ಪೂಚಕ್ಕಾಡ್ ನಿವಾಸಿ, ಅನ್ಯರಾಜ್ಯ ಕಾರ್ಮಿಕನ ಹತ್ಯೆ ಯತ್ನ: ಮಡಕ್ಕರ ಹಾರ್ಬರ್ ಸಮೀಪದ ಮನೆಯಲ್ಲಿ ತಲೆಮರೆಸಿಕೊಂಡಿದ್ದ ತಂಡ ಸೆರೆ

ಕಾಸರಗೋಡು: ಪೂರ್ವದ್ವೇಷದ ಹೆಸರಲ್ಲಿ ಯುವಕರು ಮಾರಕಾಯುಧಗಳನ್ನು ಉಪಯೋಗಿಸಿ ಆಕ್ರಮಿಸಿ ಹತ್ಯೆಗೈಯ್ಯಲು ಯತ್ನಿಸಿದರೆಂಬ ಪ್ರಕರಣದಲ್ಲಿ ನಾಲ್ಕು ಮಂದಿ ಸೆರೆಯಾಗಿದ್ದಾರೆ. ಕಾಞಂಗಾಡ್ ಪರಿಸರದಲ್ಲಿರುವ ಬಾಡಿಗೆ ಕ್ವಾರ್ಟರ್ಸ್‌ಗಳಲ್ಲಿ ವಾಸ ಮಾಡುತ್ತಿರುವ ರಂಶೀದ್ ಅಲಿಯಾಸ್ ಕಿಚ್ಚು, ಮೊಹಮ್ಮದ್ ಶಫೀಕ್, ಮೇರ್ಶಾನ್, ಆಶಿಕ್ ಅಲಿಯಾಸ್ ಮೊಂಜತ್ತಿ ಆಶಿಕ್ ಎಂಬಿವರನ್ನು ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ಹಾಗೂ ತಂಡ ಬಂಧಿಸಿದೆ. ಮಡಕ್ಕರ ಹಾರ್ಬರ್ ಸಮೀಪದ ಒಂದು ಮನೆಯಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿದ್ದಾರೆ ಎಂಬ ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ತಲುಪಿದ ಪೊಲೀಸ್ ತಂಡ ಈ ಮನೆಯನ್ನು …

ಬೀದಿನಾಯಿ ಕಚ್ಚಿ ಚಿಕಿತ್ಸೆಯಲ್ಲಿದ್ದ ಬಾಲಕಿ ಮೃತ್ಯು

ಕಲ್ಲಿಕೋಟೆ: ಬೀದಿ ನಾಯಿ ಕಚ್ಚಿ  ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಬಾಲಕಿ ಮೃತಪಟ್ಟಳು. ಮಲಪ್ಪುರಂ ಪೆರುವಣ್ಣೂರು ಕಾಕತ್ತಡ ನಿವಾಸಿ ಫಾರಿಸ್ ನಿಧನಹೊಂದಿದ ಬಾಲಕಿ. ಇಲ್ಲಿನ ಸಲ್ಮಾನುಲ್ ಫಾರಿಸ್‌ರ ಪುತ್ರಿಯಾಗಿದ್ದಾಳೆ.  ಮಾರ್ಚ್ 23ರಂದು ಮಿಠಾಯಿ ಖರೀದಿಸಲೆಂದು ತೆರಳಿದ್ದ ಬಾಲಕಿಗೆ ತಲೆಗೆ ಹಾಗೂ ಕಾಲಿಗೆ ನಾಯಿಕಚ್ಚಿ ಗಾಯಗೊಳಿಸಿತ್ತು. ತಲೆಗೆ  ಆಳದಲ್ಲಿ ಉಂಟಾದ ಸಾವಿಗೆ ಕಾರಣವೆಂದು ವೈದ್ಯರು ತಿಳಿಸಿದ್ದಾರೆ. ಕಲ್ಲಿಕೋಟೆ ಮೆಡಿಕಲ್ ಕಾಲೇಜಿನಲ್ಲಿ ಮೂರು ಡೋಸ್ ವ್ಯಾಕ್ಸಿನ್ ನೀಡಿದ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ರಸ್ತೆ ಬದಿ ತ್ಯಾಜ್ಯ ಎಸೆದ ವ್ಯಕ್ತಿಯನ್ನು ಪತ್ತೆಹಚ್ಚಿದ ಕ್ಲಬ್ ಕಾರ್ಯಕರ್ತರು: ಪಂಚಾಯತ್‌ನಿಂದ 5000 ರೂ. ದಂಡ, ತಾಕೀತು

ಕುಂಬಳೆ: ಶುಚಿತ್ವ ಕೇರಳ ನಿರ್ಮಾಣ ಗುರಿಯೊಂದಿಗೆ ಸರಕಾರ, ಸ್ಥಳೀಯಾಡಳಿತ ಸಂಸ್ಥೆಗಳು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರು ವಾಗಲೇ ನಾಡಿನ ವಿವಿಧೆಡೆ ವಿವಿಧ ರೀತಿಯ ತ್ಯಾಜ್ಯವನ್ನು ಎಸೆದು ಪರಿಸರ ಮಾಲಿನ್ಯ ಸೃಷ್ಟಿಸುತ್ತಿರುವುದಾಗಿ ಆರೋಪಕೇಳಿಬರುತ್ತಿದೆ. ಇದೇ ರೀತಿ  ಕುಂಬಳೆ-ಮುಳ್ಳೇ ರಿಯ ಕೆಎಸ್‌ಟಿಪಿ ರಸ್ತೆಯ ಭಾಸ್ಕರನಗರ ಹಾಗೂ ಶಾಂತಿಪಳ್ಳ ಮಧ್ಯೆ ದಿನಂಪ್ರತಿ ಪ್ಲಾಸ್ಟಿಕ್ ಸಹಿತ ತ್ಯಾಜ್ಯವನ್ನು ಎಸೆಯುತ್ತಿದ್ದವರನ್ನು ನಾಡಿನ ಯುವಕರು  ಪತ್ತೆಹಚ್ಚಿದ್ದಾರೆ. ತ್ಯಾಜ್ಯ ಎಸೆಯುವವ ರನ್ನು ಪತ್ತೆಹಚ್ಚಲು ಭಾಸ್ಕರನಗರ ಕ್ಲಬ್‌ನ ಪದಾಧಿಕಾರಿಗಳು ನಿದ್ದೆಗೆಟ್ಟು ಕಾದು ಕುಳಿತು ಗಮನಿಸುತ್ತಿದ್ದಂತೆ ದಿನಂಪ್ರತಿ ತ್ಯಾಜ್ಯಗಳ ರಾಶಿ ಹೆಚ್ಚುತ್ತಿರುವುದು …

ಕಲಾವಿದ ನಿಧನ

ಕೂಡ್ಲು: ಭಜನಾ ಕಲಾವಿದ, ಕೂಡ್ಲು ನಿವಾಸಿ  ಬಾಬು ರೈ (75) ನಿಧನ ಹೊಂದಿದರು.  ಇವರಿಗೆ ಹೃದಯಾಘಾತವುಂಟಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಪತ್ನಿ ದೇವಕಿ, ಮಕ್ಕಳಾದ ಸಂತೋಷ್, ನಿತೀಶ್, ನಿರೀಕ್ಷ, ಸೊಸೆಯಂದಿರಾದ ಶ್ರುತಿ, ದೀಕ್ಷಿತ, ಸಹೋದರ  ಬಾಲಕೃಷ್ಣ, ಸಹೋದರಿ ರಾಜೀವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸವಾಕ್ ಕಾಸರಗೋಡು ಬ್ಲೋಕ್ ಸದಸ್ಯರಾಗಿರುವ ಇವರ ನಿಧನಕ್ಕೆ ಸವಾಕ್ ಕಾಸರಗೋಡು ಜಿಲ್ಲಾ ಸಮಿತಿ ಸಂತಾಪ ಸೂಚಿಸಿದೆ.

ಕಾಶ್ಮೀರ ಹುತಾತ್ಮರಿಗೆ ನುಡಿನಮನ: ವಿರಾಟ್ ಹಿಂದೂ ಜಾಗೃತ ಸಮಾವೇಶಕ್ಕೆ ಸಿದ್ಧತೆ

ಉಪ್ಪಳ: ಇತ್ತೀಚೆಗೆ ಕಾಶ್ಮೀರದ ಪಹಲÁಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ಹಿಂದೂ ನರಮೇಧವನ್ನು ಖಂಡಿಸಲು ಮತ್ತು ಹುತಾತ್ಮರಿಗೆ ನುಡಿನಮನ ಸಲ್ಲಿಸುವ ವಿಶೇಷ ವಿರಾಟ್ ಹಿಂದೂ ಜಾಗೃತ ಸಮಾವೇಶದ ಸಿದ್ಧತಾ ಸಭೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯಿತು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾರ್ಗ ದರ್ಶನ ಗೈದರು. ಎಡನೀರು ಮಠ ಮತ್ತು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಸಂಯುಕ್ತ ಆಶ್ರಯದಲ್ಲಿ ಮತ್ತು ಜಿಲ್ಲೆಯ ಹಿಂದೂ ಸಂಘಟನೆಗಳ …

ಕಾಸರಗೋಡು ನಗರಸಭೆ ವಿತ್ತೀಯ ಸಮಿತಿಯ ತಾತ್ಕಾಲಿಕ ಅಧ್ಯಕ್ಷೆಯಾಗಿ ಸಿಪಿಎಂನ ಲಲಿತ ಆಯ್ಕೆ

ಕಾಸರಗೋಡು: ಕಾಸರಗೋಡು ನಗರಸಭೆಯ ವಿತ್ತೀಯ ಸ್ಥಾಯೀ ಸಮಿತಿಯ ತಾತ್ಕಾಲಿಕ ಅಧ್ಯಕ್ಷರನ್ನಾಗಿ ಸಿಪಿಎಂ ಕೌನ್ಸಿಲರ್ ಎಂ. ಲಲಿತರನ್ನು ಆರಿಸಲಾಗಿದೆ. ಈ ಸಮಿತಿಯ ಅಧ್ಯಕ್ಷೆಯಾಗಿ ರುವ ನಗರಸಭೆಯ ಉಪಾಧ್ಯಕ್ಷೆ ಶಂಶೀದಾ ಫಿರೋಜ್ ಈಗ ರಜೆಯಲ್ಲಿ ರುವ ಕಾರಣದಿಂದ ತೆರವುಗೊಂಡ ಆ ಸ್ಥಾನದ ಆಯ್ಕೆಗಾಗಿ ಮತದಾನ ನಡೆಸಬೇಕಾಗಿ ಬಂತು.  ನಗರಸಭೆಯ ಉಪಾಧ್ಯಕ್ಷೆ ರಜೆಯಲ್ಲಿರುವುದರಿಂದ ಹಣಕಾಸು ಸಮಿತಿಯಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆ ಎದುರಾಗಿದ್ದು ಅದು ಕೆಲವೊಂದು ನಾಟಕೀಯ ಬೆಳವಣಿಗೆಗೂ ದಾರಿಮಾಡಿಕೊಟ್ಟಿತು. ಇದರಿಂದಾಗಿ ನಿನ್ನೆ ನಡೆದ ನಗರಸಭಾ ಹಣಕಾಸು ಸ್ಥಾಯಿ ಸಮಿತಿ ಸಭಯಲ್ಲಿ ಅದರ …

ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ ಸೇವಾ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

ನಾರಂಪಾಡಿ: ನಾರಂ ಪಾಡಿ ಶ್ರೀ ಉಮಾ ಮಹೇಶ್ವರ ದೇವಸ್ಥಾನದ ಮುಂದಿನ ಜೀರ್ಣೋದ್ಧಾರ ಕಾರ್ಯಗಳ ಬಗ್ಗೆ ತೀರ್ಮಾ ನಿಸಲು ಸುಬ್ರಹ್ಮಣ್ಯ ಭಟ್ ತಲೇಕ ಅವರ ಅಧ್ಯಕ್ಷತೆ ಯಲ್ಲಿ ಮಹಾಸಭೆ ಜರಗಿತು. ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ರೂಪೀಕರಿಸಲಾಯಿತು. ಗೌರವಾಧ್ಯಕ್ಷರಾಗಿ ದಾನಮಾರ್ತಾಂಡ ವರ್ಮ ರಾಜ ಯಾನೆ ರಾಮಂತರಸುಗಳು ಮಾಯಿಪ್ಪಾಡಿ (ಆನುವಂಶಿಕ ಮೊಕ್ತೇಸರರು), ಅಧ್ಯಕ್ಷರಾಗಿ ಬಾಲಕೃಷ್ಣ ಮಾಸ್ತರ್ ನಾರಂಪಾಡಿ, ಉಪಾಧ್ಯಕ್ಷರಾಗಿ ಸೀತಾರಾಮ ರಾವ್ ಪಿಲಿಕೂಡ್ಲು, ಪದ್ಮನಾಭ ಮಣಿಯಾಣಿ ನಾರಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಹರಿನಾರಾಯಣ ಮಾಸ್ತರ್ ಶಿರಂತಡ್ಕ, ಕಾರ್ಯದರ್ಶಿಯಾಗಿ ಹರೀಶ್ ನಾರಂಪಾಡಿ, ದೇವರಾಜ್ …

ಪ್ಲಸ್ ಟು ವಿದ್ಯಾರ್ಥಿನಿ ಆತ್ಮಹತ್ಯೆಗೆತ್ನ

ಕಾಸರಗೋಡು: ನೇಣು ಬಿಗಿದು ಆತ್ಮಹತ್ಯೆಗೈಯ್ಯಲೆತ್ನಿಸಿದ ಪ್ಲಸ್‌ಟು ವಿದ್ಯಾರ್ಥಿನಿಯನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಪ್ಲಸ್‌ಟು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವುದು. ಕೂಡಲೇ ಈಕೆಯನ್ನು ದೇಳಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನೆಲ್ಯಡ್ಕ ಶ್ರೀ ಮೂಕಾಂಬಿಕಾ ಭಜನಾ ಮಂದಿರ: ಪ್ರತಿಷ್ಠೆ ಮುಂದೂಡಿಕೆ

ನಾರಂಪಾಡಿ: ನೆಲ್ಯಡ್ಕ ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ ದೇವಿಯ ಪ್ರತಿಷ್ಠೆ ನಾಳೆ ನಡೆಸಲು ತೀರ್ಮಾನಿಸಲಾಗಿದ್ದು, ಆದರೆ ಕಾರ ಣಾಂತರಗಳಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. 2013 ರಲ್ಲಿ ಪ್ರಶ್ನೆ ಚಿಂತನೆ ನಡೆಸಿ ಮಂದಿರವನ್ನು ಜೀರ್ಣೋದ್ಧಾರಗೊಳಿಸಿ ದೇವಿಯ ಛಾಯಾರೂಪವನ್ನು ಬದಲಿಸಿ ಪ್ರತಿಷ್ಠಾ ಪಿಸಬೇಕೆಂದು ಕಂಡು ಬಂದ ಹಿನ್ನೆಲೆ ಯಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೊ ಳ್ಳಲಾಗಿತ್ತು. ಜೀರ್ಣೋದ್ಧಾರ ಸಮಿತಿ ರೂಪೀಕರಿಸಿ ಮಂದಿರದ ಕಾಮಗಾರಿ ಯನ್ನು ನಡೆಸಲಾಗುತ್ತಿದ್ದು, ಆದರೆ ಕಾಮ ಗಾರಿ ಸಂಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಷ್ಠೆ ಕಾರ್ಯಕ್ರಮವನ್ನು ಮುಂದೂಡ …

ಕನಿಯಾಲ ಶ್ರೀ ಕೊರಗತನಿಯ, ಪರಿವಾರ ದೈವ ಕ್ಷೇತ್ರ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು

ಪೈವಳಿಕೆ: ಕನಿಯಾಲ ಶ್ರೀ ಕೊರಗತನಿಯ ಮತ್ತು ಪರಿವಾರ ದೈವಗಳ ಸೇವಾ ಸಮಿತಿಯ ನೂತನ  ಕಾರ್ಯಕಾರಿ ಸಮಿತಿ ಸಭೆ ಇತ್ತೀಚೆಗೆ ಜರಗಿದ್ದು, ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಗೌರವಾಧ್ಯಕ್ಷರಾಗಿ ಗೋವಿಂದ ಮಾಸ್ತರ್, ಅಧ್ಯಕ್ಷರಾಗಿ ಮನೋಹರ ಸಿ.ಎಚ್, ಉಪಾಧ್ಯಕ್ಷರಾಗಿ ಗಣೇಶ್ ಆಚಾರ್ಯ, ಸಂಜೀವ ಕೋಡಿ, ಕಾರ್ಯದರ್ಶಿಯಾಗಿ ನಾಗೇಶ್ ಕನಿಯಾಲ, ಜೊತೆ ಕಾರ್ಯದರ್ಶಿ ಗಳಾಗಿ ಉದಯ ಸಿ.ಎಚ್, ಕಿಶೋರ್ ಸಿ.ಎಚ್, ರಾಮಕೃಷ್ಣ ಕೋಡಿ, ಕೋಶಾಧಿಕಾರಿಯಾಗಿ ಬಿ. ರಾಮ ಬಂಗೇರ, ಸಹಾಯಕ ಕೋಶಾಧಿಕಾರಿಯಾಗಿ ಪ್ರಕಾಶ್ ಸಿ.ಎಚ್, ಹಾಗೂ ಗೌರವ ಸಲಹೆಗಾರರಾಗಿ ವಿಷ್ಣು ಭಟ್ ಚಾಕಟೆಗುಳಿ, …