ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣ ವಿರುದ್ಧ ರಂಗಕ್ಕಿಳಿಯಲು ಸರ್ವಪಕ್ಷ ಸಭೆ ನಿರ್ಧಾರ; ಚಳವಳಿ ಘೋಷಣೆ ಇಂದು

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ತಲಪ್ಪಾಡಿ-ಚೆಂಗಳ ರೀಚ್‌ನಲ್ಲಿ ತಾತ್ಕಾಲಿಕ ಟೋಲ್ ಸಂಗ್ರಹ ಬೂತ್ ಸ್ಥಾಪಿಸಲಿರುವ ಯತ್ನದ ವಿರುದ್ಧ ಶಾಸಕ ಎ.ಕೆ.ಎಂ. ಅಶ್ರಫ್‌ರ ಉಪಸ್ಥಿತಿಯಲ್ಲಿ ಸರ್ವಪಕ್ಷ ಸಭೆ ನಡೆಯಿತು. ಕುಂಬಳೆ ಸೇತುವೆ  ಆರಿಕ್ಕಾಡಿ ಕಡವತ್ ಗೇಟ್ ಸಮೀಪ ನಿರ್ಮಿ ಸುವ ಟೋಲ್ ಬೂತ್  ಹೊರತು ಪಡಿಸಬೇಕೆಂದು ಸಭೆ ಒತ್ತಾಯಿಸಿದೆ. ಟೋಲ್ ಬೂತ್ ನಿರ್ಮಾಣಕ್ಕೆ ತಡೆಯೊಡ್ಡಬೇಕೆಂಬ ಬೇಡಿಕೆ ಮುಂದಿರಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾ ಯಿತು.  ಇದೇ ವೇಳೆ ಟೋಲ್ ಬೂತ್ ವಿರುದ್ಧ ಚಳವಳಿ ಘೋಷಣೆ ಇಂದು ನಡೆಯಲಿದೆ. ಸಭೆಯನ್ನು ಪಂಚಾಯತ್ …

ಕುಂಬಳೆಯಲ್ಲಿ ಟೋಲ್ ಬೂತ್: ಬ್ಲೋಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ ನೇತೃತ್ವದಲ್ಲಿ ಸಂಸದರೊಂದಿಗೆ ಚರ್ಚೆ

ಕುಂಬಳೆ: ತಲಪ್ಪಾಡಿ-ಚೆಂಗಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಂಗವಾಗಿ ಕುಂಬಳೆಯಲ್ಲಿ ಟೋಲ್ ಬೂತ್ ಸ್ಥಾಪಿಸಲಿರುವ ಯತ್ನದ ವಿರುದ್ಧ ಇಂದು ಕುಂಬಳೆಯಲ್ಲಿ ಸರ್ವಪಕ್ಷಗಳ ನೇತೃತ್ವದಲ್ಲಿ ಚಳವಳಿ ಘೋಷಣೆ ನಡೆಯಲಿರುವಂತೆಯೇ ಕ್ರಿಯಾ ಸಮಿತಿ ಅಧ್ಯಕ್ಷ, ಶಾಸಕ ಎಕೆಎಂ ಅಶ್ರಫ್‌ರ ನಿರ್ದೇಶ ಪ್ರಕಾರ ಪ್ರಸ್ತುತದ ಸ್ಥಿತಿಗತಿಗಳ ಕುರಿತು ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ ಅವರ ನೇತೃತ್ವದಲ್ಲಿ ನೇತಾರರು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಅಥೋರಿಟಿ ಕೇರಳ ರೀಜಿನಲ್ ಆಫೀಸರ್ ಬಿ.ಎಲ್. ಮೀಣ ಅವರನ್ನು ಸಂಸದ …

ಪಹಲ್ಗಾಮ್ ಭಯೋತ್ಪಾದಕ ದಾಳಿ: ಮುಳ್ಳೇರಿಯದಲ್ಲಿ ಬಿಜೆಪಿ ಮೆರವಣಿಗೆ

ಮುಳ್ಳೇರಿಯ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹಿಂದುಗಳ ಹತ್ಯೆಯನ್ನು ಖಂಡಿಸಿ ಬಿಜೆಪಿ ಆಶ್ರಯದಲ್ಲಿ ಮುಳ್ಳೇರಿ ಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ರವೀಶ ತಂತ್ರಿ ಕುಂಟಾರು, ಗೋಪಾಲಕೃಷ್ಣ ಭಟ್, ಶ್ರೀಧರ ಬೆಳ್ಳೂರು, ಸುಧಾಮ ಗೋಸಾಡ, ರವೀಂದ್ರ ರೈ ಗೋಸಾಡ, ಜಯಾನಂದ ಕುಳ, ವಸಂತ ಕಾರ್ಲೆ, ಎಂ. ಜನನಿ, ರತ್ನಾಕರ ಎಂ, ಪ್ರಶಾಂತ್ ನೇತೃತ್ವ ನೀಡಿದರು.

ಕೇರಳ ವಿಕಸಿತ್ ಸಮಾವೇಶ ನಾಳೆ: ರಾಜೀವ್ ಚಂದ್ರಶೇಖರ್ ಉದ್ಘಾಟನೆ

ಕಾಸರಗೋಡು: ವಿಕಸಿತ್ ಕೇರಳ ಸಮಾವೇಷ ಜಿಲ್ಲೆಯಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿಯ ಆರ್.ಕೆ. ಮಾಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಈ ಬಗ್ಗೆ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಬಿಜೆಪಿ ಜಿಲ್ಲಾ ಪದಾಧಿಕಾರಿ ಗಳು ತಿಳಿಸಿದ್ದಾರೆ. ಅಂದು ಬೆಳಿಗ್ಗೆ ವಿಕಸಿತ್ ಕೇರಳ ಸಮಾವೇಶವನ್ನು ಬಿಜೆಪಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರ ಶೇಖರ್ ಉದ್ಘಾಟಿಸುವರು. ಬಿಜೆಪಿ ರಾಜ್ಯ ಹಾಗೂ ಜಿಲ್ಲಾ ನೇತಾರರೂ ಇದರಲ್ಲಿ ಭಾಗವಹಿಸಲಿದ್ದಾರೆ. ಪಂಚಾ ಯತ್ ಪ್ರಧಾನ ಕಾರ್ಯದರ್ಶಿಗಳು ಮತ್ತು …

ನಿಧನ

ಮಂಗಲ್ಪಾಡಿ: ಪ್ರತಾಪನಗರ ನಿವಾಸಿ ದಿ| ರವೀಂದ್ರನ್ ರವರ ಪತ್ನಿ ಸುಮಿತ್ರ (74) ನಿಧನರಾದರು. ಮೃತರು ಮಕ್ಕಳಾದ ರಾಜೇಶ್ (ಎ.ಕೆ.ಪಿ.ಎ ಉಪ್ಪಳ ಯೂನಿಟ್ ಸದಸ್ಯ), ಸ್ಮಿತಾ, ಬ್ರಿಜೇಶ್, ಸೊಸೆಯಂದಿರಾದ ಸೀಮಾ, ಶೀತಲ್, ಸಹೋದರ ಸಹೋದರಿಯರಾದ ಕೆ.ವಿ ಕೃಷ್ಣನ್, ಶಶಿ ಕುಮಾರ್, ಸಾವಿತ್ರಿ, ಕಾಂಚನ, ಪುಷ್ಪ, ಸುನೀತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರ ಅಶೋಕನ್ ಈ ಹಿಂದೆ ನಿಧನರಾಗಿದ್ದಾರೆ. ಮನೆಗೆ ಆಲ್ ಕೇರಳ ಫೊಟೋ ಗ್ರಾಫರ್ಸ್ ಅಸೋಶಿಯೇಶನ್ ಉಪ್ಪಳ ಯೂನಿಟ್‌ನ ಪದಾಧಿಕಾರಿಗಳು, ಸದಸ್ಯರು ಸಹಿತ ಹಲವಾರು …

ನಿಧನ

ಮೀಂಜ: ಕುಳೂರು ಚಿನಾಲ ನಿವಾ ಸಿ ರಾಮಪ್ಪ ಪೂಜಾರಿರವರ ಪತ್ನಿ ದೇವಕಿ (63) ನಿಧನರಾದರು. ದಿನೇಶ್ ಬೀಡಿ ಕಾರ್ಮಿಕೆಯಾಗಿದ್ದರು. ಮೃತರು ಪತಿ, ಮಕ್ಕಳಾದ ಹರೀಶ್, ಸತೀಶ, ಚಿತ್ರ, ಸವಿತ, ಉದಯ, ನವೀನ, ಚಂದ್ರಹಾಸ, ಸೊಸೆಯಂದಿರಾದ ಪುಷ್ಪ, ಜ್ಯೋತಿ, ಪ್ರಿಯ, ಅಳಿಯಂದಿರಾದ ರಾಕೇಶ್ ಮುಡಿಮಾರ್, ಹರೀಶ್ ಕುಂಬಳೆ, ಸಹೋದರರಾದ ಗೋಪಾಲ, ವಿಶ್ವ ನಾಥ, ಚಂದ್ರ, ನಾರಾಯಣ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ಮನೆಗೆ ಸಿಪಿಎಂ ನೇತಾರರಾದ ವಿ.ವಿ ರಮೇಶ್, ಕೆ.ಆರ್. ಜಯಾನಂದ ಮೊದಲಾದವರು ಭೇಟಿ ನೀಡಿ …

ಪಹಲ್ಗಾಮ್ ಭಯೋತ್ಪಾದಕರ ದಾಳಿ: ಹೊಸಂಗಡಿಯಲ್ಲಿ ಸಂಘ ಪರಿವಾರದ ನೇತೃತ್ವದಲ್ಲಿ ಪ್ರತಿಭಟನೆ

ಮಂಜೇಶ್ವರ:  ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಹಿಂದುಗಳನ್ನು ಹತ್ಯೆಮಾಡಿದ ಘಟನೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್, ಮಾತೃಶಕ್ತಿ , ಭಜರಂಗದಳ, ದುರ್ಗಾವಾಹಿನಿ ನೇತೃತ್ವದಲ್ಲಿ ನಿನ್ನೆ ಹೊಸಂಗಡಿ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು. ವಿ.ಹಿಂ.ಪದ ಕಾರ್ಯಾಲಯ ಪ್ರೇರಣಾದಿಂದ ಹೊರಟ ಮೆರ ವಣಿಗೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿ ದರು. ಸಮಾರೋಪ ಸಮಾರಂಭದಲ್ಲಿ ವಿಶ್ವಹಿಂದೂ ಪರಿಷತ್‌ನ ಧರ್ಮ ಪ್ರಸಾರ ಜಿಲ್ಲಾ ಪ್ರಮುಖ ವಾಮನ ಆಚಾರ್ಯ ಮಾತನಾಡಿ, ಅಗಲಿದ ಸಹೋದರರ ಆತ್ಮಕ್ಕೆ ತೃಪ್ತಿ ಯಾಗಬೇಕಾದರೆ ಕೊಲೆ ಕೃತ್ಯ ನಡೆಸಿದ ಭಯೋತ್ಪಾದಕರ  ಹುಟ್ಟಡ ಗಿಸಬೇಕೆಂದು ಅವರು ಅಭಿ ಪ್ರಾಯಪಟ್ಟರು.  …

ಬಿಜೆಪಿ ಮಂಡಲ ಪಂಚಾಯತ್, ಏರಿಯಾ ಸಮಿತಿ  ಪದಾಧಿಕಾರಿಗಳು

ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಪಂಚಾಯತ್, ಏರಿಯಾ ಸಮಿತಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನು ಮಂಡಲ ಅಧ್ಯಕ್ಷ  ಆದರ್ಶ್ ಬಿ.ಎಂ ಘೋಷಿಸಿದರು. ಪೈವಳಿಕೆ ಉತ್ತರ ವಲಯ ಅಧ್ಯಕ್ಷರಾಗಿ ಸತ್ಯಶಂಕರ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ರೈ ಪಟ್ಲ, ದಕ್ಷಿಣ ವಲಯ ಅಧ್ಯಕ್ಷರಾಗಿ ಸುಬ್ರಹ್ಮಣ್ಯ  ಭಟ್ ಆಟಿಕುಕ್ಕೆ, ಪ್ರಧಾನ ಕಾರ್ಯದರ್ಶಿಯಾಗಿ ಜಯಶಂಕರ್ ಮುನ್ನೂರು, ವರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷರಾಗಿ ಭಾಸ್ಕರ್ ಪೊಯ್ಯೆ, ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ಬಳ್ಳೂರು, ಮಂಜೇಶ್ವರ ವಿಭಾಗಾಧ್ಯಕ್ಷರಾಗಿ ಸತ್ಯದಾಸ್ ಎಂ.ವಿ, ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್ ಹೆಗ್ಡೆ ಆಯ್ಕೆಯಾದರು.

ಲಾಟರಿ ಟಿಕೆಟ್ ಬೆಲೆ ಹೆಚ್ಚಳ ಹಿಂತೆಗೆಯಬೇಕು : ಜಿಲ್ಲಾ ಲಾಟರಿ ಏಜೆಂಟ್ ಆಂಡ್ ಸೆಲ್ಲರ್ಸ್ ಸಂಘ್ ಆಗ್ರಹ

ಕಾಸರಗೋಡು:  ಲಾಟರಿ ಟಿಕೆಟ್ ಬೆಲೆ ಹೆಚ್ಚಳವನ್ನು ಹಿಂತೆಗೆಯಬೇಕೆಂದು  ಸಣ್ಣ ಮಟ್ಟಿನ ಏಜೆಂಟರಿಗಿರುವ ಅಗತ್ಯದ ಟಿಕೆಟ್ ವಿತರಣೆ ಮಾಡಬೇಕು, ಬೋ ನಸ್ 10 ಸಾವಿರ ರೂ ಆಗಿ ಹೆಚ್ಚಿಸ ಬೇಕು, ಟಿಕೆಟ್ ವಿತರಣೆಯಲ್ಲಿರುವ  ಲೋಪದೋಷಗಳನ್ನು ಪರಿಹರಿಸಬೇಕು, ಕಾರ್ಮಿಕರ ಕಮಿಶನ್ ಹೆಚ್ಚಿಸಬೇಕು ಎಂದು ಜಿಲ್ಲಾ  ಲಾಟರಿ ಏಜೆಂಟ್ ಆಂಡ್ ಸೆಲ್ಲರ್ಸ್ ಸಂಘ್ (ಬಿಎಂಎಸ್)ನ ವಾರ್ಷಿಕ ಸಮಾವೇಶದಲ್ಲಿ ರಾಜ್ಯ ಸರಕಾರದೊಂದಿಗೆ ಆಗ್ರಹಿಸಲಾಯಿತು.  ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ಕೆ. ಉಪೇಂದ್ರನ್ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ …

ವರ್ಕಾಡಿಯಲ್ಲಿ ಮೂರು ಬೈತುರಹ್ಮಗಳಿಗೆ ಶಿಲಾನ್ಯಾಸ

ವರ್ಕಾಡಿ: ದುಬಾ ಕೆಎಂಸಿಸಿ ವರ್ಕಾಡಿ ಪಂಚಾಯತ್ ಸಮಿತಿ ಹಾಗೂ ಮಂಜೇಶ್ವರ ಮಂಡಲ ಸಮಿತಿಗಳ ಸಹಕಾರದೊಂದಿಗೆ ವರ್ಕಾಡಿ ಪಂಚಾಯತ್ ಮುಸ್ಲಿಂ ಲೀಗ್ ಮುಖಾಂತರ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಿಸುವ ಮೂರು ಬೈತುರಹ್ಮ(ಮನೆ)ಗಳ ಶಿಲಾನ್ಯಾಸ ನಡೆಸಲಾಯಿತು. ಪಾವೂರಿನಲ್ಲಿ ನಿರ್ಮಿಸುವ ಬೈತುರಹ್ಮದ ಶಿಲಾನ್ಯಾಸ ಕಾರ್ಯಕ್ರಮ ಎನ್‌ಪಿಎಂ ಹಾಮಿದ್ ಕೋಯ ತಂಙಳ್ ಕುನ್ನುಂಗೈ, ಧರ್ಮನಗರದಲ್ಲಿ ಗಾಂಧಿನಗರ ಸಯ್ಯಿದ್ ಶಂಸುದ್ದೀನ್ ತಂಙಳ್, ಆನೆಕಲ್ಲಿನಲ್ಲಿ ಸಯ್ಯಿದ್ ಇಬ್ರಾಹಿಂ ಬಾತಿಷ ತಂಙಳ್ ಆನೆಕಲ್ಲು ನೇತೃತ್ವ ನೀಡಿದರು. ಶಾಸಕ ಎಕೆಎಂ ಅಶ್ರಫ್ ಮುಖ್ಯ ಅತಿಥಿಯಾಗಿದ್ದರು.  ಪಾವೂರು ಜುಮಾ ಮಸೀದಿ ಖತೀಬ್ …