ಬೈಕ್- ಪಿಕಪ್ ಢಿಕ್ಕಿ: ಬೈಕ್ ಸವಾರರಿಗೆ ಗಾಯ

ಕನ್ನೆಪ್ಪಾಡಿ: ಬೈಕ್ ಹಾಗೂ ಪಿಕಪ್ ವ್ಯಾನ್ ಮುಖಾಮುಖಿಯಾಗಿ ಇಬ್ಬರು ಗಾಯಗೊಂಡಿದ್ದಾರೆ. ಬಾಂಜತ್ತಡ್ಕ ನಿವಾಸಿ ಅಭಿಷೇಕ್ (24), ಮೊಗ್ರಾಲ್ ನಿವಾಸಿ ರಾಹುಲ್ (23) ಗಾಯಗೊಂಡಿದ್ದು, ನಿನ್ನೆ ಸಂಜೆ ಕುಂಬಳೆ- ಬದಿಯಡ್ಕ ರಸ್ತೆಯ ಕನ್ನೆಪ್ಪಾಡಿಯಲ್ಲಿ ಅಪಘಾತ ಸಂಭವಿಸಿದೆ. ಬದಿಯಡ್ಕ ಭಾಗದಿಂದ ನೀರ್ಚಾಲು ಕಡೆಗೆ ಸಾಗುತ್ತಿದ್ದ ಪಿಕಪ್ ವ್ಯಾನ್ ಬದಿಯಡ್ಕದತ್ತ ಬರುತ್ತಿದ್ದ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು, ರಸ್ತೆಗೆಸೆಯಲ್ಪಟ್ಟ ಅಭಿಷೇಕ್ ಹಾಗೂ ರಾಹುಲ್‌ನನ್ನು ಸ್ಥಳೀಯರು ಚೆರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮರ್ತ್ಯ ಮಸೀದಿ ಕಾಣಿಕೆ ಡಬ್ಬಿ ಮುರಿದು ಹಣ ಕಳವು: ಸಿಸಿ ಟಿವಿಯಲ್ಲಿ ಸೆರೆ

ಪೆರ್ಲ: ಮರ್ತ್ಯ ಜುಮಾ ಮಸೀದಿಯ ಕಾಣಿಕೆ ಡಬ್ಬಿಯಿಂದ ಹಣ ಕಳವುಗೈಯ್ಯಲಾಗಿದೆ. ಈ ಬಗ್ಗೆ ಮಸೀದಿ ಸಮಿತಿ ಕಾರ್ಯದರ್ಶಿ ಪೆರ್ಲ ಅಜಿಲಡ್ಕ ನಿವಾಸಿ ಶಾಹುಲ್ ಹಮೀದ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕಾಣಿಕೆಡಬ್ಬಿಯನ್ನು ಮುರಿದು ಸುಮಾರು 10,000 ರೂ. ಕಳ್ಳ  ಕದ್ದೊಯ್ದಿರುವುದಾಗಿ ಶಂಕಿಸಲಾಗಿದ್ದು, ಕಾಣಿಕೆ ಡಬ್ಬಿ ಮುರಿಯುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲು ಗೊಂಡಿದೆ. ಬಳಿಕ ಬೈಕ್ ಹತ್ತಿ ಕಳ್ಳ ಹಿಂತಿರುಗುತ್ತಿರುವುದು ವೀಡಿಯೋ ದಲ್ಲಿ ಸೆರೆಯಾಗಿದೆ. ಇತ್ತೀಚೆಗೆ ವಿಟ್ಲ ಪೊಲೀಸ್ ಠಾಣೆ …

ವಲಸೆ ಕಾರ್ಮಿಕನ ಕೊಲೆ: ಸಂಬಂಧಿಕ ಸೆರೆ

ಕಾಸರಗೋಡು: ನಗರದ ಆನೆಬಾಗಿಲಿನ ಕ್ವಾರ್ಟರ್ಸ್‌ನಲ್ಲಿ  ಪಶ್ಚಿಮ ಬಂಗಾಲ ನಿವಾಸಿ ಹಾಗೂ ವಲಸೆ ಕಾರ್ಮಿಕ ಸುಶಾಂತ್ ರಾಯ್ (28)ನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ನನ್ನು ಪೊಲೀಸರು ಬಂಧಿಸಿದ್ದಾರೆ.  ಕೊಲೆಗೈಯ್ಯಲ್ಪಟ್ಟ ಸುಶಾಂತ್ ರಾಯ್‌ಯ ಸಂಬಂ ಧಿಕ ಹಾಗೂ ಆತನ ಊರಿನ ವನೇ ಆಗಿರುವ ಸಂಜಿತ್ ರಾಯ್ (30) ಬಂಧಿತ ಆರೋಪಿ. ಕೊಲೆಗೈಯ್ಯ ಲ್ಪಟ್ಟ ಸುಶಾಂತ್ ರಾಯ್ ಓರ್ವ ನಿತ್ಯ ಕುಡುಕನಾಗಿ ಆತನ ಉಪಟಳ ಸಹಿಸಲಾಗದೆ  ಆತನ ಜೊತೆಗೇ ಕೆಲಸಕ್ಕೆ ಬಂದಿದ್ದ ಆರೋಪಿ ಆತನ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದನೆಂದೂ …

ಹಿತ್ತಿಲಲ್ಲಿ ಗಾಂಜಾ ಸಸಿ ಪತ್ತೆ

ಕಾಸರಗೋಡು: ಕ್ವಾರ್ಟರ್ಸ್‌ಗೆ ಸಮೀಪದ ಹಿತ್ತಿಲಲ್ಲಿ ನೆಟ್ಟು ಬೆಳೆಸಲಾಗಿದ್ದ ಗಾಂಜಾ ಸಸಿಯನ್ನು ಅಬಕಾರಿ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಲಾಗಿದೆ. ಚೆರುವತ್ತೂರು ಕೊವ್ವಲ್‌ನ ಐಸ್ ಪ್ಲಾಂಟ್ ಪಕ್ಕದ ಕ್ವಾರ್ಟರ್ಸ್ ಒಂದರ ಸಮೀಪದ ಹಿತ್ತಿಲಲ್ಲಿ ನೀಲೇಶ್ವರ ಅಬಕಾರಿ ರೇಂಜ್‌ನ ಎಕ್ಸೈಸ್ ಇನ್ಸ್ ಪೆಕ್ಟರ್ ಎನ್. ವೈಶಾಖ್‌ರ ನೇತೃತ್ವದ ತಂಡ ನಿನ್ನೆ ನಗರದ ಕಾರ್ಯಾಚರ ಣೆಯಲ್ಲಿ ಈ ಗಾಂಜಾ ಸಸಿಯನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದು 170 ಸೆಂಟಿ ಮೀಟರ್ ಎತ್ತರದಲ್ಲಿ ಬೆಳೆದ ಸಸಿಯಾಗಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಲಾಗಿರಲ್ಲ. ಇದಕ್ಕೆ …

ಉಪ್ಪಳ ಫ್ಲೈಓವರ್‌ನಲ್ಲಿ ವಾಹನ ಸಂಚಾರ ಆರಂಭ

ಉಪ್ಪಳ: ತಲಪಾಡಿಯಿಂದ ಚೆಂಗಳ ತನಕದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಸಂಚಾರಕ್ಕೆ ತೆರೆದು ಕೊಡಲು ಸಿದ್ಧತೆಯ ಮಧ್ಯೆ ಉಪ್ಪಳ ಪೇಟೆಯಲ್ಲಿ ಫ್ಲೈಓವರ್‌ನಲ್ಲಿ ನಿನ್ನೆಯಿಂದ ವಾಹನ ಸಂಚಾರ ಆರಂಭಗೊಂಡಿದೆ. ಸುಮಾರು 200 ಮೀಟರ್ ಉದ್ದದ ಫ್ಲೈಓವರ್‌ನಲ್ಲಿ ಈಗ ವಾಹನಗಳು ಸಂಚರಿಸುತ್ತಿದ್ದು, ಪೇಟೆಯಲ್ಲಿ ಉಂಟಾಗುತ್ತಿದ್ದ ವಾಹನ ದಟ್ಟಣೆಗೆ ಮುಕ್ತಿ ದೊರಕಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಹೆದ್ದಾರಿ ಕಾಮಗಾರಿ ಆರಂಭಗೊಂಡಂದಿನಿಂದ ಉಪ್ಪಳ ಪೇಟೆಯಲ್ಲಿ ಕಾಸರಗೋಡಿನಿಂದ ಮಂಗಳೂರು ಕಡೆಗೆ ಸಂಚರಿಸುವ ಸರ್ವೀಸ್ ರಸ್ತೆಯಲ್ಲಿ ಗಂಟೆಗಳ ಕಾಲ ಕಾದು ಸಂಚರಿಸಬೇಕಾದ …

ರಾಷ್ಟ್ರೀಯ ಹೆದ್ದಾರಿಯ ಮೊದಲ ರೀಚ್ ಜಿಲ್ಲೆಯಲ್ಲಿ ಶೀಘ್ರ ಪೂರ್ತಿ: ರಾಜ್ಯಕ್ಕೆ ಹೆಮ್ಮೆಯ ನಿಮಿಷ- ಸಚಿವ ಪಿ.ಎ. ಮೊಹಮ್ಮದ್ ರಿಯಾಸ್

ಕಾಸರಗೋಡು: ತಲಪಾಡಿಯಿಂದ ಚೆಂಗಳವರೆಗಿನ 39 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿಯ ಮೊದಲ ರೀಚ್‌ನ ಕಾಮಗಾರಿ ಪೂರ್ತಿಯಾಗುತ್ತಿದ್ದು, ಇಲ್ಲಿಗೆ ಕೇರಳ ಲೋಕೋಪಯೋಗಿ ಇಲಾಖೆ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಸಂದರ್ಶಿಸಿದರು. ತಲಪಾಡಿಯಿಂದ ಚೆಂಗಳವರೆಗಿನ ಕಾಮಗಾರಿ ಪೂರ್ತಿಯಾಗುತ್ತಿದ್ದು ಇದು ರಾಜ್ಯಕ್ಕೆ ಹೆಮ್ಮೆಯ ನಿಮಿಷವೆಂದು ಸಚಿವರು ಅಭಿಪ್ರಾಯಪಟ್ಟರು. 27 ಮೀಟರ್ ಅದಲದಲ್ಲಿ ದಕ್ಷಿಣ ಭಾರತದಲ್ಲೇ ಬಾಕ್ಸ್‌ಗಾರ್ಡರ್ ಮಾದರಿಯಲ್ಲಿ ನಿರ್ಮಿಸಿದ ಮೊದಲ ಏಕ ಸ್ತಂಭ ಮೇಲ್ಸೇತುವೆಯನ್ನು ಸಚಿವರು ಸಂದರ್ಶಿಸಿ ಮಾತನಾಡುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಸರಗೋಡಿನ ಪ್ರಗತಿಗೆ ಹೊಸ ದಾರಿಯಾಗಲಿದೆ ಎಂದು …

ಕೇರಳ ಲೋಕೋಪಯೋಗಿ ಇಲಾಖೆ ಸಚಿವರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ ಹಾಸ್ಯಾಸ್ಪದ- ಬಿಜೆಪಿ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ತಲಪಾಡಿ-ಚೆಂಗಳ ರೀಚ್‌ನ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿರುವಂತೆ ಹೆದ್ದಾರಿ ಕಾಮಗಾರಿ ಪರಿಶೀಲನೆ ನೆಪದಲ್ಲಿ ರಾಜ್ಯದ ಲೋಕೋಪಯೋಗಿ ಸಚಿವ ಮೊಹಮ್ಮದ್ ರಿಯಾಸ್ ಕಾಮಗಾರಿ ಪರಿಶೀಲಿಸಹೊರಟಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಆದರ್ಶ್ ಬಿ.ಎಂ. ನುಡಿದಿದ್ದಾರೆ. ಹೆದ್ದಾರಿ ಸಂಪೂರ್ಣವಾಗಿ ಕೇಂದ್ರ ಸರಕಾರದ ಯೋಜನೆಯಾಗಿದ್ದು, ಇದನ್ನು ರಾಜ್ಯ ಸರಕಾರದ ಯೋಜನೆ ಎಂಬಂತೆ ಬಿಂಬಿಸಹೊರಟಿರುವುದು ಅಲ್ಪತನದ ಪರಮಾವಧಿ ಎಂದು ಅವರು ಆಕ್ಷೇಪಿಸಿದ್ದಾರೆ. ಸಚಿವ ರಿಯಾಸ್ ಸಾಧ್ಯವಾದರೆ ಹೊಸಂಗಡಿಯಿಂದ ಆನೆಕಲ್ಲು ತನಕದ ತಮ್ಮ …

ಧನ್‌ರಾಜ್ ಪ್ರತಾಪನಗರ ಸ್ಮರಣಾರ್ಥ ದೈಗೋಳಿ ಸೇವಾಶ್ರಮಕ್ಕೆ ನಿಧಿ ಹಸ್ತಾಂತರ

ಮಂಗಲ್ಪಾಡಿ: ಧನ್‌ರಾಜ್ ಪ್ರತಾಪನಗರ ಅವರ ಸ್ಮರಣಾರ್ಥ ದೈಗೋಳಿ ಶ್ರೀ ಸಾಯಿನಿಖೇತನ ಸೇವಾಶ್ರಮಕ್ಕೆ ನಿಧಿ ಹಸ್ತಾಂತರಿಸಲಾಯಿತು. ಪ್ರತಾಪನಗರದ ಯಕ್ಷಪ್ರತಾಪ ಕಾರ್ಯಕ್ರಮದಂಗವಾಗಿ ಹನುಮಗಿರಿ ಮೇಳದವರಿಂದ ನಡೆದ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದ್ದು, ಸೇವಾಶ್ರಮದ  ಸ್ಥಾಪಕ ಡಾ. ಉದಯ ಕುಮಾರ್ ನೂಜಿ ಅವರಿಗೆ ನಿಧಿ ಹಸ್ತಾಂತರಿಸಲಾಯಿತು. ಕರ್ನಾಟಕ ಮಾನವಹಕ್ಕುಗಳ ಅಧ್ಯಕ್ಷರಾಗಿದ್ದ ಡಾ. ಟಿ. ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಿರಣ್ ಕುಮಾರ್, ಉದ್ಯಮಿ ಕಾರ್ತಿಕ್ ಸಾಲಿಯಾನ್ ಉಪಸ್ಥಿತರಿದ್ದರು. ಹನುಮಗಿರಿ ಮೇಳದವರಿಂದ ಸಹಸ್ರ …

ಅಸೌಖ್ಯ: ಆಟೋ ಚಾಲಕ ನಿಧನ

ಉಪ್ಪಳ: ಮುಳಿಂಜ ಮಹಾನಗರ ನಿವಾಸಿ ದಿ| ನಾರಾಯಣ ರವರ ಪುತ್ರ ಆಟೋರಿಕ್ಷಾ ಚಾಲಕ ಲಕ್ಷ ್ಮಣ (40) ನಿಧನರಾದರು. ಉಪ್ಪಳ ಪೇಟೆಯಲ್ಲಿ ಆಟೋರಿಕ್ಷಾ ಚಾಲಕರಾಗಿದ್ದರು. ಅಸೌಖ್ಯ ತಗಲಿ ಕಳೆದ 7 ತಿಂಗಳಿAದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಒಂದೂವರೆ ತಿಂಗಳಿAದ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ತಾಯಿ ರೇವತಿ, ಪತ್ನಿ ತನುಜ, ಮಕ್ಕಳಾದ ಸಿಂಚನ, ಮೇಘನ, ಸಹೋದರಿ ಯಶೋಧ, ಸಹೋದರ ರಾಮ.ಎನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸAಸ್ಕಾರ ನಿನ್ನೆ …

ಮುಖ್ಯೋಪಾಧ್ಯಾಯಿನಿ ಸಂಧ್ಯಾ ನಿಧನ

ಕಾಸರಗೋಡು: ಬಂದಡ್ಕ ಮಾಣಿಮೂಲೆ ಜಿಎಲ್‌ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಂಧ್ಯಾ (50) ನಿಧನ ಹೊಂದಿದರು. ಕುಂಡಂಕುಳಿ ನಿವಾಸಿಯಾಗಿದ್ದಾರೆ. ಕುಂಡಂಕುಳಿ ಶಾಲೆಯ ಕನ್ನಡ ಅಧ್ಯಾಪಿಕೆಯಾಗಿದ್ದರು. ಒಂದು ವರ್ಷದ ಹಿಂದೆ ಭಡ್ತಿ ಲಭಿಸಿ ಮಾಣಿಲ ಶಾಲೆಗೆ ವರ್ಗಾವಣೆಗೊಂಡಿ ದ್ದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಕೆಎಸ್‌ಟಿಎ ಕಾರ್ಯಕರ್ತೆಯಾಗಿದ್ದರು. ಮೃತರು ಪತಿ ಸಿ. ಕೃಷ್ಣನ್, ಮಕ್ಕಳಾದ ಕೃಷ್ಣಪ್ರಸಾದ್, ಕೃಷ್ಣಪ್ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.