ಒಳಯಂ ಮಖಾಂ ಉರೂಸ್: ಇಂದಿನಿಂದ  ಧಾರ್ಮಿಕ ಪ್ರವಚನ

ಕುಂಬಳೆ: ಒಳಯಂ ಮಖಾಂ ಮಸೀದಿ ಪರಿಸರದಲ್ಲಿ ವಲಿಯುಲ್ಲಾಹಿ ಅವರ ಹೆಸರಲ್ಲಿ ನಡೆಸುವ ಉದಯಾಸ್ತಮಾನ ಉರೂಸ್ ಇಂದಿನಿಂದ ಮೇ 10ರ ವರೆಗೆ ನಡೆಯಲಿದೆಯೆಂದು ಉರೂಸ್ ಸಮಿತಿ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಕುಂಞಿಕೋಯ ತಂಙಳ್ ಒಳಯಂ ಮಖಾಂ ಸಿಯಾರತ್‌ಗೆ ನೇತೃತ್ವ ವಹಿಸಿದರು. ಇಸ್ಮಾಯಿಲ್ ಹಾಜಿ ಧ್ವಜಾರೋಹಣಗೈದರು. ಹಾಜಿ ಪಕ್ರುದ್ದೀನ್ ಕುನ್ನಿಲ್ ಕಾರ್ಯಾಲಯ ಉದ್ಘಾಟಿಸಿದರು. ರಾತ್ರಿ  ಹಾಫಿಸ್ ಮಹಮ್ಮದ್ ತಂಙಳ್ ಒಳಯಂ ಪಾರಾಯಣಕ್ಕೆ ನೇತೃತ್ವ ನೀಡಿದರು. ಅತಾವುಲ್ಲ ತಂಙಳ್ ಉದ್ಯಾವರ ಅಧ್ಯಕ್ಷತೆ ವಹಿಸಿದರು. ಖತೀಬ್ ಹಸ್ಸನ್ …

ಪಹಲ್ಗಾಮ್ ಕಾಸರಗೋಡಿನ ಪ್ರವಾಸಿ ತಂಡ ಸುರಕ್ಷಿತ

ಕಾಸರಗೋಡು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿ ಸ್ತಾನಿ ಉಗ್ರರು ನಡೆಸಿದ ದಾಳಿಯಲ್ಲಿ 26 ಪ್ರವಾಸಿಗರನ್ನು ಹತ್ಯೆಗೈದ ನೀಚ ಕೃತ್ಯವನ್ನು ಇಡೀ ವಿಶ್ವ ಸಮೂಹವೇ ಖಂಡಿಸಿದೆ.  ಈ ದಾಳಿ ನಡೆಯುವ ವೇಳೆ ಕಾಸರಗೋಡು ಜಿಲ್ಲೆಯಿಂದ ಪ್ರವಾಸಕ್ಕೆ ಹೋದ ಎರಡು ತಂಡ  ಕಾಶ್ಮೀರದಲ್ಲಿತ್ತು. ಅವರೆಲ್ಲರೂ ಸುರಕ್ಷಿ ತರಾಗಿದ್ದಾರೆ.  ಕುತ್ತಿಕ್ಕೋಲ್ ಸಮೀಪ ದ ಕಳ್ಳಾರು, ಮಾಲಕ್ಕಲ್ಲು ಮತ್ತು ಚುಳ್ಳಿಕ್ಕೆರೆಯಿಂದ 24 ಮಂದಿ ಒಳಗೊಂಡ ಪ್ರವಾಸಿ ತಂಡ ಹಾಗೂ ನೀಲೇಶ್ವರದಿಂದ ಪ್ರವಾಸಕ್ಕೆ ಹೋದ ೧೧ ಮಂದಿ ತಂಡ ಕಾಶ್ಮೀರದಲ್ಲಿ ಸುರ ಕ್ಷಿತರಾಗಿದ್ದಾರೆಂದು ಸಂಬಂಧ ಪಟ್ಟವರು …

ಮೀನಾಡಿಪಳ್ಳ ಶ್ರೀ ವನದುರ್ಗಾ ಸನ್ನಿಧಿಯಲ್ಲಿ ರಜತ ವಾರ್ಷಿಕೋತ್ಸವ ನಾಳೆಯಿಂದ

ಎಡನೀರು: ನೆಲ್ಲಿಕಟ್ಟೆ ಮೀನಾಡಿಪಳ್ಳ ಶ್ರೀ ವನದುರ್ಗಾ ವನಶಾಸ್ತಾ ರಕ್ತೇಶ್ವರಿ ನಾಗಕ್ಷೇತ್ರದ ರಜತ ವಾರ್ಷಿಕ ಮಹೋತ್ಸವ ನಾಳೆ, 26ರಂದು ಜರಗಲಿದೆ. ನಾಳೆ ಬೆಳಿಗ್ಗೆ 10.30ಕ್ಕೆ ಉಗ್ರಾಣ ತುಂಬಿಸುವುದು, ರಾತ್ರಿ 7ಕ್ಕೆ ಭರತನಾಟ್ಯ, 8ಕ್ಕೆ ನೃತ್ಯ ವೈವಿಧ್ಯ ನಡೆಯಲಿದೆ. 26ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿಹೋಮ, 8.30ರಿಂದ ವಿವಿಧ ತಂಡಗಳಿAದ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಶ್ರೀಶಕ್ತಿ ಫ್ರೆಂಡ್ಸ್ ಕ್ಲಬ್ ಶಕ್ತಿನಗರ ಮತ್ತು ಸ್ಥಳೀಯರಿಂದ ಹುಲ್ಪೆ ಮೆರವಣಿಗೆ, ರಾತ್ರಿ 7ಕ್ಕೆ ತಿರುವಾದಿರ, ಕೈಕೊಟ್ಟುಕಳಿ, 8 ಗಂಟೆಗೆ ಮಹಾಪೂಜೆ, 9.30ಕ್ಕೆ …

ಹೊಲಿಗೆದಾರರ ಸಂಘಟನೆ ಜಿಲ್ಲಾ ಸಮಾವೇಶ

ಕಾಸರಗೋಡು: ಕೇರಳ ರಾಜ್ಯ ಹೊಲಿಗೆದಾರರ ಸಂಘಟನೆ (ಕೆಎಸ್‌ಟಿಎ) ಜಿಲ್ಲಾ ಸಮಾವೇಶ ಹೊಸ ಬಸ್ ನಿಲ್ದಾಣದ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣ ದಲ್ಲಿ ನಡೆಯಿತು. ಸಂಘಟ ನೆಯ  ರಾಜ್ಯ ಸಮಿತಿ ಉಪಾಧ್ಯಕ್ಷ ಪಿ.ವಿ. ಜೇಕಬ್ ಪಾಲಕ್ಕಾಡ್ ಉದ್ಘಾಟಿಸಿ ದರು. ರಾಮನ್ ಚೆನ್ನಿಕ್ಕರ, ರುಕ್ಮಿಣಿ, ಯಶೋದ, ಶಂಕರನ್ ಅಣಂಗೂರು, ಭಾಸ್ಕರನ್, ಬಾಲಕೃಷ್ಣ ಶೆಟ್ಟಿ, ಒ.ವಿ. ಗಂಗಾಧರನ್, ಸತೀಶ್ ಆಚಾರ್ಯ ಮಾತನಾಡಿದರು. ಸುರೇಶ್ ಸಿ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು.  ಪಿ.ಯು. ಶಂಕರನ್ ಸಂಘಟನೆ ಬಗ್ಗೆ ಅವಲೋಕನ, ಕೋಶಾಧಿಕಾರಿ ಪದ್ಮನಾಭನ್ ಲೆಕ್ಕಪತ್ರ ಅವಲೋಕನ ನಡೆಸಿದರು. …

ಪಹಲ್ಗಾಮ್ ಉಗ್ರರ ದಾಳಿ :ದಿಲ್ಲಿಯಲ್ಲಿ ಮಹತ್ವದ ಸಚಿವ ಸಂಪುಟ, ಸಭೆ ಆರಂಭ; ಶೀಘ್ರ ತಿರುಗೇಟು ಸಾಧ್ಯತೆ

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಿನ್ನೆ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ  ಪ್ರಧಾನಮಂತ್ರಿ ನರೇಂದ್ರಮೋದಿ ತಮ್ಮ ಸೌದಿ ಅರೇಬಿಯಾ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ನಿನ್ನೆ ರಾತ್ರಿಯೇ ದೆಹಲಿಗೆ ಹಿಂತಿರುಗಿದ್ದಾರೆ. ಮಾತ್ರವಲ್ಲ  ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಅವರು ವಿದೇಶಾಂಗ ಸಚಿವ ಎಸ್. ಜಯಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ವಿದೇಶಾಂಗ ಕಾರ್ಯ ದರ್ಶಿ ವಿಕ್ರಂ ಮಿಶ್ರ ಮತ್ತು ಇತರ ಅಧಿಕಾರಿಗಳೊಂದಿಗೆ ಸಂಕ್ಷಿಪ್ತ ಸಭೆ ನಡೆಸಿದರು. ಇದಾದ ಬಳಿಕ ಪ್ರಧಾನಿ ನೇತೃತ್ವದಲ್ಲಿ ದೆಹಲಿಯಲ್ಲಿ ಭದ್ರತಾ ಕ್ಯಾಬಿನೆಟ್ ಸಮಿತಿ (ಸಿಸಿಎಸ್)ನ …

28 ಪ್ರವಾಸಿಗರ ಹತ್ಯೆ : ಮಾಸ್ಟರ್ ಮೈಂಡ್ ಸೈಫುಲ್ಲಾ ಖಾಲೀದ್

ನವದೆಹಲಿ: ಪ್ರವಾಸಿಗರಿಗೆ ಶಾಂತಿಯುತ ವಿಶ್ರಾಂತಿ ಸ್ಥಳವೆಂದೇ ಪರಿಗಣಿಸಲಾದ  ಜಮ್ಮು-ಕಾಶ್ಮೀರದ ಪ್ರಕೃತಿ ರಮಣೀಯವಾದ ಬೈಸ್ತಾನ್ ಕಣಿವೆಯ ಪಹಲ್ಗಾಮ್‌ನಲ್ಲಿ ನಿನ್ನೆ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಮಂದಿ ಪ್ರವಾಸಿಗರನ್ನು  ದಾರುಣವಾಗಿ ಹತ್ಯೆಗೈದು ಹಲವು ಮಂದಿಯನ್ನು ಗಂಭೀರ ಗಾಯಗೊಳಿಸಿದ ಅತ್ಯಂತ ಹೇಯ ಕೃತ್ಯದ ಮಾಸ್ತರ್ ಮೈಂಡ್ ಪಾಕಿಸ್ತಾನದ ಲಷ್ಕರ್ ಎ ತೋಯ್ಬಾದ  ಉಪಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರೆಂಟ್‌ನ ಮುಖ್ಯಸ್ಥ ಸೈಫುಲ್ಲಾ ಖಾಲಿದ್ ಅಲಿಯಾಸ್ ಸೈಫುಲ್ಲ ಕಸೂರಿ ಆಗಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಈತ ಲಷ್ಕರ್ ಎ ತೋಯ್ಬಾದ  ಉಪಮುಖ್ಯಸ್ಥನೂ ಆಗಿದ್ದಾನೆ. ಈ ಭಯೋತ್ಪಾದಕ …

ದಾಳಿ ಬೆನ್ನಲ್ಲೇ ಉರಿ ಸೆಕ್ಟರ್‌ನಲ್ಲಿ ಇಬ್ಬರು ಪಾಕ್ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಶ್ರೀನಗರ: ಪಹಲ್ಗಾಮ್ ಉಗ್ರ ದಾಳಿಯ ಬೆನ್ನಲ್ಲೇ ಭಯೋತ್ಪಾದಕರ ಪತ್ತೆಗಾಗಿ ಜಮ್ಮು ಕಾಶ್ಮೀರದಾದ್ಯಂತ ವ್ಯಾಪಕ ಶೋಧ ಕಾರ್ಯಾ ಚರಣೆ ಆರಂಭಿಸಿರುವಂತೆಯೇ  ಬಾರಾಮು ಲ್ಲಾದ ಸೆಕ್ಟರ್‌ನಲ್ಲಿ ಭಾರತೀಯ ಸೇನೆ, ಇಬ್ಬರು ಪಾಕಿಸ್ತಾನಿ ಉಗ್ರರನ್ನು ಹೊಡೆದುರುಳಿಸಿದೆ. ಮಾತ್ರವಲ್ಲ ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿದೆ. ಇವರು ನಿಯಂತ್ರಣ ರೇಖೆ (ಎಲ್.ಒ.ಸಿ)  ಮೂಲಕ   ಭಾರತದೊಳಗೆ ನುಸುಳುವ ಯತ್ನ ನಡೆಸುತ್ತಿದ್ದರೆಂದು ಸೇನೆ ತಿಳಿಸಿದೆ.

ಅಬಕಾರಿ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಾಹಸಿಕವಾಗಿ ಸೆರೆ

ಕುಂಬಳೆ: ಹಲವು ಅಬಕಾರಿ ಪ್ರಕರಣಗಳಲ್ಲಿ ವಾರಂಟ್ ಆರೋಪಿಯಾದಾತನನ್ನು ಕುಂಬಳೆ ಎಕ್ಸೈಸ್ ರೇಂಜ್ ಅಧಿಕಾರಿಗಳು ಅತೀ ಸಾಹಸಿಕ ಕಾರ್ಯಾಚರಣೆ ಯಲ್ಲಿ ಸೆರೆಹಿಡಿದಿದ್ದಾರೆ. ಕುಡಾಲುಮೇರ್ಕಳ ವಿಲ್ಲೇಜ್‌ನ ಪೆರ್ಮುದೆ ಎಡಕ್ಕಾನ ನಿವಾಸಿ ವಿಷು ಕುಮಾರ್ (34)  ಎಂಬಾತನನ್ನು  ಬೇಳ ದರ್ಬೆತ್ತಡ್ಕದಿಂದ ಬಂಧಿಸಲಾಗಿದೆ. 2019ರ ಬಳಿಕ ಈತ ನಾಲ್ಕು ಅಬಕಾರಿ ಹಾಗೂ ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಆರೋಪಿಯಾಗಿ ದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ. 2019, 2021, 2022, 2023ರಲ್ಲಿ ಈತನ ವಿರುದ್ಧ ಅಬಕಾರಿ ಪ್ರಕರಣ ದಾಖಲಾಗಿದೆ. ಆದರೆ ಈತನನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಸರಗೋಡು …

ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಸಿಪಿಎಂ ನೇತಾರ ನಿಧನ

ಕುಂಬಳೆ: ಅಸೌಖ್ಯ ಬಾಧಿಸಿ  ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಿಪಿಎಂ ನೇತಾರ ಮೃತಪಟ್ಟರು. ಕುಂಬಳೆ ಮಾವಿನಕಟ್ಟೆ ನಿವಾಸಿ ಕೃಷ್ಣ ಚೆಟ್ಟಿಯಾರ್ (38) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಸಿಪಿಎಂ ಲೋಕಲ್ ಕಮಿಟಿ ಸದಸ್ಯನೂ,  ಕುಂಬಳೆ ಅಗ್ರಿಕಲ್ಚರಲ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಕೆಲವು ದಿನಗಳ ಹಿಂದೆ ಇವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯ ಸಂಬಂಧ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ  ದಾಖಲಿಸಲಾಗಿತ್ತು. ನಿನ್ನೆ ಸಂಜೆ ಅಲ್ಲಿಂದ ಬಿಡುಗಡೆಗೊಳಿಸಿ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿ   …

ಕಾಞಂಗಾಡ್, ರಾಜಪುರಂನಲ್ಲಿ ಪೊಲೀಸ್ ವಿರುದ್ಧ ಆಕ್ರಮಣ: ಎಸ್‌ಐ, ಎಎಸ್‌ಐ ಸಹಿತ ೬ ಮಂದಿಗೆ ಗಾಯ

ಕಾಸರಗೋಡು: ನಾಲ್ಕು ದಿನಗಳೊಳಗೆ ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸರ ವಿರುದ್ಧ ನಾಲ್ಕು ಕಡೆ ಆಕ್ರಮಣ ಉಂಟಾಗಿದೆ. ನಿನ್ನೆ ರಾತ್ರಿ ಕಾಞಂಗಾಡ್, ರಾಜಪುರದಲ್ಲಿ ಸಂಭವಿಸಿದ ಅಕ್ರಮ ಘಟನೆಗಳಲ್ಲಿ ಎಸ್‌ಐ, ಎಎಸ್‌ಐ ಸಹಿತ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯ ಪ್ರೊಬೇಷನರಿ ಎಸ್‌ಐ ಕೆ.ವಿ. ಜಿತಿನ್ (29), ಸಿವಿಲ್ ಪೊಲೀಸ್ ಆಫೀಸರ್ ಅಜೇಶ್ ಕುಮಾರ್ (40) ಎಂಬಿವರಿಗೆ ಅಲಾಮಿಪಳ್ಳಿ ಜಂಕ್ಷನ್ ಸಮೀಪ ಆಕ್ರಮಣ ನಡೆಸಲಾಗಿದೆ. ವಾಹನ ತಪಾಸಣೆ ನಡೆಸುತ್ತಿದ್ದಾಗ ತಲುಪಿದ ಸ್ಕೂಟರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದ ಮಧ್ಯೆ ಆಕ್ರಮಿಸಲಾಗಿದೆ. …