ಕೃಷಿಕ ನಿಧನ

ಬದಿಯಡ್ಕ: ವಿದ್ಯಾಗಿರಿ ಕಡಾರು ನಿವಾಸಿಯೂ ವಿದ್ಯಾಗಿರಿ ಬದರ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಕಡಾರ್ ಪಟ್ಲ (75) ಎಂಬವರು ನಿಧನ ಹೊಂದಿದರು. ಇವರು ಕೃಷಿಕನೂ ಆಗಿದ್ದರು. ಮೃತರು ಪತ್ನಿ ನಬೀಸ, ಮಕ್ಕಳಾದ ರಸಾಕ್, ಬೀಫಾತಿಮ, ಆಯಿಶ, ಇಕ್ಬಾಲ್, ರುಖಿಯ, ಅಬ್ದುರಹ್ಮಾನ್, ಹಮೀದ್, ಶಮ್ನ, ಸಮೀನ, ಸೌದ, ಹಾರಿಸ್, ಮುಂತಾಸ್,ಅಳಿಯ- ಸೊಸೆಯಂದಿರಾದ ಫಾತಿಮ, ಆಮಿನ, ಶಬಾನ, ಶಂಸೀನ, ಫಸೀಲ, ಅಬ್ದುಲ್ಲ, ಮುಹಮ್ಮದ್ ಕುಂಞಿ, ಅಶ್ರಫ್, ಶಮೀರ್, ಶಾಫಿ, ಕಬೀರ್, ಸಹೋದರ- ಸಹೋದರಿಯರಾದ ಕುಂಞಾಲಿ, ಅಬ್ದುರಹ್ಮಾನ್, ಅಬ್ದುಲ್ಲ, ಇಬ್ರಾಹಿಂ, …

ಎಕ್ಕಾರು ದೇವಸ್ಯ ಕುಂದರ್ ತರವಾಡು ಮನೆ ಪ್ರತಿಷ್ಠಾ ದಿನಾಚರಣೆ

ಪುತ್ತಿಗೆ: ಬೈರಡ್ಕ ಶ್ರೀ ಎಕ್ಕಾರು ದೇವಸ್ಯ ಕುಂದರ್ ತರವಾಡು ಮನೆ ಪ್ರತಿಷ್ಠಾ ದಿನಾಚರಣೆ ಹಾಗೂ ಶ್ರೀ ಧೂಮಾವತಿ, ಪರಿವಾರ ದೈವಗಳ ನೇಮೋತ್ಸವ ನಾಳೆ, 30ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಾಳೆ ಬೆಳಿಗ್ಗೆ ತಂತ್ರಿವರ್ಯರ ಆಗಮನ, ಗಣಪತಿ ಹವನ, 9.30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, 10 ಗಂಟೆಗೆ ದೈವದ ನೂತನ ಅಲಂಕಾರ ಆಭರಣ ಸಮರ್ಪಣೆ, ತಂಬಿಲ, ಹರಿಸೇವೆ, ಮಧ್ಯಾಹ್ನ ಅನ್ನ ಸಂತರ್ಪಣೆ, 2.30ಕ್ಕೆ ಕುಟುಂಬ ಸಭೆ, ರಾತ್ರಿ ೮ಕ್ಕೆ ಕಲ್ಲಾಲ್ತ ಗುಳಿಗನ ನೇಮ, ಅನ್ನ ಸಂತರ್ಪಣೆ ಬಳಿಕ ಕುಂಟಾಲ್ತಾಯ …

ಮನೆಯಲ್ಲಿ ಬಚ್ಚಿಟ್ಟ 11.190 ಕಿಲೋ ಗಾಂಜಾ ವಶ; ಇಬ್ಬರಿಗಾಗಿ ಶೋಧ; ಎಂ.ಡಿ.ಎಂ.ಎ ಸಹಿತ ಓರ್ವ ಸೆರೆ

ಕಾಸರಗೋಡು: ಡಿಐಜಿಯವರ ನಿರ್ದೇಶ ಮೇರೆಗೆ ಪೊಲೀಸರು ನಿನ್ನೆ ನಡೆಸಿದ ಸ್ಪೆಷಲ್ ಡ್ರೈವ್‌ನಲ್ಲಿ 11.190 ಕಿಲೋ ಗಾಂಜಾ ವಶಪಡಿಸಲಾಗಿದೆ. ಉದುಮ ಪಂಚಾಯತ್‌ನ ಬಾರ ಮುಕ್ಕುನ್ನೋತ್ ಎಂಬಲ್ಲಿನ ಮನೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಗಾಂಜಾ ಪತ್ತೆಹಚ್ಚಲಾಗಿದೆ. ಘಟನೆಗೆ ಸಂಬಂಧಿಸಿ  ಮಂಗಳೂರು, ಉದುಮ ಹಾಗೂ ಮೇಲ್ಪರಂಬದಲ್ಲಿ  ಹೋಟೆಲ್ ನಡೆಸುವ ಉಸ್ಮಾನ್ ಎಂಬವರ ಮಕ್ಕಳಾದ ಮುಕ್ಕುನ್ನೋತ್ ಹೌಸ್‌ನ ಸಮೀರ್, ಮುನೀರ್ ಎಂಬಿವರ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಪೊಲೀಸರ ಕೈಗೆ  ಸಿಗದೆ ತಪ್ಪಿಸಿಕೊಂಡ ಇವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಗುಪ್ತ …

ನಿದ್ರಿಸುತ್ತಿದ್ದ ತಾಯಿಗೆ ಇರಿದ ಪ್ರಕರಣ: ಪುತ್ರನ ಬಂಧನ

ಉಪ್ಪಳ: ನಿದ್ರಿಸುತ್ತಿದ್ದ ತಾಯಿಗೆ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ ಆರೋಪಿಯಾದ ಪುತ್ರನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಮಣಿಮುಂಡ ಶೇಕ್ ಆದಂ ಕೋಟೇಜ್‌ನ ಮೊಹ್‌ಸಿನ್ ಅಶ್ರಫ್ ಖಾನ್ (32) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತ ತಾಯಿ ಶಮೀಮಾ ಬಾನು ಅವರಿಗೆ ನಿನ್ನೆ ಮುಂಜಾನೆ ಇರಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಇರಿತದಿಂದ ಗಂಭೀರ ಗಾಯಗೊಂಡಿರುವ ಶಮೀಮಾ ಬಾನು ಅವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಉದ್ಯೋಗ ಭರವಸೆಯೊಡ್ಡಿ ಹಣ ಪಡೆದು ವಂಚನೆ ಆರೋಪಿಗಾಗಿ ಶೋಧ

ಕುಂಬಳೆ: ಮಿಲಿಟರಿಯಲ್ಲಿ ಉದ್ಯೋಗ ದೊರಕಿಸುವುದಾಗಿ ಭರವಸೆಯೊಡ್ಡಿ ಯುವಕನಿಂದ ಹಣ ಪಡೆದು ವಂಚಿಸಲಾಯಿತೆಂಬ ಆರೋಪದಂತೆ ಕೇಸು ದಾಖಲಿಸಿಕೊಂಡ ಕುಂಬಳೆ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ನೀರ್ಚಾಲು ನಿವಾಸಿಯಾದ ರೋಶನ್ ಎಂಬವರು ನೀಡಿದ ದೂರಿನಂತೆ ಸುಧೀಶ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು, ಈತನನ್ನು ಪತ್ತೆಹಚ್ಚಲು ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಸುಧೀಶ್ ಇಚ್ಲಂಗೋಡು ನಿವಾಸಿ ಅಲ್ಲವೆಂದೂ ಪೊಲೀಸರು ತಿಳಿಸಿದ್ದಾರೆ. ಮಿಲಿಟರಿಯಲ್ಲಿ ಉದ್ಯೋಗ ದೊರಕಿಸುವುದಾ ಗಿ ಭರವಸೆಯೊಡ್ಡಿ ರೋಶನ್‌ರ ಕೈಯಿಂದ ಸುಧೀಶ್ 1,30,000 ರೂಪಾಯಿ ಪಡೆದುಕೊಂಡಿದ್ದನೆನ್ನಲಾ ಗಿದೆ. 2023 …

ಪತ್ತನಂತಿಟ್ಟದಿಂದ ನಾಪತ್ತೆಯಾದ 14ರ ಬಾಲಕಿ ಕಾಸರಗೋಡಿನಲ್ಲಿ ಪತ್ತೆ

ಕಾಸರಗೋಡು: ಪತ್ತನಂತಿಟ್ಟದ ಅಡೂರ್‌ನಿಂದ ನಿನ್ನೆ ನಾಪತ್ತೆಯಾದ ೧೪ರ ಹರೆಯದ ಬಾಲಕಿಯನ್ನು ಕಾಸರಗೋಡಿನಿಂದ ಪತ್ತೆಹಚ್ಚಲಾಗಿದೆ. ಮಲಬಾರ್ ಎಕ್ಸ್‌ಪ್ರೆಸ್‌ನಲ್ಲಿ ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ಬಾಲಕಿ ತಲುಪಿದ್ದಳು. ಎಸ್‌ಐ ಎಂ.ವಿ. ಪ್ರಕಾಶ್‌ರ ನೇತೃತ್ವದಲ್ಲಿ ಎಎಸ್‌ಐ ಮಹೇಶ್, ಸಿಪಿಒಗಳಾದ ವಿನೋದ್, ಬಿಜಿತ್, ಸುಶಾಂತ್ ಎಂಬಿವರ ಸಮಯೋಚಿತ ಮಧ್ಯಪ್ರವೇಶದಿಂದ ಬಾಲಕಿಯನ್ನು ಪತ್ತೆಹಚ್ಚಲಾಗಿದೆ. ಪೆರಿಯದ ಓರ್ವ ಗೆಳೆಯನನ್ನು ಕಾಣಲೆಂದು ಈಕೆ ಕಾಸರಗೋಡಿಗೆ ತಲುಪಿರುವುದಾಗಿ ಮಾಹಿತಿ ಲಭಿಸಿದೆ. ಹೇಳಿಕೆ ದಾಖಲಿಸಿದ ಬಳಿಕ ಬಾಲಕಿಯನ್ನು ಶಿಶು ಕ್ಷೇಮ ಸಮಿತಿಗೆ ಹಸ್ತಾಂತರಿಸಲಾಗಿದೆ. ಅಲ್ಲದೆ ಅಡೂರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪತ್ತನಂತಿಟ್ಟ …

ಮಸೀದಿ ಸಮಿತಿಗೆ 1 ಕೋಟಿ ರೂ. ದೇಣಿಗೆ ನೀಡಿದ ವಿರೋಧ: ವೃದ್ಧನಿಗೆ ಆಕ್ರಮಣ; 6 ಮಂದಿ ವಿರುದ್ಧ ಕೇಸು

ಬೇಕಲ: ಈ ಹಿಂದಿನ ಮಸೀದಿ ಸಮಿತಿಗೆ 1 ಕೋಟಿ ರೂ. ದೇಣಿಗೆ ನೀಡಿದ ವಿರೋಧ ಕಾರಣವೆಂದು ಹೇಳಲಾಗುತ್ತಿದ್ದು, ವೃದ್ಧನನ್ನು ತಡೆದು ನಿಲ್ಲಿಸಿ ಇರಿದು ಗಾಯಗೊಳಿಸಲಾಗಿದೆ. ಉದುಮ ಪಾಕ್ಯಾರ್‌ನ ನಸೀರ್ ಮಂಜಿಲ್ ನಿವಾಸಿ ಕೆ.ಎಂ. ಅಬ್ದುಲ್ಲ ಹಾಜಿ (73)ಯವರಿಗೆ ಆಕ್ರಮಣ ನಡೆಸಲಾಗಿದೆ. ನಿನ್ನೆ ಮಸೀದಿಗೆ ತೆರಳುತ್ತಿದ್ದ ಮಧ್ಯೆ ಆಕ್ರಮಣವುಂಟಾಗಿದೆ. ತಡೆದು ನಿಲ್ಲಿಸಿ ಆಕ್ರಮಣ ನಡೆಸಿದಾಗ ಅವರ ರಕ್ತದೊತ್ತಡ ಹೆಚ್ಚಿ ನೆಲಕ್ಕೆ ಬಿದ್ದಿದ್ದು, ಈ ವೇಳೆ ಅಬ್ದುಲ್ಲ ಹಾಜಿಯ ಕಾಲಿಗೆ ಕತ್ತಿಯಿಂದ ಇರಿದು ಮುಖಕ್ಕೆ ಪಂಚ್‌ನಿಂದ ಗುದ್ದಿರುವುದಾಗಿ ಬೇಕಲ ಪೊಲೀಸ್ …

ವಾಹನ ಪಾರ್ಕಿಂಗ್ ವಿಷಯದಲ್ಲಿ ವಾಗ್ವಾದ: ಕೊಲೆಯತ್ನ ಪ್ರಕರಣ; ನಾಲ್ವರು ಆರೋಪಿಗಳಿಗೆ ಸಜೆ, ಜುಲ್ಮಾನೆ

ಕಾಸರಗೋಡು: ವಾಹನ ಪಾರ್ಕಿಂಗ್ ವಿಷಯದಲ್ಲಿ ಉಂಟಾದ ವಾಗ್ವಾದದಲ್ಲಿ  ಚಾಕು, ಕಬ್ಬಿಣದ ಸರಳು ಇತ್ಯಾದಿಗಳಿಂದ  ಆರು ಮಂದಿಯ ಮೇಲೆ ದಾಳಿ ನಡೆಸಿ ಅವರನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ನಾಲ್ವರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ಮೂರು ವರ್ಷ ೯ತಿಂಗಳ ಸಜೆ ಹಾಗೂ ತಲಾ 20,000 ರೂ. ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.  ಮುಟ್ಟತ್ತೋಡಿ ಆಲಂಪಾಡಿ ನಿವಾಸಿಗಳಾದ ಅಬ್ದುಲ್ ಹಕೀಂ (38), ಅಹಮ್ಮದ್ ಕಬೀರ್ (37), ಅಹಮ್ಮದ್ ಗಸಾಲಿ (34) …

ಶೋಭಾ ಸುರೇಂದ್ರನ್ ಮನೆ ಮುಂದೆ ಸ್ಫೋಟಕ ವಸ್ತು ಎಸೆದ ಕಿಡಿಗೇಡಿಗಳು

ತೃಶೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶೋಭಾ ಸುರೇಂದ್ರನ್‌ರ ಮನೆ ಮುಂದೆ ಕಿಡಿಗೇಡಿಗಳು ಸ್ಫೋಟಕ ವಸ್ತು ಸಿಡಿಸಿದ ಘಟನೆ ನಡೆದಿದೆ. ತೃಶೂರು ಅಯ್ಯಂತೋಳಿ ಎಂಬಲ್ಲಿರುವ ಮನೆಮುಂದೆ ನಿನ್ನೆ ರಾತ್ರಿ 10.40ರ ವೇಳೆ ಸ್ಫೋಟಕವಸ್ತು  ಸಿಡಿದಿದೆ. ಬೈಕ್‌ನಲ್ಲಿ  ತಲುಪಿದ ಕಿಡಿಗೇಡಿಗಳು ಸ್ಫೋಟಕವಸ್ತು ಎಸೆದು ಪರಾರಿಯಾಗಿರುವುದಾಗಿ ಸಂಶಯಿಸಲಾಗಿದೆ. ಬೈಕ್‌ನಲ್ಲಿ ನಾಲ್ಕು ಮಂದಿಯಿದ್ದುದಾಗಿ  ಪೊಲೀಸರು ದೃಢೀಕರಿಸಿದ್ದಾರೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಪ್ರಾದೇಶಿಕ ಘಟಕ ಒತ್ತಾಯಿಸಿದೆ. ಶೋಭಾ ಸುರೇಂದ್ರನ್ ಮನೆಯಲ್ಲಿರುವ ಸಂದರ್ಭದಲ್ಲಿ ಸ್ಫೋಟ ನಡೆದಿದೆ. ಮನೆ ಮುಂಭಾಗದ ರಸ್ತೆಯಲ್ಲಿ ಸ್ಫೋಟ …

ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ: ಓರ್ವ ಸೆರೆ

ಮುಳ್ಳೇರಿಯ: ಆದೂರು ತಪಾಸಣಾ ಕೇಂದ್ರದಲ್ಲಿ  ಬದಿಯಡ್ಕ ಎಕ್ಸೈಸ್ ರೇಂಜ್ ಇನ್ಸ್‌ಪೆಕ್ಟರ್ ಜೋಸೆಫ್ ಜೆಯವರ ನೇತೃತ್ವದ ಅಬಕಾರಿ ತಂಡ ನಡೆಸಿದ ವಾಹನ ತಪಾಸಣೆ ವೇಳೆ ಆ ದಾರಿಯಾಗಿ ಬಂದ ಸ್ಕೂಟರ್‌ನಿಂದ 6 ಗ್ರಾಂ ಗಾಂಜಾ ಪತ್ತೆಹಚ್ಚಿದೆ. ಇದಕ್ಕೆ ಸಂಬಂಧಿಸಿ ನೆಕ್ರಾಜೆ ಚರ್ಲಡ್ಕದ ಶಾಹೀದ್  ಅಫ್ರಿದಿ ಸಿ.ಎಚ್ (25)ನನ್ನು ಅಬಕಾರಿ ತಂಡ ವಶಕ್ಕೆ ತೆಗೆದು ಕೇಸು ದಾಖಲಿಸಿದೆ. ಅಬಕಾರಿ ಕಾರ್ಯಾಚರಣೆಯಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಗೋಪಿ ಕೆ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಗಣೇಶ್ ಕೆ, ಅಜೇಶ್ ವಿ. ಮೋಹನ್, …