ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 33.50 ರೂ. ಇಳಿಕೆ

ನವದೆಹಲಿ: ತೈಲ ಮಾರುಕಟ್ಟೆ ಕಂಪೆನಿಗಳು 19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ನ ಬೆಲೆಯಲ್ಲಿ 33.50 ರೂ.ನಂತೆ ಇಳಿಕೆ ಮಾಡಿದ್ದು, ಈ ಪರಿಷ್ಕೃತ ದರ ಇಂದಿನಿAದಲೇ ಜ್ಯಾರಿಗೊಂಡಿದೆ. ಆದರೆ 14.2 ಕೆಜಿ ಗೃಹ ಬಳಕೆ ಸಿಲಿಂ ಡರ್ಗಳ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ತರಲಾಗಿಲ್ಲ. ಜುಲೈ 1ರಂದು ವಾಣಿಜ್ಯ ಸಿಲಿಂಡರ್ಗಳ ಬೆಲೆಯಲ್ಲಿ 58.50 ರೂಪಾಯಿಯಷ್ಟು ಇಳಿಸಲಾಗಿತ್ತು. ಕಳೆದ ಎಪ್ರಿಲ್ನಿಂದ ಈ ತನಕ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಒಟ್ಟು 176 ರೂಪಾಯಿ ತನಕ ಇಳಿಕೆಯಾಗಿದೆ.

ಕ್ರೈಸ್ತ ಭಗಿನಿಯರ ಬಿಡುಗಡೆಗೆ ಪ್ರಧಾನಿಯಿಂದ ಭರವಸೆ -ರಾಜೀವ್ ಚಂದ್ರಶೇಖರ್

ತೃಶೂರ್: ಮತಾಂತರ ಹಾಗೂ ಮಾನವಕಳ್ಳ ಸಾಗಾಟದ ಆರೋಪದಂತೆ ಛತ್ತೀಸ್‌ಗಡ್‌ನಲ್ಲಿ ಅಲ್ಲಿನ ಪೊಲೀಸರಿಂದ ಬಂಧಿತರಾಗಿ ಈಗ ನ್ಯಾಯಾಂಗ ಬಂಧನದಲ್ಲಿರುವ ಕೇರಳದ ಇಬ್ಬರು ಕ್ರೈಸ್ತ ಭಗಿನಿಯರ  ಬಿಡುಗಡೆಗೆ ಸಂಬಂಧಿಸಿ ಪ್ರಧಾನಮಂತ್ರಿಯಿಂದ ತಮಗೆ ಭರವಸೆ ಲಭಿಸಿದೆಯೆಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ತೃಶೂರಿನಲ್ಲಿ ಕ್ರೈಸ್ತ ಧರ್ಮಗುರು ಮಾರ್ ಆಂಡ್ರೋಸ್ ತಾಳತ್ತಿಲ್‌ರನ್ನು ಇಂದು ಬೆಳಿಗ್ಗೆ ಸಂದರ್ಶಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜೀವ್ ಚಂದ್ರಶೇಖರ್ ಈ ವಿಷಯ ತಿಳಿಸಿದರು. ಈ ವಿಷಯದ ಬಗ್ಗೆ ಚರ್ಚಿಸಲು  ಕೇಂದ್ರ ಗೃಹ ಸಚಿವ ಅಮಿತ್ ಶಾ ನನ್ನನ್ನು …

ಹೊಯ್ಗೆ ಮಾಫಿಯಾಗಳೊಂದಿಗೆ ನಂಟು: ಕುಂಬಳೆ ಠಾಣೆಯ ಆರು ಪೊಲೀಸರ ಅಮಾನತು

ಕುಂಬಳೆ: ಅನಧಿಕೃತವಾಗಿ ಹೊಳೆಗಳಿಂದ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವುದನ್ನು ತಡೆಯಬೇಕಾದ ಪೊಲೀಸರೇ ಹೊಯ್ಗೆ ಮಾಫಿಯಾಗಳೊಂದಿಗೆ ಸಂಬಂಧವಿರಿಸಿಕೊಂಡು ಹೊಯ್ಗೆ, ಮಣ್ಣು ಸಾಗಾಟ ದಂಧೆಗೆ ನೆರವಾದ ವಿಷಯ ಕೊನೆಗೂ ಬೆಳಕಿಗೆ ಬಂದಿದೆ.  ಈ ಸಂಬಂಧ ಕುಂಬಳೆ ಪೊಲೀಸ್ ಠಾಣೆಯ ಚಾಲಕ ಸಹಿತ ಆರು ಮಂದಿ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖಾ ವಿಧೇ ಯವಾಗಿ ಅಮಾನತುಗೊಳಿಸಿದ್ದಾರೆ. ಪಿ.ಎಂ. ಅಬ್ದುಲ್ ಸಲಾಂ, ವಿನೋದ್ ಕುಮಾರ್, ಲಿನೀಶ್, ಎಂ.ಕೆ. ಅನೂಪ್, ಮನು, ಚಾಲಕ ಕೃಷ್ಣ ಪ್ರಸಾದ್ ಎಂಬಿವರನ್ನು ಅಮಾನತುಗೊಳಿಸಲಾಗಿದ.  ಅನಧಿಕೃತವಾಗಿ ಹೊಯ್ಗೆ, ಮಣ್ಣು …

ಅಕ್ರಮ ಮರಳುಗಾರಿಕೆ ವಿರುದ್ಧ ಪೊಲೀಸ್ ಕಾರ್ಯಾಚರಣೆ : 3೦೦೦ದಷ್ಟು ಗೋಣಿ ಚೀಲ ಹೊಯ್ಗೆ, ದೋಣಿ ವಶ

ಕಾಸರಗೋಡು: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಭರ್ಜರಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದರಂತೆ ಕಾಸರಗೋಡು, ಕುಂಬಳೆ ಮತ್ತು ಮಂಜೇಶ್ವರ ಪೊಲೀಸ್ ಠಾಣೆಗಳ ವ್ಯಾಪ್ತಿಗೊಳಪಟ್ಟ ಹಲವು ಅಕ್ರಮ ಮರಳುಗಾರಿಕಾ ಕೇಂದ್ರಗಳಿಗೆ ನಡೆಸಿದ ಕಾರ್ಯಾಚರಣೆಯಲ್ಲಿ 3೦೦೦ದಷ್ಟು ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಮರಳನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಮಾತ್ರವಲ್ಲ ಹೊಳೆಗಳಿಂದ ಹೊಗೆ ತೆಗೆಯಲು ಉಪಯೋಗಿಸಲಾಗುತ್ತಿದ್ದ ಹಲವು ನಾಡದೋಣಿಗಳನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಹೊಳೆಗಳಿಂದ ಅಕ್ರಮವಾಗಿ ಹೊಗೆ ತೆಗೆದು ಲಾರಿಗಳಲ್ಲಿ ಸಾಗಿಸಲೆಂದು ಗೋಣಿ ಚೀಲಗಳಲ್ಲಿ ತುಂಬಿಸಿ ಹೊಳೆಬದಿಯ ಹಲವು ಪೊದೆಗಳಲ್ಲಿ ಬಚ್ಚಿಡಲಾಗಿತ್ತು. ಮಾತ್ರವಲ್ಲ …

ಕಾರಿನಲ್ಲಿ ಎಂಡಿಎಂಎ ಸಾಗಾಟ ಪ್ರಕರಣ: ಇಬ್ಬರು ಆರೋಪಿಗಳಿಗೆ 10 ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ಮಾದಕ ದ್ರವ್ಯವಾದ 56.500 ಗ್ರಾಂ ಎಂಡಿಎಂಎ ಸಾಗಿಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರ ಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ತಲಾ 10 ವರ್ಷ ಕಠಿಣ ಸಜೆ ಹಾಗೂ  1 ಲಕ್ಷ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಪಚ್ಚಂಬಳ ರೆಹಮ್ಮತ್ ರಾಬಿಯಾ ಮಂಜಿಲ್‌ನ ಮೊಹ ಮ್ಮದ್ ಹ್ಯಾರಿಸ್ (32) ಮತ್ತು ಇಚ್ಲಂಗೋಡು ಪಚ್ಚಂಬಳ ಹೌಸ್‌ನ ಇಬ್ರಾಹಿಂ ಬಾದ್‌ಶಾ (32) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋ ಪಿಗಳು ಆರು ತಿಂಗಳು …

ಕ್ರೈಸ್ತ ಭಗಿನಿಯರ ಜೈಲಿಗಟ್ಟಿದ ಕ್ರಮ ವಿರೋಧಿಸಿ ಎಡ ಸಂಘಟನೆಗಳಿಂದ ಪ್ರತಿಭಟನೆ

 ಮಂಜೇಶ್ವರ: ಸುಳ್ಳು ಆರೋಪ ಹೊರಿಸಿ ಕ್ರೈಸ್ತ ಸನ್ಯಾಸಿನಿಯನ್ನು  ಬಂಧಿಸಿ ಜೈಲಿಗಟ್ಟಲಾಗಿದೆಯೆಂದು ಆರೋಪಿಸಿ  ಛತ್ತೀಸ್‌ಗಡ್ ಬಿಜೆಪಿ ಸರಕಾರದ ವಿರುದ್ಧ ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಅಸೋಸಿಯೇಶನ್‌ನ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ಮಂಜೇಶ್ವರ ಹೊಸಂಗಡಿ ಪೇಟೆಯಲ್ಲಿ ನಡೆಯಿತು. ಜಿಲ್ಲಾ ಸಮಿತಿ ಮಾಜಿ ಸದಸ್ಯೆ ಬೇಬಿ ಶೆಟ್ಟಿ ಉದ್ಘಾಟಿಸಿದರು. ಏರಿಯಾ ಸಮಿತಿ ಅಧ್ಯಕ್ಷೆ ಐರಿನ್ ಜೋಸ್ಫಿನ್ ಅಧ್ಯಕ್ಷತೆ ವಹಿಸಿದ್ದರು. ಏರಿಯಾ ಸಮಿತಿ ಕಾರ್ಯದರ್ಶಿ ಗೀತಾ ಸಾಮಾನಿ ಸ್ವಾಗತಿಸಿದರು. ವರ್ಕಾಡಿ ಪಚಾಯತ್ ಅಧ್ಯಕ್ಷೆ ಭಾರತಿ ಎಸ್, ಮಂಜೇಶ್ವರ ಪಾಲೋಟಿನ್ …

ಬದಿಯಡ್ಕ ಮರ್ಚೆಂಟ್ಸ್ ಹಾಗೂ ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಶನ್ ಮಹಾಸಭೆ

ಬದಿಯಡ್ಕ: ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿ ಹಾರವನ್ನು ಕಾಣಲು ಸಂಘಟನೆಯಲ್ಲಿ ಎಲ್ಲಾ ಸದಸ್ಯರೂ ಸಕ್ರಿಯರಾಗಬೇಕು. ಸಂಘಟನೆಯ ವತಿಯಿಂದ ನೀಡಲಾ ಗುವ ಎಲ್ಲಾ ಜನಪರಯೋಜನೆಗಳಲ್ಲಿ ಪ್ರತಿಯೊಬ್ಬ ಸದಸ್ಯನೂ ಪಾಲ್ಗೊಂಡು ಲಭಿಸುವ ಸವಲತ್ತುಗಳನ್ನು ಪಡೆದು ಕೊಳ್ಳಬೇಕು ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯ ಉಪಾಧ್ಯಕ್ಷ, ಜಿಲ್ಲಾ ಅಧ್ಯಕ್ಷ ಕೆ. ಅಹ ಮ್ಮದ್ ಶರೀಫ್ ಅಭಿಪ್ರಾಯಪಟ್ಟರು.ಬದಿಯಡ್ಕ ಮರ್ಚೆಂಟ್ಸ್ ಹಾಗೂ ಇಂಡಸ್ಟಿçಯಲಿಸ್ಟ್ ಅಸೋಸಿಯೇಶನ್ ಬದಿಯಡ್ಕ ಇದರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬದಿಯಡ್ಕ ಸರಕಾರಿ ಆಸ್ಪತ್ರೆಯ ಸಮೀ ಪದ ಮನುಕುಲ …

14ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ 7 ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: 14ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯ 7 ವರ್ಷ ಕಠಿಣ ಸಜೆ ಹಾಗೂ 15,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಮಡಿಕೈ ಬಂಗಳA ಕಾಕಾನ್ ಹೌಸ್ನ ಕೆ. ಅಶೋಕನ್ (47) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 9 ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2014 ಮೇ 15ರಂದು ಸಂಜೆ 14ರ ಹರೆಯದ ಬಾಲಕಿ ಮತ್ತು ಆಕೆಯ …

ಪೋಕ್ಸೋ ಪ್ರಕರಣ: ಆರೋಪಿಗೆ 5 ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಪ್ರಾಯಪೂರ್ತಿಯಾಗದ ಬಾಲಕಿಗೆ ಲೈಂಗಿಕ ಚೇಷ್ಠೆ ತೋರಿಸಿದ ಪ್ರಕರಣದ ಆರೋಪಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯ ೫ ವರ್ಷ ಕಠಿಣ ಸಜೆ, 11,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ನೋರ್ತ್ ಕೋಟಚ್ಚೇರಿ ತುಳುಚ್ಚೇರಿಯ ಜಿ.ಕೆ. ಹೌಸ್‌ನ ಟಿ. ಅಶೋಕ್ ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ  ಪಾವತಿಸದಿದ್ದಲ್ಲಿ ಆರೋಪಿ 6 ತಿಂಗಳು ಮತ್ತು ಎರಡು ವಾರಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2023 ಸೆ.9ರಂದು ಹೊಸದುರ್ಗ ಹಳೆ ಬಸ್ ನಿಲ್ದಾಣ ಸಮೀಪ ಕಾಸರಗೋಡು …

ವಿಜಯಾ ಸುಬ್ರಹ್ಮಣ್ಯರಿಗೆ ಕ.ಸಾ.ಪ.ದಿಂದ ಅಭಿನಂದನೆ

ಕುಂಬಳೆ: ಕನ್ನಡ ಭಾಷೆ ,ಸಾಹಿತ್ಯ, ಕಲೆ, ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ‘ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ’ಎಂಬ ಕಾರ್ಯಕ್ರಮದ ಅಂಗವಾಗಿ ಸಾಹಿತಿ ವಿಜಯಾ ಸುಬ್ರಹ್ಮಣ್ಯ, ಕುಂಬಳೆ ಅವರನ್ನು ನಾರಾಯಣ ಮಂಗಲದಲ್ಲಿರುವ ಅವರ ನಿವಾಸ ‘ಕಾರ್ತಿಕೇಯ’ದಲ್ಲಿ ಅಭಿನಂದಿ ಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ವಿಜಯಾ ಸುಬ್ರಹ್ಮಣ್ಯರನ್ನು ಶಾಲು …