ವಯನಾಡಿನಲ್ಲಿ ಮತ್ತೆ ಜೀವಹಾನಿ ಸೃಷ್ಟಿಸಿ ಕಾಡಾನೆಯ ದಾಂಧಲೆ

ಕಲ್ಪಟ್ಟಾ: ವಯನಾಡಿನಲ್ಲಿ ಕಾಡಾನೆ ಆಕ್ರಮಣದಿಂದ ಇನ್ನೊಂದು ಜೀವ ನಷ್ಟಗೊಂಡಿದೆ. ಎರ್ಮಕೊಲ್ಲಿ ಪುಳ್ಳಿಕುನ್ನು ಸಮೀಪದಲ್ಲಿ ಕಾಡಾನೆ ದಾಳಿ ನಡೆಸಿದ್ದು,ತಮಿಳುನಾಡು ತೇಣಿ ಕಂಬಂ ನಿವಾಸಿ ಅರ್ಮುಗನ್ (66) ಮೃತಪಟ್ಟಿದ್ದಾರೆ.  ತೋಟ ಕಾರ್ಮಿಕನಾಗಿದ್ದರು. ನಿನ್ನೆ ರಾತ್ರಿ 9.30ರ ವೇಳೆ ಮೇಪಡಿಯಿಂದ ಮನೆಗೆ  ಹಿಂತಿರುಗುತ್ತಿದ್ದ ಮಧ್ಯೆ ಚಹಾ ತೋಟದಲ್ಲಿ ಇವರಿಗೆ ಕಾಡಾನೆ ಆಕ್ರಮಿಸಿದೆ.  ಆನೆ ಘೀಳಿಡುವ ಸದ್ದು ಕೇಳಿ ಸ್ಥಳಕ್ಕೆ ಬಂದ ಪರಿಸರ ನಿವಾಸಿಗಳು ಅರ್ಮುಗನ್‌ರ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಮೃತರು ಪತ್ನಿ ಲಕ್ಷ್ಮಿ, ಮಕ್ಕಳಾದ ರಾಜನ್, ಶಕ್ತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  …

ಬೆಡ್‌ರೂಂನಲ್ಲಿ ಸಿಲುಕಿದ ಒಂದು ವರ್ಷದ ಮಗು: ರಕ್ಷಿಸಿದ ಅಗ್ನಿಶಾಮಕದಳ

ಕಾಸರಗೋಡು: ಮನೆಯ ಬೆಡ್‌ರೂಮ್ ಬಾಗಿಲು ಮುಚ್ಚಿ ಬಳಿಕ   ತೆರೆಯಲು ಸಾಧ್ಯವಾಗದೆ ಅದರೊಳಗೆ ಒಂದು ವರ್ಷದ ಹೆಣ್ಣು ಮಗು  ಸಿಲುಕಿಕೊಂಡ ಘಟನೆ ನಡೆದಿದೆ. ಕೊನೆಗೆ ಘಟನೆ ನಡೆದ ಸ್ಥಳಕ್ಕೆ ಕಾಸರಗೋಡು ಅಗ್ನಿಶಾಮ ಕದಳ ತಲುಪಿ ಮಗುವನ್ನು ರಕ್ಷಿಸಿದ್ದಾರೆ. ನಿನ್ನೆ ರಾತ್ರಿ ಸುಮಾರು ೭.೧೫ರ ವೇಳೆಗೆ ನಗರದ ತಾಯ ಲಂಗಾಡಿ ಶಾಲೆ ಬಳಿಯ ಮೊಹಮ್ಮದ್ ಸನಾಹ್ ಎಂಬವರ  ಪುತ್ರಿ ಅಸಿಯಾಳನ್ನು ತಾಯಿ ಬೆಡ್‌ರೂಮ್‌ನಲ್ಲಿ ಮಲಗಿಸಿ ಬಾಗಿಲು ಮುಚ್ಚಿ ಹೊರಕ್ಕೆ ಬಂದಿದ್ದರು.  ಅಲ್ಪ ಸಮಯದ ಬಳಿಕ ಬಾಗಿಲನ್ನು ತೆರೆಯಲು ಹೋದಾಗ ಒಳಗಿನಿಂದ …

ಕಾರಿನಲ್ಲಿ ಗಾಂಜಾ ಸಾಗಾಟ : ಇಬ್ಬರಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಾಟ ನಡೆಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ   ಪ್ರಿಯಾ ಕೆ. ಅವರು ತಲಾ ಎರಡು ವರ್ಷ ಕಠಿಣ ಸಜೆ ಹಾಗೂ ೨೦,೦೦೦ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕಾಸರಗೋಡು ತಳಂಗರೆ ಬಾಂಗೋಡು ನಿವಾಸಿ ಬಿ.ಎ. ಶಂಸುದ್ದೀನ್ (46) ಮತ್ತು ಕಾಞಂಗಾಡ್ ಸೌತ್ ಕೊವ್ವಲ್ ಹೌಸ್‌ನ ಕಾರಾಟ್ ನೌಶಾದ್ (57) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ಮೂರು ತಿಂಗಳ ಹೆಚ್ಚುವರಿ …

ಧಾರ್ಮಿಕ ಮುಂದಾಳು ನಿಧನ

ಬದಿಯಡ್ಕ: ಕೃಷಿಕ, ಧಾರ್ಮಿಕ ಮುಂದಾಳು ವಳಮಲೆ ಪದ್ಮನಾಭ ಶೆಟ್ಟಿ (68) ನಿಧನ ಹೊಂದಿದರು. ಅಸೌಖ್ಯ ತಗಲಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದರು. ವಳಮಲೆ ಜನನ ತರವಾಡು ಸಮಿತಿ ಅಧ್ಯಕ್ಷ, ಬದಿಯಡ್ಕ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಅಧ್ಯಕ್ಷ, ಬಂಟರ ಸಂಘ ಕುಂಬಳೆ ಫಿರ್ಕ ಕಾರ್ಯದರ್ಶಿ ಸಹಿತ ಹಲವು ಸಾಮಾಜಿಕ, ಧಾರ್ಮಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಪೆರಡಾಲ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಯಾಗಿದ್ದ ಮೃತರು ಪತ್ನಿ ಮಲ್ಲಿಕಾ ಶೆಟ್ಟಿ, ಮಕ್ಕಳಾದ ಪ್ರತೀಕ್, ಪ್ರಣೀತ್ ಹಾಗೂ …

ಕಜೆ ಕ್ಷೇತ್ರ ಮೊಕ್ತೇಸರ ರಮೇಶ್ ಆಳ್ವ ನಿಧನ

ಕಯ್ಯಾರು: ಕಜೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಪಿಲಿಯಂದೂರು ನಿವಾಸಿ ಪ್ರಸ್ತುತ ಮುಂಬಯಿಯಲ್ಲಿ ವಾಸವಾಗಿರುವ ಉದ್ಯಮಿ ರಮೇಶ ಆಳ್ವ (65) ನಿಧನ ಹೊಂದಿದರು. ಮುಂಬಯಿಯ ಅಂಧೇರಿ ಮರೊಳ್‌ಗಾಂನಲ್ಲಿರುವ ಮನೆಯಲ್ಲಿ ಹೃದಯಾಘಾತ ಉಂಟಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ಮಧ್ಯೆ ನಿಧನ ಸಂಭವಿಸಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರು ಪತ್ನಿ ಜಗನ್ಮಯಿ ಆಳ್ವ, ಮಕ್ಕಳಾದ  ಸಂಮೃತ್ ಆಳ್ವ, ಪವಿತ್ರ ಆಳ್ವ, ಸೊಸೆ ಸೌಂದರ್ಯ, ಸಹೋದರ ರಾದ ಜಗನ್ನಾಥ ಆಳ್ವ, ಪ್ರಭಾಕರ ಆಳ್ವ, ಸಹೋದರಿಯರಾದ ಗುಲಾಬಿ, ಜಯಂತಿ, ಹಾಗೂ ಬಂಧು ಮಿತ್ರರನ್ನು …

ಪರಿಯಾರಂ ಮೆಡಿಕಲ್ ಕಾಲೇಜು ಕಾತ್‌ಲ್ಯಾಬ್‌ನಲ್ಲಿ 12 ವಿದ್ಯಾರ್ಥಿನಿಯರಿಗೆ ದೌರ್ಜನ್ಯ ಯತ್ನ: ಟೆಕ್ನೀಷನ್ ಅಮಾನತು

ಕಣ್ಣೂರು:  ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ 12 ವಿದ್ಯಾರ್ಥಿನಿಯರನ್ನು  ದೌರ್ಜನ್ಯಗೈಯ್ಯಲು ಯತ್ನಿಸಿದ್ದನೆಂಬ ದೂರಿನಂತೆ ಅಧಿಕಾರಿಗಳು ಕ್ರಮ ಆರಂಭಿಸಿದರು. ಕಾತ್‌ಲ್ಯಾಬ್ ಟೆಕ್ನೀಷ್ಯನ್ ವಿಳಂಯಗೋಡ್ ನಿವಾಸಿ ಶ್ರೀಜಿತ್‌ನನ್ನು ತನಿಖಾ ವಿದೇಯಗೊಳಿಸಿ ಅಮಾನತು ಮಾಡಲಾಗಿದೆ. 15 ವರ್ಷದಿಂದ ಕಾತ್‌ಲ್ಯಾಬ್‌ನಲ್ಲಿ ತಾತ್ಕಾಲಿಕ ನೌಕರನಾಗಿ ಈತ ದುಡಿಯುತ್ತಿದ್ದನು. ಕಾತ್‌ಲ್ಯಾಬ್‌ನಲ್ಲಿ ಕಾರ್ಡಿಯಾಕ್ ವಾಸ್ಕುಲರ್ ಟೆಕ್ನೀಷ್ಯನ್ ಕೋರ್ಸ್ ಕಲಿಯುವ 15 ವಿದ್ಯಾರ್ಥಿನಿಯರಲ್ಲಿ 12 ಮಂದಿ ಶ್ರೀಜಿತ್‌ನ ವಿರುದ್ಧ ಮೆಡಿಕಲ್ ಕಾಲೇಜು ಅಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದರು. ಈ ಬಗ್ಗೆ ಡಾಕ್ಟರ್‌ಗಳಾದ ಸವಿತಾ, ಸುಧಾ ಎಂಬಿವರು ತನಿಖೆ ನಡೆಸುತ್ತಿದ್ದ ಮಧ್ಯೆ …

ಪಹಲ್ಗಾಮ್‌ನಲ್ಲಿ ಮೃತಪಟ್ಟ ಪ್ರವಾಸಿಗರಿಗೆ ಕಾಂಗ್ರೆಸ್‌ನಿಂದ ಕುಂಬಳೆಯಲ್ಲಿ ಶ್ರದ್ಧಾಂಜಲಿ

ಕುಂಬಳೆ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರಗಾಮಿ ಗಳ ಆಕ್ರಮಣದಲ್ಲಿ ಮೃತಪಟ್ಟ ಪ್ರವಾಸಿಗರಿಗೆ ಕುಂಬಳೆ ಬ್ಲೋಕ್ ಕಾಂಗ್ರೆಸ್, ಭಾರತೀಯ ಯುವ ಕಾಂಗ್ರೆಸ್ ಮೌನ ಮೆರವಣಿಗೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದೆ. ಬ್ಲೋಕ್ ಕಾಂಗ್ರೆಸ್ ನಿಯುಕ್ತ ಅಧ್ಯಕ್ಷ ಸುಂದರ ಆರಿಕ್ಕಾಡಿ ಅಧ್ಯಕ್ಷತೆ ವಹಿಸಿದರು. ಲಕ್ಷ್ಮಣಪ್ರಭು, ಮಂಡಲ ಅಧ್ಯಕ್ಷ ರವಿ ಪೂಜಾರಿ, ಸತ್ಯನ್ ಉಪ್ಪಳ, ಜುನೈದ್ ಉರ್ಮಿ, ಸಜಿ ಪೈವಳಿಕೆ, ಕಮರುದ್ದೀನ್ ಪಾಡಲಡ್ಕ, ಕೇಶವ ದರ್ಬಾರ್‌ಕಟ್ಟೆ ಮಾತನಾಡಿ ಉಗ್ರಗಾಮಿಗಳ ಕೃತ್ಯವನ್ನು ಖಂಡಿಸಿ ದರು. ಥೋಮಸ್ ರೋಡ್ರಿಗಸ್, ಡಾಲ್ಫಿ ಡಿ’ಸೋಜ, ಮೋಹನ್ ರೈ …

ವಿ.ಹಿಂ.ಪದಿಂದ ಉಪ್ಪಳದಲ್ಲಿ ಪ್ರತಿಭಟನೆ

ಉಪ್ಪಳ: ಕಾಶ್ಮೀರದ ಪಹಲ್ಗಾ ಮ್‌ನಲ್ಲಿ ಹಿಂದೂ ನರಮೇಧವನ್ನು ನಡೆಸಿದ ಉಗ್ರಗಾಮಿಗಳ ವಿರುದ್ದ ವಿಶ್ವಹಿಂದೂ ಪರಿಷತ್ ಮಂಗಲ್ಪಾಡಿ ಇದರ ವತಿಯಿಂದ ಪ್ರತಿಭಟನಾ ಮೆರವಣಿಗೆ ನಿನ್ನೆ ಸಂಜೆ ನಡೆಯಿತು. ಕೈಕಂಬದಿAದ ಹೊರಟ ಮೆರವಣಿಗೆ ಉಪ್ಪಳದಲ್ಲಿ ಸಮಾಪ್ತಿಗೊಂಡಿತು. ಬಿಜೆಪಿ ನೇತಾರರಾದ ವಿಜಯ ಕುಮಾರ್ ರೈ, ಪದ್ಮ ಟೀಚರ್ ಮಾತ ನಾಡಿದರು. ಸತೀಶ್ ಒಡ್ಡಂಬೆಟ್ಟು ಸ್ವಾಗತಿಸಿ, ಸುರೇಶ್ ಶೆಟ್ಟಿ ಪರಂಕಿಲ ವಂದಿಸಿ ದರು. ಪ್ರತಿಭಟನೆಯಲ್ಲಿ ಮಾತೆಯರ ಸಹಿತ ಸಂಘ ಪರಿವಾರದ ನೇತಾರರು, ಕಾರ್ಯಕರ್ತರು ಭಾಗವಹಿಸಿದರು.

ಪೈವಳಿಕೆಯಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ

ಪೈವಳಿಕೆ : ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಆಕ್ರಮಣದಲ್ಲಿ ಮೃತಪಟ್ಟ ಪ್ರವಾಸಿಗರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೈವಳಿಕೆ ಮಂಡಲ ಸಮಿತಿ ವತಿಯಿಂದ ಮೌನ ಮೆರವಣಿಗೆ ಮತ್ತು ಮೇಣದ ಬತ್ತಿ ಉರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.  ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೋಹನ ರೈ ಕಯ್ಯಾರು, ನಾರಾಯಣ ಏದಾರು, ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಭಟ್, ಸಚ್ಚಿದಾನಂದ ರೈ,  ಅಬ್ದುಲ್ಲ ಹಾಜಿ, ಅಬ್ದುಲ್ಲ ಶಾ, ಮೊಹಮ್ಮದ್ ಕಯ್ಯಾರು, ರವಿಚಂದ್ರ ಬಲ್ಲಾಳ್, ಮೆಲ್ವಿನ್ ನೇತೃತ್ವ ನೀಡಿದರು. …

ಜ್ಯೋತಿಷ್ ಕುಮಾರ್ ಮೆಮೋರಿಯಲ್ ಟ್ರೋಫಿ ಕಬಡ್ಡಿ ಪಂದ್ಯಾಟ 27ರಂದು

ಕಾಸರಗೋಡು: ಜ್ಯೋತಿಷ್ ಅಭಿಮಾನಿ ಸೇವಾ ಬಳಗ ಕಾಸರ ಗೋಡು ಇದರ ನೇತೃತ್ವದಲ್ಲಿ ಜ್ಯೋತಿಷ್ ಕುಮಾರ್ ಮೆಮೋರಿ ಯಲ್ ಟ್ರೋಫಿ ಅಖಿಲ ಭಾರತ ಮಟ್ಟದ ಆಹ್ವಾನಿತ ಪುರುಷ ಹಾಗೂ ಮಹಿಳಾ ತಂಡಗಳ ಕಬಡ್ಡಿ ಪಂದ್ಯಾಟ ಎಪ್ರಿಲ್ 27ರಂದು ಕಾಸರಗೋಡು ತಾಳಿಪಡ್ಪು ಬಿ.ಟಿ. ವಿಜಯನ್ ಗ್ರೌಂಡ್‌ನಲ್ಲಿ ನಡೆಯಲಿದೆ. ಅಂದು ಅಪರಾಹ್ನ 3 ಗಂಟೆಗೆ ಪಂದ್ಯಾಟ ಆರಂಭಗೊಳ್ಳಲಿದೆ. ಉದ್ಯಮಿ ಡಾ. ಕೆ. ಸದಾಶಿವ ಶೆಟ್ಟಿ ಕುಳೂರು ಉದ್ಘಾಟಿಸುವರು. ಜ್ಯೋತಿಷ್ ಅಭಿಮಾನಿ ಸೇವಾ ಬಳಗದ ಅಧ್ಯಕ್ಷ ಜಯರಾಜ ಶೆಟ್ಟಿ ಕುಳೂರು ಅಧ್ಯಕ್ಷತೆ ವಹಿಸುವರು. …