ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 60 ಪವನ್ ಚಿನ್ನ ಪತ್ತೆ

ಮಂಜೇಶ್ವರ: ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಕೆಎಸ್‌ಆರ್ ಟಿಸಿ ಬಸ್‌ನಲ್ಲಿ ಕಾಸರಗೋಡಿಗೆ ಸಾಗಿಸುತ್ತಿದ್ದ ಸುಮಾರು 60 ಪವನ್‌ಗೂ ಅಧಿಕ (480.9 ಗ್ರಾಂ) ಚಿನ್ನದ ಒಡವೆಗಳನ್ನು ಪತ್ತೆಹಚ್ಚಿದೆ. ಈ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ರಾಜಸ್ತಾನ ನಿವಾಸಿ ಪಗನ್‌ಲಾಲ್ ಎಂಬಾತನಿಂದ ಈ ಮಾಲು ವಶಪಡಿ ಸಲಾಗಿದೆ. ಈತ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದನು. ಅಬಕಾರಿ ಇನ್‌ಸ್ಪೆಕ್ಟರ್ ಕೆ.ವಿ. ಗಂಗಾಧರನ್ ನೇತೃತ್ವದ ತಂಡ ಈ ಬಸ್ಸನ್ನು ತಡೆದು ನಿಲ್ಲಿಸಿ ತಪಾಸಣೆ ಗೊಳಪಡಿಸಿದಾಗ ಈ ಮಾಲು …

ರಾಜ್ಯದಲ್ಲಿ  ಅತೀ ಹೆಚ್ಚು ಪಾಕ್ ಪ್ರಜೆಗಳಿರುವ ಜಿಲ್ಲೆ ಕಾಸರಗೋಡು, ಕಲ್ಲಿಕೋಟೆ, ವಯನಾಡ್

ಕಾಸರಗೋಡು: ಕೇರಳದ ಪಾಕಿ ಸ್ತಾನಿ ಪ್ರಜೆಗಳು ಅತೀ ಹೆಚ್ಚಿರುವುದು ಕಾಸರಗೋಡು, ಕಲ್ಲಿಕೋಟೆ ಮತ್ತು ವಯನಾಡು ಜಿಲ್ಲೆಯಲ್ಲಾಗಿದೆಯೆಂದು ಪೊಲೀಸ್ ಲೆಕ್ಕಾಚಾರಗಳು ಸೂಚಿಸು ತ್ತಿವೆ. ಕೇರಳದಲ್ಲಿ ಒಟ್ಟಾರೆಯಾಗಿ 104 ಪಾಕಿಸ್ತಾನಿ ಪ್ರಜೆಗಳಿದ್ದು, ಇದರಲ್ಲಿ 30 ಮಂದಿ ಈಗಾಗಲೇ ರಾಜ್ಯ ಬಿಟ್ಟಿದ್ದಾರೆ. ಈ 104 ಮಂದಿಯಲ್ಲಿ 59 ಮಂದಿ ತಕ್ಷಣ ದೇಶ ಬಿಡಬೇಕೆಂಬ ನಿರ್ದೇಶ ವನ್ನು ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ನಿರ್ದೇಶ ನೀಡಿದ್ದಾರೆ. ಅದರ ಆಧಾರದಲ್ಲಿ ಕೇರಳದಲ್ಲಿ ನೆಲೆಸಿ ರುವ ಪಾಕ್ ಪೌರರಿಗೆ ಈಗಾಗಲೇ ನೋಟೀಸು ಜ್ಯಾರಿಗೊಳಿಸಲಾಗಿದೆ. ಕೇರಳದಲ್ಲಿ ಈಗ ನೆಲೆಸಿರುವ …

ಸೊತ್ತಿಗಾಗಿ 51ರ ಹರೆಯದ ಮಹಿಳೆಯನ್ನು ಮದುವೆಯಾದ 29ರ ಯುವಕ : ಪತ್ನಿಯನ್ನು ವಿದ್ಯುತ್ ಶಾಕ್ ನೀಡಿ ಕೊಲೆ: ಆರೋಪಿಗೆ ಜೀವಾವಧಿ ಕಠಿಣ ಸಜೆ

ತಿರುವನಂತಪುರ: ಸೊತ್ತು ಕಬಳಿಸಲು ೫೧ರ ಹರೆಯದ ಮಹಿಳೆಯನ್ನು ಮದುವೆಯಾಗಿ ಬಳಿಕ ಆಕೆಯನ್ನು ವಿದ್ಯುತ್ ಶಾಕ್ ನೀಡಿ ಕೊಲೆಗೈದ 29ರ ಹರೆಯದ ಪತಿಗೆ ನೆಯ್ಯಾಟಿಂಗರ ಆಡಿಶನಲ್ ಜಿಲ್ಲಾ ಸೆಕ್ಷನ್ಸ್ ನ್ಯಾಯಾಲಯ ಜೀವಾವಧಿ ಕಠಿನ ಸಜೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 2020 ಡಿಸೆಂಬರ್ 26ರಂದು ಮುಂಜಾನೆ ಕುನ್ನುತ್ತ್‌ಕಾಲ್ ವಿಲ್ಲೇಜ್ ತ್ರೇಸ್ಯಪುರದ ಫಿಲೋ ಮಿನಾ ಎಂಬವರ ಪುತ್ರಿ ಶಾಖ ಕುಮಾರಿಯನ್ನು ಬೆಡ್‌ರೂಮ್‌ನಲ್ಲಿ ಉಸಿರುಕಟ್ಟಿಸಿ ಪ್ರಜ್ಞೆ ತಪ್ಪಿಸಿದ ಬಳಿಕ ವಿದ್ಯುತ್ ಶಾಕ್ ತಗಲಿಸಿ ಕೊಲೆಗೈಯ್ಯಲಾಗಿತ್ತು. ಮೃತದೇಹವನ್ನು …

ಬಸ್ ಕಾರ್ಮಿಕರಿಗೆ ಇನ್ನು ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಕಡ್ಡಾಯ

ಕಾಸರಗೋಡು: ಖಾಸಗಿ ಬಸ್‌ಗಳು, ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಸ್ಟೇಜ್ ಕ್ಯಾರಿಯರ್ ವಾಹನಗಳ  ಕಾರ್ಮಿಕರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಕಡ್ಡಾಯಗೊಳಿಸಿ ಮೋಟಾರು ವಾಹನ ಇಲಾಖೆ ಸುತ್ತೋಲೆ ಜ್ಯಾರಿಗೊಳಿಸಿದೆ. ಜನವರಿ 24ರಂದು ನಡೆದ ಸ್ಟೇಟ್ ಟ್ರಾನ್ಸ್ ಪೋರ್ಟ್ ಅಥೋರಿಟಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಅದರ ಆಧಾರದಲ್ಲಿ ಮೋಟಾರು ವಾಹನ ಇಲಾಖೆ ಈಗ ಈ ಸುತ್ತೋಲೆ ಜ್ಯಾರಿಗೊಳಿಸಿದೆ. ಇದರಂತೆ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿರುವವರು,  ಆರೋಪಿಗಳಾಗಿರುವವರು ಮತ್ತು ಶಿಕ್ಷೆಗೊಳಗಾದವರನ್ನು ಬಸ್‌ಗಳಲ್ಲಿ ಕಾರ್ಮಿಕರನ್ನಾಗಿ ನೇಮಿಸುವುದನ್ನು ತಡೆಗಟ್ಟುವ ಉದ್ದೇಶದಿಂದ ಮೋಟಾರು ವಾಹನ ಇಲಾಖೆ ಈ …

ಇಮ್ಮಡಿ ಬಡ್ಡಿ ಭರವಸೆ : ಯುವತಿಯಿಂದ 31 ಲಕ್ಷ ರೂ. ಪಡೆದು ವಂಚನೆ; ದಂಪತಿ ವಿರುದ್ಧ ಕೇಸು

ಹೊಸದುರ್ಗ: ಹೆಚ್ಚು ಬಡ್ಡಿ ಸಹಿತ ವಿವಿಧ ಭರವಸೆಯೊಡ್ಡಿ ಜನರಿಂದ ಹಣ ಪಡೆದು ವಂಚಿಸುವ ತಂಡಗಳು ವ್ಯಾಪಕಗೊಂಡಿದೆ. ಈ ಕುರಿತಾಗಿ ಸರಕಾರ, ವಿವಿಧ ಇಲಾಖೆಗಳು ಮುನ್ನೆಚ್ಚರಿಕೆ ನೀಡುತ್ತಿದ್ದರೂ ಜನರು ವಂಚನೆಯಲ್ಲಿ ಸಿಲುಕುತ್ತಿರುವ ಪ್ರಕರಣಗಳು ಮತ್ತೆ ಮತ್ತೆ ಕೇಳಿ ಬರುತ್ತಿದೆ. ಮೊತ್ತದ ಇಮ್ಮದಿ ಬಡ್ಡಿ ನೀಡುವುದಾಗಿ ತಿಳಿಸಿ ಓರ್ವ ಯುವತಿಯಿಂದ 31ಲಕ್ಷ ರೂಪಾಯಿ ಪಡೆದು ವಂಚಿಸಿದ ಬಗ್ಗೆ ಇದೀಗ ಆರೋಪ ಕೇಳಿ ಬಂದಿದೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಉದಿನೂರು ನಿವಾಸಿಯಾದ ಯುವತಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ …

ಅತೀ ಹೆಚ್ಚು ಕಾಲ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದು ಇ.ಕೆ. ನಾಯನಾರ್

ತಿರುವನಂತಪುರ: ಅತೀ ಹೆಚ್ಚು ಕಾಲ ಕೇರಳ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಸರು ಸಿಪಿಎಂ (ಎಡರಂಗ)ದ ಇ.ಕೆ. ನಾಯನಾರ್ರ ಹೆಸರಲ್ಲಿ ಇನ್ನೂ ಮುಂದುವರಿಯುತ್ತಿದೆ. ಇವರು ಮೂರು ಬಾರಿ ಕೇರಳ ಮುಖ್ಯಮಂತ್ರಿಯಾಗಿದ್ದು ಆ ಸ್ಥಾನದಲ್ಲಿ ಒಟ್ಟು 4009 ದಿನಗಳ ಕಾಲ ಮುಂದುವರಿದಿದ್ದಾರೆ.ಇನ್ನು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಹಾಲಿ ಮುಖ್ಯಮಂತ್ರಿ (ಎಡರಂಗ)ದ ಪಿಣರಾಯಿ ವಿಜಯನ್ 3250ಕ್ಕಿಂತಲೂ ಹೆಚ್ಚು ದಿನ ಪೂರೈಸಿದ್ದು, ಆ ಸ್ಥಾನದಲ್ಲಿ ಇನ್ನೂ ಮುಂದುವರಿಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯಾದ ಕೆ. ಕರುಣಾಕರನ್ (ಕಾಂಗ್ರೆಸ್)- 3246 ದಿನ, …

ರಾ.ಹೆದ್ದಾರಿ ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣಕ್ಕೆ ಯೂತ್‌ಲೀಗ್ ತಡೆ: ಇಂದು ಸರ್ವಪಕ್ಷ ಸಭೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಯಲ್ಲಿ ಕುಂಬಳೆ ಸೇತುವೆ ಸಮೀಪ ಟೋಲ್ ಬೂತ್ ನಿರ್ಮಾಣ ವಿರುದ್ಧ ನಾಗರಿಕರಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾಗತೊಡಗಿದೆ. ಅಸೀಸ್ ಕಳ ತ್ತೂರು, ಎಂ.ಪಿ. ಖಾಲಿದ್ ಎಂಬಿವರ ನೇತೃತ್ವದಲ್ಲಿ ಯೂತ್‌ಲೀಗ್ ಕಾರ್ಯ ಕರ್ತರು ನಿನ್ನೆ ರಾತ್ರಿ ೯ ಗಂಟೆ ವೇಳೆ ತಲುಪಿ ಟೋಲ್ ಬೂತ್ ನಿರ್ಮಾ ಣಕ್ಕೆ ತಡೆಯೊಡ್ಡಿದರು. ಟೋಲ್ ಬೂತ್‌ಗಳ ಮಧ್ಯೆ ೬೦ ಮೀಟರ್ ಅಂತರ ಬೇಕೆಂಬ ನಿಬಂಧನೆಗಳನ್ನು ಉಲ್ಲಂಘಿಸಿ ಕುಂಬಳೆಯಲ್ಲಿ ನಿರ್ಮಾಣ ನಡೆಯುತ್ತಿರುವುದಾಗಿ ಕಾರ್ಯಕರ್ತರು ಆರೋಪಿಸಿದ್ದಾರೆ. ಯಾವುದೇ ಕಾರಣಕ್ಕೂ ಕುಂಬಳೆಯಲ್ಲಿ ಟೋಲ್‌ಬೂತ್ ನಿರ್ಮಿಸಲು …

ಕುಂಬಳೆಯಲ್ಲಿ ಟೋಲ್‌ಗೇಟ್ ಸ್ಥಾಪಿಸಲಿರುವ ಯತ್ನ ಉಪೇಕ್ಷಿಸಬೇಕು- ಶಾಸಕ ಎಕೆಎಂ ಅಶ್ರಫ್

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ಕುಂಬಳೆಯಲ್ಲಿ ಟೋಲ್‌ಗೇಟ್ ಸ್ಥಾಪಿಸಲಿರುವ ಯತ್ನವನ್ನು ಅಂಗೀಕರಿಸಲು ಸಾಧ್ಯವಿಲ್ಲವೆಂದೂ, ಇದನ್ನು ಉಪೇಕ್ಷಿಸಬೇಕೆಂದು ಶಾಸಕ ಎಕೆಎಂ  ಅಶ್ರಫ್ ಆಗ್ರಹಿಸಿದರು. ಪ್ರಸ್ತುತ ಕೇರಳ ಕರ್ನಾಟಕ ಗಡಿ ಭಾಗವಾದ ತಲಪಾಡಿಯಲ್ಲಿ ಟೋಲ್‌ಗೇಟ್ ಇರುವಾಗ ಕೇವಲ ೨೦ ಕಿಲೋ ಮೀಟರ್ ದೂರದಲ್ಲಿ ಮತ್ತೊಂದು ಟೋಲ್ ಸಂಗ್ರಹ ನಡೆಸುವುದು ಪ್ರತಿಭಟನಾರ್ಹವೆಂದು ಅವರು ತಿಳಿಸಿದ್ದು, ಇದು ಜನರಿಗೆ ಸಂಕಷ್ಟ ತರುವ ಕ್ರಮವಾಗಿದೆ. ಕಾಸರಗೋಡಿನವರು ಹೆಚ್ಚಾಗಿ ಆಶ್ರಯಿಸುವ ಮಂಗಳೂರು ಭಾಗಕ್ಕೆ ಪ್ರಯಾಣಿಸಲು ೨೦ ಕಿಲೋ ಮೀಟರ್‌ನಲ್ಲಿ ಎರಡು ಕಡೆಗಳಲ್ಲಿ ಟೋಲ್ ನೀಡಬೇಕಾದ ಅಪೂರ್ವ …

ಬಿ.ಟಿ. ವಿಜಯನ್ ಸಂಸ್ಮರಣೆ ನಾಳೆ

ಕಾಸರಗೋಡು: ಸಂಘ ಪರಿವಾರದ ಕಾರ್ಯಕರ್ತ ಬಿ.ಟಿ. ವಿಜಯನ್‌ರ 25ನೇ ಸಂಸ್ಮರಣೆ ನಾಳೆ ಬೆಳಿಗ್ಗೆ 9 ಗಂಟೆಗೆ ಜೆ.ಪಿ.ನಗರದ ಬಿ.ಟಿ. ವಿಜಯನ್ ಸ್ಮೃತಿ ಮಂಟಪ ಮುಂಭಾಗದಲ್ಲಿ ನಡೆಯಲಿದೆ. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಪುಷ್ಪಾರ್ಚನೆ ನಡೆಸಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

ಶಾಸಕ ಸಿ.ಎಚ್. ಕುಞಂಬುರ ಪತ್ನಿಯ ತಾಯಿ ನಿಧನ

ಕಾಸರಗೋಡು: ಸಿಪಿಎಂ ಜಿಲ್ಲಾ ಸೆಕ್ರೆಟರಿ ಯೇಟ್ ಸದಸ್ಯೆ ಎಂ. ಸುಮತಿಯವರ ತಾಯಿ ಹಾಗೂ ಶಾಸಕ ಸಿ.ಎಚ್. ಕುಂಞಂಬುರವರ ಅತ್ತೆ ಮೂನಾಡ್ ಅರಿಚೆಪ್ಪ್ ನಿವಾಸಿ ತಂಗಮಣಿ ಅಮ್ಮ (82) ನಿಧನ ಹೊಂದಿದರು. ದಿ| ಬಾಲಕೃಷ್ಣನ್ ಮಾಸ್ತರ್‌ರ ಪತ್ನಿಯಾಗಿದ್ದಾರೆ. ಮೃತರು ಇತರ  ಮಕ್ಕಳಾದ ಎಂ. ಮಿನಿ, ಸಿಂಧು, ಅಳಿಯಂದಿರಾದ ದಾಸನ್ ವೈದ್ಯರ್, ಅಶೋಕನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.