇಲ್ಲಿ ಸುರಕ್ಷಿತ ಸಂಕ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗುವರೋ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ. ಕಳೆದ ೨೮ರಂದು ನಾಪತ್ತೆಯಾಗಿದ್ದ …

ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ತೋಡಿನಲ್ಲಿ ಪತ್ತೆ

ಬದಿಯಡ್ಕ: ಕೆಲಸಕ್ಕೆ ತೆರಳಿ ಬಳಿಕ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ತೋಡಿನಲ್ಲಿ ಪತ್ತೆಯಾಗಿದೆ. ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ಬಾಳೆಗದ್ದೆ ನಿವಾಸಿ ನಾರಾಯಣ ಮಣಿಯಾಣಿ (48)ಯವರ ಮೃತದೇಹ ನಿನ್ನೆ ಮಧ್ಯಾಹ್ನ ವೇಳೆ ತೋಡಿನಲ್ಲಿ ಕಾಡು ಪೊದೆಗಳೆಡೆ ಸಿಲುಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳಿಕ ಮೃತದೇಹದ ಮಹಜರು ನಡೆಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕೂಲಿ ಕಾರ್ಮಿಕನಾಗಿದ್ದ ನಾರಾಯಣ ಕಳೆದ ಸೋಮವಾರ ಬೆಳಿಗ್ಗೆ ಮನೆಯಿಂದ ತೆರಳಿದ್ದು, ಅನಂತರ ಅವರು ಮನೆಗೆ ಮರಳಿ ಬಂದಿರಲಿಲ್ಲ. ವಿವಿಧೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸಹೋದರ …

ಮೋರಿಸ್ ಕಾಯಿನ್ ಹೆಸರಲ್ಲಿ 1200 ಕೋಟಿ ರೂ.ಗಳ ವಂಚನೆ: ಎಡನಾಡು ನಿವಾಸಿ ದಸ್ತಗಿರಿ

ಕಾಸರಗೋಡು; 1200 ಕೋಟಿ ರೂ.ಗಳ ವಂಚನೆ ನಡೆಸಿದ ಪ್ರಕರಣದ ಆರೋಪಿಗಳಲ್ಲೋರ್ವನಾದ ಕುಂಬಳೆ ಬಳಿಯ ನಿವಾಸಿಯನ್ನು ಮಲಪ್ಪುರಂ ಕ್ರೈಮ್‌ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಎಡನಾಡು ನಿವಾಸಿ ಕೆ.ಎಂ. ಅಬ್ದುಲ್ ಕಲಾಂ (47) ಬಂಧಿತ ಆರೋಪಿ. ಈತ ಈ ವಂಚನೆ ಪ್ರಕರಣದ 13ನೇ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೋರಿಸ್ ಕಾಯಿನ್‌ಗಾಗಿ ಈತ ಸುಮಾರು 90 ಕೋಟಿ ರೂ. ತನಕ ಸಂಗ್ರಹಿಸಿ ಇದೇ ಪ್ರಕರಣದ ಒಂದನೇ ಆರೋಪಿ ನಿಶಾದ್ ಎಂಬಾತನ ಬ್ಯಾಂಕ್ ಖಾತೆಗೆ ಕಳುಹಿಸಿ ರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು …